AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

11 ವರ್ಷಗಳಿಂದ ಟೆಸ್ಟ್ ಪಂದ್ಯ ಗೆಲ್ಲದ ಝಿಂಬಾಬ್ವೆ..!

Zimbabwe: ಸುದೀರ್ಘಾವಧಿಯಿಂದ ತವರಿನಲ್ಲಿ ಟೆಸ್ಟ್ ಪಂದ್ಯ ಗೆಲ್ಲದ ಅನಗತ್ಯ ದಾಖಲೆಯೊಂದು ಝಿಂಬಾಬ್ವೆ ತಂಡದ ಹೆಸರಿಗೆ ಸೇರ್ಪಡೆಯಾಗಿದೆ. ಅದು ಕೂಡ ಕಳೆದ 11 ವರ್ಷಗಳಿಂದ ಸತತ ಸೋಲನುಭವಿಸುವ ಮೂಲಕ ಎಂಬುದೇ ಅಚ್ಚರಿ. ಈ ದೀರ್ಘಾವಧಿಯ ಸೋಲಿನ ಸರಪಳಿಯನ್ನು ಕಳಚಿಕೊಳ್ಳುವುದೇ ಈಗ ಝಿಂಬಾಬ್ವೆ ತಂಡದ ಮುಂದಿರುವ ದೊಡ್ಡ ಸವಾಲು.

11 ವರ್ಷಗಳಿಂದ ಟೆಸ್ಟ್ ಪಂದ್ಯ ಗೆಲ್ಲದ ಝಿಂಬಾಬ್ವೆ..!
Zimbabwe
ಝಾಹಿರ್ ಯೂಸುಫ್
|

Updated on: Feb 11, 2025 | 10:54 AM

Share

ಬರೋಬ್ಬರಿ 11 ವರ್ಷಗಳು… ಝಿಂಬಾಬ್ವೆ ತಂಡವು ತವರಿನಲ್ಲಿ ಟೆಸ್ಟ್ ಪಂದ್ಯ ಗೆದ್ದು ದಶಕವೇ ಕಳೆದಿವೆ. ಈ ಬಾರಿಯಾದರೂ ಗೆಲ್ಲುತ್ತೆ ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಐರ್ಲೆಂಡ್ ತಂಡ ಆಘಾತ ನೀಡಿದೆ. ಬುಲವಾಯೊದ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಝಿಂಬಾಬ್ವೆ ಮುಗ್ಗರಿಸಿದೆ. ಅದರಲ್ಲೂ ಗೆಲ್ಲಬಹುದಾಗಿದ್ದ ಪಂದ್ಯವನ್ನು ಆತಿಥೇಯರು ಕೈಚೆಲ್ಲಿಕೊಂಡಿದ್ದಾರೆ.

ಏಕೆಂದರೆ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ತಂಡವು ಮೊದಲ ಇನಿಂಗ್ಸ್​ನಲ್ಲಿ ಕೇವಲ 260 ರನ್​ಗಳಿಸಿ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಝಿಂಬಾಬ್ವೆ ಮೊದಲ ಇನಿಂಗ್ಸ್​ನಲ್ಲಿ 267 ರನ್ ಪೇರಿಸಿತ್ತು.

ಇನ್ನು 7 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಐರ್ಲೆಂಡ್ ತಂಡ ಕಲೆಹಾಕಿದ್ದು 298 ರನ್​ಗಳು ಮಾತ್ರ. ಅದರಂತೆ ಝಿಂಬಾಬ್ವೆ ತಂಡಕ್ಕೆ ಗೆಲ್ಲಲು ದ್ವಿತೀಯ ಇನಿಂಗ್ಸ್​ನಲ್ಲಿ ಕೇವಲ 292 ರನ್​ಗಳ ಅವಶ್ಯಕತೆ ಮಾತ್ರವಿತ್ತು.

ಈ ಗುರಿಯನ್ನು ಬೆನ್ನತ್ತಿದ ಝಿಂಬಾಬ್ವೆ ತಂಡವು 228 ರನ್​ಗಳಿಗೆ ಆಲೌಟ್ ಆಗುವ ಮೂಲಕ 63 ರನ್​ಗಳಿಂದ ಸೋಲೊಪ್ಪಿಕೊಂಡಿದೆ. ಇದರೊಂದಿಗೆ ತವರಿನಲ್ಲಿ ದಶಕದ ಬಳಿಕ ಟೆಸ್ಟ್ ಗೆಲ್ಲುವ ಝಿಂಬಾಬ್ವೆ ತಂಡದ ಕನಸು ಕೂಡ ಕಮರಿದೆ.

11 ವರ್ಷಗಳ ಸೋಲಿನ ಸರಮಾಲೆ:

ಝಿಂಬಾಬ್ವೆ ತಂಡವು ಕೊನೆಯ ಬಾರಿ ತವರಿನಲ್ಲಿ ಟೆಸ್ಟ್ ಪಂದ್ಯ ಗೆದ್ದಿದ್ದು 2013 ರಲ್ಲಿ. ಪಾಕಿಸ್ತಾನ್ ತಂಡವನ್ನು 24 ರನ್​ಗಳಿಂದ ಸೋಲಿಸಿ ಝಿಂಬಾಬ್ವೆ ಐತಿಹಾಸಿಕ ಸಾಧನೆ ಮಾಡಿತ್ತು. ಇದಾದ ಬಳಿಕ ತವರಿನಲ್ಲಿ ಗೆಲುವು ಎಂಬುದು ಝಿಂಬಾಬ್ವೆ ಪಾಲಿಗೆ ಮರೀಚಿಕೆಯಾಗಿದೆ.

ಈ 11 ವರ್ಷಗಳ ನಡುವೆ ಝಿಂಬಾಬ್ವೆ ಪಡೆ ತವರಿನಲ್ಲಿ 17 ಟೆಸ್ಟ್ ಪಂದ್ಯಗಳನ್ನಾಡಿದೆ. ಈ ವೇಳೆ 13 ಮ್ಯಾಚ್​ಗಳಲ್ಲಿ ಸೋಲನುಭವಿಸಿದರೆ, 4 ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದು ಶ್ರೇಷ್ಠ ಸಾಧನೆ.

ಇದೀಗ ಝಿಂಬಾಬ್ವೆ ತಂಡವು ತವರಿನಲ್ಲಿ ಟೆಸ್ಟ್ ಪಂದ್ಯ ಗೆಲ್ಲದೇ 11 ವರ್ಷ, 4 ತಿಂಗಳು, 28 ದಿನಗಳು ಕಳೆದಿವೆ. ಈ ದೀರ್ಘಾವಧಿಯ ಸೋಲಿನ ಸರಪಳಿಯನ್ನು ಕಳಚುವುದೇ ಈಗ ಝಿಂಬಾಬ್ವೆ ತಂಡದ ಮುಂದಿರುವ ಅತೀ ದೊಡ್ಡ ಸವಾಲು.

ಇದನ್ನೂ ಓದಿ: IPL 2025: RCB ತಂಡಕ್ಕೆ ವಿರಾಟ್ ಕೊಹ್ಲಿಯೇ ಕ್ಯಾಪ್ಟನ್..!

ಝಿಂಬಾಬ್ವೆ ಟೆಸ್ಟ್ ತಂಡ: ಕ್ರೇಗ್ ಎರ್ವಿನ್ (ನಾಯಕ), ಬೆನ್ ಕರನ್ , ತಕುಡ್ಜ್ವಾನಾಶೆ ಕೈಟಾನೊ , ನಿಕ್ ವೆಲ್ಚ್ , ಬ್ರಿಯಾನ್ ಬೆನ್ನೆಟ್ , ಜೊನಾಥನ್ ಕ್ಯಾಂಪ್ಬೆಲ್, ವೆಸ್ಲಿ ಮಾಧೆವೆರೆ , ನ್ಯಾಶಾ ಮಾಯಾವೊ (ವಿಕೆಟ್ ಕೀಪರ್) , ನ್ಯೂಮನ್ ನ್ಯಾಮ್ಹುರಿ , ರಿಚರ್ಡ್ ನಾಗರವಾ , ಬ್ಲೆಸ್ಸಿಂಗ್ ಮುಝರಾಬಾನಿ , ಟ್ರೆವರ್ ಗ್ವಾಂಡು, ಜಾಯ್ಲಾರ್ಡ್ ಗುಂಬಿ , ಸೀನ್ ವಿಲಿಯಮ್ಸ್ , ವಿಕ್ಟರ್ ನ್ಯಾಯುಚಿ , ವಿನ್ಸೆಂಟ್ ಮಸೆಕೆಸಾ.

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ