ಜುಲೈ 23 ರಂದು ಜಿಂಬಾಬ್ವೆ ಮತ್ತು ಬಾಂಗ್ಲಾದೇಶ ನಡುವೆ ನಡೆದ ಎರಡನೇ ಟಿ 20 ಪಂದ್ಯದ ವೇಳೆ ಮೈದಾನದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಬಾಂಗ್ಲಾದೇಶದ ಬ್ಯಾಟಿಂಗ್ ಸಮಯದಲ್ಲಿ, ಸ್ಟಂಪ್‌ಗಳು ಇದ್ದಕ್ಕಿದ್ದಂತೆ ಯಾರು ಮುಟ್ಟಲಿಲ್ಲ, ಚೆಂಡೂ ಬಡಿಯದೆ ನೆಲಕ್ಕುರುಳಿದವು. ಈ ಸಮಯದಲ್ಲಿ, ಸ್ಟಂಪ್ ಬಳಿ ಚೆಂಡು ಹಾದುಹೋಗಲಿಲ್ಲ ಅಥವಾ ಬ್ಯಾಟ್ಸ್‌ಮನ್ ದೇಹದ ಯಾವುದೇ ಭಾಗ ಅಥವಾ ಬ್ಯಾಟ್ ಅದಕ್ಕೆ ಬಡಿಯಲಿಲ್ಲ. ಜೊತೆಗೆ ಸ್ಟಂಪ್ ಬಳಿ ಯಾರೂ ಇರಲಿಲ್ಲ. ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬೆಳಕಿಗೆ ಬಂದಿದೆ. ಆದರೆ ಈ ವಿಡಿಯೋ ನೋಡಿದ ನೆಟ್ಟಿಗರು, ತಮಾಷೆಯ ರೀತಿಯಲ್ಲಿ, ಮೈದಾನದಲ್ಲಿ ಭೂತವಿದೆ ಎಂದು ಹೇಳಲಾರಂಭಿಸಿದ್ದಾರೆ. ಈ ಘಟನೆ ಬಾಂಗ್ಲಾದೇಶದ 18 ನೇ ಓವರ್ ಸಮಯದಲ್ಲಿ ಸಂಭವಿಸಿದೆ. ಈ ಸಮಯದಲ್ಲಿ ತೆಂಡೈ ಚತಾರಾ ಬೌಲಿಂಗ್ ಮಾಡುತ್ತಿದ್ದರು ಮತ್ತು ಮೊಹಮ್ಮದ್ ಸೈಫುದ್ದೀನ್ ಸ್ಟ್ರೈಕ್‌ನಲ್ಲಿದ್ದರು.
ಬ್ಯಾಟ್ಸ್‌ಮನ್ ಕೂಡ ಸ್ಟಂಪ್‌ಗಳ ಚಲನೆಯಿಂದ ಆಶ್ಚರ್ಯಚಕಿತರಾದರು. ಆದರೆ, ಬಲವಾದ ಗಾಳಿಯಿಂದಾಗಿ, ಸ್ಟಂಪ್‌ಗಳು ಅಲುಗಾಡಲ್ಪಟ್ಟವು ಮತ್ತು ಬೆಲ್ಸ್ ಕೆಳಗೆ ಬಿದ್ದವು. ಆದರೆ ಬೆಲ್ ಬೀಳುವ ಸಮಯದಲ್ಲಿ ಹೆಚ್ಚು ಗಾಳಿ ಬೀಸದ ಕಾರಣ ಈ ಘಟನೆ ಆಶ್ಚರ್ಯಕರವಾಗಿದೆ. ಈ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಗುರಿಯನ್ನು ಬೆನ್ನಟ್ಟುತ್ತಿತ್ತು. ಕೊನೆಯ ಮೂರು ಓವರ್‌ಗಳಲ್ಲಿ ಅವರು ಗೆಲ್ಲಲು 41 ರನ್ ಗಳಿಸಬೇಕಾಗಿತ್ತು ಮತ್ತು ಅವರ ಕೈಯಲ್ಲಿ ಮೂರು ವಿಕೆಟ್‌ಗಳಿದ್ದವು. ಚತಾರಾ 18 ನೇ ಓವರ್ ಬೌಲಿಂಗ್ ಮಾಡಲು ಬಂದರು. ಮೊದಲ ಎಸೆತವನ್ನು ವೈಡ್ ಎಸೆದ ನಂತರ ಅವರು ಅಫೀಫ್ ಹುಸೇನ್ ಅವರನ್ನು ನಂತರದ ಎಸೆತದಲ್ಲಿ ಔಟ್ ಮಾಡಿದರು. ಮುಂದಿನ ಮೂರು ಎಸೆತಗಳಲ್ಲಿ ಮೂರು ರನ್ ಗಳಿಸಿದರು.
ಚೆಂಡನ್ನು ಎಸೆಯುವ ಮೊದಲು ಈ ಘಟನೆ ನಡೆದಿದೆ
ಚೆಂಡು ಬೌಲರ್‌ನ ಕೈಯಿಂದ ಹೊರಡುವ ಮುನ್ನ, ಸ್ಟ್ರೈಕರ್ ತುದಿಯ ಸ್ಟಂಪ್‌ಗಳು ಕೆಳಗೆ ಬಿದ್ದವು. ಈ ಸಮಯದಲ್ಲಿ ಬ್ಯಾಟ್ಸ್‌ಮನ್ ಸ್ಟಂಪ್‌ನಿಂದ ದೂರವಿದ್ದರು ಜೊತೆಗೆ ಚೆಂಡು ಸಹ ಅಲ್ಲಿಗೆ ತಲುಪಿರಲಿಲ್ಲ. ಚಟಾರಾ ಶಾರ್ಟ್ ಬಾಲ್ ಎಸೆದರು, ಸೈಫುದ್ದೀನ್ ಡೀಪ್ ಮಿಡ್ ವಿಕೆಟ್ ಕಡೆಗೆ ಆಡಿದರು. ಶಾಟ್ ತೆಗೆದುಕೊಂಡ ನಂತರ, ಸ್ಟಂಪ್ಸ್ ಕೆಳಗೆ ಬಿದ್ದಿರುವುದನ್ನು ಅವರು ನೋಡಿದರು. ಇದನ್ನು ನೋಡಿದ ಅವರಿಗೆ ಆಶ್ಚರ್ಯವಾಯಿತು. ಆದರೆ ಹೆಚ್ಚು ಗಮನ ಕೊಡುವ ಬದಲು ಓಟದತ್ತ ಗಮನ ಹರಿಸಿದರು. ಈಗಾಗಲೇ ಸ್ಟಂಪ್ಸ್ ಬಿದ್ದಿದೆ ಮತ್ತು ಅದಕ್ಕೂ ಬ್ಯಾಟ್ಸ್‌ಮನ್‌ಗೂ ಯಾವುದೇ ಸಂಬಂಧವಿಲ್ಲ ಎಂದು ರಿಪ್ಲೇಗಳು ತೋರಿಸಿಕೊಟ್ಟವು.
This can’t be!!! ? ? #ZIMvBAN ? pic.twitter.com/r67lkdG08w
— Sikandar Bakht (@ImSikandarB) July 23, 2021
ಈ ಪಂದ್ಯದಲ್ಲಿ ಬಾಂಗ್ಲಾದೇಶ 23 ರನ್‌ಗಳಿಂದ ಸೋಲನ್ನು ಎದುರಿಸಬೇಕಾಯಿತು. 166 ರನ್‌ಗಳ ಬೆನ್ನಟ್ಟಿದ ಬಾಂಗ್ಲಾವನ್ನು 143 ರನ್‌ಗಳಿಗೆ ಆಲ್ ಔಟ್ ಮಾಡಲಾಯಿತು. ಈ ರೀತಿಯಾಗಿ, ಮೂರು ಪಂದ್ಯಗಳ ಸರಣಿಯಲ್ಲಿ, ಎರಡೂ ತಂಡಗಳು 1-1ರಲ್ಲಿ ಸಮಬಲಗೊಂಡಿವೆ.
Published On - 9:48 pm, Sat, 24 July 21