AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WTC 2025 final: ಹಿಂದೆಂದೂ ಸಂಭವಿಸದ ಅಪರೂಪದ ಘಟನೆಗೆ ಸಾಕ್ಷಿಯಾದ ಡಬ್ಲ್ಯುಟಿಸಿ ಫೈನಲ್

WTC 2025 final: 2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ಮೊದಲ ದಿನ, ಲಾರ್ಡ್ಸ್‌ನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ಅಪರೂಪದ ಘಟನೆ ನಡೆಯಿತು. ಎರಡೂ ತಂಡಗಳ ಆರಂಭಿಕ ಬ್ಯಾಟ್ಸ್‌ಮನ್‌ಗಳು ಖಾತೆ ತೆರೆಯದೆ ಔಟ್ ಆದರು. ಉಸ್ಮಾನ್ ಖವಾಜಾ ಮತ್ತು ಐಡೆನ್ ಮಾರ್ಕ್ರಾಮ್ ಶೂನ್ಯ ರನ್‌ಗಳಿಗೆ ಔಟ್ ಆದರು. ಇದು ಇಂಗ್ಲೆಂಡ್‌ನ 145 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿ ಜರುಗಿದ ಘಟನೆಯಾಗಿದೆ.

WTC 2025 final: ಹಿಂದೆಂದೂ ಸಂಭವಿಸದ ಅಪರೂಪದ ಘಟನೆಗೆ ಸಾಕ್ಷಿಯಾದ ಡಬ್ಲ್ಯುಟಿಸಿ ಫೈನಲ್
Aus Vs Sa
ಪೃಥ್ವಿಶಂಕರ
|

Updated on: Jun 12, 2025 | 5:08 PM

Share

2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ (WTC Final 2025) ಪಂದ್ಯವು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ (Australia vs South Africa) ನಡುವೆ ಲಾರ್ಡ್ಸ್‌ನ ಐತಿಹಾಸಿಕ ಮೈದಾನದಲ್ಲಿ ನಡೆಯುತ್ತಿದೆ. ಈ ಪಂದ್ಯದ ಮೊದಲ ದಿನ ಬೌಲರ್‌ಗಳು ಮೇಲುಗೈ ಸಾಧಿಸಿದರು. ಎರಡೂ ತಂಡಗಳು ಒಟ್ಟಾಗಿ ಒಟ್ಟು 14 ವಿಕೆಟ್‌ಗಳನ್ನು ಕಳೆದುಕೊಂಡವು. ಇದೇ ವೇಳೆ ಇಂಗ್ಲೆಂಡ್ ಕ್ರಿಕೆಟ್‌ನ 145 ವರ್ಷಗಳ ಇತಿಹಾಸದಲ್ಲಿ ಎಂದಿಗೂ ಸಂಭವಿಸದ ಅಪರೂಪದ ಘಟನೆಯೊಂದು ಈ ಪಂದ್ಯದಲ್ಲಿ ನಡೆಯಿತು. 1880 ರಿಂದ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಪಂದ್ಯಗಳನ್ನು ಆಡಲಾಗುತ್ತಿದ್ದು, ಇದುವರೆಗೆ ನಡೆಯದ ಘಟನೆಯೊಂದು ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ನಡೆದಿದೆ.

145 ವರ್ಷಗಳಲ್ಲಿ ಅಪರೂಪದ ಘಟನೆ

ಇಂಗ್ಲೆಂಡ್‌ನಲ್ಲಿ ನಡೆದಿರುವ 561 ಟೆಸ್ಟ್ ಪಂದ್ಯಗಳ ಇತಿಹಾಸದಲ್ಲಿ ಎರಡೂ ತಂಡಗಳ ಆರಂಭಿಕ ಬ್ಯಾಟ್ಸ್‌ಮನ್ (ಇನ್ನಿಂಗ್ಸ್‌ನ ಮೊದಲ ಎಸೆತವನ್ನು ಆಡುವ ಆಟಗಾರ) ಮೊದಲ ಇನ್ನಿಂಗ್ಸ್‌ನಲ್ಲಿ ಖಾತೆ ತೆರೆಯದೆಯೇ ಔಟಾಗಿದ್ದು ಇದೇ ಮೊದಲು. ಆಸ್ಟ್ರೇಲಿಯಾ ಪರ ಇನ್ನಿಂಗ್ಸ್ ಆರಂಭಿಸಿದ ಉಸ್ಮಾನ್ ಖವಾಜಾ 20 ಎಸೆತಗಳನ್ನು ಎದುರಿಸಿ ಸೊನ್ನಗೆ ಔಟಾದರೆ, ಇತ್ತ ದಕ್ಷಿಣ ಆಫ್ರಿಕಾ ಪರ ಇನ್ನಿಂಗ್ಸ್ ಆರಂಭಿಸಿದ ಐಡೆನ್ ಮಾರ್ಕ್ರಾಮ್ 6 ಎಸೆತಗಳಲ್ಲಿ ಖಾತೆ ತೆರೆಯಲು ಸಾಧ್ಯವಾಗದೆ ವಿಕೆಟ್ ಒಪ್ಪಿಸಿದರು.

ಲಾರ್ಡ್ಸ್ ಮೈದಾನದಲ್ಲಿ ನಡೆದ ಪಂದ್ಯದ ಮೊದಲ ದಿನದಂದು ನಡೆದ ಈ ಪಂದ್ಯದಲ್ಲಿ, ಇಬ್ಬರೂ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಆರಂಭ ನೀಡಲಿಲ್ಲ. ಉಸ್ಮಾನ್ ಖವಾಜಾ 20 ಎಸೆತಗಳನ್ನು ಎದುರಿಸಿ ತಮ್ಮ ಖಾತೆಯನ್ನು ತೆರೆಯಲು ಸಾಧ್ಯವಾಗದೆ ಕಗಿಸೊ ರಬಾಡಗೆ ಬಲಿಯಾದರೆ, ಮತ್ತೊಂದೆಡೆ, ಐಡೆನ್ ಮಾರ್ಕ್ರಾಮ್ ಇನ್ನಿಂಗ್ಸ್‌ನ ಮೊದಲ ಓವರ್‌ನ ಆರನೇ ಎಸೆತದಲ್ಲಿ ಮಿಚೆಲ್ ಸ್ಟಾರ್ಕ್‌ಗೆ ಬಲಿಯಾದರು.

WTC Final 2025: ಡಬ್ಲ್ಯುಟಿಸಿ ಫೈನಲ್ ವಿಜೇತರಿಗೆ ದಾಖಲೆ ಮೊತ್ತದ ಬಹುಮಾನ; ಜಯ್​ ಶಾ ಘೋಷಣೆ

ಮೊದಲ ದಿನದಾಟ ಹೀಗಿತ್ತು

ಈ ಪಂದ್ಯದಲ್ಲಿ, ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು ಕೇವಲ 212 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತು. ದಕ್ಷಿಣ ಆಫ್ರಿಕಾ ಪರ ಕಗಿಸೊ ರಬಾಡ 5 ವಿಕೆಟ್‌ಗಳನ್ನು ಪಡೆದರು. ಆದರೆ ಮೊದಲ ದಿನದಲ್ಲೇ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಫ್ರಿಕಾ ದಿನದಾಟದ ಅಂತ್ಯಕ್ಕೆ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 43 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ಇದೀಗ ಎರಡನೇ ದಿನದಾಟ ಆರಂಭವಾಗಿತ್ತು. ಆಫ್ರಿಕಾ ತಂಡ ತಾಳ್ಮೆಯ ಆಟಕ್ಕೆ ಮುಂದಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ