DC vs PBKS, IPL 2021 Match 11 Result: ಹುಟ್ಟುಹಬ್ಬಕ್ಕೂ ಸಿಗಲಿಲ್ಲ ಗೆಲುವಿನ ಉಡುಗೊರೆ; ಡೆಲ್ಲಿ ಬ್ಯಾಟಿಂಗ್​ಗೆ ಶರಣಾದ ರಾಹುಲ್ ಟೀಂ!

DC vs PBKS Result in Kannada: ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಟೂರ್ನಿಯ 11ನೇ ಪಂದ್ಯ ಮುಂಬೈನ ವಾಂಖೆಡೆಯಲ್ಲಿ ನಡೆಯಲಿದೆ. ಪಂದ್ಯದ ಲೈವ್ ಅಪ್ಡೇಟ್​ಗಳು ಇಲ್ಲಿ ಸಿಗಲಿದೆ.

DC vs PBKS, IPL 2021 Match 11 Result: ಹುಟ್ಟುಹಬ್ಬಕ್ಕೂ ಸಿಗಲಿಲ್ಲ ಗೆಲುವಿನ ಉಡುಗೊರೆ; ಡೆಲ್ಲಿ ಬ್ಯಾಟಿಂಗ್​ಗೆ ಶರಣಾದ ರಾಹುಲ್ ಟೀಂ!
ಕೆ ಎಲ್ ರಾಹುಲ್

ಮುಂಬೈ: ಪಂಜಾಬ್ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿಕೊಂಡಿದೆ. ಶಿಖರ್ ಧವನ್ 92(49), ಪೃಥ್ವಿ ಶಾ 32(17) ಹಾಗೂ ಸ್ಟಾಯ್ನಿಸ್ 27(13) ಬಿರುಸಿನ ಆಟಕ್ಕೆ ಪಂಜಾಬ್ ಬೌಲರ್​ಗಳು ಸುಸ್ತಾಗಿದ್ದಾರೆ. ಈ ಮೂಲಕ ಡೆಲ್ಲಿ ಟೂರ್ನಿಯಲ್ಲಿ 2ನೇ ಜಯ ಕಂಡಿದೆ. ಪಂಜಾಬ್ 2 ಸೋಲು ಕಾಣುವಂತಾಗಿದೆ.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 195 ರನ್ ದಾಖಲಿಸಿತ್ತು. ಡೆಲ್ಲಿ ಕ್ಯಾಪಿಟಲ್ಸ್​ಗೆ ಗೆಲ್ಲಲು 196 ರನ್ ಗುರಿ ನೀಡಿತ್ತು. ಪಂಜಾಬ್ ನಾಯಕ ಹಾಗೂ ಇಂದಿನ ಬರ್ತ್​ಡೇ ಬಾಯ್ ಕೆ.ಎಲ್. ರಾಹುಲ್ 61(51) ಜವಾಬ್ದಾರಿಯುತ ಆಟ ಆಡಿದ್ದರು. ಸ್ಫೋಟಕ ಆಟವಾಡಿದ ಮಯಾಂಕ್ ಅಗರ್​ವಾಲ್ 69(36) ರನ್ ನೀಡಿದ್ದರು. ಮಯಾಂಕ್- ಅಗರ್​ವಾಲ್ ಆರಂಭಿಕ ಜೊತೆಯಾಟ 122 ರನ್​ಗಳನ್ನು ಕಲೆಹಾಕಿತ್ತು.

ಡೆಲ್ಲಿ ಕ್ಯಾಪಿಟಲ್ಸ್ ಬೌಲರ್​ಗಳು ಸರಿಯಾಗಿ ದಂಡಿಸಿಕೊಂಡಿದ್ದರು. ಅಶ್ವಿನ್ ಹಾಗೂ ಅವೇಶ್ ಖಾನ್ ಹೊರತು ಪಡಿಸಿ ಉಳಿದ ಬೌಲರ್​ಗಳು 10ಕ್ಕೂ ಹೆಚ್ಚು ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದರು. ಆದರೆ, ಈ ಮೊತ್ತವನ್ನು ಭರ್ಜರಿಯಾಗಿ ಬೆನ್ನತ್ತಿದ ಡೆಲ್ಲಿ ತಂಡ ವಿಜಯಮಾಲೆ ಹಾಕಿಸಿಕೊಂಡಿದೆ.

LIVE Cricket Score & Updates

The liveblog has ended.
 • 18 Apr 2021 23:14 PM (IST)

  10 ಬಾಲ್ ಉಳಿದಿರುವಂತೆ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್

  ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 6 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿಕೊಂಡಿದೆ. ಬೃಹತ್ ಮೊತ್ತವನ್ನು ಬೆನ್ನತ್ತಿದ ಡೆಲ್ಲಿ ತಂಡ ಇನ್ನೂ 10 ಬಾಲ್ ಉಳಿದಿರುವಂತೆ, 6 ವಿಕೆಟ್ ಉಳಿಸಿಕೊಂಡು ಗೆಲುವು ಪಡೆದುಕೊಂಡಿದೆ.

 • 18 Apr 2021 23:12 PM (IST)

  ಡೆಲ್ಲಿ ಕ್ಯಾಪಿಟಲ್ಸ್ 188/4 (18 ಓವರ್)

  ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲ್ಲಲು 12 ಬಾಲ್​ಗೆ 8 ರನ್ ಬೇಕಿದೆ. ತಂಡದ ಪರವಾಗಿ ಸ್ಟಾಯ್ನಸ್ ಹಾಗೂ ಲಲಿತ್ ಬ್ಯಾಟ್ ಬೀಸುತ್ತಿದ್ದಾರೆ. ಬೃಹತ್ ಮೊತ್ತವನ್ನೂ ಸಲೀಸಾಗಿ ಬೆನ್ನತ್ತಿದ ಡೆಲ್ಲಿ ಗೆಲುವಿನ ಸನಿಹದಲ್ಲಿದೆ. ಪಂಜಾಬ್​ಗೆ ಸೋಲು ಬಹುತೇಕ ಖಚಿತವಾಗಿದೆ.

 • 18 Apr 2021 23:08 PM (IST)

  16 ಬಾಲ್​ಗೆ 17 ರನ್ ಬೇಕು

  ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ 16 ಬಾಲ್​ಗೆ 17 ರನ್ ಬೇಕಾಗಿದೆ. ತಂಡದ ಪರ ಲಲಿತ್ ಯಾದವ್ ಕ್ರೀಸ್​ಗೆ ಇಳಿದಿದ್ದಾರೆ. ಸ್ಟಾಯ್ನಸ್ 12 ಬಾಲ್​ಗೆ 23 ರನ್ ಬಾರಿಸಿ ಸ್ಫೋಟಕ ಆಟ ಆಡುತ್ತಿದ್ದಾರೆ.

 • 18 Apr 2021 23:06 PM (IST)

  ಡೆಲ್ಲಿ ನಾಯಕ ಪಂತ್ ಔಟ್

  img

  ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ 16 ಬಾಲ್​ಗೆ 15 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಜೈ ರಿಚರ್ಡ್​ಸನ್ ಬಾಲ್​ನ್ನು ದೀಪಕ್ ಹೂಡಾಗೆ ಕ್ಯಾಚ್ ನೀಡಿದ್ದಾರೆ.

 • 18 Apr 2021 22:57 PM (IST)

  24 ಬಾಲ್​ಗೆ 36 ರನ್ ಬೇಕು

  ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ 24 ಬಾಲ್​ಗೆ 36 ರನ್ ಬೇಕು. 16 ಓವರ್ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 160 ರನ್ ಗಳಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಆಟ ಇದೇ ರೀತಿ ಮುಂದುವರಿದರೆ ಗೆಲುವು ಖಚಿತವಾಗಿದೆ. ಪಂತ್ ಮತ್ತು ಸ್ಟಾಯ್ನಸ್ ಕ್ರೀಸ್​ನಲ್ಲಿದ್ದಾರೆ.

 • 18 Apr 2021 22:50 PM (IST)

  ಶತಕ ವಂಚಿತ ಧವನ್

  img

  ಭರ್ಜರಿ 92 (49) ಗಳಿಸಿದ್ದ ಶಿಖರ್ ಧವನ್ ಶತಕದ ಅಂಚಿನಲ್ಲಿ ಔಟ್ ಆಗಿದ್ದಾರೆ. ಮೆರೆಡಿತ್ ಬಾಲ್​ಗೆ ರಿವರ್ಸ್ ಸ್ವೀಪ್ ಶಾಟ್ ಹೊಡೆಯಲು ಮುಂದಾದ ಧವನ್ ಕ್ಲೀನ್ ಬೌಲ್ಡ್ ಆಗಿದ್ದಾರೆ. 15 ಓವರ್​ ಅಂತ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಸ್ಕೋರ್ 152/3 ಆಗಿದೆ. ನಾಯಕ ಪಂತ್ ಹಾಗೂ ಸ್ಟಾಯ್ನಿಸ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

 • 18 Apr 2021 22:41 PM (IST)

  ಬೌಂಡರಿ ಸುರಿಮಳೆ

  img

  ಪಂಜಾಬ್ ಬೌಲರ್​ಗಳ ಎಸೆತವನ್ನು ಅಟ್ಟಾಡಿಸಿ ಹೊಡೆಯುತ್ತಿರುವ ಶಿಖರ್ ಧವನ್ ಮೆರೆಡಿತ್ ಬಾಲ್​ಗೆ ಬೆನ್ನುಬೆನ್ನಿಗೆ ಫೋರ್ ಬಾರಿಸುತ್ತಿದ್ದಾರೆ. 47 ಬಾಲ್​ಗೆ 91 ರನ್ ಗಳಿಸಿ ಶತಕದ ಅಂಚಿನಲ್ಲಿದ್ದಾರೆ. 14 ಓವರ್ ಅಂತ್ಯಕ್ಕೆ ಡೆಲ್ಲಿ 2 ವಿಕೆಟ್ ಕಳೆದುಕೊಂಡು 143 ರನ್ ಕೂಡಿಸಿದೆ. ಗೆಲ್ಲಲು 36 ಬಾಲ್​ಗೆ 53 ರನ್ ಬೇಕಿದೆ.

 • 18 Apr 2021 22:38 PM (IST)

  ಡೆಲ್ಲಿ ಕ್ಯಾಪಿಟಲ್ಸ್ 125/2 (13 ಓವರ್)

  ಡೆಲ್ಲಿ ಕ್ಯಾಪಿಟಲ್ಸ್ 13 ಓವರ್​ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 125 ರನ್ ದಾಖಲಿಸಿದೆ. ತಂಡ ಗೆಲ್ಲಲು 42 ಬಾಲ್​ಗೆ 71 ರನ್ ಬೇಕಿದೆ. ರಿಷಭ್ ಪಂತ್ ಹಾಗೂ ಶಿಖರ್ ಧವನ್ ಬ್ಯಾಟಿಂಗ್​ನಲ್ಲಿದ್ದಾರೆ. ಶಿಖರ್ ಧವನ್ 43 ಬಾಲ್​ಗೆ 78 ರನ್ ಗಳಿಸಿ ಆಡುತ್ತಿದ್ದಾರೆ.

 • 18 Apr 2021 22:25 PM (IST)

  ಸ್ಮಿತ್ ವಿಕೆಟ್ ಪತನ

  img

  ಡೆಲ್ಲಿ ಕ್ಯಾಪಿಟಲ್ಸ್ ದಾಂಡಿಗ ಸ್ಟೀವ್ ಸ್ಮಿತ್ 12 ಬಾಲ್ 9 ರನ್ ಗಳಿಸಿ ಔಟ್ ಆಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಸ್ಕೋರ್ 11 ಓವರ್ ಅಂತ್ಯಕ್ಕೆ 107/2 ಆಗಿದೆ. ಶಿಖರ್ ಧವನ್ 64 (37) ಬ್ಯಾಟಿಂಗ್ ಮಾಡುತ್ತಿದ್ದಾರೆ. ತಂಡ ಗೆಲ್ಲಲು 54 ಬಾಲ್​ಗೆ 89 ರನ್ ಬೇಕಿದೆ.

 • 18 Apr 2021 22:17 PM (IST)

  ಶಿಖರ್ ಧವನ್ ಅರ್ಧಶತಕ

  ಡೆಲ್ಲಿ ಪರ ಶಿಖರ್ ಧವನ್ ಅರ್ಧಶತಕ ಪೂರೈಸಿದ್ದಾರೆ. 31 ಬಾಲ್​ಗೆ 8 ಬೌಂಡರಿ ಸಹಿತ 50 ರನ್ ದಾಖಲಿಸಿದ್ದಾರೆ. ತಂಡದ ಮೊತ್ತ 10 ಓವರ್​ಗೆ 99/1 ಆಗಿದೆ. ಡೆಲ್ಲಿ ಗೆಲುವಿಗೆ 60 ಬಾಲ್​ಗೆ 97 ರನ್ ಬೇಕಿದೆ.

 • 18 Apr 2021 22:11 PM (IST)

  ಡೆಲ್ಲಿ ಕ್ಯಾಪಿಟಲ್ಸ್ 75/1 (8 ಓವರ್)

  ಡೆಲ್ಲಿ ಕ್ಯಾಪಿಟಲ್ಸ್ 8 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 75 ರನ್ ದಾಖಲಿಸಿದೆ. ಶಿಖರ್ ಧವನ್ 38 ರನ್ ಗಳಿಸಿ ಕ್ರೀಸ್​ನಲ್ಲಿದ್ದಾರೆ.

 • 18 Apr 2021 22:05 PM (IST)

  ಡೆಲ್ಲಿ 7 ಓವರ್​ಗೆ 68/1

  ಡೆಲ್ಲಿ ಕ್ಯಾಪಿಟಲ್ಸ್ ತಂಡ 7 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 68 ರನ್ ಕಲೆಹಾಕಿದೆ. ಅದರಂತೆ ಗೆಲ್ಲಲು 78 ಬಾಲ್​ಗೆ 128 ರನ್ ಬೇಕಿದೆ. ಸ್ಮಿತ್ 4 (5) ಹಾಗೂ ಧವನ್ 32 (21) ಬ್ಯಾಟಿಂಗ್ ಮಾಡುತ್ತಿದ್ದಾರೆ.

 • 18 Apr 2021 21:59 PM (IST)

  ಡೆಲ್ಲಿ ಕ್ಯಾಪಿಟಲ್ಸ್ 62/1 (6 ಓವರ್)

  ಪವರ್​ಪ್ಲೇ ಅಂತ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡ 1 ವಿಕೆಟ್ ಕಳೆದುಕೊಂಡು 62 ರನ್ ಗಳಿಸಿದೆ. ಪೃಥ್ವಿ ಶಾ ಬಳಿಕ ಸ್ಟೀವ್ ಸ್ಮಿತ್ ಬ್ಯಾಟಿಂಗ್​ಗೆ ಇಳಿದಿದ್ದಾರೆ. ಶಿಖರ್ ಧವನ್ ಕ್ರೀಸ್​ನಲ್ಲಿದ್ದಾರೆ.

 • 18 Apr 2021 21:56 PM (IST)

  ಪೃಥ್ವಿ ಶಾ ಔಟ್

  img

  ಅರ್ಶ್​ದೀಪ್ ಬಾಲ್​ನ್ನು ಸಿಕ್ಸರ್​ಗೆ ಎತ್ತಿದ ಪೃಥ್ವಿ ಶಾ ಹೊಡೆತ ಪರಿಪೂರ್ಣಗೊಳಿಸುವಲ್ಲಿ ಎಡವಿದ್ದಾರೆ. ಗೈಲ್ ಕೈಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. 17 ಬಾಲ್​ಗೆ 2 ಸಿಕ್ಸರ್, 3 ಬೌಂಡರಿ ಸಹಿತ 32 ರನ್ ಪಡೆದು ನಿರ್ಗಮಿಸಿದ್ದಾರೆ.

 • 18 Apr 2021 21:52 PM (IST)

  ಶಿಖರ್- ಶಾ ಅರ್ಧಶತಕ ಜೊತೆಯಾಟ

  ಡೆಲ್ಲಿ ಕ್ಯಾಪಿಟಲ್ಸ್ ಪರ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಅರ್ಧಶತಕದ ಜೊತೆಯಾಟ ಆಡಿದ್ದಾರೆ. ಪಂಜಾಬ್ ಕಿಂಗ್ಸ್ 5 ಓವರ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 57 ರನ್ ಕಲೆಹಾಕಿದೆ. ಡೆಲ್ಲಿ ಗೆಲ್ಲಲು 90 ಬಾಲ್​ಗೆ 139 ರನ್ ಬೇಕಿದೆ.

 • 18 Apr 2021 21:48 PM (IST)

  ಡೆಲ್ಲಿ ಕ್ಯಾಪಿಟಲ್ಸ್ 43/0 (4 ಓವರ್)

  4 ಓವರ್​ಗಳ ಅಂತ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ವಿಕೆಟ್ ನಷ್ಟವಿಲ್ಲದೆ 43 ರನ್ ದಾಖಲಿಸಿದೆ. ತಂಡ ಗೆಲ್ಲಲು 153 ರನ್ ಬೇಕಾಗಿದೆ. ಪೃಥ್ವಿ ಶಾ ಹಾಗೂ ಶಿಖರ್ ಧವನ್ ರನ್ ಓಟ ನಿಲ್ಲಿಸಲು ಬೌಲರ್​ಗಳು ಯಶಸ್ವಿಯಾಗುತ್ತಿಲ್ಲ.

 • 18 Apr 2021 21:42 PM (IST)

  ಪೃಥ್ವಿ ಶಾ ಫೋರ್- ಸಿಕ್ಸರ್ ಆಟ

  img

  ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಪೃಥ್ವಿ ಶಾ ಇನ್ನಿಂಗ್ಸ್​ಗೆ ವೇಗದ ಆರಂಭ ನೀಡಿದ್ದಾರೆ. 2 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 9 ಬಾಲ್​ಗೆ 19 ರನ್ ಗಳಿಸಿದ್ದಾರೆ. 3 ಓವರ್ ಅಂತ್ಯಕ್ಕೆ ಡೆಲ್ಲಿ ತಂಡ ವಿಕೆಟ್ ನಷ್ಟವಿಲ್ಲದೆ 31 ರನ್ ದಾಖಲಿಸಿದೆ.

 • 18 Apr 2021 21:39 PM (IST)

  ಡೆಲ್ಲಿ ಕ್ಯಾಪಿಟಲ್ಸ್ 21/0 (2 ಓವರ್)

  2 ಓವರ್​ಗಳ ಅಂತ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ಕಳೆದುಕೊಳ್ಳದೆ 21 ರನ್ ಗಳಿಸಿದೆ. ವೇಗದ ಆರಂಭ ಪಡೆದುಕೊಂಡಿರುವ ಡೆಲ್ಲಿ ಟಾರ್ಗೆಟ್ ಬೆನ್ನತ್ತಿ ಆಟವಾಡುತ್ತಿದೆ. ಪಂಜಾಬ್ ಬೌಲರ್​ಗಳು ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ವಿಕೆಟ್ ಪಡೆಯಬೇಕಿದೆ.

 • 18 Apr 2021 21:33 PM (IST)

  ಡೆಲ್ಲಿ ಕ್ಯಾಪಿಟಲ್ಸ್ 10/0 (1 ಓವರ್)

  1 ಓವರ್ ಅಂತ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ನಷ್ಟವಿಲ್ಲದೆ 10 ರನ್ ಗಳಿಸಿದ್ದಾರೆ. ತಂಡದ ಪರ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

 • 18 Apr 2021 21:17 PM (IST)

  ಪಂಜಾಬ್ ಕಿಂಗ್ಸ್ 195/4 (20 ಓವರ್)

  ನಿಗದಿತ 20 ಓವರ್​ಗಳ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ ತಂಡ 4 ವಿಕೆಟ್ ಕಳೆದುಕೊಂಡು 195 ರನ್ ಕಲೆಹಾಕಿದೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್​ಗೆ ಗೆಲ್ಲಲು 196 ರನ್ ಗುರಿ ನೀಡಿದೆ.

 • 18 Apr 2021 21:09 PM (IST)

  ಪಂಜಾಬ್ ಕಿಂಗ್ಸ್ 179/3 (19 ಓವರ್); ಪೂರನ್ ಔಟ್

  img

  19 ಓವರ್​ಗಳ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ 3 ವಿಕೆಟ್ ಕಳೆದುಕೊಂಡು 179 ರನ್ ಕಲೆಹಾಕಿದ್ದಾರೆ. ಅವೇಶ್ ಖಾನ್ 3ನೇ ಎಸೆತದಲ್ಲಿ ಹೂಡಾ ಫ್ಲಾಟ್ ಸಿಕ್ಸರ್ ಸಿಡಿಸಿದ್ದಾರೆ. 5ನೇ ಎಸೆತಕ್ಕೆ ಮತ್ತೊಂದು ಸಿಕ್ಸ್ ಬಾರಿಸಲು ಹೊರಟ ಪೂರನ್ ರಬಾಡಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. ಪೂರನ್ ಬಳಿಕ ಶಾರುಖ್ ಖಾನ್ ಹಾಗೂ ಹೂಡಾ ಕ್ರೀಸ್ ಕಾಯ್ದುಕೊಂಡಿದ್ದಾರೆ.

 • 18 Apr 2021 20:59 PM (IST)

  ಪಂಜಾಬ್ ಕಿಂಗ್ಸ್ 162/3 (17 ಓವರ್)

  17 ಓವರ್​​ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡಿರುವ ಪಂಜಾಬ್ ಕಿಂಗ್ಸ್ 162 ರನ್ ಗಳಿಸಿದ್ದಾರೆ. ಎರಡು ವಿಕೆಟ್ ಕಳೆದುಕೊಂಡ ಬಳಿಕವೂ ರನ್ ಗತಿ ಉತ್ತಮವಾಗಿದೆ.

 • 18 Apr 2021 20:56 PM (IST)

  ಸಿಕ್ಸ್ ಸಿಡಿಸಿ ಔಟ್ ಆದ ಗೈಲ್

  ವೋಕ್ಸ್ ಬಾಲ್​ಗೆ ಸಿಕ್ಸ್ ಸಿಡಿಸಿದ ಕ್ರಿಸ್ ಗೈಲ್ ನಂತರದ ಬಾಲ್​ಗೆ ಔಟ್ ಆಗಿದ್ದಾರೆ. 9 ಬಾಲ್​ಗೆ 11 ರನ್ ಗಳಿಸಿ ರಿಪಲ್ ಪಟೇಲ್​ಗೆ ಕ್ಯಾಚ್ ಒಪ್ಪಿಸಿದ್ದಾರೆ. ದೀಪಕ್ ಹೂಡಾ 4 ಬಾಲ್​ಗೆ 10 ರನ್ ಗಳಿಸಿ ಆಡುತ್ತಿದ್ದಾರೆ. ಪೂರನ್ ಕ್ರೀಸ್​ಗೆ ಇಳಿದಿದ್ದಾರೆ.

 • 18 Apr 2021 20:51 PM (IST)

  ಕೆ.ಎಲ್. ರಾಹುಲ್ ಔಟ್

  img

  ಪಂಜಾಬ್ ಕಿಂಗ್ಸ್ ನಾಯಕ ಕೆ.ಎಲ್. ರಾಹುಲ್ ರಬಾಡ ಬಾಲ್​ಗೆ ಸ್ಟಾಯಿನಿಸ್​ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದ್ದಾರೆ. ಇಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿರುವ ರಾಹುಲ್ 51 ಬಾಲ್​ಗೆ 2 ಸಿಕ್ಸರ್, 7 ಬೌಂಡರಿ ಸಹಿತ 61 ರನ್ ಗಳಿಸಿದ್ದಾರೆ. ರಾಹುಲ್ ಬಳಿಕ ಈಗ ದೀಪಕ್ ಹೂಡಾ ಹಾಗೂ ಗೈಲ್ ಕ್ರೀಸ್​ನಲ್ಲಿದ್ದಾರೆ. ತಂಡದ ಮೊತ್ತ 16 ಓವರ್​ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 150 ರನ್ ಆಗಿದೆ.

 • 18 Apr 2021 20:47 PM (IST)

  ಪಂಜಾಬ್ ಕಿಂಗ್ಸ್ 140/1 (15 ಓವರ್)

  ಪಂಜಾಬ್ ಕಿಂಗ್ಸ್ 15 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 140 ರನ್ ದಾಖಲಿಸಿದೆ. ತಂಡದ ಪರ ನಾಯಕ ಕೆ.ಎಲ್. ರಾಹುಲ್ 50 ಬಾಲ್ 61 ಹಾಗೂ ಗೈಲ್ 6 ಬಾಲ್ 5 ಆಟವಾಡುತ್ತಿದ್ದಾರೆ.

 • 18 Apr 2021 20:38 PM (IST)

  ಕೆ.ಎಲ್. ರಾಹುಲ್ ಅರ್ಧಶತಕ

  ಬರ್ತ್​ಡೇ ಬಾಯ್ ಕ.ಎಲ್. ರಾಹುಲ್ ಅರ್ಧಶತಕ ದಾಖಲಿಸಿದ್ದಾರೆ. 45 ಬಾಲ್​ಗೆ 50 ರನ್ ದಾಖಲಿಸಿ ಆಡುತ್ತಿದ್ದಾರೆ. ಪಂಜಾಬ್ ಕಿಂಗ್ಸ್ 14 ಓವರ್ ಅಂತ್ಯಕ್ಕೆ 128 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದ್ದಾರೆ. ಮಯಾಂಕ್ ವಿಕೆಟ್ ಪತನದ ಬಳಿಕ ರನ್ ವೇಗ ಕೊಂಚ ತಗ್ಗಿದೆ.

 • 18 Apr 2021 20:32 PM (IST)

  ಮಯಾಂಕ್ ಅಗರ್​ವಾಲ್ ಔಟ್

  ಪಂಜಾಬ್ ಕಿಂಗ್ಸ್ ತಂಡದ ಮಯಾಂಕ್ ಅಗರ್​ವಾಲ್ 36 ಬಾಲ್​ಗೆ 69 ರನ್​ಗಳಿಸಿ ಔಟ್ ಆಗಿದ್ದಾರೆ. ಮೆರಿವಾಲಾ ಬಾಲ್​ನ್ನು ಶಿಖರ್ ಧವನ್ ಕ್ಯಾಚ್ ಹಿಡಿದಿದ್ದಾರೆ. ಈ ಮೂಲಕ ಪಂಜಾಬ್ ಮೊದಲ ವಿಕೆಟ್ ಪತನವಾಗಿದೆ. ಪಂಜಾಬ್ ಕಿಂಗ್ಸ್ 13 ಓವರ್​ಗಳ ಅಂತ್ಯಕ್ಕೆ 124 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದ್ದಾರೆ. ಕ್ರಿಸ್ ಗೈಲ್ ಮತ್ತು ಕೆ.ಎಲ್. ರಾಹುಲ್ ಬ್ಯಾಟಿಂಗ್​ನಲ್ಲಿದ್ದಾರೆ.

 • 18 Apr 2021 20:27 PM (IST)

  ಪಂಜಾಬ್ ಕಿಂಗ್ಸ್ 120/0 (12 ಓವರ್)

  ಪಂಜಾಬ್ ಕಿಂಗ್ಸ್ ತಂಡ 12 ಓವರ್​ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 120 ರನ್ ಕಲೆಹಾಕಿದೆ. ತಂಡದ ಪರ ಮಯಾಂಕ್ ಅಗರ್​ವಾಲ್ 33 ಬಾಲ್​ಗೆ 68 ಹಾಗೂ ರಾಹುಲ್ 40 ಬಾಲ್​ಗೆ 46 ರನ್ ಗಳಿಸಿದ್ದಾರೆ. ಪ್ರತೀ ಓವರ್​ಗೆ 10 ರನ್ ಸರಾಸರಿಯಲ್ಲಿ ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

 • 18 Apr 2021 20:21 PM (IST)

  ಮಯಾಂಕ್-ರಾಹುಲ್ 100 ರನ್ ಜೊತೆಯಾಟ

  img

  ಮಯಾಂಕ್ ಹಾಗೂ ಕೆ.ಎಲ್. ರಾಹುಲ್ 100 ರನ್ ಜೊತೆಯಾಟ ನೀಡಿದ್ದಾರೆ. ರಬಾಡ ಓವರ್​ಗೆ ಮೊದಲೆರಡು ಬಾಲ್​ನಲ್ಲಿ ಸಿಕ್ಸರ್ ಬಾರಿಸಿ ತಂಡವನ್ನು 100 ರನ್ ಮುಟ್ಟಿಸಿದ್ದಾರೆ. 11 ಓವರ್​ಗಳ ಅಂತ್ಯಕ್ಕೆ ಪಂಜಾಬ್ ಮೊತ್ತ 114/0 ಆಗಿದೆ.

 • 18 Apr 2021 20:19 PM (IST)

  ಪಂಜಾಬ್ ಕಿಂಗ್ಸ್ 94/0 (10 ಓವರ್)

  ಪಂಜಾಬ್ ಕಿಂಗ್ಸ್ 10 ಓವರ್​ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 94 ರನ್ ಕಲೆಹಾಕಿದೆ. ತಂಡದ ಪರ ಮಯಾಂಕ್ ಅಗರ್​ವಾಲ್ ಅರ್ಧಶತಕ ಪೂರೈಸಿದ್ದಾರೆ. ಅವರು 27 ಬಾಲ್​ಗೆ 53 ರನ್ ದಾಖಲಿಸಿದ್ದಾರೆ. ರಾಹುಲ್ 35 ರನ್ ಬಾರಿಸಿ ಆಟವಾಡುತ್ತಿದ್ದಾರೆ.

 • 18 Apr 2021 20:11 PM (IST)

  ಪಂಜಾಬ್ ಕಿಂಗ್ಸ್ 87/0 (9 ಓವರ್)

  9 ಓವರ್​ಗಳ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ ತಂಡ ವಿಕೆಟ್ ನಷ್ಟವಿಲ್ಲದೆ 87 ರನ್ ಬಾರಿಸಿದೆ. ತಂಡದ ಪರ ಮಯಾಂಕ್ 46 ರನ್ ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿದ್ದಾರೆ. ಡೆಲ್ಲಿ ಬೌಲರ್​ಗಳು ಯಾವುದೇ ವಿಕೆಟ್ ಪಡೆಯಲು ಸಫಲವಾಗಿಲ್ಲ. ಹೇರಳವಾಗಿ ರನ್ ಬಿಟ್ಟುಕೊಟ್ಟು ದುಬಾರಿ ಎನಿಸಿದ್ದಾರೆ.

 • 18 Apr 2021 20:09 PM (IST)

  ಮಯಾಂಕ್ ಸಿಕ್ಸರ್

  img

  ರವಿಚಂದ್ರನ್ ಅಶ್ವಿನ್ ಬಾಲ್​ಗೆ ಮಯಾಂಕ್ ಅಗರ್​ವಾಲ್ ಸಿಕ್ಸರ್ ಬಾರಿಸಿದ್ದಾರೆ. ವೇಗದ ಆಟಕ್ಕೆ ಮುಂದಾಗಿರುವ ಮಯಾಂಕ್ 40 (19) ಹಾಗೂ ರಾಹುಲ್ 34 (32) ತಂಡದ ಮೊತ್ತ 8.3 ಓವರ್​ಗೆ 84/0 ಆಗುವಂತೆ ಆಡಿದ್ದಾರೆ.

 • 18 Apr 2021 20:04 PM (IST)

  ಪಂಜಾಬ್ ಕಿಂಗ್ಸ್ 63/0 (7 ಓವರ್)

  ಪಂಜಾಬ್ ಕಿಂಗ್ಸ್ ತಂಡ 7 ಓವರ್ ಅಂತ್ಯಕ್ಕೆ 63 ರನ್ ಗಳಿಸಿದ್ದಾರೆ. ಯಾವುದೇ ವಿಕೆಟ್ ಕಳೆದುಕೊಳ್ಳದೆ ಉತ್ತಮ ಬ್ಯಾಟಿಂಗ್ ತೋರುತ್ತಿದ್ದಾರೆ. ರಾಹುಲ್ ಹಾಗೂ ಮಯಾಂಕ್ ಅಬ್ಬರ ತಡೆಯಲು ಡೆಲ್ಲಿ ಬೌಲರ್​ಗಳು ಶೀಘ್ರ ಒಂದೆರಡು ವಿಕೆಟ್ ಕಬಳಿಸಬೇಕಾಗಿದೆ.

 • 18 Apr 2021 19:52 PM (IST)

  ಅಬ್ಬರ ಶುರು ಮಾಡಿದ ರಾಹುಲ್- ಮಾಯಾಂಕ್

  ಆರಂಭಿಕರಾಗಿ ಕಣಕ್ಕಿಳಿದಿರುವ ಮಾಯಾಂಕ್ ಹಾಗೂ ರಾಹುಲ್ ಅಬ್ಬರದ ಬ್ಯಾಟಿಂಗ್ ಆರಂಭಿಸಿದ್ದಾರೆ. ಈ ಜೋಡಿ ಮುರಿಯದ ವಿಕೆಟ್​ಗೆ 4 ಓವರ್ ಎದುರಿಸಿ 44 ರನ್ ಗಳಿಸಿದ್ದಾರೆ. ಮಾಯಾಂಕ್ 29 ರನ್ ಗಳಿಸಿದ್ದರೆ, ರಾಹುಲ್ 13 ರನ್ ಗಳಿಸಿ ಆಡುತ್ತಿದ್ದಾರೆ.

 • 18 Apr 2021 19:41 PM (IST)

  ಮಾಯಾಂಕ್ ಸಿಕ್ಸರ್

  img

  2ನೇ ಓವರ್​ನ 3ನೇ ಎಸೆತವನ್ನು ನೋ ಬಾಲ್ ಎಸೆದ ಡೆಲ್ಲಿ ತಂಡದ ಮೆರಿವೆಲ್ಲ ಅದಕ್ಕೆ ಸರಿಯಾದ ದಂಡನೆ ಪಡೆದಿದ್ದಾರೆ. ನಂತರದ ಎಸೆತವನ್ನು ಎದುರಿಸಿದ ಮಾಯಾಂಕ್ ಮೆರಿವೆಲ್ಲಾ ಅವರ ಫ್ರೀ ಹಿಟ್ ಎಸೆತವನ್ನು ಸರಳ ರೇಖೆ ಎಳೆದಂತೆ ಸೀದಾ ಸಿಕ್ಸರ್​ಗೆ ಅಟ್ಟಿದರು. ಮಾಯಾಂಕ್ ಮೂಲಕ ತಂಡಕ್ಕೆ ಮೊದಲ ಸಿಕ್ಸರ್​ ದಾಖಲಾಯಿತು. 2 ಓವರ್ ಮುಕ್ತಾಯಕ್ಕೆ ಪಂಜಾಬ್ 25 ರನ್ ಗಳಿಸಿದೆ.

 • 18 Apr 2021 19:37 PM (IST)

  ರಾಹುಲ್ ಬೌಂಡರಿ

  img

  ಪಂಜಾಬ್​ ಪರ ಬ್ಯಾಟಿಂಗ್ ಆರಂಭಿಸಿರುವ ಕನ್ನಡಿಗರಾದ ರಾಹುಲ್ ಹಾಗೂ ಮಾಯಾಂಕ್ ಉತ್ತಮ ಆರಂಭ ಪಡೆದಿದ್ದಾರೆ. ಮೊದಲ ಓವರ್​ನಲ್ಲಿ ಒಂದು ಬೌಂಡರಿ ಇಲ್ಲದೆ ಕೇವಲ 5 ರನ್ ಗಳಿಸಿದ ಈ ಜೋಡಿ 2ನೇ ಓವರ್​ನ ಮೊದಲ ಎಸೆತವನ್ನು ಎದುರಿಸಿದ ರಾಹುಲ್​ ಸೀದಾ ಬೌಂಡರಿಗೆ ಅಟ್ಟಿದ್ದಾರೆ.

 • 18 Apr 2021 19:19 PM (IST)

  ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ಕೆ

  ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಬೌಲಿಂಗ್ ಆಯ್ದುಕೊಂಡಿದೆ. ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಮಾಡಲಿದೆ. ಮುಂಬೈ ವಾಂಖೆಡೆಯಲ್ಲಿ 7.30ಕ್ಕೆ ಪಂದ್ಯ ಆರಂಭವಾಗಲಿದೆ.

 • 18 Apr 2021 19:03 PM (IST)

  ಪಂಜಾಬ್ ಕಿಂಗ್ಸ್ ತಯಾರಿ

  ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ಮಾತುಕತೆಯಲ್ಲಿ..

Published On - 11:14 pm, Sun, 18 April 21

Click on your DTH Provider to Add TV9 Kannada