AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ರೋಹಿತ್, ಕೊಹ್ಲಿಯನ್ನು ನೆನಪಿಸಿಕೊಂಡ ಗಂಭೀರ್

Team India's England Tour 2025: ಜೂನ್ 20 ರಿಂದ ಆರಂಭವಾಗುವ ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತದ ಯುವ ಕ್ರಿಕೆಟ್ ತಂಡ ಸನ್ನದ್ಧವಾಗಿದೆ. ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ನಿವೃತ್ತಿಯ ನಂತರ, ಹೊಸ ಆಟಗಾರರಿಗೆ ಹೆಚ್ಚಿನ ಜವಾಬ್ದಾರಿ ಬಂದಿದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಯುವ ಆಟಗಾರರನ್ನು ಪ್ರೋತ್ಸಾಹಿಸಿ, ಹಿರಿಯರನ್ನು ಸ್ಮರಿಸಿದ್ದಾರೆ. ಕರುಣ್ ನಾಯರ್ ಅವರ ಪುನರಾಗಮನವನ್ನು ಗಂಭೀರ್ ಅವರು ಶ್ಲಾಘಿಸಿದ್ದಾರೆ. ಈ ಪ್ರವಾಸವು ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಅತ್ಯುತ್ತಮ ಅವಕಾಶ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

IND vs ENG: ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ರೋಹಿತ್, ಕೊಹ್ಲಿಯನ್ನು ನೆನಪಿಸಿಕೊಂಡ ಗಂಭೀರ್
Team India
ಪೃಥ್ವಿಶಂಕರ
|

Updated on:Jun 12, 2025 | 4:24 PM

Share

ಜೂನ್ 20 ರಿಂದ ಟೀಂ ಇಂಡಿಯಾದ ಇಂಗ್ಲೆಂಡ್ ಪ್ರವಾಸ (Team India’s England Tour 2025) ಆರಂಭವಾಗಲಿದೆ. ಇದಕ್ಕಾಗಿ ಭಾರತ ಯುವ ತಂಡ ಕಠಿಣ ತಯಾರಿ ನಡೆಸುತ್ತಿದೆ. ಸರಣಿಗೆ ಆಯ್ಕೆಯಾದ ಎಲ್ಲಾ ಆಟಗಾರರು ಈಗಾಗಲೇ ತಂಡವನ್ನು ಸೇರಿಕೊಂಡಿದ್ದಾರೆ. ಇದೇ ವೇಳೆ ಹೊಸ ಆಟಗಾರರನ್ನು ತಂಡಕ್ಕೆ ಸ್ವಾಗತಿಸಿದ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir), ಇತ್ತೀಚೆಗೆ ಟೆಸ್ಟ್‌ ಕ್ರಿಕೆಟ್​ನಿಂದ ನಿವೃತ್ತರಾದ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ (Virat Kohli) ಅವರನ್ನು ಸಹ ಈ ಸಮಯದಲ್ಲಿ ನೆನಪಿಸಿಕೊಂಡಿದ್ದಾರೆ. ಹಾಗೆಯೇ ಗಂಭೀರ್, ಎಲ್ಲಾ ಆಟಗಾರರಲ್ಲಿ ಉತ್ಸಾಹ ತುಂಬುವ ಭಾಷಣ ಮಾಡಿದ ವಿಡಿಯೋವನ್ನು ಇದೀಗ ಬಿಸಿಸಿಐ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದೆ.

ರೋಹಿತ್, ವಿರಾಟ್​ರನ್ನು ನೆನಪಿಸಿಕೊಂಡ ಗಂಭೀರ್

ಇಂಗ್ಲೆಂಡ್ ವಿರುದ್ಧದ ಮುಂಬರುವ ಟೆಸ್ಟ್ ಸರಣಿಗೂ ಮುನ್ನ ಗೌತಮ್ ಗಂಭೀರ್ ತಮ್ಮ ಭಾಷಣದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ಪ್ರಸ್ತಾಪಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇದು ಈಗ ಚರ್ಚೆಯ ಕೇಂದ್ರಬಿಂದುವಾಗಿದೆ. ತಮ್ಮ ಭಾಷಣದಲ್ಲಿ ತಂಡದ ಹೊಸ ಆರಂಭ ಮತ್ತು ಯುವ ಆಟಗಾರರ ಜವಾಬ್ದಾರಿಯ ಮೇಲೆ ಹೆಚ್ಚು ಒತ್ತು ನೀಡಿದ ಗಂಭೀರ್, ತಂಡದೊಳಗಿನ ಹೊಸ ಶಕ್ತಿ ಮತ್ತು ಬದ್ಧತೆಯ ಬಗ್ಗೆ ಮಾತನಾಡಿದರು. ಇದೇ ವೇಳೆ, ಇತ್ತೀಚೆಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ, ಇದು ಭಾರತೀಯ ಕ್ರಿಕೆಟ್‌ನಲ್ಲಿ ದೊಡ್ಡ ಬದಲಾವಣೆಗೆ ನಾಂದಿ ಹಾಡಿದೆ. ಅದೇ ಸಮಯದಲ್ಲಿ, ಆರ್. ಅಶ್ವಿನ್ ಕೂಡ ನಿವೃತ್ತರಾಗಿದ್ದಾರೆ. ತಂಡದ ಹಿರಿಯ ಆಟಗಾರರ ನಿರ್ಗಮನದಿಂದ ಉಂಟಾದ ಶೂನ್ಯವನ್ನು ತುಂಬುವ ಜವಾಬ್ದಾರಿ ಈಗ ಶುಭ್​ಮನ್ ಗಿಲ್ ಮತ್ತು ಇತರ ಉದಯೋನ್ಮುಖ ಯುವ ಆಟಗಾರರ ಮೇಲಿದೆ ಎಂದು ಗಂಭೀರ್ ಹೇಳಿದ್ದಾರೆ.

‘ಈ ಪ್ರವಾಸವನ್ನು ನಾವು ಎರಡು ರೀತಿಯಲ್ಲಿ ನೋಡಬಹುದು. ಮೊದಲನೆಯದ್ದು, ನಮ್ಮ ಮೂವರು ಅತ್ಯಂತ ಅನುಭವಿ ಆಟಗಾರರು ಈಗ ತಂಡದಲ್ಲಿ ಇಲ್ಲ. ಅವರ ಅನುಪಸ್ಥಿತಿಯಲ್ಲಿ ನಮಗೆ ದೇಶಕ್ಕಾಗಿ ಏನಾದರೂ ಮಾಡಲು ಈ ಉತ್ತಮ ಅವಕಾಶ ಸಿಕ್ಕಿದೆ. ತಂಡದ ಉತ್ಸಾಹವನ್ನು ಬಲಪಡಿಸುವ ಮತ್ತು ಇಂಗ್ಲೆಂಡ್‌ನಂತಹ ಕಠಿಣ ಪ್ರವಾಸಕ್ಕೆ ಸಿದ್ಧರಾಗುವ ನಿಟ್ಟಿನಲ್ಲಿ ಹಿರಿಯ ಆಟಗಾರರ ನಿಲುವನ್ನು ಒಂದು ಪ್ರಮುಖ ಹೆಜ್ಜೆ ಎಂದು ಪರಿಗಣಿಸಲಾಗುತ್ತಿದೆ’ ಎಂದು ಗಂಭೀರ್ ಹೇಳಿದ್ದಾರೆ.

Karun Nair: ಟೀಕಿಸುವವರಿಗೆ ದ್ವಿಶತಕದ ಉತ್ತರ ನೀಡಿದ ಕನ್ನಡಿಗ ಕರುಣ್ ನಾಯರ್

ಕರುಣ್ ಅವರನ್ನು ಹೊಗಳಿದ ಗಂಭೀರ್

ಈ ಸರಣಿ ಕರುಣ್ ನಾಯರ್ ಅವರಿಗೆ ಬಹಳ ಮುಖ್ಯ. ಅವರು ಹಲವು ವರ್ಷಗಳ ನಂತರ ಭಾರತ ತಂಡಕ್ಕೆ ಮರಳಿದ್ದಾರೆ. ತಮ್ಮ ಭಾಷಣದಲ್ಲಿ ಇದನ್ನು ಸ್ಮರಿಸಿದ ಗಂಭೀರ್, ‘ಪುನರಾಗಮನ ಎಂದಿಗೂ ಸುಲಭವಲ್ಲ, ಕರುಣ್ 7 ವರ್ಷಗಳ ನಂತರ ತಂಡಕ್ಕೆ ಮರಳಿದ್ದಾರೆ. ಕಳೆದ ವರ್ಷ ಕರುಣ್ ನಾಯರ್ ಅದ್ಭುತ ಪ್ರದರ್ಶನ ನೀಡಿದರು, ನೀವು ಗಳಿಸಿದ ರನ್‌ಗಳ ಸಂಖ್ಯೆ ಮತ್ತು ಮುಖ್ಯವಾಗಿ ಎಂದಿಗೂ ಬಿಟ್ಟುಕೊಡದ ಮನೋಭಾವ, ಇದು ಸ್ಪೂರ್ತಿದಾಯಕ ವಿಷಯ. ಕರುಣ್ ನಾಯರ್‌ಗೆ ಮತ್ತೆ ಸ್ವಾಗತ’ ಎಂದರು. ಇದರ ಹೊರತಾಗಿ, ಮೊದಲ ಬಾರಿಗೆ ಟೆಸ್ಟ್ ತಂಡದ ಭಾಗವಾಗಿರುವ ಸಾಯಿ ಸುದರ್ಶನ್ ಮತ್ತು ಅರ್ಷದೀಪ್ ಸಿಂಗ್ ಅವರನ್ನು ಸಹ ಗಂಭೀರ್ ಸ್ವಾಗತಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:18 pm, Thu, 12 June 25

ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು