ರವೀಂದ್ರ ಜಡೇಜಾ: ಸರಣಿಯ ಮಧ್ಯದಲ್ಲಿ ರವಿಚಂದ್ರನ್ ಅಶ್ವಿನ್ ಹಠಾತ್ ನಿವೃತ್ತಿಯ ನಂತರ, ಎಲ್ಲರ ಕಣ್ಣು ರವೀಂದ್ರ ಜಡೇಜಾ ಮೇಲೆ ನೆಟ್ಟಿದೆ. ಸ್ಟಾರ್ ಆಲ್‌ರೌಂಡರ್ ಈ ಸರಣಿಯಲ್ಲಿ ಬ್ಯಾಟ್‌ನೊಂದಿಗೆ ಕೆಲವು ಉಪಯುಕ್ತ ಇನ್ನಿಂಗ್ಸ್‌ಗಳನ್ನು ಆಡಿದರು ಆದರೆ ಬೌಲಿಂಗ್‌ನಲ್ಲಿ ವಿಶೇಷ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಜಡೇಜಾ 5 ಇನ್ನಿಂಗ್ಸ್‌ಗಳಲ್ಲಿ 135 ರನ್ ಕಲೆಹಾಕಿದರೆ, 4 ಇನ್ನಿಂಗ್ಸ್‌ಗಳಲ್ಲಿ ಕೇವಲ 4 ವಿಕೆಟ್ ಮಾತ್ರ ಪಡೆದರು. ನ್ಯೂಜಿಲೆಂಡ್ ವಿರುದ್ಧದ ಸ್ವದೇಶಿ ಸರಣಿಯಲ್ಲಿಯೂ ಸಪ್ಪೆ ಪ್ರದರ್ಶನ ನೀಡಿದ ಜಡೇಜಾ, ಕೊನೆಯ ಟೆಸ್ಟ್‌ನಲ್ಲಿ 10 ವಿಕೆಟ್‌ಗಳನ್ನು ಹೊರತುಪಡಿಸಿ, ಉಳಿದ 4 ಇನ್ನಿಂಗ್ಸ್‌ಗಳಲ್ಲಿ ಕೇವಲ 6 ವಿಕೆಟ್‌ಗಳನ್ನು ಮಾತ್ರ ಪಡೆದರು. ಹೀಗಾಗಿ ಅವರ ಟೆಸ್ಟ್ ವೃತ್ತಿಜೀವನವೂ ಅಪಾಯದಲ್ಲಿದೆ.