AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

WPL 2024: ಪೆರ್ರಿ ಪವರ್​ಫುಲ್ ‘ಪಂಚ್’​ಗೆ ಕಾರಿನ ಗ್ಲಾಸ್ ಪುಡಿಪುಡಿ..! ವಿಡಿಯೋ ನೋಡಿ

Ellyse Perry: ದೀಪ್ತಿ ಶರ್ಮಾ ಓವರ್​ನ ಮೂರನೇ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸಿ ತಮ್ಮ ಅರ್ಧಶತಕವನ್ನು ಪೂರೈಸಿದ್ದ ಪೆರ್ರಿ, ಇದೇ ಓವರ್​ನ ಐದನೇ ಎಸೆತವನ್ನು ಭರ್ಜರಿ ಸಿಕ್ಸರ್​ಗಟ್ಟಿದರು. ಈ ಸಿಕ್ಸರ್, ಮೈದಾನದ ಬೌಂಡರಿ ಗೆರೆಯತ್ತ ನಿಲ್ಲಿಸಿದ ಕಾರಿನ ಡೋರ್​ನ ಗ್ಲಾಸನ್ನು ಪುಡಿ ಪುಡಿ ಮಾಡಿತು.

WPL 2024: ಪೆರ್ರಿ ಪವರ್​ಫುಲ್ ‘ಪಂಚ್’​ಗೆ ಕಾರಿನ ಗ್ಲಾಸ್ ಪುಡಿಪುಡಿ..! ವಿಡಿಯೋ ನೋಡಿ
ಎಲ್ಲಿಸ್ ಪೆರ್ರಿ
ಪೃಥ್ವಿಶಂಕರ
|

Updated on:Mar 04, 2024 | 9:40 PM

Share

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಆವೃತ್ತಿಯ ಮಹಿಳೆಯರ ಪ್ರೀಮಿಯರ್ ಲೀಗ್‌ (Women’s Premier League) ಕೊನೆಯ  ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ವಿರುದ್ಧ ಟಾಸ್ ಗೆದ್ದ ಯುಪಿ ವಾರಿಯರ್ಸ್​ ತಂಡ (UP Warriorz vs Royal Challengers Bangalore) ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 198 ರನ್ ಕಲೆಹಾಕಿತು. ತಂಡದ ಪರ ನಾಯಕಿ ಸ್ಮೃತಿ ಮಂಧಾನ ((Smriti Mandhana)) 50 ಎಸೆತಗಳಲ್ಲಿ 80 ರನ್ ಸಿಡಿಸಿದರೆ, ನಾಯಕಿಗೆ ಉತ್ತಮ ಸಾಥ್ ನೀಡಿದ ಎಲ್ಲಿಸ್ ಪೆರ್ರಿ (Ellyse Perry) ಕೂಡ 37 ಎಸೆತಗಳಲ್ಲಿ 58 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಇದೇ ವೇಳೆ ಪೆರ್ರಿ ಬಾರಿಸಿದ ಪವರ್​ಫುಲ್ ಸಿಕ್ಸರ್ ಬೌಂಡರಿ ಬಳಿ ನಿಲ್ಲಿಸಿದ್ದ ಟಾಟಾ ಪಂಚ್​ ಕಾರಿನ ಗ್ಲಾಸನ್ನು ಪುಡಿಗಟ್ಟಿತು. ಇದೀಗ ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಕಾರಿನ ಗ್ಲಾಸ್ ಒಡೆದ ಪೆರ್ರಿ

ಆರ್​ಸಿಬಿ ಇನ್ನಿಂಗ್ಸ್​ನ 19ನೇ ಓವರ್ ಬೌಲ್ ಮಾಡಲು ಬಂದ ದೀಪ್ತಿ ಶರ್ಮಾ ಓವರ್​ನ ಮೂರನೇ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸಿ ತಮ್ಮ ಅರ್ಧಶತಕವನ್ನು ಪೂರೈಸಿದ್ದ ಪೆರ್ರಿ, ಇದೇ ಓವರ್​ನ ಐದನೇ ಎಸೆತವನ್ನು ಭರ್ಜರಿ ಸಿಕ್ಸರ್​ಗಟ್ಟಿದರು. ಈ ಸಿಕ್ಸರ್, ಮೈದಾನದ ಬೌಂಡರಿ ಗೆರೆಯತ್ತ ನಿಲ್ಲಿಸಿದ ಕಾರಿನ ಡೋರ್​ನ ಗ್ಲಾಸನ್ನು ಪುಡಿ ಪುಡಿ ಮಾಡಿತು. ಇದನ್ನು ನೋಡಿದ ಇಡೀ ಮೈದಾನ ಹುಚ್ಚೆದು ಕುಣಿಯಿತು.

ಒಂದೇ ಓವರ್​ನಲ್ಲಿ 3 ಸಿಕ್ಸರ್

ಈ ಓವರ್​ಗೂ ಮುನ್ನ ಅಂದರೆ 18ನೇ ಓವರ್​ನಲ್ಲಿ ಬರೋಬ್ಬರಿ 3 ಸಿಕ್ಸರ್​ಗಳು ಸಿಡಿದಿದ್ದವು. ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಬೌಲ್ ಮಾಡಿದ ಈ ಓವರ್​ನ ಮೊದಲೆರಡು ಎಸೆತಗಳನ್ನು ಪೆರ್ರಿ ಸಿಕ್ಸರ್​ಗಟ್ಟಿದರೆ, ಓವರ್​ನ ಐದನೇ ಎಸೆತವನ್ನು ರಿಚಾ ಘೋಷ್ ಸಿಕ್ಸರ್ ಬಾರಿಸಿದರು. ಅಂತಿಮವಾಗಿ ಈ ಪಂದ್ಯದಲ್ಲಿ 19 ರನ್​ಗಳು ಹರಿದುಬಂದವು.

ಉಭಯ ತಂಡಗಳು

ಬೆಂಗಳೂರು: ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಸಬ್ಬಿನೇನಿ ಮೇಘನಾ, ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್ ಕೀಪರ್), ಸೋಫಿ ಮೊಲಿನೆಕ್ಸ್, ಜಾರ್ಜಿಯಾ ವೇರ್ಹ್ಯಾಮ್, ಏಕ್ತಾ ಬಿಶ್ತ್ (ಶ್ರೇಯಾಂಕಾ ಪಾಟೀಲ್ ಬದಲಿಗೆ), ಸಿಮ್ರಾನ್ ಬಹದ್ದೂರ್, ಆಶಾ ಶೋಬನಾ, ರೇಣುಕಾ ಸಿಂಗ್.

ಯುಪಿ ವಾರಿಯರ್ಸ್​: ಅಲಿಸ್ಸಾ ಹೀಲಿ (ನಾಯಕಿ), ಕಿರಣ್ ನವಗಿರೆ, ಚಾಮರಿ ಅಥಾಪತ್ತು, ಗ್ರೇಸ್ ಹ್ಯಾರಿಸ್, ಶ್ವೇತಾ ಸೆಹ್ರಾವತ್, ದೀಪ್ತಿ ಶರ್ಮಾ, ಪೂನಂ ಖೇಮ್ನಾರ್, ಸೋಫಿ ಎಕ್ಲೆಸ್ಟೋನ್, ರಾಜೇಶ್ವರಿ ಗಾಯಕ್ವಾಡ್, ಸೈಮಾ ಥಕ್ವಾಡ್, ಅಂಜಲಿ ಸರ್ವಾಣಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:38 pm, Mon, 4 March 24

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!