India vs Pakistan: ಪಾಕ್ ತಂಡಕ್ಕೆ ಬರ್ಗರ್ ಬೇಕಿದ್ರೆ ನಮ್ಮನ್ನು ಸಂಪರ್ಕಿಸಿ ಎಂದು ಟ್ರೋಲ್ ಮಾಡಿದ ಝೊಮಾಟೊ

| Updated By: ಝಾಹಿರ್ ಯೂಸುಫ್

Updated on: Oct 24, 2021 | 6:39 PM

India vs Pakistan T20 World Cup 2021: ಝೊಮಾಟೊ ಹಾಗೂ ಕರೀಮ್ ಪಾಕಿಸ್ತಾನ್ ಟ್ವೀಟ್​ಗಳು ವೈರಲ್ ಆಗಿದೆ. ಅದರಲ್ಲೂ ಕರೀಮ್ ಪಾಕಿಸ್ತಾನ್ ಮಾಲೀಕನಿಗೆ ಪಾಕಿಸ್ತಾನ್ ಸೋಲೋದು ಖಚಿತ ಎಂಬುದು ಗೊತ್ತಿದೆ.

India vs Pakistan: ಪಾಕ್ ತಂಡಕ್ಕೆ ಬರ್ಗರ್ ಬೇಕಿದ್ರೆ ನಮ್ಮನ್ನು ಸಂಪರ್ಕಿಸಿ ಎಂದು ಟ್ರೋಲ್ ಮಾಡಿದ  ಝೊಮಾಟೊ
Pak team
Follow us on

ಒಂದೆಡೆ ಭಾರತ-ಪಾಕಿಸ್ತಾನ್ ನಡುವಣ ಪಂದ್ಯದ ಕಾವೇರುತ್ತಿದ್ದರೆ, ಅತ್ತ ಫುಡ್​ ಡೆಲಿವರಿ ಕಂಪೆನಿ ಝೊಮಾಟೊ ಪಾಕ್ ತಂಡದ ಕಾಲೆಳೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ತಮ್ಮ ಅಧಿಕೃತ ಟ್ವಿಟರ್​ ಖಾತೆಯ ಪಾಕಿಸ್ತಾನ್ ತಂಡಕ್ಕೆ ಇಂದು ರಾತ್ರಿ ಬರ್ಗರ್ ಅಥವಾ ಪಿಜ್ಜಾ ಬೇಕಿದ್ದರೆ ನಮ್ಮನ್ನು ಸಂಪರ್ಕಿಸಿ ಎಂದು ಪಾಕ್ ತಂಡದ ಅಧಿಕೃತ ಟ್ವಿಟರ್​ ಅಕೌಂಟ್​ಗೆ ಟ್ಯಾಗ್​ ಮಾಡಿ ಕಿಚಾಯಿಸಿದ್ದಾರೆ.

ಝೊಮಾಟೊ ಈ ರೀತಿಯಾಗಿ ಪಾಕ್ ತಂಡವನ್ನು ಕಿಚಾಯಿಸಲು ಮುಖ್ಯ ಕಾರಣ 2019 ರ ಏಕದಿನ ವಿಶ್ವಕಪ್. ಹೌದು, ಇಂಗ್ಲೆಂಡ್​ನಲ್ಲಿ ನಡೆದ ಏಕದಿನ ವಿಶ್ವಕಪ್ ವೇಳೆ ಪಾಕ್ ಆಟಗಾರರು ಟೀಮ್ ಇಂಡಿಯಾ ವಿರುದ್ದದ ಪಂದ್ಯಕ್ಕೂ ಮುನ್ನ ಪಿಜ್ಜಾ-ಬರ್ಗರ್ ಸೇವಿಸುತ್ತಾ ಸಮಯ ಕಳೆದಿದ್ದರು ಎಂದು ಆರೋಪಿಸಲಾಗಿತ್ತು.

ಹೀಗಾಗಿ ಅದನ್ನೇ ಪ್ರಸ್ತಾಪಿಸಿ ಇಂದು ಭಾರತದ ವಿರುದ್ದ ಸೋತ ಬಳಿಕ ಪಾಕ್ ತಂಡಕ್ಕೆ ಪಿಜ್ಜಾ ಅಥವಾ ಬರ್ಗರ್ ಬೇಕಿದ್ದರೆ ಝೊಮಾಟೊವನ್ನು ಸಂಪರ್ಕಿಸಿ ಎಂದು ಕಾಲೆಳೆದಿದ್ದಾರೆ. ಇನ್ನೊಂದೆಡೆ ಪಾಕಿಸ್ತಾನದ ಫುಡ್​ ಡೆಲಿವರಿ ಕಂಪೆನಿ ಕರೀಮ್ ಪಾಕಿಸ್ತಾನ್ ಕೂಡ ಟ್ವೀಟ್ ಮೂಲಕ ಗಮನ ಸೆಳೆದಿದ್ದಾರೆ.

“ಮುಫ್ತ್ ಖನೇ ಕಾ ಮೌಕಾ ಭೀ ಔರ್ ಜೀತ್ನೆ ಕಾ ಮೌಕಾ ಭಿ (ಉಚಿತವಾಗಿ ತಿನ್ನುವ ಅವಕಾಶ ಮತ್ತು ಗೆಲ್ಲುವ ಅವಕಾಶ) ಎಂದು ಟ್ವೀಟ್ ಮಾಡಿ ಆಫರ್ ನೀಡಿದೆ. ಪಾಕಿಸ್ತಾನ-ಭಾರತ ನಡುವಣ ಪಂದ್ಯದ ವೇಳೆ ಫುಡ್​ ಆರ್ಡರ್​ ಮಾಡಿ. ಭಾರತದ ವಿರುದ್ದ ಪಾಕ್ ಗೆದ್ದರೆ ನೀವು ಆರ್ಡರ್ ಮಾಡಿದ ಮೊತ್ತವನ್ನು ಹಿಂತಿರುಗಿಸುತ್ತೇವೆ ಎಂದು ಘೋಷಿಸಿದ್ದಾರೆ.

ಇದೀಗ ಝೊಮಾಟೊ ಹಾಗೂ ಕರೀಮ್ ಪಾಕಿಸ್ತಾನ್ ಟ್ವೀಟ್​ಗಳು ವೈರಲ್ ಆಗಿದೆ. ಅದರಲ್ಲೂ ಕರೀಮ್ ಪಾಕಿಸ್ತಾನ್ ಮಾಲೀಕನಿಗೆ ಪಾಕಿಸ್ತಾನ್ ಸೋಲೋದು ಖಚಿತ ಎಂಬುದು ಗೊತ್ತಿದೆ. ಹೀಗಾಗಿಯೇ ಇಂತಹ ಆಫರ್ ನೀಡಿದ್ದಾರೆ ಎಂದು ಭಾರತೀಯ ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: India vs Pakistan: 2007ರ ಟಿ20 ವಿಶ್ವಕಪ್ ಫೈನಲ್ ಆಡಿದ್ದ ಇಬ್ಬರು ಆಟಗಾರರ ಮುಖಾಮುಖಿ

ಇದನ್ನೂ ಓದಿ: T20 World cup 2021: ಪಾಕ್ ವಿರುದ್ದದ ಪಂದ್ಯದೊಂದಿಗೆ ಹೊಸ ಸಾಧನೆ ಮಾಡಲಿದ್ದಾರೆ ಕೆಎಲ್ ರಾಹುಲ್, ಪಾಂಡ್ಯ

ಇದನ್ನೂ ಓದಿ: T20 World Cup 2021: ಟಿ20 ರ‍್ಯಾಂಕಿಂಗ್‌​ನಲ್ಲಿ ನಂಬರ್ 1 ತಂಡ ಯಾವುದು ಗೊತ್ತಾ?

(Zomato Trolls PCB Ahead Of Ind vs Pak T20 World Cup Clash)