ಫಿಂಚ್ ವೇಪಿಂಗ್ ಕೆಮೆರಾದಲ್ಲಿ ಸೆರೆಯಾಯಿತು!
ಭಾರತವೂ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ವೇಪಿಂಗ್ (ಈ-ಸಿಗರೇಟ್) ನಿಷೇಧಿಸಲಾಗಿದೆ. ಮುಸ್ಲಿಂ ರಾಷ್ಟ್ರಗಳಲ್ಲಂತೂ ವೇಪಿಂಗ್ ಕುರಿತು ಮಾತಾಡುವುದು ಕೂಡ ನಿಷಿದ್ಧ. ಪರಿಸ್ಥಿತಿ ಹೀಗಿರುವಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮಿನ ಆರಂಭ ಆಟಗಾರ ಆಸ್ಟ್ರೇಲಿಯಾದ ಆರನ್ ಫಿಂಚ್ ರಾಜಸ್ತಾನ ರಾಯಲ್ಸ್ ವಿರುದ್ಧ ಶನಿವಾರದಂದು ನಡೆದ ಪಂದ್ಯದ ಕೊನೆಯ ಆತಂಕದ ಮತ್ತು ರೋಮಾಂಚಕ ಕ್ಷಣಗಳಲ್ಲಿ ಡ್ರೆಸ್ಸಿಂಗ್ ರೂಮಲ್ಲಿ ಕೂತು ವೇಪ್ ಮಾಡುತ್ತಿರುವುದು ಕೆಮೆರಾದಲ್ಲಿ ಸೆರೆಯಾಗಿದೆ. ಫಿಂಚ್ ವೇಪ್ ಮಾಡುತ್ತಿರುವ ವಿಡಿಯೊ ಕೇವಲ 8-10 ಸೆಕೆಂಡುಗಳ ಅವಧಿಯದ್ದಾಗಿದೆ. ಅತ್ತ ಮೈದಾನದಲ್ಲಿ ಆರ್ಸಿಬಿಯ ಚಾಂಪಿಯನ್ […]
ಭಾರತವೂ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ವೇಪಿಂಗ್ (ಈ-ಸಿಗರೇಟ್) ನಿಷೇಧಿಸಲಾಗಿದೆ. ಮುಸ್ಲಿಂ ರಾಷ್ಟ್ರಗಳಲ್ಲಂತೂ ವೇಪಿಂಗ್ ಕುರಿತು ಮಾತಾಡುವುದು ಕೂಡ ನಿಷಿದ್ಧ. ಪರಿಸ್ಥಿತಿ ಹೀಗಿರುವಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮಿನ ಆರಂಭ ಆಟಗಾರ ಆಸ್ಟ್ರೇಲಿಯಾದ ಆರನ್ ಫಿಂಚ್ ರಾಜಸ್ತಾನ ರಾಯಲ್ಸ್ ವಿರುದ್ಧ ಶನಿವಾರದಂದು ನಡೆದ ಪಂದ್ಯದ ಕೊನೆಯ ಆತಂಕದ ಮತ್ತು ರೋಮಾಂಚಕ ಕ್ಷಣಗಳಲ್ಲಿ ಡ್ರೆಸ್ಸಿಂಗ್ ರೂಮಲ್ಲಿ ಕೂತು ವೇಪ್ ಮಾಡುತ್ತಿರುವುದು ಕೆಮೆರಾದಲ್ಲಿ ಸೆರೆಯಾಗಿದೆ.
ಫಿಂಚ್ ವೇಪ್ ಮಾಡುತ್ತಿರುವ ವಿಡಿಯೊ ಕೇವಲ 8-10 ಸೆಕೆಂಡುಗಳ ಅವಧಿಯದ್ದಾಗಿದೆ. ಅತ್ತ ಮೈದಾನದಲ್ಲಿ ಆರ್ಸಿಬಿಯ ಚಾಂಪಿಯನ್ ಬ್ಯಾಟ್ ಎಬಿ ಡಿ ವಿಲಿಯರ್ಸ್ ರಾಯಲ್ಸ್ ತಂಡದ ಜಯದೇವ್ ಉನಾಡ್ಕಟ್ ಅವರ ಬೌಲಿಂಗ್ನಲ್ಲಿ ಸಿಕ್ಸರ್ ಮೇಲೆ ಸಿಕ್ಸರ್ ಬಾರಿಸಿ ಟೀಮಿಗೆ ಗೆಲುವು ತಂದುಕೊಡುತ್ತಿದ್ದರೆ, ಫಿಂಚ್ ಒಮ್ಮೆ ಹೊಗೆಯುಗುಳಿ ಮತ್ತೊಮ್ಮೆ ದಮ್ ಎಳೆಯುವುದನ್ನು ಒಬ್ಬ ಕೆಮೆರಾಮನ್ ಶೂಟ್ ಮಾಡಿದ್ದಾರೆ.
ಹಾಗೆ ನೋಡಿದರೆ, ವೇಪಿಂಗ್ ಮಾಡುವಾಗ ಸಿಕ್ಕಿಬಿದ್ದಿರುವವರಲ್ಲಿ ಫಿಂಚ್ ಮೊದಲನೆಯವರೇನಲ್ಲ. ಇದಕ್ಕೆ ಮೊದಲು ನ್ಯೂಜಿಲೆಂಡ್ನ ಬ್ರೆಂಡನ್ ಮೆಕಲ್ಲಮ್ ಒಮ್ಮೆ ದಕ್ಷಿಣ ಆಫ್ರಿಕಾ ವಿರುದ್ಧ ಆಡುವಾಗ ಟಾಯ್ಲೆಟ್ನಲ್ಲಿ ಸ್ಮೋಕ್ ಮಾಡಿರುವುದನ್ನು ಒಪ್ಪಿಕೊಂಡಿದ್ದರು.
2019 ರಲ್ಲಿ ಇಂಗ್ಲೆಂಡ್ಗೆ ವಿಶ್ವಕಪ್ ಗೆದ್ದುಕೊಟ್ಟ ಬೆನ್ ಸ್ಟೋಕ್ಸ್ ಲಾರ್ಡ್ಸ್ನಲ್ಲಿ ಪೈನಲ್ ಪಂದ್ಯ ಆಡುವಾಗ ವಾಷ್ರೂಮಿನಲ್ಲಿ ವೇಪ್ ಮಾಡಿದ್ದಾಗಿ ಹೇಳಿದ್ದರು.
ಅದೇನೋ ಸರಿ; ಆದರೆ, ಈ ಮಹಾನ್ ಆಟಗಾರರು ನೆನಪಿಟ್ಟುಕೊಳ್ಳಬೇಕಾದ ಸಂಗತಿಯೇನೆಂದರೆ, ತಮ್ಮ ಲಕ್ಷಾಂತರ ಅಭಿಮಾನಿಗಳಿಗೆ ಅವರು ತಪ್ಪು ಸಂದೇಶವನ್ನು ರವಾನಿಸುತ್ತಿದ್ದಾರೆ.
Published On - 7:36 pm, Mon, 19 October 20