AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದ್ದಕ್ಕಿದ್ದಂತೆ ಆಸ್ಪತ್ರೆಗೆ ದಾಖಲಾದ ಯಶಸ್ವಿ ಜೈಸ್ವಾಲ್; ಕೆಲವು ದಿನ ಕ್ರಿಕೆಟ್ ಆಡದಂತೆ ವೈದ್ಯರ ಸಲಹೆ

Yashasvi Jaiswal Hospitalized: ಟೀಂ ಇಂಡಿಯಾ ಸ್ಟಾರ್ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಪಂದ್ಯದ ನಂತರ ತೀವ್ರ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ಸಂಪೂರ್ಣ ವಿಶ್ರಾಂತಿಗೆ ಸೂಚಿಸಿದ್ದು, ಜೈಸ್ವಾಲ್ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ. ಅವರಿಗೆ ಇಂಟ್ರಾವೆನಸ್ ಔಷಧ ನೀಡಲಾಗಿದ್ದು, ಶೀಘ್ರದಲ್ಲೇ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ. ಅವರು ಮುಂದಿನ ವರ್ಷ ಐಪಿಎಲ್ ಅಥವಾ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮರಳಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಇದ್ದಕ್ಕಿದ್ದಂತೆ ಆಸ್ಪತ್ರೆಗೆ ದಾಖಲಾದ ಯಶಸ್ವಿ ಜೈಸ್ವಾಲ್; ಕೆಲವು ದಿನ ಕ್ರಿಕೆಟ್ ಆಡದಂತೆ ವೈದ್ಯರ ಸಲಹೆ
Yashasvi Jaiswal
ಪೃಥ್ವಿಶಂಕರ
|

Updated on:Dec 17, 2025 | 6:21 PM

Share

ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ (Yashasvi Jaiswal) ಇದ್ದಕ್ಕಿದ್ದಂತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸ್ತುತ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಆಡುತ್ತಿರುವ ಜೈಸ್ವಾಲ್, ಪಂದ್ಯದ ನಂತರ ತೀವ್ರ ಅಸ್ವಸ್ತರಾಗಿದ್ದರು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು. ವರದಿಯ ಪ್ರಕಾರ, ಪಂದ್ಯದ ಸಮಯದಲ್ಲಿ ಜೈಸ್ವಾಲ್​ಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಪಂದ್ಯ ಮುಗಿದ ನಂತರ ಅದು ಇನ್ನಷ್ಟು ಜಾಸ್ತಿಯಾಗಿದೆ. ಹೀಗಾಗಿ ಜೈಸ್ವಾಲ್ ಅವರನ್ನು ತಕ್ಷಣ ಪಿಂಪ್ರಿ ಚಿಂಚ್‌ವಾಡ್‌ನ ಆದಿತ್ಯ ಬಿರ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಸ್ಪತ್ರೆಯಲ್ಲಿ ಜೈಸ್ವಾಲ್​ಗೆ ಸಿಟಿ ಸ್ಕ್ಯಾನ್ ಮತ್ತು ಅಲ್ಟ್ರಾಸೌಂಡ್ ಮಾಡಲಾಗಿದ್ದು, ವೈದ್ಯರು ಅವರಿಗೆ ಸಾಕಷ್ಟು ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ.

ವಿಶ್ರಾಂತಿಗೆ ಸೂಚಿಸಿದ ವೈದ್ಯರು

ಮೇಲೆ ಹೇಳಿದಂತೆ ಯಶಸ್ವಿ ಜೈಸ್ವಾಲ್ ಅವರಿಗೆ ಸದ್ಯಕ್ಕೆ ಕ್ರಿಕೆಟ್ ಆಡದಂತೆ ವೈದ್ಯರು ಸಲಹೆ ನೀಡಿದ್ದಾರೆ. ಅವರಿಗೆ ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ. ಜೈಸ್ವಾಲ್‌ಗೆ ಇಂಟ್ರಾವೆನಸ್ ಔಷಧ ನೀಡಲಾಗಿದ್ದು, ಶೀಘ್ರದಲ್ಲೇ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ. ಆದಾಗ್ಯೂ ಜೈಸ್ವಾಲ್‌ ಪ್ರಸ್ತುತ ಭಾರತ ತಂಡದಿಂದ ಹೊರಗಿದ್ದು, ಅವರಿಗೆ ಸದ್ಯದಲ್ಲಿ ಯಾವುದೇ ಸರಣಿಗಳಿಲ್ಲ. ಭಾರತ ತಂಡ ಟಿ20 ಸರಣಿಯನ್ನು ಆಡುತ್ತಿದ್ದು, ಆ ಸರಣಿಗೆ ಜೈಸ್ವಾಲ್ ಆಯ್ಕೆಯಾಗಿಲ್ಲ. ಜೈಸ್ವಾಲ್ ಭಾರತ ಟೆಸ್ಟ್ ತಂಡದಲ್ಲಿ ಮಾತ್ರ ಆಡುತ್ತಿದ್ದು, ಈ ವರ್ಷ ಭಾರತ ತಂಡ ಯಾವುದೇ ಟೆಸ್ಟ್ ಸರಣಿಯನ್ನು ಹೊಂದಿಲ್ಲ.

ಜೈಸ್ವಾಲ್ ಮತ್ತೆ ಕಣಕ್ಕಿಳಿಯುವುದು ಯಾವಾಗ?

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಮುಗಿದ ನಂತರ, ಟೀಂ ಇಂಡಿಯಾ ತನ್ನ ಮುಂದಿನ ಸರಣಿಯನ್ನು ಮುಂದಿನ ವರ್ಷ ಆಡಲಿದೆ. ಜನವರಿಯಲ್ಲಿ ನ್ಯೂಜಿಲೆಂಡ್ ತಂಡ ಭಾರತ ಪ್ರವಾಸ ಕೈಗೊಳ್ಳಲಿದೆ. ಉಭಯ ತಂಡಗಳ ನಡುವೆ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳು ನಡೆಯಲಿವೆ. ಏಕದಿನ ಸರಣಿ ಜನವರಿ 11 ರಂದು ಮತ್ತು ಟಿ20 ಸರಣಿ ಜನವರಿ 21 ರಂದು ಆರಂಭವಾಗಲಿದೆ. ಜೈಸ್ವಾಲ್‌ಗೆ ಈ ಎರಡೂ ತಂಡಗಳಲ್ಲಿ ಅವಕಾಶ ಸಿಗುವುದು ಅನುಮಾನ. ಹೀಗಾಗಿ ಅವರು ಮುಂದಿನ ವರ್ಷ ಆಗಸ್ಟ್​ನಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಂಡದ ಪರ ಕಾಣಿಸಿಕೊಳ್ಳಲಿದ್ದಾರೆ. ಆದರೆ ಅದಕ್ಕೂ ಮುನ್ನ ಅವರು ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಐಪಿಎಲ್ ಆರಂಭಕ್ಕೆ ಇನ್ನು ಸಾಕಷ್ಟು ಸಮಯವಿರುವ ಕಾರಣ ಜೈಸ್ವಾಲ್‌ ಚೇತರಿಕೆಗೆ ಸಾಕಷ್ಟು ಸಮಯ ಸಿಗಲಿದೆ.

IND vs SA: ಚೊಚ್ಚಲ ಶತಕ; ಏಕದಿನದಲ್ಲಿ ಕೊನೆಗೂ ಯಶಸ್ಸು ಕಂಡ ಜೈಸ್ವಾಲ್

ಅದ್ಭುತ ಫಾರ್ಮ್​ನಲ್ಲಿರುವ ಜೈಸ್ವಾಲ್

ಕಳೆದ ಕೆಲವು ವಾರಗಳಿಂದ ಅತ್ಯುತ್ತಮ ಫಾರ್ಮ್‌ನಲ್ಲಿರುವ ಜೈಸ್ವಾಲ್, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಮೂರು ಪಂದ್ಯಗಳಲ್ಲಿ 48.33 ಸರಾಸರಿ ಮತ್ತು 168.6 ಸ್ಟ್ರೈಕ್ ರೇಟ್‌ನಲ್ಲಿ 145 ರನ್ ಗಳಿಸಿದ್ದಾರೆ. ಇದಕ್ಕೂ ಮುನ್ನ, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅವರು ಮೂರು ಪಂದ್ಯಗಳಲ್ಲಿ 78 ರ ಸರಾಸರಿಯಲ್ಲಿ 156 ರನ್ ಗಳಿಸಿದ್ದರು. ಈ ಅವಧಿಯಲ್ಲಿ ಅವರು ತಮ್ಮ ಮೊದಲ ಏಕದಿನ ಶತಕವನ್ನೂ ಬಾರಿಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:18 pm, Wed, 17 December 25