[yop_poll id=”15″]
ಭರ್ಜರಿ ನೋಟ್ನೊಂದಿಗೆ ಅಭಿಯಾನ ಶುರಮಾಡಿದ ರಾಯಲ್ಸ್ ಎರಡು ಪಂದ್ಯಗಳಲ್ಲಿ ಜಯ ಕಂಡ ನಂತರ ಗೆಲ್ಲುವುದನ್ನು ಮರೆತುಹೋದವರಂತೆ ಆಡಿದೆ. ಆಮೇಲೆ ಆಡಿದ 7 ಪಂದ್ಯಗಳಲ್ಲಿ ಅದು ಕೇವಲ ಒಂದನ್ನು ಮಾ
ರಾಯಲ್ಸ್ ಮೊದಲಿನರೆಡು ಪಂದ್ಯಗಳನ್ನು ಗೆಲ್ಲಲು ಪ್ರಮುಖವಾಗಿ ನೆರವಾಗಿದ್ದು ಸಂಜು ಸ್ಯಾಮ್ಸನ್ ಅವರ ವಿಸ್ಮಯಕಾರಿ ಹಿಟ್ಟಿಂಗ್. ಆದರೆ ಮುಂದಿನ 7 ಪಂದ್ಯಗಳಲ್ಲಿ ಅವರು, ಆ ಸ್ಯಾಮ್ಸನ್ ಇವರೇನಾ ಎಂಬಂತೆ ಆಡಿದ್ದಾರೆ. ಈ ಏಳು ಗೇಮ್ಗಳಲ್ಲಿ ಅವರ ಬ್ಯಾಟ್ನಿಂದ ಕೇವಲ 77ರನ್ ಮಾತ್ರ ಬಂದಿವೆ, ಅವರ ವೈಫಲ್ಯ ಟೀಮಿನ ಒಟ್ಟಾರೆ ಪ್ರದರ್ಶನದ ಮೇಲೆ ಭಾರಿ ಪರಿಣಾಮ ಬೀರಿದೆ.
ಕಳೆದ ಪಂದ್ಯದಿಂದ ಆರಂಭ ಆಟಗಾರನಾಗಿ ಆಡುತ್ತಿರುವ ರಾಬಿನ್ ಉತ್ತಪ್ಪ ಇಂದು ಸಹ ಆದೇ ಸ್ಥಾನದಲ್ಲಿ ಮುಂದುವರಿಯುವ ನಿರೀಕ್ಷೆಯಿದೆ. ಓದುಗರಿಗೆ ಗೊತ್ತಿರುವಂತೆ, ಉತ್ತಪ್ಪ ಬೇಸಿಕಲ್ಲಿ ಒಬ್ಬ ಓಪನರ್. ಅದನ್ನವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆಡಿದ ಎರಡನೆ ಸುತ್ತಿನ ಪಂದ್ಯದಲ್ಲಿ (22 ಎಸೆತಗಳಲ್ಲಿ 42 ರನ್) ಪ್ರೂವ್ ಮಾಡಿದರು. ಆದರೆ ಅವರ ಜೊತೆಗಾರನಾಗಿ ಬೆನ್ ಸ್ಟೋಕ್ಸ್ ಅವರನ್ನು ಆಡಿಸುತ್ತಿರುವುದು ವಿವೇಚನಾಹೀನ ನಡೆ. ಸ್ಟೋಕ್ಸ್, ಮಿಡ್ಲ್ ಆರ್ಡರ್ನಲ್ಲಿ ಫಿಟ್ ಆಗುತ್ತಾರೆ, ಹಾಗಾಗಿ ಅವರನ್ನು ಕೆಳ ಕ್ರಮಾಂಕದಲ್ಲಿಆಡಿಸಿ ಮೂಲತಃ ಓಪನರ್ ಅಗಿರುವ ಜೊಸ್ ಬಟ್ಲರ್ ಅವರನ್ನು ಉತ್ತಪ್ಪನ ಜೊತೆಗಾರನನ್ನಾಗಿ ಕಳಿಸಿದರೆ ಟೀಮಿಗೆ ಲಾಭವಾಗಬಹುದು.
ಬೌಲಿಂಗ್ ವಿಭಾಗದಲ್ಲಿ ಕೇವಲ ಜೊಫ್ರಾ ಆರ್ಚರ್ ಮಾತ್ರ ತಮ್ಮ ಸ್ಥಾನಕ್ಕೆ ನ್ಯಾಯ ಒದಗಿಸುತ್ತಿದ್ದಾರೆ. ಸ್ಟೋಕ್ಸ್ಗೆ ತಮ್ಮ ಲು ಕೊಂಡುಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಇನ್ನು ಮುಂದೆ ಆಡುವ ಪಂದ್ಯಗಳು ಮಾಡು ಇಲ್ಲವೇ ಮಡಿ ಸ್ವರೂಪದವಾಗಿರುವುದರಿಂದ ಬೌಲರ್ಗಳು ಕಾಂಟ್ರಿಬ್ಯೂಟ್ ಮಾಡಲೇಬೇಕಾಗಿದೆ.
ಅತ್ತ ಚೆನೈ ಟೀಮಿಗೂ ಅಂಥದ್ದೇ ಸ್ಥಿತಿ ಎದುರಾಗಿದೆ. ಕಳೆದ 12 ಐಪಿಎಲ್ ಸೀಸನ್ಗಳಲ್ಲಿ ಧೋನಿಯ ಪಡೆ ಎಂದೂ ಈಗಿರುವಂಥ ಸ್ಥಿಯಲ್ಲಿರಲಿಲ್ಲ. ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ಅವರ ಅನುಪಸ್ಥಿತಿ ಟೀಮನ್ನು ಬಹಳ ದುರ್ಬಲಗೊಳಿಸಿದೆ. ಫಫ್ ಡು ಪ್ಲೆಸ್ಸಿ ಮತ್ತು ಶೇನ್ ವಾಟ್ಸನ್ ಉತ್ತಮ ಆರಂಭಗಳನ್ನು ಒದಗಿದರೂ ಮಿಡ್ಲ್ ಅರ್ಡರ್ ಅದನ್ನು ಕನ್ಸಾಲಿಡೇಟ್ ಮಾಡುತ್ತಿಲ್ಲ. ಅಂಬಟಿ ರಾಯುಡು ಅವರನ್ನು ಬಿಟ್ಟರೆ ಉಳಿದವರಿಂದ ರನ್ ಬರುತ್ತಿಲ್ಲ. ಆದರೆ, ಗಮನಿಸಬೇಕಾಗಿರುವ ಸಂಗತಿಯೇನೆಂದರೆ ಕಳೆದ ಪಂದ್ಯದಿಂದ ಧೋನಿ ಟೀಮಿನ ಧೋರಣೆ ಬದಲಾಗಿರುವುದು.
ಕ್ರಿಕೆಟ್ ಪ್ರೇಮಿಗಳಿಗೆ ಅದರಲ್ಲೂ ವಿಶೇಕಷವಾಗಿ ಸಿಎಸ್ಕೆ ಅಭಿಮಾನಿಗಳಿಗೆ ಅರ್ಥವಾಗದಿರುವ ಅಂಶವೆಂದರೆ, ಕೇದಾರ್ ಜಾಧವ್ ಅವರನ್ನು ಸತತ ವೈಫಲ್ಯಗಳ ಹೊರತಾಗಿಯೂ ಆಡಿಸುತ್ತಿರುವುದು. ಟೀಮ್ ಮ್ಯಾನೇಜ್ಮೆಂಟ್ಗೆ ಅವರ ಮೇಲೆ ಅದೇನು ಪ್ರೀತಿಯೋ? ಅವರ ಸ್ಥಾನದಲ್ಲಿ ಮತ್ತೊಬ್ಬ ಬೌಲರ್ನನ್ನು ಆಡಿಸಿದರೆ, ಕನಿಷ್ಠಪಕ್ಷ ಈ ವಿಭಾಗವಾದರೂ ಬಲಿಷ್ಠವಾಗುತ್ತದೆ. ಜೊಷ್ ಹೆಜೆಲ್ವುಡ್ ಮತ್ತು ಲುಂಗಿ ಎನ್ಗಿಡಿ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
Published On - 5:01 pm, Mon, 19 October 20