WTC 2023: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ಗೇರಲು ಭಾರತ ಎಷ್ಟು ಪಂದ್ಯ ಗೆಲ್ಲಬೇಕು?

| Updated By: ಝಾಹಿರ್ ಯೂಸುಫ್

Updated on: Dec 29, 2022 | 10:29 PM

ICC World Test Championship 2023: ಭಾರತಕ್ಕೆ ನೇರವಾಗಿ ಫೈನಲ್​ಗೇರುವ ಉತ್ತಮ ಅವಕಾಶ ಕೂಡ ಇದೆ. ಹಾಗಿದ್ರೆ ಭಾರತ ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್​ ಫೈನಲ್​ಗೆ ಹೇಗೆ ಅರ್ಹತೆ ಪಡೆಯಬಹುದು ಎಂದು ತಿಳಿಯೋಣ...

WTC 2023: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ಗೇರಲು ಭಾರತ ಎಷ್ಟು ಪಂದ್ಯ ಗೆಲ್ಲಬೇಕು?
ಟೀಮ್ ಇಂಡಿಯಾ
Follow us on

ICC World Test Championship 2021-2023: ಮೆಲ್ಬೋರ್ನ್​ನಲ್ಲಿ ನಡೆದ ಸೌತ್ ಆಫ್ರಿಕಾ (South Africa) ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಆಸ್ಟ್ರೇಲಿಯಾ (Australia) ತಂಡವು ಸರಣಿ ವಶಪಡಿಸಿಕೊಂಡಿದೆ. ಈ ಸರಣಿ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್ ಆಡುವುದು ಖಚಿತವಾಗಿದೆ. ಇದಾಗ್ಯೂ ಆಸೀಸ್​ ತಂಡದ ಅಂತಿಮ ಎದುರಾಳಿ ಯಾರು ಎಂಬುದು ಇನ್ನೂ ಕೂಡ ನಿರ್ಧಾರವಾಗಿಲ್ಲ. ಏಕೆಂದರೆ ಪ್ರಸ್ತುತ ಸನ್ನಿವೇಶದಲ್ಲಿ ಮೂರು ತಂಡಗಳು ಫೈನಲ್​ ರೇಸ್​ನಲ್ಲಿದೆ. ಅಂದರೆ 14 ಪಂದ್ಯಗಳನ್ನಾಡಿ 10 ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡವು 78.57% ರಷ್ಟು (ಗೆಲುವಿನ ಶೇಕಡಾವಾರು) ಅಂಕಗಳೊಂದಿಗೆ ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು ಎರಡನೇ ಸ್ಥಾನದಲ್ಲಿರುವ ಭಾರತ ತಂಡವು ಭಾರತ 14 ಪಂದ್ಯಗಳಲ್ಲಿ 8 ಗೆಲುವು ದಾಖಲಿಸಿ ಶೇ. 58.93% ರಷ್ಟು ಪಾಯಿಂಟ್ ಹೊಂದಿದೆ.

ಆದರೆ ಮೂರನೇ ಸ್ಥಾನದಲ್ಲಿರುವ ಶ್ರೀಲಂಕಾ ತಂಡವು 10 ಪಂದ್ಯಗಳಲ್ಲಿ 5 ಗೆಲುವು ಸಾಧಿಸಿ 53.33% ಪಾಯಿಂಟ್ ಕಲೆಹಾಕಿದೆ. ಮತ್ತೊಂದೆಡೆ 12 ಪಂದ್ಯಗಳನ್ನಾಡಿರುವ ಸೌತ್ ಆಫ್ರಿಕಾ 12 ಪಂದ್ಯಗಳಲ್ಲಿ 6 ಜಯ ಸಾಧಿಸಿ 50.0% ಪಾಯಿಂಟ್ ಹೊಂದಿದೆ. ಅಂದರೆ ಇಲ್ಲಿ ಭಾರತ, ಶ್ರೀಲಂಕಾ ಹಾಗೂ ಸೌತ್ ಆಫ್ರಿಕಾ ನಡುವೆ ಫೈನಲ್​ಗೇರಲು ಪೈಪೋಟಿ ಏರ್ಪಟ್ಟಿದೆ. ಇದಾಗ್ಯೂ ಭಾರತಕ್ಕೆ ನೇರವಾಗಿ ಫೈನಲ್​ಗೇರುವ ಉತ್ತಮ ಅವಕಾಶ ಕೂಡ ಇದೆ. ಹಾಗಿದ್ರೆ ಭಾರತ ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್​ ಫೈನಲ್​ಗೆ ಹೇಗೆ ಅರ್ಹತೆ ಪಡೆಯಬಹುದು ಎಂದು ತಿಳಿಯೋಣ…

  • – 2023 ರಲ್ಲಿ ಭಾರತ-ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಸರಣಿ ಆಡಲಿದೆ. ಈ ಸರಣಿಯನ್ನು ಭಾರತ 4-0, 3-0 ಅಥವಾ 3-1 ಅಂತರದಿಂದ ಗೆದ್ದರೆ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯಲಿದೆ.
  • – ಒಂದು ವೇಳೆ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 2-0 ಅಂತರದಿಂದ ಸರಣಿ ಜಯಿಸಿದರೂ ಫೈನಲ್​ಗೆ ಅರ್ಹತೆ ಪಡೆಯಬಹುದು. ಆದರೆ ಇದಕ್ಕೆ ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ನಡುವಣ ಟೆಸ್ಟ್ ಸರಣಿಯ ಫಲಿತಾಂಶ ಮೇಲೆ ಅವಲಂಬಿಸಬೇಕಾಗುತ್ತದೆ. ಅಂದರೆ ಇಲ್ಲಿ ಶ್ರೀಲಂಕಾ ತಂಡವು ನ್ಯೂಜಿಲೆಂಡ್ ಅನ್ನು 2-0 ಅಂತರದಿಂದ ಮಣಿಸಿದರೆ, ಅದು ಭಾರತ ಪಾಲಿಗೆ ಮುಳುವಾಗಬಹುದು. ಅಲ್ಲದೆ ಪಾಯಿಂಟ್ಸ್​ನಲ್ಲಿ ಹಿಂದಿಕ್ಕಿ ಶ್ರೀಲಂಕಾಗೆ ಫೈನಲ್​ಗೇರುವ ಅವಕಾಶ ಹೆಚ್ಚಾಗಲಿದೆ.
  • – ಒಂದು ವೇಳೆ ಆಸ್ಟ್ರೇಲಿಯಾ ವಿರುದ್ಧ ಭಾರತ 1-0 ಅಂತರದಿಂದ ಸರಣಿ ಗೆದ್ದುಕೊಂಡರೆ,  ನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾ 3-0 ಅಂತರದಿಂದ ಸರಣಿ ಗೆಲ್ಲುವುದನ್ನು ಎದುರು ನೋಡಬೇಕು. ಈ ಮೂಲಕ ಶೇಕಡಾವಾರು ಲೆಕ್ಕಚಾರದಲ್ಲಿ ಫೈನಲ್​ಗೇರುವ ಅವಕಾಶವನ್ನು ಟೀಮ್ ಇಂಡಿಯಾ ಎದುರು ನೋಡಬಹುದು.
  • – ಇನ್ನು ಭಾರತ-ಆಸ್ಟ್ರೇಲಿಯಾ ನಡುವಣ ನಾಲ್ಕು ಪಂದ್ಯಗಳ ಸರಣಿಯು ಡ್ರಾನಲ್ಲಿ ಅಂತ್ಯಗೊಂಡರೆ, ಭಾರತದ ಪಾಯಿಂಟ್ಸ್​ 56.94% ನಲ್ಲೇ ಉಳಿಯಲಿದೆ. ಇದರಿಂದ ಶ್ರೀಲಂಕಾ ಹಾಗೂ ಸೌತ್ ಆಫ್ರಿಕಾ ತಂಡಗಳಿಗೂ ಫೈನಲ್​ಗೇರುವ ಅವಕಾಶ ಹೆಚ್ಚಾಗಲಿದೆ.
  • – ಒಂದು ವೇಳೆ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಟೆಸ್ಟ್ ಸರಣಿ ಸೋತರೆ ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ನಲ್ಲಿ ಫೈನಲ್ ಆಡುವ ಕನಸು ಬಹುತೇಕ ಕೊನೆಗೊಳ್ಳಲಿದೆ. ಹೀಗಾಗಿ ಆಸೀಸ್​ ವಿರುದ್ಧ ಮುಂದಿನ ಸರಣಿಯು ಟೀಮ್ ಇಂಡಿಯಾ ಪಾಲಿಗೆ ತುಂಬಾ ಮಹತ್ವದ್ದು.

 

ಇದನ್ನೂ ಓದಿ
Team India: ಟೀಮ್ ಇಂಡಿಯಾ ಟಿ20 ತಂಡದಿಂದ 9 ಆಟಗಾರರು ಔಟ್..!
IPL 2023: ಐಪಿಎಲ್​ಗೆ ಆಯ್ಕೆಯಾಗಿರುವ ಪಾಕ್ ಮೂಲದ 3 ಕ್ರಿಕೆಟಿಗರು ಯಾರು ಗೊತ್ತಾ?
IPL ಆಡಿದ್ದ 11 ಪಾಕ್ ಆಟಗಾರರು ಯಾರು ಗೊತ್ತಾ?
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?