Yuzvendra Chahal: ಮೈದಾನದಲ್ಲಿ ಅಂಪೈರ್ ವಿರುದ್ಧವೇ ಸಿಟ್ಟಿಗೆದ್ದು ರೇಗಾಡಿದ ಯುಜ್ವೇಂದ್ರ ಚಹಲ್: ವಿಡಿಯೋ

| Updated By: Vinay Bhat

Updated on: Apr 11, 2022 | 12:06 PM

RR vs LSG, IPl 2022: ಸಾಕಷ್ಟು ರೋಚಕತೆಗೆ ಸಾಕ್ಷಿಯಾದ ರಾಜಸ್ಥಾನ್ ರಾಯಲ್ಸ್ ಹಾಗೂ ಲಖನೌ ಸೂಪರ್ ಜೇಂಟ್ಸ್ ನಡುವಣ ಪಂದ್ಯದಲ್ಲಿ ಅಂಪೈರ್ ನೀಡಿದ ನಿರ್ಧಾರ ವಿವಾದಕ್ಕೆ ಕಾರಣವಾಯಿತು. ಇದರಿಂದ ಆರ್​ಆರ್​​ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಸಿಟ್ಟಿಗೆದ್ದ ಘಟನೆ ಕೂಡ ನಡೆಯಿತು.

Yuzvendra Chahal: ಮೈದಾನದಲ್ಲಿ ಅಂಪೈರ್ ವಿರುದ್ಧವೇ ಸಿಟ್ಟಿಗೆದ್ದು ರೇಗಾಡಿದ ಯುಜ್ವೇಂದ್ರ ಚಹಲ್: ವಿಡಿಯೋ
Yuzvendra Chahal
Follow us on

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಭಾನುವಾರ ನಡೆದ ರಾಜಸ್ಥಾನ್ ರಾಯಲ್ಸ್ ಹಾಗೂ ಲಖನೌ ಸೂಪರ್ ಜೇಂಟ್ಸ್ (RR vs LSG) ನಡುವಣ ಕಾದಾಟ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಕೊನೆಯ ಓವರ್ ವರೆಗೂ ತುದಿಗಾಲಿನಲ್ಲಿ ನಿಲ್ಲಿಸಿದ್ದ ಕದನದಲ್ಲಿ ಸಂಜು ಸ್ಯಾಮ್ಸನ್ (Sanju Samson) ಪಡೆ 3 ರನ್​ಗಳ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ಶಿಮ್ರೋನ್ ಹೆಟ್ಮೆಯರ್ (59*ರನ್, 36 ಎಸೆತ, 1 ಬೌಂಡರಿ, 6 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್ 6 ವಿಕೆಟ್‌ಗೆ 165 ರನ್ ಪೇರಿಸಿತು ಪ್ರತಿಯಾಗಿ ಎಲ್‌ಎಸ್‌ಜಿ ತಂಡ 8 ವಿಕೆಟ್‌ಗೆ 162 ರನ್‌ಗಳಿಸಿ ಸೋಲೊಪ್ಪಿಕೊಂಡಿತು. ಸಾಕಷ್ಟು ರೋಚಕತೆಗೆ ಸಾಕ್ಷಿಯಾದ ಈ ಪಂದ್ಯದಲ್ಲಿ ಅಂಪೈರ್ ನೀಡಿದ ನಿರ್ಧಾರ ಕೂಡ ವಿವಾದಕ್ಕೂ ಕಾರಣವಾಯಿತು. ಇದೀಗ ಸಾಮಾಜಿಕ ಜಾಲತಾಣಗಲ್ಲಿ ಇದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಅಂಪೈರ್ ನೀಡಿದ ತಪ್ಪು ತೀರ್ಮಾನದಿಂದ ರಾಜಸ್ಶಾನ್ ರಾಯಲ್ಸ್ ತಂಡದ ಲೆಗ್ ಸ್ನಿನ್ನರ್ ಯುಜ್ವೇಂದ್ರ ಚಹಲ್ (Yuzvendra Chahal) ಸಿಟ್ಟಿಗೆದ್ದ ಘಟನೆ ಕೂಡ ನಡೆಯಿತು.

ಹೌದು, ರಾಜಸ್ಥಾನ್ ನೀಡಿದ ಟಾರ್ಗೆಟ್ ಬೆನ್ನಟ್ಟಿದ ಲಖನೌಗೆ ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಬೇಕಾಯಿತು. ಇದನ್ನ ತಡೆಗಟ್ಟಲು ಸ್ಯಾಮ್ಸನ್ 18ನೇ ಓವರ್​​ ಅನ್ನು ಯುಜ್ವೇಂದ್ರ ಚಹಲ್​ಗೆ ನೀಡಿದರು. ಈ ಓವರ್​​ನ 5ನೇ ಎಸೆತದಲ್ಲಿ ಚಹಲ್ ಚೆಂಡು ಟರ್ನ್ ಪಡೆದು ಕೊಂಚ ರೈಟ್ ಸೈಡ್​ನಲ್ಲಿ ಹೋಯಿತು. ಇದನ್ನು ಅಂಪೈರ್ ವೈಡ್ ಎಂದು ಪ್ರಕಟಿಸಿದರು. ಆದರೆ, ಚೆಂಡು ವೈಡ್ ಕೊಡುವಷ್ಟು ದೂರಕ್ಕೆ ಹೋಗಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಚಹಲ್ ಅಂಪೈರ್ ಬಳಿ ವಾದಕ್ಕಿಳಿದರು. ಅತ್ತ ನಾಯಕ ಸ್ಯಾಮ್ಸನ್ ಕೂಡ ನಿರ್ಧಾರದಿಂದ ಬೇಸರಗೊಂಡು ಏನಿದು ಎಂದು ಕೇಳಿದರು. ಆದರೆ, ಅಂಪೈರ್ ತೀರ್ಮಾನವೇ ಅಂತಿಮ ನಿರ್ಧಾರವಾಗಿದ್ದರಿಂದ ಒಲ್ಲದ ಮನಸ್ಸಿನಿಂದ ಚಹಲ್ ತಮ್ಮ ಮುಂದಿನ ಎಸೆತವನ್ನು ಹಾಕಲು ತೆರಳಿದರು. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

 

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ತಂಡದ ಪರ ಜೋಸ್ ಬಟ್ಲರ್ ಮತ್ತು ದೇವದತ್ ಪಡಿಕ್ಕಲ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿದರು. ಜೋಸ್ ಬಟ್ಲರ್ 11 ಎಸೆತಗಳಲ್ಲಿ 13 ರನ್ ಗಳಿಸಿ ಔಟ್ ಆದರೆ, ದೇವದತ್ ಪಡಿಕ್ಕಲ್ 29 ಎಸೆತಗಳಲ್ಲಿ 29 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನುಳಿದಂತೆ ನಾಯಕ ಸಂಜು ಸ್ಯಾಮ್ಸನ್ 12 ಎಸೆತಗಳಲ್ಲಿ 13 ರನ್ ಬಾರಿಸಿದರೆ, ವಾನ್ ಡರ್ ಡುಸೆನ್ 4 ರನ್ ಬಾರಿಸಿ ಬೇಗನೆ ನಿರ್ಗಮಿಸಿದರು. ಇದರ ನಡುವೆ ತಂಡಕ್ಕೆ ಆಸರೆಯಾಗಿದ್ದು ಶಿಮ್ರೋನ್ ಹೆಟ್ಮೇರ್. ಆರ್. ಅಶ್ವಿನ್ ಜೊತೆಗೂಡಿ ನೆಲಕಚ್ಚಿ ನಿಂತು ಪಂದ್ಯದ ಅಂತಿಮ ಹಂತದವರೆಗೂ ಹೋರಾಟ ನಡೆಸಿದರು. 36 ಎಸೆತಗಳಲ್ಲಿ ಒಂದು ಫೋರ್, ಆರು ಸಿಕ್ಸರ್ ಸಿಡಿಸಿ 59 ರನ್ ಚಚ್ಚಿ ಅಜೇಯರಾಗಿ ಉಳಿದರು. ಆರ್​ಆರ್​​ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಆರ್​​ಆರ್​​ 165 ರನ್ ಗಳಿಸಿತು.

ಟಾರ್ಗೆಟ್ ಬೆನ್ನಟ್ಟಿದ ಲಖನೌ ತಂಡದ ಪರ ಓಪನರ್‌ ಕೆಎಲ್‌ ರಾಹುಲ್ ಮತ್ತು 3ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ ಕೆ ಗೌತಮ್ ಅವರನ್ನು ಬ್ಯಾಕ್‌ ಟು ಬ್ಯಾಕ್‌ ಎಸೆತಗಲ್ಲಿ ಔಟ್‌ ಮಾಡಿದರು. ಜೇಸನ್ ಹೋಲ್ಡರ್ (8) ಹಾಗೂ ಆಯುಷ್ ಬಡೋನಿ (5) ವೈಫಲ್ಯ ಅನುಭವಿಸಿದರು. ಕ್ವಿಂಟನ್‌ ಡಿಕಾಕ್ ಒಟ್ಟಾರೆ 32 ಎಸೆತಗಳಲ್ಲಿ 29 ರನ್‌ಗಳಿಸಿ ಔಟ್‌ ಆದರು. ಕೊನೆಯ ಹಂತದಲ್ಲಿ ಮಾರ್ಕಸ್ ಸ್ಟೋಯ್ನಿಸ್ (38*) ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರೂ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ.

IPL 2022 Points Table: ಪಾಯಿಂಟ್ ಟೇಬಲ್, ಆರೆಂಜ್, ಪರ್ಪಲ್ ಕ್ಯಾಪ್ ಎಲ್ಲದರಲ್ಲೂ ರಾಜಸ್ಥಾನವೇ ಟಾಪ್

Sanju Samson: ಪಂದ್ಯ ಮುಗಿದ ಬಳಿಕ ಸಂಜು ಸ್ಯಾಮ್ಸನ್ ರಿವೀಲ್ ಮಾಡಿದ್ರು ರಣ ರೋಚಕ ಪ್ಲಾನ್