WPL 2026: ಡಬ್ಲ್ಯುಪಿಎಲ್ ಸಂಪೂರ್ಣ ವೇಳಾಪಟ್ಟಿ ಪ್ರಕಟ; ಮೊದಲ ಪಂದ್ಯದಲ್ಲೇ ಆರ್​ಸಿಬಿ ಕಣಕ್ಕೆ

Women's Premier League 2026 Schedule Out: 2026ರ ಮಹಿಳಾ ಪ್ರೀಮಿಯರ್ ಲೀಗ್‌ನ ಸಂಪೂರ್ಣ ವೇಳಾಪಟ್ಟಿ ಬಿಡುಗಡೆಯಾಗಿದೆ. 28 ದಿನಗಳಲ್ಲಿ ಒಟ್ಟು 22 ಪಂದ್ಯಗಳು ನವಿ ಮುಂಬೈ ಮತ್ತು ವಡೋದರಾದಲ್ಲಿ ನಡೆಯಲಿವೆ. ಅಚ್ಚರಿ ಎಂದರೆ, ಎಲಿಮಿನೇಟರ್ ಮತ್ತು ಫೈನಲ್ ಪಂದ್ಯಗಳು ವಾರದ ಮಧ್ಯದಲ್ಲಿ ನಡೆಯಲಿವೆ. ಫೆಬ್ರವರಿ 5ರಂದು ಫೈನಲ್ ನಡೆಯಲಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಇದು ಹೊಸ ಅನುಭವ ನೀಡಲಿದೆ.

WPL 2026: ಡಬ್ಲ್ಯುಪಿಎಲ್ ಸಂಪೂರ್ಣ ವೇಳಾಪಟ್ಟಿ ಪ್ರಕಟ; ಮೊದಲ ಪಂದ್ಯದಲ್ಲೇ ಆರ್​ಸಿಬಿ ಕಣಕ್ಕೆ
Wpl 2026

Updated on: Nov 29, 2025 | 2:57 PM

2026 ಮಹಿಳಾ ಪ್ರೀಮಿಯರ್ ಲೀಗ್​ನ (Women’s Premier League 2026) ಮೆಗಾ ಹರಾಜು ಮುಕ್ತಾಯಗೊಂಡ ಎರಡು ದಿನಗಳ ಬಳಿಕ ಬಿಸಿಸಿಐ (BCCI) ಇದೀಗ ಈ ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪಂದ್ಯಾವಳಿಯ ವೇಳಾಪಟ್ಟಿಯ ಆಶ್ಚರ್ಯಕರ ಸಂಗತಿಯೆಂದರೆ ಈ ಲೀಗ್‌ನ ಫೈನಲ್ ಪಂದ್ಯವನ್ನು ವಾರಾಂತ್ಯದಲ್ಲಿ ನಡೆಸುವ ಬದಲು ಅಂದರೆ ಶನಿವಾರ ಅಥವಾ ಭಾನುವಾರದಂದು ನಡೆಸುವ ಬದಲು ವಾರದ ಮಧ್ಯ ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಬಿಸಿಸಿಐ ಬಿಡುಗಡೆ ಮಾಡಿದ ವೇಳಾಪಟ್ಟಿಯ ಪ್ರಕಾರ, ಪಂದ್ಯಾವಳಿಯ ಎಲಿಮಿನೇಟರ್ ಮತ್ತು ಫೈನಲ್ ಪಂದ್ಯವನ್ನು ವಾರದ ದಿನಗಳಲ್ಲಿ ನಡೆಸಲಾಗುತ್ತದೆ. ಎಲಿಮಿನೇಟರ್ ಪಂದ್ಯ ಫೆಬ್ರವರಿ 3 ರ ಮಂಗಳವಾರದಂದು ಮತ್ತು ಫೈನಲ್ ಪಂದ್ಯ ಫೆಬ್ರವರಿ 5 ರ ಗುರುವಾರದಂದು ನಡೆಯಲಿದೆ. ಈ ಬಾರಿ, ಪಂದ್ಯಾವಳಿ ನವಿ ಮುಂಬೈ ಮತ್ತು ವಡೋದರಾದಲ್ಲಿ ಮಾತ್ರ ನಡೆಯಲಿದೆ.

2 ಡಬಲ್ ಹೆಡರ್‌ ಪಂದ್ಯಗಳು

28 ದಿನಗಳ ಕಾಲ ನಡೆಯುವ ಡಬ್ಲ್ಯುಪಿಎಲ್ 4ನೇ ಆವೃತ್ತಿಯಲ್ಲಿ ಒಟ್ಟು 22 ಪಂದ್ಯಗಳು ನಡೆಯಲಿವೆ. ಎರಡು ಡಬಲ್ ಹೆಡರ್ ಪಂದ್ಯಗಳನ್ನು ಹೊರತುಪಡಿಸಿ, ಎಲ್ಲಾ ಪಂದ್ಯಗಳು ಸಂಜೆ 7 ಗಂಟೆಗೆ ಪ್ರಾರಂಭವಾಗಲಿವೆ. ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣವು ಪ್ರಾಥಮಿಕ ಸುತ್ತಿನ ಮತ್ತು ಮೊದಲ ಎರಡು ಡಬಲ್ ಹೆಡರ್ ಪಂದ್ಯಗಳನ್ನು ಆಯೋಜಿಸುತ್ತದೆ. ನಂತರ ಪಂದ್ಯಾವಳಿಯ ದ್ವಿತೀಯಾರ್ಧವನ್ನು ವಡೋದರಾದಲ್ಲಿ ಆಡಲಾಗುತ್ತದೆ. ವಡೋದರಾ ಪ್ಲೇಆಫ್ ಮತ್ತು ಫೈನಲ್ ಪಂದ್ಯವನ್ನು ಸಹ ಆಯೋಜಿಸಲಿದೆ.

WPL 2026 ರ ಪೂರ್ಣ ವೇಳಾಪಟ್ಟಿ

ದಿನಾಂಕ ಮುಖಾಮುಖಿ ಸ್ಥಳ
09-01-2026 ಮುಂಬೈ ಇಂಡಿಯನ್ಸ್ vs ಆರ್​ಸಿಬಿ ನವಿ ಮುಂಬೈ
10-01-2026 ಯುಪಿ ವಾರಿಯರ್ಸ್ vs ಗುಜರಾತ್ ಜೈಂಟ್ಸ್ ನವಿ ಮುಂಬೈ
10-01-2026 ಮುಂಬೈ ಇಂಡಿಯನ್ಸ್ vs ದೆಹಲಿ ಕ್ಯಾಪಿಟಲ್ಸ್ ನವಿ ಮುಂಬೈ
11-01-2026 ದೆಹಲಿ ಕ್ಯಾಪಿಟಲ್ಸ್ vs ಗುಜರಾತ್ ಜೈಂಟ್ಸ್ ನವಿ ಮುಂಬೈ
12-01-2026 ಆರ್​ಸಿಬಿ vs ಯುಪಿ ವಾರಿಯರ್ಸ್ ನವಿ ಮುಂಬೈ
13-01-2026 ಮುಂಬೈ ಇಂಡಿಯನ್ಸ್ vs ಗುಜರಾತ್ ಜೈಂಟ್ಸ್ ನವಿ ಮುಂಬೈ
14-01-2026 ಯುಪಿ ವಾರಿಯರ್ಸ್ vs ದೆಹಲಿ ಕ್ಯಾಪಿಟಲ್ಸ್ ನವಿ ಮುಂಬೈ
15-01-2026 ಮುಂಬೈ ಇಂಡಿಯನ್ಸ್ vs ಯುಪಿ ವಾರಿಯರ್ಸ್ ನವಿ ಮುಂಬೈ
16-01-2026 ಆರ್​ಸಿಬಿ vs ಗುಜರಾತ್ ಜೈಂಟ್ಸ್ ನವಿ ಮುಂಬೈ
17-01-2026 ಯುಪಿ ವಾರಿಯರ್ಸ್ vs ಮುಂಬೈ ಇಂಡಿಯನ್ಸ್ ನವಿ ಮುಂಬೈ
17-01-2026 ದೆಹಲಿ ಕ್ಯಾಪಿಟಲ್ಸ್ vs ಆರ್​ಸಿಬಿ ನವಿ ಮುಂಬೈ
19-01-2026 ಗುಜರಾತ್ ಜೈಂಟ್ಸ್ vs ಆರ್​ಸಿಬಿ ವಡೋದರಾ
20-01-2026 ದೆಹಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್ ವಡೋದರಾ
22-01-2026 ಗುಜರಾತ್ ಜೈಂಟ್ಸ್ vs ಯುಪಿ ವಾರಿಯರ್ಸ್ ವಡೋದರಾ
24-01-2026 ಆರ್​ಸಿಬಿ vs ದೆಹಲಿ ಕ್ಯಾಪಿಟಲ್ಸ್ ವಡೋದರಾ
26-01-2026 ಆರ್​ಸಿಬಿ vs ಮುಂಬೈ ಇಂಡಿಯನ್ಸ್ ವಡೋದರಾ
27-01-2026 ಗುಜರಾತ್ ಜೈಂಟ್ಸ್ vs ದೆಹಲಿ ಕ್ಯಾಪಿಟಲ್ಸ್ ವಡೋದರಾ
29-01-2026 ಯುಪಿ ವಾರಿಯರ್ಸ್ vs ಆರ್​ಸಿಬಿ ವಡೋದರಾ
30-01-2026 ಗುಜರಾತ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್ ವಡೋದರಾ
01-02-2026 ಡೆಲ್ಲಿ ಕ್ಯಾಪಿಟಲ್ಸ್ vs ಯುಪಿ ವಾರಿಯರ್ಸ್ ವಡೋದರಾ
03-02-2026 ಎಲಿಮಿನೇಟರ್ ವಡೋದರಾ
05-02-2026 ಫೈನಲ್ ವಡೋದರಾ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:53 pm, Sat, 29 November 25