IPL 2021 RR vs CSK Live Streaming: ಪಂದ್ಯ ಆರಂಭವಾಗುವ ಸಮಯ, ಲೈವ್ ಸ್ಟ್ರೀಮಿಂಗ್, ಯಾವ ಚಾನೆಲ್ನಲ್ಲಿ ವೀಕ್ಷಣೆ, ಇಲ್ಲಿದೆ ಮಾಹಿತಿ
IPL 2021 RR vs CSK live streaming: ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2021 ರ ಪಂದ್ಯ 12 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಲಿದೆ ಮತ್ತು ಉಭಯ ತಂಡಗಳು ಗೆಲುವಿನ ಓಟವನ್ನು ಮುಂದುವರಿಸಲು ಮುಂದಾಗಿವೆ.
ಐಪಿಎಲ್ 2021 ರ ಪಂದ್ಯ 12 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಲಿದೆ. ಉಭಯ ತಂಡಗಳು ಗೆಲುವಿನ ನಗೆ ಬೀರಲು ಕಾತರರಾಗಿವೆ. ಎಂಎಸ್ ಧೋನಿ ನೇತೃತ್ವದ ಸಿಎಸ್‌ಕೆ ತಂಡವು ದೆಹಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧ ಸೋಲಿನೊಂದಿಗೆ ಈ ಸರಣಿಯನ್ನು ಪ್ರಾರಂಭಿಸಿತು. ಆದರೆ ನಂತರ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧದ ಪಂದ್ಯದಲ್ಲಿ ಜಯವನ್ನು ದಾಖಲಿಸುವ ಮೂಲಕ ಮತ್ತೆ ಗೆಲುವಿನ ಲಯಕ್ಕೆ ಮರಳಿದ್ದು ಆ ಗೆಲುವನ್ನು ಚೆನ್ನೈ ಬೌಲರ್‌ಗಳು ದೀಪಕ್ ಚಹರ್ ನೇತೃತ್ವದಲ್ಲಿ ಅದ್ಭುತವಾಗಿ ಸಾಧಿಸಿದ್ದಾರೆ. ಆದರೂ ಪ್ರಸ್ತುತ ರಾಜಸ್ಥಾನ್ ರಾಯಲ್ಸ್‌ನಂತೆ ಚೆನ್ನೈ ಕೂಡ ತಮ್ಮ ಎರಡನೇ ಗೆಲುವನ್ನು ಹುಡುಕುತ್ತಿದ್ದು, ತಮ್ಮ ಬೌಲರ್‌ಗಳ ಮೇಲೆ ತುಸು ಹೆಚ್ಚಿನದೇ ನಿರೀಕ್ಷೆಯನ್ನು ಎರಡೂ ತಂಡಗಳು ಇಟ್ಟುಕೊಂಡಿವೆ.
ಡೆಲ್ಲಿ ವಿರುದ್ಧ ಕೊನೆಯ ಓವರ್ನಲ್ಲಿ ರೋಚಕ ಗೆಲುವು ದಾಖಲಿಸಿದ ರಾಜಸ್ಥಾನ್ ಈ ವರ್ಷದ ಐಪಿಎಲ್‌ನಲ್ಲಿ ಛಾಪು ಮೂಡಿಸಿದೆ. ಆ ಮೊದಲ ಗೆಲುವಿನ ಹುರುಪಿನಲ್ಲೇ ರಾಜಸ್ಥಾನ್ ತಂಡ ಈಗ ಚೆನ್ನೈ ಸೂಪರ್ ಕಿಂಗ್ಸ್ ಮೇಲೆ ತಮ್ಮ ಸವಾರಿಯನ್ನು ಮುಂದುವರೆಸಲು ಹಾತೊರಿಯುತ್ತಿದೆ. ಈ ಮೂಲಕ ಪಂದ್ಯಾವಳಿಯ ಆರಂಭದಲ್ಲಿ ಬ್ಯಾಕ್-ಟು-ಬ್ಯಾಕ್ ಗೆಲುವುಗಳನ್ನು ದಾಖಲಿಸಲು ರಾಜಸ್ಥಾನ ಹವಣಿಸುತ್ತಿದೆ.
ಸಿಎಸ್‌ಕೆ ಮತ್ತು ಆರ್‌ಆರ್ ನಡುವಿನ ಐಪಿಎಲ್‌ನ 12 ನೇ ಪಂದ್ಯ ಯಾವಾಗ ನಡೆಯಲಿದೆ? ಸಿಎಸ್‌ಕೆ ಮತ್ತು ಆರ್‌ಆರ್ ನಡುವಿನ ಐಪಿಎಲ್‌ನ 12 ನೇ ಪಂದ್ಯವು 2021 ಏಪ್ರಿಲ್ 19 ರಂದು ನಡೆಯಲಿದೆ.
ಪಂದ್ಯದ ಸ್ಥಳ ಯಾವುದು? ಈ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪಂದ್ಯವು ಯಾವ ಸಮಯದಲ್ಲಿ ಪ್ರಾರಂಭವಾಗುತ್ತದೆ? ಸಂಜೆ 7.30 ಕ್ಕೆ ಪಂದ್ಯ ಆರಂಭವಾಗಲಿದೆ. ಟಾಸ್ ಸಂಜೆ 7 ಗಂಟೆಗೆ ನಡೆಯಲಿದೆ.
ಯಾವ ಟಿವಿ ಚಾನೆಲ್‌ಗಳು ಪಂದ್ಯವನ್ನು ಪ್ರಸಾರ ಮಾಡುತ್ತವೆ? ಪಂದ್ಯವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿಯೂ ಲಭ್ಯವಿರುತ್ತದೆ.
ಸಂಭವನೀಯ ಚೆನ್ನೈ ಸೂಪರ್ ಕಿಂಗ್ಸ್ ತಂಡ ಋತುರಾಜ್ ಗಾಯಕ್ವಾಡ್, ಫಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ಎಂ.ಎಸ್.ಧೋನಿ (ನಾಯಕ), ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ, ಸ್ಯಾಮ್ ಕುರನ್, ಶಾರ್ದುಲ್ ಠಾಕೂರ್, ದೀಪಕ್ ಚಹರ್
ಬೆಂಚ್: ರಾಬಿನ್ ಉತ್ತಪ್ಪ, ಇಮ್ರಾನ್ ತಾಹಿರ್, ಕೆಎಂ ಆಸಿಫ್, ಭಗತ್ ವರ್ಮಾ, ಸಿ ಹರಿ ನಿಶಾಂತ್, ನಾರಾಯಣ್ ಜಗದೀಸನ್, ಚೇತೇಶ್ವರ ಪೂಜಾರ, ಹರಿಶಂಕರ್ ರೆಡ್ಡಿ, ಸಾಯಿ ಕಿಶೋರ್, ಮಿಚೆಲ್ ಸ್ಯಾಂಟ್ನರ್, ಕರ್ನ್ ಶರ್ಮಾ
ರಾಜಸ್ಥಾನ್ ರಾಯಲ್ಸ್ ಜೋಸ್ ಬಟ್ಲರ್, ಮನನ್ ವೊಹ್ರಾ, ಸಂಜು ಸ್ಯಾಮ್ಸನ್ (ನಾಯಕ), ಶಿವಂ ದುಬೆ, ಡೇವಿಡ್ ಮಿಲ್ಲರ್, ರಿಯಾನ್ ಪರಾಗ್, ಕ್ರಿಸ್ ಮೋರಿಸ್, ರಾಹುಲ್ ತಿವಾಟಿಯಾ, ಜಯದೇವ್ ಉನಾದ್ಕಟ್, ಚೇತನ್ ಸಕರಿಯಾ, ಮುಸ್ತಾಫಿಜುರ್ ರಹಮಾನ್
ಬೆಂಚ್: ಲಿಯಾಮ್ ಲಿವಿಂಗ್‌ಸ್ಟೋನ್, ಯಶಸ್ವಿ ಜೈಸ್ವಾಲ್, ಮಹಿಪಾಲ್ ಲೋಮರ್, ಶ್ರೇಯಾಸ್ ಗೋಪಾಲ್, ಆಂಡ್ರ್ಯೂ ಟೈ, ಅನುಜ್ ರಾವತ್, ಆಕಾಶ್ ಸಿಂಗ್, ಜೋಫ್ರಾ ಆರ್ಚರ್, ಕೆ.ಸಿ.ಕರಿಯಪ್ಪ, ಮಾಯಾಂಕ್ ಮಾರ್ಕಂಡೆ, ಕುಲದೀಪ್ ಯಾದವ್, ಕಾರ್ತಿಕ್ ತ್ಯಾಗಿ