IPL 2022: RCB ತಂಡಕ್ಕೆ ಹೊಸ ವೇಗಿಗಳ ಎಂಟ್ರಿ
IPL 2022: RCB ತಂಡ ಹೀಗಿದೆ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್
IPL 2022: ಮುಂಬೈ ವಿರುದ್ದ ಗೆದ್ದ ಬೆನ್ನಲ್ಲೇ ಆರ್ಸಿಬಿ (RCB) ತಂಡಕ್ಕೆ ಆಘಾತ ಎದುರಾಗಿತ್ತು. ತಂಡದ ಪ್ರಮುಖ ವೇಗಿ ಹರ್ಷಲ್ ಪಟೇಲ್ (Harshal Patel) ಬಯೋಬಬಲ್ನಿಂದ ಹೊರನಡೆದಿದ್ದರು. ಶನಿವಾರ ಮುಂಬೈ ಇಂಡಿಯನ್ಸ್ ವಿರುದ್ಧ ಆರ್ಸಿಬಿಯ ಗೆಲುವಿನ ಬಳಿಕ ಹರ್ಷಲ್ ಪಟೇಲ್ ವೈಯಕ್ತಿಕ ಕಾರಣಗಳಿಂದಾಗಿ ಪುಣೆಯಿಂದ ನೇರವಾಗಿ ತಮ್ಮ ಮನೆಗೆ ತೆರಳಿದ್ದರು. ಆ ಬಳಿಕ ಹರ್ಷಲ್ ಪಟೇಲ್ ಅವರ ಸಹೋದರಿ ನಿಧನ ಹೊಂದಿದ ಕಾರಣ ಪಂದ್ಯ ಮುಗಿದ ಬಳಿಕ ಆರ್ಸಿಬಿ ತಂಡವನ್ನು ತೊರೆದಿದ್ದರು ಎಂಬ ವಿಚಾರ ಬೆಳಕಿಗೆ ಬಂತು. ಇದರೊಂದಿಗೆ ಏಪ್ರಿಲ್ 12 ರಂದು ಸಿಎಸ್ಕೆ ವಿರುದ್ಧ ಆಡಲಿರುವ ಪಂದ್ಯಕ್ಕೆ ಹರ್ಷಲ್ ಪಟೇಲ್ ಆರ್ಸಿಬಿ ತಂಡದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಖಚಿತವಾಗಿತ್ತು. ಇನ್ನು ಹರ್ಷಲ್ ಆರ್ಸಿಬಿ ತಂಡ ಸೇರಿಕೊಂಡರೂ ಐಪಿಎಲ್ ನಿಯಮದ ಪ್ರಕಾರ ಕಡ್ಡಾಯ ಕ್ವಾರಂಟೈನ್ಗೆ ಒಳಗಾಗಬೇಕಾಗುತ್ತದೆ. ಹೀಗಾಗಿ ಸಿಎಸ್ಕೆ ವಿರುದ್ದದ ಪಂದ್ಯದಲ್ಲಿ ಹರ್ಷಲ್ ಪಟೇಲ್ ಕಾಣಿಸಿಕೊಳ್ಳುವುದಿಲ್ಲ. ಇತ್ತ ಪ್ರಮುಖ ವೇಗಿ ತಂಡದಿಂದ ಹೊರಬೀಳುತ್ತಿದ್ದಂತೆ ಆರ್ಸಿಬಿ ತಂಡಕ್ಕೆ ಇಬ್ಬರು ವೇಗಿಗಳು ಎಂಟ್ರಿ ಕೊಟ್ಟಿದ್ದಾರೆ. ಅದು ಕೂಡ ಆಸೀಸ್ ವೇಗಿಗಳು ಎಂಬುದು ವಿಶೇಷ.
ಹೌದು, ಆರ್ಸಿಬಿ ತಂಡದ ಮೊದಲ ನಾಲ್ಕು ಪಂದ್ಯಗಳಿಂದ ಹೊರಗುಳಿದಿದ್ದ ಜೋಶ್ ಹ್ಯಾಝಲ್ವುಡ್ ಹಾಗೂ ಜೇಸನ್ ಬೆಹ್ರೆಡ್ರಾರ್ಫ್ ಇದೀಗ ತಂಡವನ್ನು ಸೇರಿಕೊಂಡಿದ್ದಾರೆ. ಪಾಕಿಸ್ತಾನ ವಿರುದ್ದದ ಸರಣಿಯ ವೇಳೆ ಆಸ್ಟ್ರೇಲಿಯಾ ತಂಡದಲ್ಲಿದ್ದ ಈ ಇಬ್ಬರು ವೇಗಿಗಳು ಐಪಿಎಲ್ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇದೀಗ ಇಬ್ಬರು ಜೊತೆಯಾಗಿ ಕ್ವಾರಂಟೈನ್ ಮುಗಿಸಿ ತಂಡದ ಅಭ್ಯಾಸದಲ್ಲಿ ಕಾಣಿಸಿಕೊಂಡಿದ್ದಾರೆ.
ಹೀಗಾಗಿ ಸಿಎಸ್ಕೆ ವಿರುದ್ದದ ಪಂದ್ಯದಲ್ಲಿ ಜೋಶ್ ಹ್ಯಾಝಲ್ವುಡ್ ಹಾಗೂ ಜೇಸನ್ ಇವರಿಬ್ಬರಲ್ಲಿ ಒಬ್ಬರು ಕಣಕ್ಕಿಳಿಯುವುದು ಖಚಿತ ಎನ್ನಬಹುದು. ಅದರಲ್ಲೂ ಟಿ20 ಕ್ರಿಕೆಟ್ನ ಅತ್ಯುತ್ತಮ ವೇಗಿಗಳಲ್ಲಿ ಒಬ್ಬರಾಗಿರುವ ಜೋಶ್ ಹ್ಯಾಝಲ್ವುಡ್ ಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ.
ಟಿ20 ಕ್ರಿಕೆಟ್ನಲ್ಲಿ 27 ಪಂದ್ಯವಾಡಿರುವ ಹ್ಯಾಝಲ್ವುಡ್ ಒಟ್ಟು ಒಟ್ಟು 40 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಹಾಗೆಯೇ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪರ 12 ಐಪಿಎಲ್ ಪಂದ್ಯಗಳನ್ನು ಆಡಿರುವ ಹ್ಯಾಝಲ್ವುಡ್ 12 ವಿಕೆಟ್ ಪಡೆದಿದ್ದಾರೆ. ಮತ್ತೊಂದೆಡೆ ಸಿಎಸ್ಕೆ ಹಾಗೂ ಮುಂಬೈ ಇಂಡಿಯನ್ಸ್ ಪರ 5 ಐಪಿಎಲ್ ಪಂದ್ಯವಾಡಿರುವ ಜೇಸನ್ ಬೆಹ್ರೆಡ್ರಾರ್ಫ್ 5 ವಿಕೆಟ್ ಪಡೆದಿದ್ದಾರೆ. ಇನ್ನು 9 ಟಿ20 ಪಂದ್ಯಗಳಿಂದ 7 ವಿಕೆಟ್ ಉರುಳಿಸಿದ್ದಾರೆ. ಇಲ್ಲಿ ಜೇಸನ್ ಬೆಹ್ರೆಡ್ರಾರ್ಫ್ಗಿಂತ ಜೋಶ್ ಹ್ಯಾಝಲ್ವುಡ್ ಅನುಭವಿ ವೇಗಿಯಾಗಿರುವ ಕಾರಣ ಆರ್ಸಿಬಿ ಅವರಿಗೆ ಮಣೆಹಾಕುವ ಸಾಧ್ಯತೆ ಹೆಚ್ಚಿದೆ.
ಒಟ್ಟಿನಲ್ಲಿ ಹರ್ಷಲ್ ಪಟೇಲ್ ಅವರ ಅಲಭ್ಯತೆಯ ಬೆನ್ನಲ್ಲೇ ಇದೀಗ ಜೋಶ್ ಹ್ಯಾಝಲ್ವುಡ್ ಹಾಗೂ ಜೇಸನ್ ಬೆಹ್ರೆಡ್ರಾರ್ಫ್ ಆರ್ಸಿಬಿ ಬೌಲಿಂಗ್ ವಿಭಾಗವನ್ನು ಸೇರಿಕೊಂಡಿರುವುದು ತಂಡದ ಚಿಂತೆಯನ್ನು ದೂರ ಮಾಡಿದೆ. ಹೀಗಾಗಿ ಸಿಎಸ್ಕೆ ವಿರುದ್ದದ ಪಂದ್ಯದಲ್ಲಿ ಡೇವಿಡ್ ವಿಲ್ಲಿ ಬದಲಿಗೆ ಜೋಶ್ ಹ್ಯಾಝಲ್ವುಡ್ ಆರ್ಸಿಬಿ ಪರ ಪಾದರ್ಪಣೆ ಮಾಡುವ ಸಾಧ್ಯತೆಯಿದೆ.
Good morning from Josh Hazlewood & @JDorff5. ??
Have a great Monday, 12th Man Army! ??#PlayBold #WeAreChallengers #IPL2022 #Mission2022 #RCB #ನಮ್ಮRCB pic.twitter.com/EPw0a6sDqE
— Royal Challengers Bangalore (@RCBTweets) April 11, 2022
RCB ತಂಡ ಹೀಗಿದೆ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ, ರಜತ್ ಪಾಟಿದಾರ್.
ಇದನ್ನೂ ಓದಿ: Virat Kohli: ಐಪಿಎಲ್ ಇತಿಹಾಸದಲ್ಲೇ ಯಾರೂ ಮಾಡಿರದ ದಾಖಲೆ ಬರೆದ ಕಿಂಗ್ ಕೊಹ್ಲಿ
ಇದನ್ನೂ ಓದಿ: Prithvi Shaw: ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಸೆಹ್ವಾಗ್ ದಾಖಲೆ ಸರಿಗಟ್ಟಿದ ಪೃಥ್ವಿ ಶಾ