AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

WTC ನೂತನ ಅಂಕ ಪಟ್ಟಿ ಪ್ರಕಟ

ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಣ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳು ಮುಗಿಯುತ್ತಿದ್ದಂತೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ನೂತನ ಅಂಕಪಟ್ಟಿ ಪ್ರಕಟವಾಗಿದೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದ್ದರೆ, ನ್ಯೂಝಿಲೆಂಡ್ ದ್ವಿತೀಯ ಸ್ಥಾನ ಕಾಯ್ದುಕೊಂಡಿದೆ. ಇನ್ನು ಮೂರನೇ ಸ್ಥಾನದಲ್ಲಿ ಸೌತ್ ಆಫ್ರಿಕಾ ಕಾಣಿಸಿಕೊಂಡಿದೆ.

WTC ನೂತನ ಅಂಕ ಪಟ್ಟಿ ಪ್ರಕಟ
Wtc 2027Image Credit source: ICC
ಝಾಹಿರ್ ಯೂಸುಫ್
|

Updated on: Oct 24, 2026 | 2:29 PM

Share

ಕೆಬೆರ್ಹಾದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೌತ್ ಆಫ್ರಿಕಾ ತಂಡ ಇನ್ನಿಂಗ್ಸ್ ಹಾಗೂ 31 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯು 1-1 ರಿಂದ ಸಮಬಲಗೊಂಡಿದೆ. ಇದರ ಬೆನ್ನಲ್ಲೇ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2025-27ರ ಅಂಕಪಟ್ಟಿಯಲ್ಲೂ ಮಹತ್ವದ ಬದಲಾವಣೆಯಾಗಿದೆ.

ಈ ಬದಲಾವಣೆಯ ಹೊರತಾಗಿಯೂ ಆಸ್ಟ್ರೇಲಿಯಾ ತಂಡದ ನಂಬರ್ 1 ಸ್ಥಾನಕ್ಕೆ ಯಾವುದೇ ಧಕ್ಕೆಯಾಗಿಲ್ಲ ಎಂಬುದು ವಿಶೇಷ. ಅಂದರೆ ಸೌತ್ ಆಫ್ರಿಕಾ ವಿರುದ್ಧದ ಈ ಹೀನಾಯ ಸೋಲಿನ ಹೊರತಾಗಿಯೂ ಆಸ್ಟ್ರೇಲಿಯಾ ತಂಡ 75.00% PCT ನೊಂದಿಗೆ ಅಗ್ರಸ್ಥಾನದಲ್ಲೇ ಮುಂದುವರಿದಿದೆ. ಆದರೆ ಈ ಮುಂಚೆ ಇದ್ದ ಅವರ ಗೆಲುವಿನ ಸರಾಸರಿ ಭಾರಿ ಕುಸಿತ ಕಂಡಿದೆ.

ಸೌತ್ ಆಫ್ರಿಕಾಕ್ಕೆ ಬಿಗ್ ಬೂಸ್ಟ್:

ಪಂದ್ಯದ ಆರಂಭದ ಎರಡು ದಿನ ಮಳೆಗೆ ಆಹುತಿಯಾಗಿದ್ದರೂ, ನಾಯಕ ಟೆಂಬಾ ಬವುಮಾ ಅವರ ಆಕರ್ಷಕ 179 ರನ್ ಹಾಗೂ ಬೌಲರ್‌ಗಳ ಸಾಂಘಿಕ ಪ್ರದರ್ಶನದಿಂದ ಪ್ರೋಟೀಸ್ ಪಡೆ ಐತಿಹಾಸಿಕ ಜಯ ದಾಖಲಿಸಿತು. ಇದರಿಂದಾಗಿ ಸೌತ್ ಆಫ್ರಿಕಾ ತಂಡದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಶೇಕಡಾವಾರು ಅಂಕ 60% ರಿಂದ 66.67% ಗೆ ಜಿಗಿದಿದ್ದು, ಮೂರನೇ ಸ್ಥಾನದಲ್ಲೇ ಭದ್ರವಾಗಿದೆ.

ಭಾರತ ತಂಡದ ಮುಂದಿರುವ ಹಾದಿ:

ಭಾರತ ಸದ್ಯ 51.52% ಶೇಕಡಾವಾರು ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ. ಟಾಪ್ 2 ರೇಸ್‌ನಲ್ಲಿ ಮುಂದುವರಿಯಬೇಕಾದರೆ ಟೀಮ್ ಇಂಡಿಯಾ ಮುಂದಿನ ಸರಣಿಗಳಲ್ಲಿ ದೊಡ್ಡ ಜಯ ಸಾಧಿಸಬೇಕಿದೆ. ಅಂದರೆ ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಪ್ರಚಂಡ ಪ್ರದರ್ಶನ ನೀಡಿದರೆ ಮಾತ್ತ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಫೈನಲ್​ಗೇರಬಹುದು.

WTC 2025-27 ಅಂಕಪಟ್ಟಿ (ಅ.24):

ಸ್ಥಾನ ತಂಡ ಪಂದ್ಯ ಜಯ ಸೋಲು ಡ್ರಾ ಅಂಕಗಳು PCT (%)
1 ಆಸ್ಟ್ರೇಲಿಯಾ 12 9 3 0 108 75.00%
2 ನ್ಯೂಝಿಲೆಂಡ್ 6 4 2 0 52 72.22%
3 ಸೌತ್ ಆಫ್ರಿಕಾ 6 4 2 0 48 66.67%
4 ಬಾಂಗ್ಲಾದೇಶ್ 6 3 3 0 40 55.56%
5 ಭಾರತ 11 5 4 2 68 51.52%
6 ಇಂಗ್ಲೆಂಡ್ 16 7 8 1 74 38.54%
7 ಶ್ರೀಲಂಕಾ 6 1 5 0 24 33.33%
8 ವೆಸ್ಟ್ ಇಂಡೀಸ್ 12 2 9 1 30 20.83%
9 ಪಾಕಿಸ್ತಾನ್ 9 2 5 2 5 4.63%

ಇದನ್ನೂ ಓದಿ: ಟೀಮ್ ಇಂಡಿಯಾ ಆಟಗಾರರು ಶೂನ್ಯಕ್ಕೆ ಔಟ್: 113 ರನ್​ಗಳಿಗೆ ಆಲೌಟ್!

ಮುಂದಿನ ಮಹತ್ವದ ಪಂದ್ಯಗಳು:

ಅಕ್ಟೋಬರ್ 27 ರಿಂದ 31 ರವರೆಗೆ ಕೇಪ್‌ಟೌನ್‌ನಲ್ಲಿ ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಣ ಸರಣಿಯ ಕೊನೆಯ ಹಾಗೂ ನಿರ್ಣಾಯಕ 3ನೇ ಟೆಸ್ಟ್ ಪಂದ್ಯ ನಡೆಯಲಿದೆ. ಒಂದು ವೇಳೆ ಸೌತ್ ಆಫ್ರಿಕಾ ಈ ಪಂದ್ಯವನ್ನೂ ಗೆದ್ದು ಸರಣಿ ಕೈವಶ ಮಾಡಿಕೊಂಡರೆ, ಅವರ PCT 71.42% ಗೆ ಏರಲಿದ್ದು, ಆಸ್ಟ್ರೇಲಿಯಾ ಟಾಪ್ 2 ಸ್ಥಾನದಿಂದ ಕೆಳಗಿಳಿಯುವ ಅಪಾಯ ಎದುರಿಸಲಿದೆ. ಹೀಗಾಗಿ ಮೂರನೇ ಪಂದ್ಯದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಐಷಾರಾಮಿ ಪ್ರವಾಸಿ ರೈಲಿನಲ್ಲಿ ಪ್ರಯಾಣಿಸಿ ಖುಷಿ ಹಂಚಿಕೊಂಡ ಸಿಎಂ ಡಿಕೆಶಿ !
ಐಷಾರಾಮಿ ಪ್ರವಾಸಿ ರೈಲಿನಲ್ಲಿ ಪ್ರಯಾಣಿಸಿ ಖುಷಿ ಹಂಚಿಕೊಂಡ ಸಿಎಂ ಡಿಕೆಶಿ !
ಮಾವಿನಕೆರೆ ರಂಗನಾಥಸ್ವಾಮಿಗೆ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
ಮಾವಿನಕೆರೆ ರಂಗನಾಥಸ್ವಾಮಿಗೆ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
ಆರ್.ಆರ್ ನಗರದ ಪಟ್ಟಣಗೆರೆ ಬಳಿ ಚಾಟ್ಸ್​ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ!
ಆರ್.ಆರ್ ನಗರದ ಪಟ್ಟಣಗೆರೆ ಬಳಿ ಚಾಟ್ಸ್​ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ!
ಆಸ್ಪತ್ರೆಗಳ ಅತಿಯಾದ ಬಿಲ್ಲಿಂಗ್, ಕಳ್ಳಾಟಕ್ಕೆ ಬ್ರೇಕ್
ಆಸ್ಪತ್ರೆಗಳ ಅತಿಯಾದ ಬಿಲ್ಲಿಂಗ್, ಕಳ್ಳಾಟಕ್ಕೆ ಬ್ರೇಕ್
ಹಾಸನಾಂಬ ಜಾತ್ರೆ: ಸ್ಥಳೀಯರಿಗೆ ಪ್ರತ್ಯೇಕ ಕ್ಯೂಗೆ ಶಾಸಕ ಸ್ವರೂಪ್ ಒತ್ತಾಯ
ಹಾಸನಾಂಬ ಜಾತ್ರೆ: ಸ್ಥಳೀಯರಿಗೆ ಪ್ರತ್ಯೇಕ ಕ್ಯೂಗೆ ಶಾಸಕ ಸ್ವರೂಪ್ ಒತ್ತಾಯ
ಸರ್ಕಾರವೇ ಅಧಿಕೃತ ಪ್ರೋಟೋಕಾಲ್ ರೂಪಿಸಬೇಕು
ಸರ್ಕಾರವೇ ಅಧಿಕೃತ ಪ್ರೋಟೋಕಾಲ್ ರೂಪಿಸಬೇಕು
ಚಾಮುಂಡಿ ಬೆಟ್ಟ ರಥೋತ್ಸವ: ರಥ ಎಳೆಯುವ ಮೂಲಕ ಯದುವೀರ್ ಒಡೆಯರ್ ಚಾಲನೆ
ಚಾಮುಂಡಿ ಬೆಟ್ಟ ರಥೋತ್ಸವ: ರಥ ಎಳೆಯುವ ಮೂಲಕ ಯದುವೀರ್ ಒಡೆಯರ್ ಚಾಲನೆ
ಈ ಬಾರಿ ಜಟ್ಟಿ ಕಾಳಗ ಸ್ಥಗಿತ ಆಗಿದ್ಯಾಕೆ? ರಾಜಮಾತೆ ಏನಂದ್ರು ನೋಡಿ
ಈ ಬಾರಿ ಜಟ್ಟಿ ಕಾಳಗ ಸ್ಥಗಿತ ಆಗಿದ್ಯಾಕೆ? ರಾಜಮಾತೆ ಏನಂದ್ರು ನೋಡಿ
ಬೆಂಗಳೂರು-ದೇವನಹಳ್ಳಿ ಹೆದ್ದಾರಿಯಲ್ಲಿ ಬೈಕ್ ವ್ಹೀಲಿಂಗ್ ಕಿರಿಕಿರಿ
ಬೆಂಗಳೂರು-ದೇವನಹಳ್ಳಿ ಹೆದ್ದಾರಿಯಲ್ಲಿ ಬೈಕ್ ವ್ಹೀಲಿಂಗ್ ಕಿರಿಕಿರಿ
ಬಿಗ್ ಬಾಸ್: ನಾಮಿನೇಟ್ ಆದವರಲ್ಲಿ ಈ ವಾರ ಮನೆಯಿಂದ ಹೊರಹೋಗುವವರು ಯಾರು?
ಬಿಗ್ ಬಾಸ್: ನಾಮಿನೇಟ್ ಆದವರಲ್ಲಿ ಈ ವಾರ ಮನೆಯಿಂದ ಹೊರಹೋಗುವವರು ಯಾರು?