ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 5 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪರ 16 ಆಟಗಾರರು ಕಣಕ್ಕಿಳಿದಿದ್ದಾರೆ. 20 ಸದಸ್ಯರ ತಂಡದಿಂದ ಹದಿನಾರು ಆಟಗಾರರಿಗೆ ಅವಕಾಶ ದೊರೆತರೆ, ನಾಲ್ವರು ಇಡೀ ಸರಣಿಯಲ್ಲಿ ಬೆಂಚ್ ಕಾದಿದ್ದಾರೆ. ಹೀಗೆ ಬೆಂಚ್ ಕಾಯುವ ಮೂಲಕವೇ ಮೂವರು ಆಟಗಾರರು ತಲಾ 37.5 ಲಕ್ಷ ರೂ. ಪಡೆದಿದ್ದಾರೆ.