ಹೊಸ ವರ್ಷದ ಆರಂಭದಲ್ಲೇ ಯುಜ್ವೇಂದ್ರ ಚಹಲ್ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಸುದ್ದಿಯಲ್ಲಿರುವುದು ಮೈದಾನದಲ್ಲಿನ ಪ್ರದರ್ಶನದಿಂದಲ್ಲ. ಬದಲಾಗಿ ಕಂಠಪೂರ್ತಿ ಕುಡಿದ ವಿಚಾರದಿಂದಾಗಿ ಹಾಗೂ ವಿಚ್ಛೇದನ ವಿಷಯದಿಂದಾಗಿ. ಕಳೆದ ಒಂದೂವರೆ ವರ್ಷದಿಂದ ಟೀಮ್ ಇಂಡಿಯಾ ಪರ ಒಂದೇ ಒಂದು ಪಂದ್ಯವಾಡದ ಚಹಲ್ ದಾಂಪತ್ಯಕ್ಕೆ ಜೀವನಕ್ಕೆ ಇತಿಶ್ರೀ ಹಾಡಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿಯ ಬೆನ್ನಲ್ಲೇ ಇದೀಗ ಕಂಠಪೂರ್ತಿ ಕುಡಿದು ನಡೆದಾಡಲು ಕಷ್ಟಪಡುತ್ತಿರುವ ಯುಜ್ವೇಂದ್ರ ಚಹಲ್ ಅವರ ವಿಡಿಯೋವೊಂದು ವೈರಲ್ ಆಗಿದೆ.
ಯಜ್ವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ಪತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಅವರ ಆಪ್ತ ಸ್ನೇಹಿತನನ್ನು ಉಲ್ಲೇಖಿಸಿ ಇತ್ತೀಚೆಗೆ ವರದಿಯಾಗಿತ್ತು. ಅಲ್ಲದೆ ಶೀಘ್ರದಲ್ಲೇ ವಿಚ್ಛೇದನ ಪ್ರಕ್ರಿಯೆಯು ಪೂರ್ಣಗೊಳ್ಳಲಿದ್ದು, ಆ ನಂತರ ಈ ಮಾಹಿತಿಯನ್ನು ಅಧಿಕೃತಗೊಳಿಸಲಾಗುತ್ತದದೆ ತಿಳಿಸಲಾಗಿದೆ.
ಈ ಸುದ್ದಿ ಬೆನ್ನಲ್ಲೇ ದಾಂಪತ್ಯ ಜೀವನದ ಬಿರುಕಿನಿಂದಾಗಿ ಯುಜ್ವೇಂದ್ರ ಚಹಲ್ ಕಂಠಪೂರ್ತಿ ಕುಡಿದು ತಿರುಗಾಡುತ್ತಿದ್ದಾರೆ ಎಂಬ ಟ್ಯಾಗ್ ಲೈನ್ನೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿಬಿಡಲಾಗಿದೆ. ಈ ವಿಡಿಯೋದಲ್ಲಿ ಚಹಲ್ ವ್ಯಕ್ತಿಯೊಬ್ಬರ ಸಹಾಯದಿಂದ ಕಾರು ಹತ್ತಲು ಪ್ರಯತ್ನಿಸುತ್ತಿರುವುದು ಕಾಣಬಹುದು.
Yuzvendra Chahal Breaks Down? Shocking Viral Video Fire On Social Media#YuzvendraChahal #dhanashreeverma #TeamIndia pic.twitter.com/WEEbaYdvL6
— Zsports (@_Zsports) January 6, 2025
ಯುಜ್ವೇಂದ್ರ ಚಹಲ್ ಅವರ ವೈರಲ್ ವೀಡಿಯೊಗೆ ಸಂಬಂಧಿಸಿದಂತೆ, ಅವರು ಕಂಠಪೂರ್ತಿ ಮದ್ಯಪಾನ ಮಾಡಿರುವುದು ನಿಜ. ಹೀಗಾಗಿ ನಡೆಯಲು ಕಷ್ಟಪಡುತ್ತಿದ್ದಾರೆ. ಅಲ್ಲದೆ ಒಬ್ಬ ವ್ಯಕ್ತಿಯೊಬ್ಬರ ಆಸರೆಯೊಂದಿಗೆ ಅವರನ್ನು ಕಾರಿನಲ್ಲಿ ಕೂರಿಸುತ್ತಿರುವುದು ವಿಡಿಯೋದಲ್ಲಿ ಕಾಣಬಹದು.
ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ ಅದು ಪ್ರಸ್ತುತ ವಿಡಿಯೋ ಎನ್ನುವುದಕ್ಕೆ ಯಾವುದೇ ಪುರಾವೆಯಿಲ್ಲ. ಅಲ್ಲದೆ ವೈಯುಕ್ತಿಕ ಜೀವನದ ಏರಿಳಿತದಿಂದಾಗಿ ಅವರು ಹೀಗೆ ಕಾಣಿಸಿಕೊಂಡಿದ್ದಾರೆ ಎಂಬುದನ್ನು ದೃಢೀಕರಿಸಲಾಗಿಲ್ಲ.
ಯುಜ್ವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ಇನ್ಸ್ಟಾಗ್ರಾಮ್ನಲ್ಲಿ ಪರಸ್ಪರ ಅನ್ಫಾಲೋ ಮಾಡಿದ್ದಾರೆ. ಅಲ್ಲದೇ ಫೋಟೋಗಳನ್ನೂ ಡಿಲೀಟ್ ಸಹ ಮಾಡಿದ್ದಾರೆ. ಹೀಗಾಗಿ ಇಬ್ಬರು ದೂರವಾಗಿರುವುದು ಬಹುತೇಕ ಖಚಿತವಾಗಿದೆ.
ಚಹಲ್ ಹಾಗೂ ಧನಶ್ರೀ ವರ್ಮಾ 2020ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಈಗ ಇವರಿಬ್ಬರ ಬಾಂಧವ್ಯದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಹೀಗಾಗಿ ಕಳೆದ ಇಬ್ಬರೂ ಎಲ್ಲೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿಲ್ಲ.
ಇದನ್ನೂ ಓದಿ: ಒಂದೇ ದಿನ 2 ಅರ್ಧಶತಕ ಬಾರಿಸಿದ ಬಾಬರ್ ಆಝಂ
ಅಲ್ಲದೆ ಸೋಷಿಯಲ್ ಮೀಡಿಯಾದಲ್ಲೂ ಜೊತೆಗಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಿಲ್ಲ. ಹೀಗಾಗಿಯೇ ಯುಜ್ವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ಬೇರೆಯಾಗಲಿದ್ದಾರೆ ಎಂಬ ಸುದ್ದಿಯು ಮಹತ್ವ ಪಡೆದುಕೊಂಡಿದೆ. ಇದಾಗ್ಯೂ ಇಬ್ಬರೂ ಕೂಡ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:36 am, Mon, 6 January 25