Wriddhiman Saha: ಬಿಸಿಸಿಐ ಕೇಳಿದರೆ ನಾನು ಅವರ ಹೆಸರನ್ನು ಬಹಿರಂಗ ಪಡಿಸುವುದಿಲ್ಲ: ಸಾಹಾರಿಂದ ಮತ್ತೊಂದು ಬಾಂಬ್

| Updated By: Vinay Bhat

Updated on: Feb 22, 2022 | 11:59 AM

ವೃದ್ಧಿಮಾನ್ ಸಾಹ ಮತ್ತೊಂದು ಹೇಳಿಕೆ ನೀಡಿದ್ದು, ಬಿಸಿಸಿಐ ಈವರೆಗೆ ನನ್ನನ್ನು ಸಂಪರ್ಕಿಸಿಲ್ಲ. ಹಾಗೊಂದು ವೇಳೆ ಅವರು ನನ್ನ ಬಳಿ ಆ ಪತ್ರಕರ್ತನ ಹೆಸರು ಹೇಳೆಂದು ಸೂಚಿಸಿದರೆ ನಾನು ಯಾವುದೇ ಕಾರಣಕ್ಕೂ ಹೆಸರು ಬಹಿರಂಗ ಪಡಿಸುವುದಿಲ್ಲ ಎಂದಿದ್ದಾರೆ.

Wriddhiman Saha: ಬಿಸಿಸಿಐ ಕೇಳಿದರೆ ನಾನು ಅವರ ಹೆಸರನ್ನು ಬಹಿರಂಗ ಪಡಿಸುವುದಿಲ್ಲ: ಸಾಹಾರಿಂದ ಮತ್ತೊಂದು ಬಾಂಬ್
wriddhiman saha
Follow us on

ಭಾರತ ಟೆಸ್ಟ್ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ವೃದ್ದಿಮಾನ್ ಸಾಹ (Wriddhiman Saha) ವಿಚಾರದಲ್ಲಿ ಕಳೆದ ಕೆಲವು ದಿನಗಳಿಂದ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಆಗದ ಬೆನ್ನಲ್ಲೇ ನೀಡಿದ ಸಂದರ್ಶದಲ್ಲಿ “ರಾಹುಲ್ ದ್ರಾವಿಡ್ (Rahul Dravid) ಅವರು ನನ್ನ ಬಳಿ ನೀನು ನಿವೃತ್ತಿ ಬಗ್ಗೆ ಯೋಚಿಸು ಎಂಬ ಮಾತು ಹೇಳಿದರೆಂದು” ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದರು. ಇದರ ಜೊತೆಗೆ ತಮ್ಮ ಹಾಗೂ ಪತ್ರಕರ್ತರೊಂದಿಗಿನ ಸಂಭಾಷಣೆಯ ಸ್ಕ್ರೀನ್‌ಶಾಟ್‌ ಅನ್ನು ಸಾಹಾ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಪತ್ರಕರ್ತನ ಬೆದರಿಕೆಯಿಂದ ಬೇಸರಗೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸ್ಕ್ರೀನ್ ಶಾಟ್ ಹಂಚಿಕೊಂಡು ಅಸಮಾಧಾನ ವ್ಯಕ್ತಪಡಿಸಿದ್ದರು. ಇದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಬಿಸಿಸಿಐ ಈ ಬಗ್ಗೆ ಶ್ರೀಘ್ರ ತನಿಖೆ ನಡೆಸಲಿದೆ ಎಂದು ಬಿಸಿಸಿಐ (BCCI) ಖಜಾಂಜಿ ಅರುಣ್ ಧುಮಾಲ್ ಹೇಳಿದ್ದಾರೆ.

ಹೀಗಿರುವಾಗ ಸಾಹ ಮತ್ತೊಂದು ಹೇಳಿಕೆ ನೀಡಿದ್ದು, ಬಿಸಿಸಿಐ ಈವರೆಗೆ ನನ್ನನ್ನು ಸಂಪರ್ಕಿಸಿಲ್ಲ. ಹಾಗೊಂದು ವೇಳೆ ಅವರು ನನ್ನ ಬಳಿ ಆ ಪತ್ರಕರ್ತನ ಹೆಸರು ಹೇಳೆಂದು ಸೂಚಿಸಿದರೆ ನಾನು ಯಾವುದೇ ಕಾರಣಕ್ಕೂ ಹೆಸರು ಬಹಿರಂಗ ಪಡಿಸುವುದಿಲ್ಲ ಎಂದಿದ್ದಾರೆ. “ಈ ವಿಚಾರದ ಬಗ್ಗೆ ಬಿಸಿಸಿಐ ಇನ್ನೂ ನನ್ನನ್ನು ಸಂಪರ್ಕಿಸಿಲ್ಲ. ಪತ್ರಕರ್ತರ ಹೆಸರನ್ನು ಬಹಿರಂಗಪಡಿಸಲು ಅವರು ನನ್ನನ್ನು ಕೇಳಿದರೆ, ಯಾರೊಬ್ಬರ ವೃತ್ತಿಜೀವನಕ್ಕೆ ಹಾನಿ ಮಾಡುವುದು, ವ್ಯಕ್ತಿಯನ್ನು ಕೆಳಗೆ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ ಎಂದು ನಾನು ಅವರಿಗೆ ಹೇಳುತ್ತೇನೆ. ಅದಕ್ಕಾಗಿಯೇ ನಾನು ನನ್ನ ಟ್ವೀಟ್‌ನಲ್ಲಿ ಅವರ ಹೆಸರನ್ನು ಕೂಡ ಬಹಿರಂಗಪಡಿಸಲಿಲ್ಲ. ನನ್ನ ತಂದ-ತಾಯಿ ನನ್ನನ್ನು ಆರೀತಿ ಬೆಳೆಸಲಿಲ್ಲ. ನನ್ನ ಟ್ವೀಟ್‌ನ ಮುಖ್ಯ ಉದ್ದೇಶವೆಂದರೆ ಆಟಗಾರರ ಆಶಯವನ್ನು ಗೌರವಿಸದೆ ಮಾಧ್ಯಮಗಳಲ್ಲಿ ಯಾರಾದರೂ ಇಂತಹ ಕೆಲಸಗಳನ್ನು ಮಾಡುತ್ತಾರೆ ಎಂಬ ಅಂಶವನ್ನು ಬಹಿರಂಗಪಡಿಸುವುದಾಗಿತ್ತು,” ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಏನಿದೆ ಸ್ಕ್ರೀನ್ ಶಾಟ್​ನಲ್ಲಿ?:

“ನನ್ನ ಜೊತೆಗೆ ಒಂದು ಸಂದರ್ಶನ ಮಾಡಿ, ಒಳ್ಳೆಯದಾಗುತ್ತದೆ, ನೀವು ಎಲ್ಲರಿಗೂ ಸಂದರ್ಶನ ನೀಡಲು ಬಯಸಿದರೆ, ನಾನೇನು ಬಲವಂತ ಮಾಡುವುದಿಲ್ಲ. ಅವರು(ಆಯ್ಕೆ ಸಮಿತಿ) ಅತ್ಯುತ್ತಮವಾದ ಒಬ್ಬ ವಿಕೆಟ್ ಕೀಪರ್ ಆಯ್ಕೆ ಮಾಡಿದ್ದಾರೆ. ನೀವು ಅತ್ಯುತ್ತಮವಲ್ಲದ 11 ಪತ್ರಕರ್ತರನ್ನು ಆಯ್ಕೆ ಮಾಡಿಕೊಂಡಿರುವುದು ನನ್ನ ಪ್ರಕಾರ ಉತ್ತಮ ನಿರ್ಧಾರವಲ್ಲ. ನೀವು ನಿಮಗೆ ಯಾರು ಸಹಾಯ ಮಾಡಬಲ್ಲರೋ ಅವರನ್ನು ಆಯ್ಕೆ ಮಾಡಿ” ಎಂದು ವಾಟ್ಸ್​ಆ್ಯಪ್​ ಮೂಲಕ ಸರಣಿ ಸಂದೇಶ ಕಳಹಿಸಿದ್ದಾರೆ.ಆದರೆ, ಅವರ ಕರೆಯನ್ನು ಸಹಾ ಸ್ವೀಕರಿಸದ್ದಕ್ಕೆ ಕೋಪಗೊಂಡಿರುವ ಆ ಪತ್ರಕರ್ತ, ನೀವು ನನಗೆ ಕರೆ ಮಾಡಿಲ್ಲ, ಇನ್ನು ಯಾವತ್ತೂ ನಾನು ನಿಮ್ಮ ಸಂದರ್ಶನ ಮಾಡುವುದಿಲ್ಲ. ಈ ಅವಮಾನವನ್ನು ನಾನು ಸಾಮಾನ್ಯ ಎಂದು ಪರಿಗಣಿಸುವುದಿಲ್ಲ. ನಾನು ಇದನ್ನು ನೆನಪಿನಲ್ಲಿಟ್ಟುಕೊಂಡಿರುತ್ತೇನೆ. ಇದು ನೀವು ಮಾಡಬೇಕಾದ ಕೆಲಸವಾಗಿರಲಿಲ್ಲ,” ಎಂದು ಕೋಪದಿಂದ ಸಂದೇಶ ಕಳುಹಿಸಿದ್ದಾರೆ.

ಈ ಸಂದೇಶಗಳ ಸ್ಕ್ರೀನ್​ ಶಾಟ್​ ತೆಗೆದಿದ್ದ ವೃದ್ಧಿಮಾನ್ ಸಹಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಮಂಡಿದ್ದು “ಭಾರತೀಯ ಕ್ರಿಕೆಟ್​ಗೆ ನಾನು ಇಷ್ಟೆಲ್ಲಾ ಕೊಡುಗೆ ನೀಡಿದ್ದರೂ, ಗೌರವಾನ್ವಿತ ಪತ್ರಕರ್ತ ಎನಿಸಿಕೊಂಡಿರುವ ವ್ಯಕ್ತಿಯಿಂದ ಇದನ್ನು ಎದುರಿಸಿದ್ದೇನೆ. ಪತ್ರಿಕೋದ್ಯಮ ಎತ್ತ ಸಾಗುತ್ತಿದೆ,” ಎಂದು ಟ್ವೀಟ್​ ಮಾಡಿಕೊಂಡಿದ್ದರು.

PSL 2022: ಕ್ಯಾಚ್ ಬಿಟ್ಟಿದ್ದಕ್ಕೆ ತನ್ನದೇ ತಂಡದ ಪ್ಲೇಯರ್​ನ ಕಪಾಳಕ್ಕೆ ಹೊಡೆದ ಪಾಕ್ ಬೌಲರ್

IND vs SL: ಟೀಮ್ ಇಂಡಿಯಾ ಮುಂದಿನ ಟಾರ್ಗೆಟ್ ಶ್ರೀಲಂಕಾ: ಲಖನೌ ತಲುಪಿದ ರೋಹಿತ್ ಶರ್ಮ ಪಡೆ