ಐಪಿಎಲ್ನ ಯುವ ವೇಗದ ಬೌಲರ್ ಚೇತನ್ ಸಕಾರಿಯಾ ಅವರ ತಂದೆ ಕೊರೊನಾ ವೈರಸ್‌ನಿಂದ ಮೃತಪಟ್ಟಿದ್ದಾರೆ. ಸಕಾರಿಯಾ ಅವರ ತಂದೆ ಕಾಂಜಿ ಭಾಯ್ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೇ 9 ರಂದು ಭಾವನಗರದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕೊರೊನಾದಿಂದಾಗಿ ಅವರು ವೆಂಟಿಲೇಟರ್ನಲ್ಲಿದ್ದರು. ಚೇತನ್ ಸಕಾರಿಯಾ ಐಪಿಎಲ್ 2021 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು. ಈ ಪಂದ್ಯಾವಳಿಯಲ್ಲಿ ಅವರು ಉತ್ತಮ ಬೌಲಿಂಗ್ ಮಾಡಿದರು. ಕಳೆದ ಎರಡು-ಮೂರು ತಿಂಗಳಲ್ಲಿ ಚೇತನ್ ಸಕಾರಿಯಾ ಅವರಿಗೆ ಇದು ಎರಡನೇ ದೊಡ್ಡ ಆಘಾತವಾಗಿದೆ. ಜನವರಿಯಲ್ಲಿ, ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಆಡುತ್ತಿದ್ದಾಗ, ಅವರ ಕಿರಿಯ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದರು.
ಮಧುಮೇಹದಿಂದ ಕೂಡ ಬಳಲುತ್ತಿದ್ದರು
ಸಕಾರಿಯಾ ತಂದೆ ಒಂದು ವಾರದ ಹಿಂದೆ ಕೊರೊನಾ ಪಾಸಿಟಿವ್ ಆಗಿದ್ದರು. ಅದರ ಜೊತೆಗೆ ಅವರು ಮಧುಮೇಹದಿಂದ ಕೂಡ ಬಳಲುತ್ತಿದ್ದರು. ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಐಪಿಎಲ್ 2021 ಅನ್ನು ಅಮಾನತುಗೊಳಿಸಿದ ನಂತರ ಮನೆಗೆ ವಾಪಸಾದ ಸಕಾರಿಯಾ ತಂದೆಯ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿದ್ದರು. ನಂತರ ತನ್ನ ತಂದೆಯ ಉತ್ತಮ ಚಿಕಿತ್ಸೆಗಾಗಿ ಐಪಿಎಲ್ 2021 ರಿಂದ ಗಳಿಸುವ ಎಲ್ಲಾ ಹಣವನ್ನು ವ್ಯಹಿಸುವುದಾಗಿ ಹೇಳಿದ್ದರು.
Cricketer Chetan Sakariya’s father loses battle against #COVID , #Bhavnagar #Gujarat pic.twitter.com/1uAw38zwSf
— tv9gujarati (@tv9gujarati) May 9, 2021
ಚೇತನ್ ತಂದೆ ಟೆಂಪೋ ಚಲಾಯಿಸುತ್ತಿದ್ದರು
ಚೇತನ್ ಸಕಾರಿಯಾ ತೀರ ಬಡ ಕುಟುಂಬದಿಂದ ಬಂದವರಾಗಿದ್ದಾರೆ. ಅವರ ತಂದೆ ಟೆಂಪೋ ಓಡಿಸುತ್ತಿದ್ದರು. ಸೌರಾಷ್ಟ್ರ ತಂಡಕ್ಕೆ ಆಯ್ಕೆಯಾದಾಗ, ಸಕಾರಿಯಾ ಬಳಿ ಕ್ರಿಕೆಟ್ ಆಡಲು ಶೂ ಸಹ ಇರಲಿಲ್ಲ. ನಂತರ ಅವರ ಸಹ ಆಟಗಾರ ಶೆಲ್ಡನ್ ಜಾಕ್ಸನ್ ಸಹಾಯ ಮಾಡಿದರು. ಚೇತನ್ ಐಪಿಎಲ್ 2020 ರ ಸಮಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ನೆಟ್ ಬೌಲರ್ ಆಗಿದ್ದರು. ಅವರು ತಂಡದೊಂದಿಗೆ ಯುಎಇಗೆ ಹೋದರು. ಚೇತನ್ ಸಕಾರಿಯಾ ಇದುವರೆಗೆ ಸೌರಾಷ್ಟ್ರ ಪರ 15 ಪ್ರಥಮ ದರ್ಜೆ ಮತ್ತು 16 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಅವರು 41 ಮತ್ತು 28 ವಿಕೆಟ್ ಪಡೆದಿದ್ದಾರೆ. ಅದೇ ಸಮಯದಲ್ಲಿ, ಅವರು ಏಳು ಲಿಸ್ಟ್ ಎ ಪಂದ್ಯಗಳಲ್ಲಿ 10 ವಿಕೆಟ್ ಪಡೆದಿದ್ದಾರೆ. ಅವರು 2018-19ರ ಅವಧಿಯಲ್ಲಿ ಪ್ರಥಮ ದರ್ಜೆ ಕ್ರಿಕೆಟ್ಗೆ ಪ್ರವೇಶಿಸಿದರು.
ಐಪಿಎಲ್ 2021 ರಲ್ಲಿ ಸಕಾರಿಯಾ ಪ್ರದರ್ಶನ
ಚೇತನ್ ಸಕಾರಿಯಾ ಐಪಿಎಲ್ 2021 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಉತ್ತಮ ಪ್ರದರ್ಶನ ನೀಡಿದರು. ಪಂದ್ಯಾವಳಿ ಸ್ಥಗಿತಗೊಳ್ಳುವವರೆಗೂ ಅವರು ಆಡಿದ ಎಲ್ಲಾ ಪಂದ್ಯಗಳಲ್ಲಿ, 23.14 ಸ್ಟ್ರೈಕ್ ದರದಲ್ಲಿ 7 ವಿಕೆಟ್ ಪಡೆದರು ಮತ್ತು ಅವರ ಅತ್ಯುತ್ತಮ 31 ರನ್ಗಳಿಗೆ 3 ವಿಕೆಟ್ ಗಳಿಸಿದರು.
Published On - 2:35 pm, Sun, 9 May 21