
ಯಶಸ್ವಿ ಜೈಸ್ವಾಲ್ (Yashasvi Jaiswal) ತಮ್ಮ ಮೊದಲ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅದ್ಭುತ ಬ್ಯಾಟಿಂಗ್ ಮೂಲಕ ಎಲ್ಲರನ್ನೂ ಮೆಚ್ಚಿಸಿದ್ದರು. ಅಂತಹ ಪರಿಸ್ಥಿತಿಯಲ್ಲಿ, ಇಂಗ್ಲೆಂಡ್ ಪ್ರವಾಸದಲ್ಲಿಯೂ ಭಾರತದ ಯುವ ಆರಂಭಿಕ ಆಟಗಾರನಿಂದ ಇದೇ ರೀತಿಯ ಪ್ರದರ್ಶನ ನಿರೀಕ್ಷಿಸಲಾಗಿತ್ತು. ಇದಕ್ಕೆ ಪೂರಕವಾಗಿ ಜೈಸ್ವಾಲ್ ಕೂಡ ಅದೇ ರೀತಿಯ ಆರಂಭವನ್ನು ಪಡೆದುಕೊಂಡು ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಶತಕ ಬಾರಿಸಿದ್ದರು. ಆದರೆ ಆ ಬಳಿಕ ಅವರ ಪ್ರದರ್ಶನದಲ್ಲಿ ವಿಶೇಷವೇನು ಕಂಡುಬಂದಿಲ್ಲ. ಇದೀಗ ಓವಲ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್ನಲ್ಲಿಯೂ ಜೈಸ್ವಾಲ್ ಒಂದಂಕಿಗೆ ಸುಸ್ತಾಗಿದ್ದಾರೆ. ಈ ರೀತಿಯಾಗಿ, ಈ ಸರಣಿಯಲ್ಲಿ ಆರನೇ ಬಾರಿಗೆ, ಅವರು 50 ಕ್ಕಿಂತ ಕಡಿಮೆ ಸ್ಕೋರ್‌ಗೆ ಔಟಾಗಿದ್ದಾರೆ, ಆದರೆ 7 ನೇ ಬಾರಿಗೆ ಅವರು ಒಂದೇ ರೀತಿಯಲ್ಲಿ ಔಟಾಗಿರುವುದು ತಂಡದ ಕಳವಳವನ್ನು ಹೆಚ್ಚಿಸಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಜುಲೈ 31 ರಂದು ಪ್ರಾರಂಭವಾಗಿದೆ. ಈ ಪಂದ್ಯದಲ್ಲೂ ಟಾಸ್ ಸೋತ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಆರಂಭಿಸಿದೆ. ಆದರೆ ಈ ಬಾರಿಯೂ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. ನಾಲ್ಕನೇ ಓವರ್‌ನಲ್ಲಿ ಗಸ್ ಅಟ್ಕಿನ್ಸನ್ ಅವರ ಎಸೆತದಲ್ಲಿ ಜೈಸ್ವಾಲ್ ಎಲ್ಬಿಡಬ್ಲ್ಯೂ ಆಗಿ ಔಟಾಗುವ ಮೂಲಕ ತಂಡಕ್ಕೆ ಮೊದಲ ಆಘಾತ ನೀಡಿದರು. ಈ ಇನ್ನಿಂಗ್ಸ್‌ನಲ್ಲಿ ಜೈಸ್ವಾಲ್ ಕೇವಲ 2 ರನ್ಗಳಿಗೆ ಔಟಾಗುವ ಮೂಲಕ ಮತ್ತೊಮ್ಮೆ ಟೀಂ ಇಂಡಿಯಾಕ್ಕೆ ದೊಡ್ಡ ಆರಂಭ ನೀಡುವಲ್ಲಿ ವಿಫಲರಾದರು.
A series of highs and lows for Yashasvi Jaiswal in the Anderson-Tendulkar Trophy 2025 so far. 📉📈 pic.twitter.com/6SXOpHSXDS
— CricTracker (@Cricketracker) July 31, 2025
ಇಂಗ್ಲೆಂಡ್ ವಿರುದ್ಧದ ಈ ಸರಣಿಯ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಜೈಸ್ವಾಲ್ ಶತಕ ಗಳಿಸಿದ್ದರು. ಮುಂದಿನ ಪಂದ್ಯದಲ್ಲೂ ಜೈಸ್ವಾಲ್ ಅವರಿಂದ ಇದೇ ರೀತಿಯ ಪ್ರದರ್ಶನವನ್ನು ನಿರೀಕ್ಷಿಸಲಾಗಿತ್ತು. ಆದರೆ ಮುಂದಿನ 8 ಸತತ ಇನ್ನಿಂಗ್ಸ್‌ಗಳಲ್ಲಿ ಜೈಸ್ವಾಲ್ ಬ್ಯಾಟ್ನಿಂದ ಕೇವಲ 2 ಅರ್ಧಶತಕಗಳು ಮಾತ್ರ ಸಿಡಿದಿದ್ದರೆ, 4 ಬಾರಿ ಒಂದಂಕಿಗೆ ಔಟಾಗಿದ್ದಾರೆ. ಅದರಲ್ಲಿ 2 ಬಾರಿ ಜೈಸ್ವಾಲ್‌ಗೆ ತಮ್ಮ ಖಾತೆಯನ್ನು ತೆರೆಯಲು ಸಹ ಸಾಧ್ಯವಾಗಲಿಲ್ಲ. ಒಟ್ಟಾರೆಯಾಗಿ, ಈ ಸರಣಿಯಲ್ಲಿ ಅವರ ಸ್ಕೋರ್ ಕ್ರಮವಾಗಿ 101, 4, 87, 28, 13, 0, 58, 0, 2 ಆಗಿದೆ.
IND vs ENG: 51 ವರ್ಷಗಳ ಬಳಿಕ ಮ್ಯಾಂಚೆಸ್ಟರ್ನಲ್ಲಿ ಇತಿಹಾಸ ಬರೆದ ಯಶಸ್ವಿ ಜೈಸ್ವಾಲ್
ಕಡಿಮೆ ಸ್ಕೋರ್ ಮಾತ್ರವಲ್ಲ, ಈ ಸರಣಿಯಲ್ಲಿ ಜೈಸ್ವಾಲ್ ಔಟ್ ಆದ ರೀತಿಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಾಸ್ತವವಾಗಿ, ಈ ಸರಣಿಯಲ್ಲಿ ಜೈಸ್ವಾಲ್ ಎಲ್ಲಾ 9 ಇನ್ನಿಂಗ್ಸ್‌ಗಳಲ್ಲಿ ವಿಕೆಟ್ ಒಪ್ಪಿಸಿದ್ದು, ಅದರಲ್ಲಿ 7 ಬಾರಿ ಒಂದೇ ನ್ಯೂನತೆಗೆ ಬಲಿಯಾಗಿದ್ದಾರೆ. ವಾಸ್ತವವಾಗಿ ಜೈಸ್ವಾಲ್, ಬಲಗೈ ವೇಗದ ಬೌಲರ್ ರೌಂಡ್ ದಿ ವಿಕೆಟ್ ಬಂದು ಬೌಲಿಂಗ್ ಮಾಡಿದಾಗಲೆಲ್ಲ ಎಲ್ಬಿಡಬ್ಲ್ಯೂ ಬಲೆಗೆ ಅಥವಾ ಸ್ಲಿಪ್ನಲ್ಲಿ ಕ್ಯಾಚ್ ನೀಡಿ ಔಟಾಗಿದ್ದಾರೆ. ಇದರರ್ಥ ಜೈಸ್ವಾಲ್ ಅವರ ದೌರ್ಬಲ್ಯ ಇಂಗ್ಲೆಂಡ್‌ನಲ್ಲಿ ಜಗಜ್ಜಾಹೀರಾದಂತ್ತಾಗಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಈ ನ್ಯೂನತೆಯನ್ನು ಸರಿಪಡಿಸುವುದು ಜೈಸ್ವಾಲ್‌ಗೆ ಸವಾಲಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ