CSK vs RR, IPL 2021 Match 12 Result: ಅನುಭವಿ ಚೆನ್ನೈ ಸೂಪರ್ ಕಿಂಗ್ಸ್ ಮುಂದೆ ಮಂಡಿಯೂರಿದ ರಾಜಸ್ಥಾನ್ ರಾಯಲ್ಸ್!

| Updated By: ganapathi bhat

Updated on: Nov 30, 2021 | 12:17 PM

CSK vs RR Result in Kannada: ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಐಪಿಎಲ್ 2021 ಟೂರ್ನಿಯ 12ನೇ ಪಂದ್ಯದ ಸಂಪೂರ್ಣ ಮಾಹಿತಿ ಇಲ್ಲಿದೆ.

CSK vs RR, IPL 2021 Match 12 Result: ಅನುಭವಿ ಚೆನ್ನೈ ಸೂಪರ್ ಕಿಂಗ್ಸ್ ಮುಂದೆ ಮಂಡಿಯೂರಿದ ರಾಜಸ್ಥಾನ್ ರಾಯಲ್ಸ್!
3 ವಿಕೆಟ್ ಕಿತ್ತ ಮೊಯೀನ್ ಅಲಿ

ಮುಂಬೈ: ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್ ಟೂರ್ನಿಯ 12ನೇ ಪಂದ್ಯಾಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ವಿರುದ್ಧ 45 ರನ್​ಗಳ ಗೆಲುವು ದಾಖಲಿಸಿದೆ. ಚೆನ್ನೈ ಪರ ಮೊಯೀನ್ ಅಲಿ 3 ಓವರ್​ಗೆ 7 ರನ್ ನೀಡಿ 3 ವಿಕೆಟ್ ಕಬಳಿಸಿದ್ದಾರೆ. ಜಡೇಜಾ 4 ಓವರ್​ಗೆ 28 ರನ್ ನೀಡಿ 2 ವಿಕೆಟ್ ಕಿತ್ತಿದ್ದಾರೆ. ಸ್ಯಾಮ್ ಕುರ್ರನ್ 4 ಓವರ್​ಗೆ 24 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದ್ದಾರೆ.

ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕ ಆಟಗಾರ ಬಟ್ಲರ್ 49 (35) ಗಳಿಸಿದ್ದಾರೆ. ವೋಹ್ರಾ 14, ದುಬೆ 17, ತೆವಾಟಿಯಾ 20, ಉನಾದ್ಕತ್ 24 ಹೊರತುಪಡಿಸಿ ಘಟಾನುಘಟಿ ದಾಂಡಿಗರು 5 ರನ್ ಕೂಡ ದಾಟದೆ ವಿಕೆಟ್ ನೀಡಿ ಸೋಲೊಪ್ಪಿಕೊಂಡಿದ್ದಾರೆ.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್​ಗಳ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 188 ರನ್ ದಾಖಲಿಸಿತು. ಚೆನ್ನೈ ಪರ ಡುಪ್ಲೆಸಿಸ್ 33, ಮೊಯೀನ್ ಅಲಿ 26, ರಾಯುಡು 27 ರನ್​ಗಳಿಸಿ ಇನ್ನಿಂಗ್ಸ್ ಕಟ್ಟಿದ್ದರು. ಅಂತಿಮ ಹಂತದಲ್ಲಿ ಕುರ್ರನ್ ಹಾಗೂ ಬ್ರಾವೋ ವೇಗದ ಆಟ ಆಡಿ ಟಾರ್ಗೆಟ್ ಹೆಚ್ಚಲು ಸಹಕರಿಸಿದ್ದರು. ರಾಜಸ್ಥಾನ್ ರಾಯಲ್ಸ್ ಪರ ಸಕಾರಿಯಾ 3, ಮಾರಿಸ್ 2, ಮುಸ್ತಫಿಜುರ್ ಮತ್ತು ತೆವಾಟಿಯಾ ತಲಾ 1 ವಿಕೆಟ್ ಪಡೆದಿದ್ದರು. ಪಂದ್ಯದ ಸಂಪೂರ್ಣ ಡೀಟೇಲ್ಸ್ ಈ ಕೆಳಗಿದೆ.

LIVE NEWS & UPDATES

The liveblog has ended.
  • 19 Apr 2021 11:18 PM (IST)

    ಚೆನ್ನೈ ಸೂಪರ್ ಕಿಂಗ್ಸ್​ಗೆ 45 ರನ್ ಜಯ

    ರಾಜಸ್ಥಾನ್ ರಾಯಲ್ಸ್ 20 ಓವರ್​ಗಳ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 143 ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ರಾಜಸ್ಥಾನ್ ರಾಯಲ್ಸ್ ಚೆನ್ನೈ ವಿರುದ್ಧ ಸೋಲು ಕಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ 45 ರನ್​ಗಳ ಭರ್ಜರಿ ಗೆಲುವು ದಾಖಲಿಸಿಕೊಂಡಿದೆ.

  • 19 Apr 2021 11:14 PM (IST)

    ಉನಾದ್ಕತ್ ಔಟ್

    17 ಬಾಲ್​ಗೆ 24 ರನ್ ಗಳಿಸಿ ಉನಾದ್ಕತ್ ಔಟ್ ಆಗಿದ್ದಾರೆ. ಠಾಕುರ್ ಬಾಲ್​ಗೆ ಜಡೇಜಾಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ.


  • 19 Apr 2021 11:11 PM (IST)

    ತೆವಾಟಿಯಾ ಔಟ್

    ಬ್ರಾವೋ ಬಾಲ್​ಗೆ ರಾಹುಲ್ ತೆವಾಟಿಯಾ ವಿಕೆಟ್ ಒಪ್ಪಿಸಿದ್ದಾರೆ. 15 ಬಾಲ್​ಗೆ 20 ರನ್ ಗಳಿಸಿ ನಿರ್ಗಮಿಸಿದ್ದಾರೆ. 19 ಓವರ್ ಅಂತ್ಯಕ್ಕೆ ರಾಜಸ್ಥಾನ್ ರಾಯಲ್ಸ್ ಮೊತ್ತ 137/8 ಆಗಿದೆ. ಆರ್​ಆರ್​ ಗೆಲ್ಲಲು 6 ಬಾಲ್​ಗೆ 52 ರನ್ ಬೇಕಿದೆ.

  • 19 Apr 2021 11:08 PM (IST)

    ಆರ್​ಆರ್​ ಗೆಲ್ಲಲು 12 ಬಾಲ್​ಗೆ 67 ಬೇಕು

    ರಾಜಸ್ಥಾನ್ ರಾಯಲ್ಸ್ ಗೆಲುವಿಗೆ 12 ಬಾಲ್​ಗೆ 67 ರನ್ ಬೇಕು. ತೆವಾಟಿಯಾ 6(10) ಹಾಗೂ ಉನಾದ್ಕತ್ 20(15) ಆಟ ಆಡುತ್ತಿದ್ದಾರೆ.

  • 19 Apr 2021 11:03 PM (IST)

    ಆರ್​ಆರ್​ ಗೆಲುವಿಗೆ 18 ಬಾಲ್​ಗೆ 80 ರನ್ ಬೇಕು

    ರಾಜಸ್ಥಾನ್ ರಾಯಲ್ಸ್ 17 ಓವರ್​ಗೆ 109 ರನ್ ಗಳಿಸಿ 7 ವಿಕೆಟ್ ಕಳೆದುಕೊಂಡಿದೆ. ತಂಡ ಗೆಲ್ಲಲು 18 ಬಾಲ್​ಗೆ 80 ರನ್ ಬೇಕಿದೆ.

  • 19 Apr 2021 10:58 PM (IST)

    ರಾಜಸ್ಥಾನ್ ರಾಯಲ್ಸ್ 105/7 (16 ಓವರ್)

    ರಾಜಸ್ಥಾನ್ ರಾಯಲ್ಸ್ ತಂಡ 16 ಓವರ್ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 105 ರನ್ ದಾಖಲಿಸಿದೆ. ಆರ್​ಆರ್​ ಗೆಲ್ಲಲು 24 ಬಾಲ್​ಗೆ 84 ರನ್ ಬೇಕಿದೆ. ರಾಹುಲ್ ತೆವಾಟಿಯಾ, ಜಯದೇವ್ ಉನಾದ್ಕತ್ ಕ್ರೀಸ್​ನಲ್ಲಿ ಇದ್ದಾರೆ.

  • 19 Apr 2021 10:54 PM (IST)

    ಆರ್​ಆರ್​ಗೆ 30 ಬಾಲ್​ಗೆ 92 ರನ್ ಬೇಕು

    ರಾಜಸ್ಥಾನ್ ರಾಯಲ್ಸ್ ಗೆಲ್ಲಲು 30 ಬಾಲ್​ಗೆ 92 ರನ್ ಬೇಕು. ಕೊನೆಯ ನಾಲ್ಕು ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡಿರುವ ರಾಜಸ್ಥಾನ್ ರಾಯಲ್ಸ್ ಕೇವಲ 10 ರನ್ ಸಂಪಾದಿಸಿದೆ.

  • 19 Apr 2021 10:52 PM (IST)

    ಶೂನ್ಯಕ್ಕೆ ಔಟ್ ಆದ ಮಾರಿಸ್

    ಕ್ರಿಸ್ ಮಾರಿಸ್ ಕೂಡ ರಾಜಸ್ಥಾನ್ ರಾಯಲ್ಸ್ ಗೆಲುವಿಗೆ ಹೋರಾಡದೆ ಸೊನ್ನೆ ರನ್​ಗೆ ಔಟ್ ಆಗಿದ್ದಾರೆ. 2 ಬಾಲ್​ಗೆ 0 ರನ್​ಗೆ ಮೊಯೀನ್ ಅಲಿಗೆ ವಿಕೆಟ್ ಒಪ್ಪಿಸಿದ್ದಾರೆ. ರಾಜಸ್ಥಾನ್ ಬ್ಯಾಟ್ಸ್​ಮನ್​ಗಳ ವಿಕೆಟ್ ಕಳೆದುಕೊಂಡು ಸುಸ್ತಾಗಿದೆ. ಉನದ್ಕತ್ ಕ್ರೀಸ್​ಗೆ ಬಂದಿದ್ದು, ತೆವಾಟಿಯಾ ಜೊತೆಯಾಗಿದ್ದಾರೆ.

  • 19 Apr 2021 10:49 PM (IST)

    ರಿಯಾನ್ ಪರಾಗ್ ಔಟ್

    7 ಬಾಲ್​ಗೆ 3 ರನ್ ಗಳಿಸಿ ರಿಯಾನ್ ಪರಾಗ್ ಮೊಯೀನ್ ಅಲಿಗೆ ವಿಕೆಟ್ ಒಪ್ಪಿಸಿದ್ದಾರೆ. ಪರಾಗ್ ಸಿಕ್ಸರ್ ಎತ್ತಿದ ಚೆಂಡನ್ನು ಜಡೇಜಾ ಬೌಂಡರಿಯಲ್ಲಿ ಕ್ಯಾಚ್ ಹಿಡಿದಿದ್ದಾರೆ.

  • 19 Apr 2021 10:47 PM (IST)

    ರಾಜಸ್ಥಾನ್ ರಾಯಲ್ಸ್ 95/5 (14 ಓವರ್)

    ರಾಜಸ್ಥಾನ್ ರಾಯಲ್ಸ್ ತಂಡ 14 ಓವರ್ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 95 ರನ್ ದಾಖಲಿಸಿದೆ.

  • 19 Apr 2021 10:44 PM (IST)

    ಮಿಲ್ಲರ್ ಔಟ್

    5 ಬಾಲ್​ಗೆ 2 ರನ್ ಗಳಿಸಿ ಡೇವಿಡ್ ಮಿಲ್ಲರ್ ಔಟ್ ಆಗಿದ್ದಾರೆ. ಮೊಯೀನ್ ಅಲಿ ಎಸೆತಕ್ಕೆ ಮಿಲ್ಲರ್ ಎಲ್​ಬಿಡಬ್ಲ್ಯು ಆಗಿದ್ದಾರೆ. ರಾಜಸ್ಥಾನ್ ರಾಯಲ್ಸ್ ಬೆನ್ನುಬೆನ್ನಿಗೆ ವಿಕೆಟ್ ಕಳೆದುಕೊಂಡು ಆಘಾತ ಎದುರಿಸಿದೆ. ರಾಹುಲ್ ತೆವಾಟಿಯಾ ಹಾಗೂ ರಿಯಾಣ್ ಪರಾಗ್ ಕ್ರೀಸ್​ನಲ್ಲಿದ್ದಾರೆ. ರಾಜಸ್ಥಾನ್ ರಾಯಲ್ಸ್ ಮೊತ್ತ 13 ಓವರ್​ಗೆ 92/5 ಆಗಿದೆ. ಗೆಲ್ಲಲು 42 ಬಾಲ್​ಗೆ 97 ರನ್ ಬೇಕಿದೆ.

  • 19 Apr 2021 10:40 PM (IST)

    ಬಟ್ಲರ್ ಬೆನ್ನಲ್ಲೇ ಜಡೇಜಾಗೆ ಮತ್ತೊಂದು ವಿಕೆಟ್

    ಜಾಸ್ ಬಟ್ಲರ್ 49 ರನ್ ಗಳಿಸಿ ಔಟ್ ಆದ ಬೆನ್ನಲ್ಲೇ ಜಡೇಜಾ ಬಲೆಗೆ ಮತ್ತೊಂದು ವಿಕೆಟ್ ಬಿದ್ದಿದೆ. ಶಿವಮ್ ದುಬೆ 20 ಬಾಲ್​ಗೆ 17 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. 12 ಓವರ್ ಅಂತ್ಯಕ್ಕೆ ರಾಜಸ್ಥಾನ್ ರಾಯಲ್ಸ್ ಮೊತ್ತ 90/4 ಆಗಿದೆ. ಗೆಲ್ಲಲು 48 ಬಾಲ್​ಗೆ 99 ರನ್ ಬೇಕಿದೆ.

  • 19 Apr 2021 10:37 PM (IST)

    ಬಟ್ಲರ್ ಔಟ್!

    ರವೀಂದ್ರ ಜಡೇಜಾ ಬಾಲ್​ಗೆ ಕ್ಲೀನ್ ಬೌಲ್ಡ್ ಆಗುವ ಮೂಲಕ ಜಾಸ್ ಬಟ್ಲರ್ ಅರ್ಧಶತಕ ವಂಚಿತರಾಗಿದ್ದಾರೆ. 35 ಬಾಲ್​ಗೆ 49 ರನ್ ಗಳಿಸಿ ಅವರು ಔಟ್ ಆಗಿದ್ದಾರೆ. ರಾಜಸ್ಥಾನ್ ರಾಯಲ್ಸ್ ಮೊತ್ತ 11.1 ಓವರ್​ಗೆ 3 ವಿಕೆಟ್ ಕಳೆದುಕೊಂಡು 87 ರನ್ ಆಗಿದೆ. ಗೆಲ್ಲಲು 53 ಬಾಲ್​ಗೆ 102 ರನ್ ಬೇಕಿದೆ. ಶಿವಮ್ ದುಬೆ ಹಾಗೂ ಡೇವಿಡ್ ಮಿಲ್ಲರ್ ಕ್ರೀಸ್​ನಲ್ಲಿದ್ದಾರೆ.

  • 19 Apr 2021 10:27 PM (IST)

    ಅರ್ಧಶತಕದತ್ತ ಬಟ್ಲರ್

    ರಾಜಸ್ಥಾನ್ ರಾಯಲ್ಸ್ 10 ಓವರ್​ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 81 ರನ್ ಗಳಿಸಿದೆ. ಜಾಸ್ ಬಟ್ಲರ್ 48 (32) ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ತಂಡ ಗೆಲ್ಲಲು 60 ಬಾಲ್​ಗೆ 108 ರನ್ ಬೇಕಿದೆ.

  • 19 Apr 2021 10:23 PM (IST)

    ಆರ್​ಆರ್​ ಗೆಲ್ಲಲು 66 ಬಾಲ್​ಗೆ 119 ರನ್ ಬೇಕು

    ರಾಜಸ್ಥಾನ್ ರಾಯಲ್ಸ್ ಗೆಲ್ಲಲು 66 ಬಾಲ್​ಗೆ 119 ರನ್ ಬೇಕಾಗಿದೆ. ರಾಜಸ್ಥಾನ್ ರಾಯಲ್ಸ್ 9 ಓವರ್​ಗಳ ಅಂತ್ಯಕ್ಕೆ 70 ರನ್​ ಗಳಿಸಿ 2 ವಿಕೆಟ್ ಕಳೆದುಕೊಂಡಿದ್ದಾರೆ. ಶಿವಮ್ ದುಬೆ ಹಾಗೂ ಜಾಸ್ ಬಟ್ಲರ್ ಕ್ರೀಸ್​ನಲ್ಲಿದ್ದಾರೆ. ಡೇವಿಡ್ ಮಿಲ್ಲರ್, ಕ್ರಿಸ್ ಮಾರಿಸ್, ರಾಹುಲ್ ತೆವಾಟಿಯಾ, ರಿಯಾನ್ ಪರಾಗ್ ಇನ್ನು ಬ್ಯಾಟಿಂಗ್​ಗೆ ಬಾಕಿ ಇದ್ದಾರೆ.

  • 19 Apr 2021 10:19 PM (IST)

    ರಾಜಸ್ಥಾನ್ ರಾಯಲ್ಸ್ 60/2 (8 ಓವರ್)

    ರಾಜಸ್ಥಾನ್ ರಾಯಲ್ಸ್ ತಂಡ 8 ಓವರ್​ಗಳ ಕೊನೆಗೆ 2 ವಿಕೆಟ್ ಕಳೆದುಕೊಂಡು 60 ರನ್ ದಾಖಲಿಸಿದೆ. ಬಟ್ಲರ್ 39(26) ವೇಗದ ಆಟ ಆಡುತ್ತಿದ್ದಾರೆ. ಆರ್​ಆರ್​ ಗೆಲ್ಲಲು 72 ಬಾಲ್​ಗೆ 129 ರನ್ ಬೇಕಿದೆ.

  • 19 Apr 2021 10:14 PM (IST)

    ರಾಜಸ್ಥಾನ್ ರಾಯಲ್ಸ್ 49/2 (7 ಓವರ್)

    7 ಓವರ್​ಗಳ ಅಂತ್ಯಕ್ಕೆ ರಾಜಸ್ಥಾನ್ ರಾಯಲ್ಸ್ 2 ವಿಕೆಟ್ ಕಳೆದುಕೊಂಡು 49 ರನ್ ಗಳಿಸಿದ್ದಾರೆ. ಬಟ್ಲರ್ ಹಾಗೂ ಶವಮ್ ದುಬೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ತಂಡ ಗೆಲ್ಲಲು ಎಚ್ಚರದ ಹಾಗೂ ಅಬ್ಬರದ ಆಟ ಬೇಕಿದೆ. ಚೆನ್ನೈ ಗೆಲುವಿಗೆ ಹತ್ತಿರವಾಗಲು ಇನ್ನಷ್ಟು ವಿಕೆಟ್ ಪಡೆಯಬೇಕಿದೆ.

  • 19 Apr 2021 10:09 PM (IST)

    ಪವರ್​ಪ್ಲೇ ಅಂತ್ಯಕ್ಕೆ 45/2

    ರಾಜಸ್ಥಾನ್ ರಾಯಲ್ಸ್ ಪವರ್​ಪ್ಲೇ ಅಂತ್ಯಕ್ಕೆ 45 ರನ್ ಗಳಿಸಿ, 2 ವಿಕೆಟ್ ಕಳೆದುಕೊಂಡಿದೆ. ಗೆಲ್ಲಲು ಇನ್ನು 84 ಬಾಲ್​ಗೆ 144 ರನ್ ಬೇಕಿದೆ.

  • 19 Apr 2021 10:08 PM (IST)

    ಸಂಜು ಸ್ಯಾಮ್ಸನ್ ಔಟ್

    5 ಬಾಲ್​ಗೆ 1 ರನ್ ಗಳಿಸಿ ಔಟ್ ಆಗಿರುವ ಆಟಗಾರ ಸಂಜು ಸ್ಯಾಮ್ಸನ್ ರಾಯಲ್ಸ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಮೊದಲ ಪಂದ್ಯದಲ್ಲಿ ಅಬ್ಬರಿಸಿದ್ದ ಸಂಜು, ಎರಡನೇ ಪಂದ್ಯದಲ್ಲಿ ಹೇಳಿಕೊಳ್ಳುವಂತ ಆಟ ಆಡಿರಲಿಲ್ಲ. ಇದೀಗ ಮತ್ತೆ 1 ರನ್​ಗೆ ಸ್ಯಾಮ್ ಕುರ್ರನ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಬ್ರಾವೋಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ.

  • 19 Apr 2021 10:03 PM (IST)

    ರಾಜಸ್ಥಾನ್ ರಾಯಲ್ಸ್ 43/1 (5 ಓವರ್)

    5 ಓವರ್​ಗಳ ಅಂತ್ಯಕ್ಕೆ ರಾಜಸ್ಥಾನ್ ರಾಯಲ್ಸ್ ತಂಡ 1 ವಿಕೆಟ್ ಕಳೆದುಕೊಂಡು 43 ರನ್ ದಾಖಲಿಸಿದೆ. ತಂಡದ ಪರ ಬಟ್ಲರ್ 27 (17) ವೇಗದ ಆಟ ಆಡುತ್ತಿದ್ದಾರೆ. ಸಂಜು ಸ್ಯಾಮ್ಸನ್ ಆಟದ ಮೇಲೆ ಬಹುನಿರೀಕ್ಷೆ ಇದೆ. ಈ ನಡುವೆ ಚೆನ್ನೈ ಬೌಲರ್​ಗಳು ವಿಕೆಟ್ ಕಬಳಿಸುವ ಪ್ರಯತ್ನಕ್ಕೆ ಮುಂದಾಗಬೇಕಿದೆ.

  • 19 Apr 2021 09:57 PM (IST)

    ರಾಜಸ್ಥಾನ್ ರಾಯಲ್ಸ್ 30/1 (4 ಓವರ್)

    4 ಓವರ್ ಅಂತ್ಯಕ್ಕೆ ರಾಜಸ್ಥಾನ್ ರಾಯಲ್ಸ್ 1 ವಿಕೆಟ್ ಕಳೆದುಕೊಂಡು 30 ರನ್ ಗಳಿಸಿದೆ. ತಂಡದ ಪರ ಬಟ್ಲರ್ ಹಾಗೂ ನಾಯಕ ಸಂಜು ಸ್ಯಾಮ್ಸನ್ ಕ್ರೀಸ್​ನಲ್ಲಿದ್ದಾರೆ.

  • 19 Apr 2021 09:56 PM (IST)

    ಮನನ್ ವೋಹ್ರಾ ಔಟ್

    ರಾಜಸ್ಥಾನ್ ರಾಯಲ್ಸ್​ನ ಮೊದಲ ವಿಕೆಟ್ ಪತನವಾಗಿದೆ. ಸ್ಯಾಮ್ ಕುರ್ರನ್ ಬಾಲ್​ಗೆ ಜಡೇಜಾಗೆ ಕ್ಯಾಚ್ ನೀಡಿ ವೋಹ್ರಾ 14(11) ಔಟ್ ಆಗಿದ್ದಾರೆ. ಬಟ್ಲರ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ರಾಜಸ್ಥಾನ್ ಮೊತ್ತ 3.5 ಓವರ್​ಗೆ 30/1 ಆಗಿದೆ.

  • 19 Apr 2021 09:24 PM (IST)

    ಚೆನ್ನೈ ಸೂಪರ್ ಕಿಂಗ್ಸ್ 188/9 (20 ಓವರ್)

    20 ಓವರ್​ಗಳ ಅಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ 9 ವಿಕೆಟ್ ಕಳೆದುಕೊಂಡು 188 ರನ್ ದಾಖಲಿಸಿದ್ದಾರೆ. ಈ ಮೂಲಕ ರಾಜಸ್ಥಾನ್ ರಾಯಲ್ಸ್​ಗೆ 189 ರನ್​ಗಳ ಟಾರ್ಗೆಟ್ ನೀಡಿದ್ದಾರೆ. ಕೊನೆಯ ಬಾಲ್​ಗೆ ಬ್ರಾವೋ ಸಿಕ್ಸರ್ ಸಿಡಿಸಿ ಟಾರ್ಗೆಟ್ ಹೆಚ್ಚಿಸಿದ್ದಾರೆ.

  • 19 Apr 2021 09:22 PM (IST)

    ಠಾಕುರ್ ರನೌಟ್

    ಚೆನ್ನೈ ಮತ್ತೊಂದು ವಿಕೆಟ್ ರನೌಟ್​ಗೆ ಕಳೆದುಕೊಂಡಿದೆ. ಶಾರ್ದುಲ್ ಠಾಕುರ್ ಅನಾವಶ್ಯಕ ಓಟಕ್ಕೆ ಮುಂದಾಗಿ 1 ಬಾಲ್​ಗೆ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಬ್ರಾವೋ ಹಾಗೂ ಚಹರ್ ಕ್ರೀಸ್​ನಲ್ಲಿದ್ದಾರೆ.

  • 19 Apr 2021 09:17 PM (IST)

    ಸ್ಯಾಮ್ ಕುರ್ರನ್ ರನೌಟ್

    6 ಬಾಲ್​ಗೆ 13 ರನ್ ಗಳಿಸಿ ರನ್ ಗತಿ ವೇಗವಾಗುವಲ್ಲಿ ಉತ್ತಮ ಆಟ ಆಡುತ್ತಿದ್ದ ಸ್ಯಾಮ್ ಕುರ್ರನ್ ಅಂತಿಮ ಓವರ್​ನಲ್ಲಿ ಅವಸರದ ರನ್ ಔಟ್​ಗೆ ಬಲಿಯಾಗಿದ್ದಾರೆ. ಬ್ರಾವೋ ಜೊತೆ ಠಾಕುರ್ ಬ್ಯಾಟಿಂಗ್​ಗೆ ಇಳಿದಿದ್ದಾರೆ.

  • 19 Apr 2021 09:15 PM (IST)

    ಚೆನ್ನೈ ಸೂಪರ್ ಕಿಂಗ್ಸ್ 173/7 (19 ಓವರ್)

    ಚೆನ್ನೈ ಸೂಪರ್ ಕಿಂಗ್ಸ್ 19 ಓವರ್​ಗಳ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 173 ರನ್ ದಾಖಲಿಸಿದೆ. ಮಾರಿಸ್ ಬೌಲ್ ಮಾಡಿದ ಕೊನೆಯ ಓವರ್​ನಲ್ಲಿ 1 ವಿಕೆಟ್ ಪಡೆದಿದ್ದರೂ, 3 ಫೋರ್ ಬಿಟ್ಟುಕೊಟ್ಟಿದ್ದಾರೆ. ಬ್ರಾವೋ 8(2) ಹಾಗೂ ಕುರ್ರನ್ 12(5) ರನ್ ​ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

  • 19 Apr 2021 09:12 PM (IST)

    ಜಡೇಜಾ ಔಟ್

    ಕ್ರಿಸ್ ಮಾರಿಸ್ ಬಾಲ್​ಗೆ ಜಡೇಜಾ ಔಟ್ ಆಗಿದ್ದಾರೆ. 7 ಬಾಲ್​ಗೆ 8 ರನ್​ಗಳ ಆಟ ಆಡಿದ ರವೀಂದ್ರ ಜಡೇಜಾ ವಿಕೆಟ್ ಕೀಪರ್ ಸ್ಯಾಮ್ಸನ್ ಕ್ಯಾಚ್ ನೀಡಿದ್ದಾರೆ. ಚೆನ್ನೈ ತಂಡದ ಸ್ಕೋರ್ 18.3 ಓವರ್​ಗೆ 163/7 ಆಗಿದೆ. ಬ್ರಾವೋ ಕ್ರೀಸ್​ಗೆ ಇಳಿದಿದ್ದಾರೆ.

  • 19 Apr 2021 09:08 PM (IST)

    ಚೆನ್ನೈ ಸೂಪರ್ ಕಿಂಗ್ಸ್ 158/6 (18 ಓವರ್)

    18 ಓವರ್​ಗಳ ಅಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್ ಕಳೆದುಕೊಂಡು 158 ರನ್ ದಾಖಲಿಸಿದೆ. ಚೆನ್ನೈ ಪರ ಸ್ಯಾಮ್ ಕುರ್ರನ್ ಹಾಗೂ ಜಡೇಜಾ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 19 Apr 2021 09:04 PM (IST)

    ಧೋನಿ ವಿಕೆಟ್ ಪತನ

    ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಒಂದು ಬೌಂಡರಿ ಬಳಿಕ ಚೇತನ್ ಸಕಾರಿಯಾಗೆ ವಿಕೆಟ್ ಒಪ್ಪಿಸಿದ್ದಾರೆ. 17 ಬಾಲ್​ಗೆ 18 ರನ್ ಗಳಿಸಿ ಧೋನಿ ನಿರ್ಗಮಿಸಿದ್ದಾರೆ. ಬಟ್ಲರ್​ಗೆ ಕ್ಯಾಚ್ ಒಪ್ಪಿಸಿದ್ದಾರೆ.

  • 19 Apr 2021 09:00 PM (IST)

    ಚೆನ್ನೈ ಆಟ ನಿಧಾನ

    ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ ಕಳೆದುಕೊಂಡು ನಿಧಾನಗತಿಯ ಆಟಕ್ಕೆ ಮುಂದಾಗಿದೆ. ನಾಯಕ ಧೋನಿ ಹಾಗೂ ಜಡೇಜಾ ಅಬ್ಬರಿಸುತ್ತಿಲ್ಲ. 17 ಓವರ್ ಅಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ 5 ವಿಕೆಟ್ ಕಳೆದುಕೊಂಡು 143 ರನ್ ಕಲೆಹಾಕಿದೆ.

  • 19 Apr 2021 08:52 PM (IST)

    ಚೆನ್ನೈ ಸೂಪರ್ ಕಿಂಗ್ಸ್ 127/5 (15 ಓವರ್)

    15 ಓವರ್ ಅಂತ್ಯಕ್ಕೆ ಚೆನ್ನೈ 5 ವಿಕೆಟ್ ಕಳೆದುಕೊಂಡು 127 ರನ್ ಗಳಿಸಿದೆ. ರಾಹುಲ್ ತೆವಾಟಿಯಾ ಕೊನೆಯ ಓವರ್​ನಲ್ಲಿ ಕೇವಲ 2 ರನ್ ಬಿಟ್ಟುಕೊಟ್ಟು ರನ್ ವೇಗ ನಿಯಂತ್ರಣಕ್ಕೆ ತಂದಿದ್ದಾರೆ.

  • 19 Apr 2021 08:47 PM (IST)

    ಚೆನ್ನೈ ಸೂಪರ್ ಕಿಂಗ್ಸ್ 125/5 (14 ಓವರ್)

    14 ಓವರ್​ಗಳ ಅಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ ಕಳೆದುಕೊಂಡು 125 ರನ್ ದಾಖಲಿಸಿದೆ. ಚೇತನ್ ಸಕಾರಿಯಾ ಕೊನೆಯ ಓವರ್​ನಲ್ಲಿ ರಾಯುಡು ಹಾಗೂ ರೈನಾ ವಿಕೆಟ್ ಕಿತ್ತು ಚೆನ್ನೈಗೆ ಆಘಾತ ನೀಡಿದ್ದಾರೆ. ಜಡೇಜಾ ಹಾಗೂ ಚೆನ್ನೈ ನಾಯಕ ಧೋನಿ ಕ್ರೀಸ್​ನಲ್ಲಿದ್ದಾರೆ. ಇನ್ನು 6 ಓವರ್​ಗಳು ಬಾಕಿ ಇದ್ದು, ವಿಕೆಟ್ ಉಳಿಸಿಕೊಂಡು ಆಡುವ ಅಗತ್ಯ ಚೆನ್ನೈಗಿದೆ.

  • 19 Apr 2021 08:44 PM (IST)

    ರೈನಾ ಔಟ್!

    ರಾಯುಡು ಔಟ್ ಆದ ಬೆನ್ನಲ್ಲೇ ಸುರೇಶ್ ರೈನಾ ವಿಕೆಟ್ ಒಪ್ಪಿಸಿದ್ದಾರೆ. ಸಕಾರಿಯಾ ಬಾಲ್​ಗೆ ಮಾರಿಸ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. 15 ಬಾಲ್​ಗೆ 18 ರನ್ ಗಳಿಸಿ ರೈನಾ ಔಟ್ ಆಗಿದ್ದು, ಚೆನ್ನೈ ಮುಖ್ಯ ದಾಂಡಿಗರನ್ನು ಕಳೆದುಕೊಂಡು ಆಘಾತ ಎದುರಿಸಿದೆ.

  • 19 Apr 2021 08:41 PM (IST)

    ರಾಯುಡು ಔಟ್!

    13.2ನೇ ಓವರ್​ಗೆ ಸಕಾರಿಯಾ ಬಾಲ್​ಗೆ ಅಂಬಾಟಿ ರಾಯುಡು ವಿಕೆಟ್ ಒಪ್ಪಿಸಿದ್ದಾರೆ. 17 ಬಾಲ್​ಗೆ 27 ರನ್ ಗಳಿಸಿ ವೇಗದ ಆಟವಾಡುತ್ತಿದ್ದ ರಾಯುಡು, ಸಿಕ್ಸರ್ ಸಿಡಿಸಲು ಮುಂದಾಗಿ ಪರಾಗ್​ಗೆ ಕ್ಯಾಚ್ ನೀಡಿದ್ದಾರೆ. ತಂಡದ ಮೊತ್ತ 13.2 ಓವರ್​ಗೆ 123/4 ಆಗಿದೆ. ಜಡೇಜಾ ಕ್ರೀಸ್​ಗೆ ಇಳಿದಿದ್ದಾರೆ.

  • 19 Apr 2021 08:32 PM (IST)

    ರಾಯುಡು ಸಿಕ್ಸರ್

    ತೆವಾಟಿಯಾ ಓವರ್​ನಲ್ಲಿ ರಾಯುಡು ಬೆನ್ನುಬೆನ್ನಿಗೆ ಎರಡು ಸಿಕ್ಸರ್ ಸಿಡಿಸಿದ್ದಾರೆ. 12 ಓವರ್ ಅಂತ್ಯಕ್ಕೆ ಚೆನ್ನೈ ಸ್ಕೋರ್ 112/3 ಆಗಿದೆ. ಅಂಬಾಟಿ ರಾಯುಡು 23 (12) ಹಾಗೂ ರೈನಾ 12 (10) ಕ್ರೀಸ್​ನಲ್ಲಿದ್ದಾರೆ.

  • 19 Apr 2021 08:30 PM (IST)

    ಚೆನ್ನೈ ಸೂಪರ್ ಕಿಂಗ್ಸ್ 98/3 (11 ಓವರ್)

    ಚೆನ್ನೈ ಸೂಪರ್ ಕಿಂಗ್ಸ್ 11 ಓವರ್​ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 98 ರನ್ ದಾಖಲಿಸಿದೆ. ಪರಾಗ್ ಬಾಲ್ ಮಾಡಿರುವ ಕೊನೆಯ ಓವರ್​ನಲ್ಲಿ ರೈನಾ ಹಾಗೂ ರಾಯುಡು ಸಿಕ್ಸರ್ ಬಾರಿಸಿದ್ದಾರೆ. ವಿಕೆಟ್ ಕಳೆದುಕೊಂಡರೂ ರನ್ ವೇಗ ಹೆಚ್ಚಿಸಿ ಚೆನ್ನೈ ದಾಂಡಿಗರು ಆಡುತ್ತಿದ್ದಾರೆ.

  • 19 Apr 2021 08:23 PM (IST)

    ಮೊಯೀನ್ ಅಲಿ ಔಟ್

    ಚೆನ್ನೈ ಪರ ಉತ್ತಮ ಆಟ ಆಡುತ್ತಿದ್ದ ಮೊಯೀನ್ ಅಲಿ 26 (20) ರಾಹುಲ್ ತೆವಾಟಿಯಾಗೆ ವಿಕೆಟ್ ಒಪ್ಪಿಸಿದ್ದಾರೆ. ವೇಗದ ಆಟಕ್ಕೆ ಮುಂದಾಗಿ ಸಿಕ್ಸರ್ ಬಾರಿಸಲು ಹೊರಟ ಅಲಿ, ಪರಾಗ್​ಗೆ ಕ್ಯಾಚ್ ನೀಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಪರ ರೈನಾ ಜೊತೆ ಅಂಬಾಟಿ ರಾಯುಡು ಕಣಕ್ಕಿಳಿದಿದ್ದಾರೆ. 10 ಓವರ್​ಗಳ ಅಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ 3 ವಿಕೆಟ್ ಕಳೆದುಕೊಂಡು 82 ರನ್ ದಾಖಲಿಸಿದ್ದಾರೆ.

  • 19 Apr 2021 08:19 PM (IST)

    ಚೆನ್ನೈ ಸೂಪರ್ ಕಿಂಗ್ಸ್ 77/2 (9 ಓವರ್)

    9 ಓವರ್​ಗಳ ಅಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ 77 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿದ್ದಾರೆ. ವೇಗಿಗಳ ಬಳಿಕ ಸ್ಪಿನ್ನರ್​ಗಳು ಓವರ್ ಆರಂಭಿಸುವ ನಿರೀಕ್ಷೆ ಇದೆ.

  • 19 Apr 2021 08:12 PM (IST)

    ಚೆನ್ನೈ ಸೂಪರ್ ಕಿಂಗ್ಸ್ 66/2 (8 ಓವರ್)

    8 ಓವರ್​ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ 66 ರನ್ ಕಲೆಹಾಕಿದೆ.

  • 19 Apr 2021 08:07 PM (IST)

    ಚೆನ್ನೈ ಸೂಪರ್ ಕಿಂಗ್ಸ್ 59/2 (7 ಓವರ್)

    ಚೆನ್ನೈ ಸೂಪರ್ ಕಿಂಗ್ಸ್ 7 ಓವರ್ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 59 ರನ್ ಕಲೆಹಾಕಿದ್ದಾರೆ. ಚೆನ್ನೈ ಪರ ಮೊಯೀನ್ ಅಲಿ 12 ಬಾಲ್ 14 ರನ್ ಹಾಗೂ ರೈನಾ 1 ಬಾಲ್ ಎದುರಿಸಿ ಖಾತೆ ತೆರೆಯದೆ ಬ್ಯಾಟಿಂಗ್​ನಲ್ಲಿದ್ದಾರೆ.

  • 19 Apr 2021 08:01 PM (IST)

    ಪವರ್​ಪ್ಲೇ ಅಂತ್ಯಕ್ಕೆ 46/2

    6 ಓವರ್​​ಗಳ ಅಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ 2 ವಿಕೆಟ್ ಕಳೆದುಕೊಂಡು 46 ರನ್ ಗಳಿಸಿದೆ. ಮೊಯೀನ್ ಅಲಿ ಜೊತೆಗೆ ಸುರೇಶ್ ರೈನಾ ಕಣಕ್ಕಿಳಿದಿದ್ದಾರೆ. ಡುಪ್ಲೆಸಿಸ್ ಹಾಗೂ ಗಾಯಕ್ವಾಡ್ ವಿಕೆಟ್ ಕಳೆದುಕೊಂಡ ಬಳಿಕ ಚೆನ್ನೈ ಆಟ ಕೊಂಚ ನಿಧಾನವಾಗುವ ಸಾಧ್ಯತೆ ಇದೆ.

  • 19 Apr 2021 07:59 PM (IST)

    ಅಬ್ಬರಿಸುತ್ತಿದ್ದ ಡುಪ್ಲೆಸಿಸ್ ಔಟ್

    17 ಬಾಲ್​ಗೆ 33 ರನ್ ಗಳಿಸಿ ವೇಗದ ಆಟವಾಡುತ್ತಿದ್ದ ಡುಪ್ಲೆಸಿಸ್ ಮಾರಿಸ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಸಿಕ್ಸರ್​ಗೆ ಮುಂದಾದ ಡುಪ್ಲೆಸಿಸ್ ಪರಾಗ್​ಗೆ ಕ್ಯಾಚ್ ನೀಡಿದ್ದಾರೆ.

  • 19 Apr 2021 07:55 PM (IST)

    ಚೆನ್ನೈ ಸೂಪರ್ ಕಿಂಗ್ಸ್ 44/1 (5 ಓವರ್)

    ಚೆನ್ನೈ ಸೂಪರ್ ಕಿಂಗ್ಸ್ ಪರ ಡುಪ್ಲೆಸಿಸ್ ಅಬ್ಬರಿಸುತ್ತಿದ್ದಾರೆ. ಉನದ್ಕತ್ ಬೌಲಿಂಗ್​ನ ಕೊನೆಯ ಓವರ್​ನಲ್ಲಿ 1 ಸಿಕ್ಸರ್ ಹಾಗೂ 3 ಬೌಂಡರಿ ಸಹಿತ 19 ರನ್ ಪೇರಿಸಿದ್ದಾರೆ. ತಂಡದ ಮೊತ್ತ 5 ಓವರ್​ಗೆ 44/1 ಆಗಿದೆ. ಡುಪ್ಲೆಸಿಸ್ 33 (16) ಗಳಿಸಿ ಆಡುತ್ತಿದ್ದಾರೆ.

  • 19 Apr 2021 07:49 PM (IST)

    ಗಾಯಕ್ವಾಡ್ ಔಟ್

    ಮುಸ್ತಫಿಜುರ್ ಓವರ್​ನ 5ನೇ ಬಾಲ್​ನಲ್ಲಿ ಸಿಕ್ಸರ್ ಬಾರಿಸಲು ಮುಂದಾದ ಋತುರಾಜ್ ಗಾಯಕ್ವಾಡ್ ದುಬೆಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. 13 ಬಾಲ್​ಗೆ 1 ಬೌಂಡರಿ ಸಹಿತ 10 ರನ್ ಗಳಿಸಿ ಅವರು ನಿರ್ಗಮಿಸಿದ್ದಾರೆ. ಡುಪ್ಲೆಸಿಸ್​ಗೆ ಮೊಯೀನ್ ಅಲಿ ಜೊತೆಯಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ 4 ಓವರ್​ನ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 25 ರನ್ ದಾಖಲಿಸಿದೆ.

  • 19 Apr 2021 07:43 PM (IST)

    ಚೆನ್ನೈ ಸೂಪರ್ ಕಿಂಗ್ಸ್ 22/0 (3 ಓವರ್)

    ಮೂರನೇ ಓವರ್​ಗೆ ಚೆನ್ನೈ ಸೂಪರ್ ಕಿಂಗ್ಸ್ ವಿಕೆಟ್ ಕಳೆದುಕೊಳ್ಳದೆ 22 ರನ್ ದಾಖಲಿಸಿದೆ. ಉನದ್ಕತ್ ಬೌಲಿಂಗ್​ನ 3ನೇ ಓವರ್​ನ 4ನೇ ಬಾಲ್​ನಲ್ಲಿ ಡುಪ್ಲೆಸಿಸ್ ಫೋರ್ ಬಾರಿಸಿದ್ದಾರೆ. 8 ಬಾಲ್​ಗೆ 13 ರನ್ ಗಳಿಸಿ ಡುಪ್ಲೆಸಿಸ್ ವೇಗದ ಆಟ ಆರಂಭಿಸಿದ್ದಾರೆ.

  • 19 Apr 2021 07:39 PM (IST)

    ಚೆನ್ನೈ ಸೂಪರ್ ಕಿಂಗ್ಸ್ 14/0 (2 ಓವರ್)

    2ನೇ ಓವರ್ ಅಂತ್ಯಕ್ಕೆ ಚೆನ್ನೈ ತಂಡ ವಿಕೆಟ್ ಕಳೆದುಕೊಳ್ಳದೆ 14 ರನ್ ಗಳಿಸಿದೆ. ಸಕಾರಿಯಾ ಬಾಲ್ ಮಾಡಿದ ಎರಡನೇ ಓವರ್ ಕೊನೆಯ ಎಸೆತವನ್ನು ಡುಪ್ಲೆಸಿಸ್ ಸಿಕ್ಸರ್ ಬಾರಿಸಿದ್ದಾರೆ.

  • 19 Apr 2021 07:35 PM (IST)

    ಚೆನ್ನೈ ಸೂಪರ್ ಕಿಂಗ್ಸ್ 5/0 (1 ಓವರ್)

    ಬ್ಯಾಟಿಂಗ್ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಓವರ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 5 ರನ್ ಕಲೆಹಾಕಿದೆ. ಚೆನ್ನೈ ಪರ ಡುಪ್ಲೆಸಿಸ್ ಹಾಗೂ ಋತುರಾಜ್ ಗಾಯಕ್ವಾಡ್ ಬ್ಯಾಟಿಂಗ್​ಗೆ ಇಳಿದಿದ್ದಾರೆ. ಮೊದಲ ಓವರ್​ನ್ನು ಉನದ್ಕತ್ ಬಾಲ್ ಮಾಡಿದ್ದಾರೆ.

  • 19 Apr 2021 07:13 PM (IST)

    ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ ಇಲೆವೆನ್

    ರಾಜಸ್ಥಾನ್ ರಾಯಲ್ಸ್ ಕೂಡ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

    ಜೋಸ್ ಬಟ್ಲರ್, ಮನನ್ ವೊಹ್ರಾ, ಸಂಜು ಸ್ಯಾಮ್ಸನ್ (ನಾಯಕ/ ವಿಕೆಟ್ ಕೀಪರ್), ಶಿವಮ್ ಡ್ಯೂಬ್, ಡೇವಿಡ್ ಮಿಲ್ಲರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಕ್ರಿಸ್ ಮೋರಿಸ್, ಜಯದೇವ್ ಉನಾದ್ಕಟ್, ಚೇತನ್ ಸಕರಿಯಾ, ಮುಸ್ತಾಫಿಜುರ್ ರಹಮಾನ್

  • 19 Apr 2021 07:12 PM (IST)

    ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್

    ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ.

    ರುತುರಾಜ್ ಗೈಕ್ವಾಡ್, ಫಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಎಂ.ಎಸ್. ಧೋನಿ (ನಾಯಕ/ ವಿಕೆಟ್ ಕೀಪರ್), ಸ್ಯಾಮ್ ಕುರ್ರನ್, ಡ್ವೇನ್ ಬ್ರಾವೋ, ಶಾರ್ದುಲ್ ಠಾಕೂರ್, ದೀಪಕ್ ಚಹರ್

  • 19 Apr 2021 07:08 PM (IST)

    ಟಾಸ್ ಗೆದ್ದ ಆರ್​ಆರ್​ ಬೌಲಿಂಗ್ ಆಯ್ಕೆ

    ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡ ಬೌಲಿಂಗ್ ಆಯ್ದುಕೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಮಾಡಲಿದೆ.

Published On - 11:18 pm, Mon, 19 April 21

Follow us on