ಆದರೆ, ಅನುಭವಿ ಆಟಗಾರ್ತಿ ಗಾರ್ಡ್ನರ್ರನ್ನು ಕೂಡ ಲೀಲಾಜಾಲವಾಗಿ ಎದುರಿಸಿದ ಹರ್ಮನ್ಪ್ರೀತ್ ಕೌರ್ ಹ್ಯಾಟ್ರಿಕ್ ಬೌಂಡರಿ ಬಾರಿಸಿದರು. ಓವರ್‌ನ ಮೊದಲ ಎಸೆತದಲ್ಲಿ, ಅಮೆಲಿಯಾ ಕೆರ್ ಸಿಂಗಲ್ ತೆಗೆದರೆ, ಆ ಬಳಿಕ ಸ್ಟ್ರೈಕ್ಗೆ ಬಂದ ಹರ್ಮನ್ ಬ್ಯಾಕ್ ಟು ಬ್ಯಾಕ್ 3 ಬೌಂಡರಿ ಬಾರಿಸಿದರು. ಇದರೊಂದಿಗೆ ಎದುರಿಸಿದ 7 ಎಸೆತಗಳಲ್ಲಿ ಸತತವಾಗಿ 7 ಬೌಂಡರಿಗಳನ್ನು ಬಾರಿಸಿದ ವಿಶೇಷ ದಾಖಲೆಯೊಂದು ಹರ್ಮನ್ಪ್ರೀತ್ ಕೌರ್ ಪಾಲಾಯಿತು.