ವುಮೆನ್ಸ್ ಪ್ರೀಮಿಯರ್ ಲೀಗ್ (WPL Auction 2024) ಸೀಸನ್-2 ಆಟಗಾರ್ತಿಯರ ಹರಾಜಿಗಾಗಿ ವೇದಿಕೆ ಸಿದ್ಧವಾಗಿದೆ. ಡಿಸೆಂಬರ್ 9 ರಂದು ನಡೆಯಲಿರುವ ಹರಾಜು ಪ್ರಕ್ರಿಯೆಗಾಗಿ ಒಟ್ಟು 165 ಆಟಗಾರ್ತಿಯರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಹರಾಜಿಗೂ ಮುನ್ನ ಐದು ಫ್ರಾಂಚೈಸಿಗಳು ಒಟ್ಟು 60 ಆಟಗಾರ್ತಿಯರನ್ನು ಉಳಿಸಿಕೊಂಡಿದ್ದು, 29 ಮಂದಿಯನ್ನು ರಿಲೀಸ್ ಮಾಡಿದೆ. ಅದರಂತೆ ಖಾಲಿಯಿರುವ 30 ಸ್ಲಾಟ್ಗಳಿಗಾಗಿ ಬಿಡ್ಡಿಂಗ್ ನಡೆಯಲಿದೆ. ಈ ಹರಾಜು ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…
WPL ಹರಾಜು ಎಲ್ಲಿ ಮತ್ತು ಯಾವಾಗ?
ಡಿಸೆಂಬರ್ 9 ರಂದು, ಮುಂಬೈನಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್ನ ಹರಾಜು ಪ್ರಕ್ರಿಯೆ ನಡೆಯಲಿದೆ.
ಎಷ್ಟು ಗಂಟೆಗೆ ಬಿಡ್ಡಿಂಗ್ ಪ್ರಾರಂಭ?
ಮಧ್ಯಾಹ್ನ 2.30 ರಿಂದ ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ ಶುರುವಾಗಲಿದೆ.
ಯಾವ ಚಾನೆಲ್ನಲ್ಲಿ ನೇರ ಪ್ರಸಾರ?
ಸ್ಪೋರ್ಟ್ಸ್-18 ಚಾನೆಲ್ನಲ್ಲಿ ಈ ಬಿಡ್ಡಿಂಗ್ ಅನ್ನು ವೀಕ್ಷಿಸಬಹುದು.
ಲೈವ್ ಸ್ಟ್ರೀಮಿಂಗ್ ವೀಕ್ಷಿಸುವುದು ಹೇಗೆ?
ಜಿಯೋ ಸಿನಿಮಾ ಆ್ಯಪ್ನಲ್ಲಿ ಮತ್ತು ವೆಬ್ಸೈಟ್ನಲ್ಲಿ ಈ ಹರಾಜು ಪ್ರಕ್ರಿಯೆಯ ಲೈವ್ ಇರಲಿದೆ.
ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿರುವ ತಂಡಗಳಾವುವು?
ಒಂದು ತಂಡದಲ್ಲಿ ಎಷ್ಟು ಆಟಗಾರ್ತಿಯರಿಗೆ ಅವಕಾಶ?
ವುಮೆನ್ಸ್ ಪ್ರೀಮಿಯರ್ ಲೀಗ್ನ ಒಂದು ತಂಡದಲ್ಲಿ ಒಟ್ಟು 18 ಆಟಗಾರ್ತಿಯರಿಗೆ ಅವಕಾಶವಿದೆ.
ಇದನ್ನೂ ಓದಿ: Virat Kohli: ಈ ಒಂದು ದಾಖಲೆ ಮುರಿಯುವುದು ಕೊಹ್ಲಿಯಿಂದಲೂ ಅಸಾಧ್ಯ..!
ಪ್ರತಿ ತಂಡಗಳ ಬಳಿ ಎಷ್ಟು ಹರಾಜು ಮೊತ್ತವಿದೆ?