ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಆವೃತ್ತಿಯ ಮಹಿಳೆಯರ ಪ್ರೀಮಿಯರ್ ಲೀಗ್ (Women’s Premier League) ಕೊನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಟಾಸ್ ಗೆದ್ದ ಯುಪಿ ವಾರಿಯರ್ಸ್ ತಂಡ (UP Warriorz vs Royal Challengers Bangalore) ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 198 ರನ್ ಕಲೆಹಾಕಿತು. ತಂಡದ ಪರ ನಾಯಕಿ ಸ್ಮೃತಿ ಮಂಧಾನ ((Smriti Mandhana)) 50 ಎಸೆತಗಳಲ್ಲಿ 80 ರನ್ ಸಿಡಿಸಿದರೆ, ನಾಯಕಿಗೆ ಉತ್ತಮ ಸಾಥ್ ನೀಡಿದ ಎಲ್ಲಿಸ್ ಪೆರ್ರಿ (Ellyse Perry) ಕೂಡ 37 ಎಸೆತಗಳಲ್ಲಿ 58 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಇದೇ ವೇಳೆ ಪೆರ್ರಿ ಬಾರಿಸಿದ ಪವರ್ಫುಲ್ ಸಿಕ್ಸರ್ ಬೌಂಡರಿ ಬಳಿ ನಿಲ್ಲಿಸಿದ್ದ ಟಾಟಾ ಪಂಚ್ ಕಾರಿನ ಗ್ಲಾಸನ್ನು ಪುಡಿಗಟ್ಟಿತು. ಇದೀಗ ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಆರ್ಸಿಬಿ ಇನ್ನಿಂಗ್ಸ್ನ 19ನೇ ಓವರ್ ಬೌಲ್ ಮಾಡಲು ಬಂದ ದೀಪ್ತಿ ಶರ್ಮಾ ಓವರ್ನ ಮೂರನೇ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸಿ ತಮ್ಮ ಅರ್ಧಶತಕವನ್ನು ಪೂರೈಸಿದ್ದ ಪೆರ್ರಿ, ಇದೇ ಓವರ್ನ ಐದನೇ ಎಸೆತವನ್ನು ಭರ್ಜರಿ ಸಿಕ್ಸರ್ಗಟ್ಟಿದರು. ಈ ಸಿಕ್ಸರ್, ಮೈದಾನದ ಬೌಂಡರಿ ಗೆರೆಯತ್ತ ನಿಲ್ಲಿಸಿದ ಕಾರಿನ ಡೋರ್ನ ಗ್ಲಾಸನ್ನು ಪುಡಿ ಪುಡಿ ಮಾಡಿತು. ಇದನ್ನು ನೋಡಿದ ಇಡೀ ಮೈದಾನ ಹುಚ್ಚೆದು ಕುಣಿಯಿತು.
𝘽𝙧𝙚𝙖𝙠𝙞𝙣𝙜 𝙍𝙚𝙘𝙤𝙧𝙙𝙨 + 𝙂𝙡𝙖𝙨𝙨𝙚𝙨 😉
Ellyse Perry’s powerful shot shattered the window of display car 😅#TATAWPL #UPWvRCB #TATAWPLonJioCinema #TATAWPLonSports18 #HarZubaanParNaamTera#JioCinemaSports #CheerTheW pic.twitter.com/RrQChEzQCo
— JioCinema (@JioCinema) March 4, 2024
ಈ ಓವರ್ಗೂ ಮುನ್ನ ಅಂದರೆ 18ನೇ ಓವರ್ನಲ್ಲಿ ಬರೋಬ್ಬರಿ 3 ಸಿಕ್ಸರ್ಗಳು ಸಿಡಿದಿದ್ದವು. ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಬೌಲ್ ಮಾಡಿದ ಈ ಓವರ್ನ ಮೊದಲೆರಡು ಎಸೆತಗಳನ್ನು ಪೆರ್ರಿ ಸಿಕ್ಸರ್ಗಟ್ಟಿದರೆ, ಓವರ್ನ ಐದನೇ ಎಸೆತವನ್ನು ರಿಚಾ ಘೋಷ್ ಸಿಕ್ಸರ್ ಬಾರಿಸಿದರು. ಅಂತಿಮವಾಗಿ ಈ ಪಂದ್ಯದಲ್ಲಿ 19 ರನ್ಗಳು ಹರಿದುಬಂದವು.
A treat for the Bengaluru crowd 💥💥💥
Ellyse Perry 🤝 Richa Ghosh
Live 💻📱https://t.co/iplAqFh4Yz#TATAWPL | #UPWvRCB pic.twitter.com/IvMnA7UcuF
— Women’s Premier League (WPL) (@wplt20) March 4, 2024
ಬೆಂಗಳೂರು: ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಸಬ್ಬಿನೇನಿ ಮೇಘನಾ, ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್ ಕೀಪರ್), ಸೋಫಿ ಮೊಲಿನೆಕ್ಸ್, ಜಾರ್ಜಿಯಾ ವೇರ್ಹ್ಯಾಮ್, ಏಕ್ತಾ ಬಿಶ್ತ್ (ಶ್ರೇಯಾಂಕಾ ಪಾಟೀಲ್ ಬದಲಿಗೆ), ಸಿಮ್ರಾನ್ ಬಹದ್ದೂರ್, ಆಶಾ ಶೋಬನಾ, ರೇಣುಕಾ ಸಿಂಗ್.
ಯುಪಿ ವಾರಿಯರ್ಸ್: ಅಲಿಸ್ಸಾ ಹೀಲಿ (ನಾಯಕಿ), ಕಿರಣ್ ನವಗಿರೆ, ಚಾಮರಿ ಅಥಾಪತ್ತು, ಗ್ರೇಸ್ ಹ್ಯಾರಿಸ್, ಶ್ವೇತಾ ಸೆಹ್ರಾವತ್, ದೀಪ್ತಿ ಶರ್ಮಾ, ಪೂನಂ ಖೇಮ್ನಾರ್, ಸೋಫಿ ಎಕ್ಲೆಸ್ಟೋನ್, ರಾಜೇಶ್ವರಿ ಗಾಯಕ್ವಾಡ್, ಸೈಮಾ ಥಕ್ವಾಡ್, ಅಂಜಲಿ ಸರ್ವಾಣಿ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:38 pm, Mon, 4 March 24