ಮುಂಬೈ: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿಕೊಂಡಿದೆ. ಶಿಖರ್ ಧವನ್ 92(49), ಪೃಥ್ವಿ ಶಾ 32(17) ಹಾಗೂ ಸ್ಟಾಯ್ನಿಸ್ 27(13) ಬಿರುಸಿನ ಆಟಕ್ಕೆ ಪಂಜಾಬ್ ಬೌಲರ್ಗಳು ಸುಸ್ತಾಗಿದ್ದಾರೆ. ಈ ಮೂಲಕ ಡೆಲ್ಲಿ ಟೂರ್ನಿಯಲ್ಲಿ 2ನೇ ಜಯ ಕಂಡಿದೆ. ಪಂಜಾಬ್ 2 ಸೋಲು ಕಾಣುವಂತಾಗಿದೆ.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 195 ರನ್ ದಾಖಲಿಸಿತ್ತು. ಡೆಲ್ಲಿ ಕ್ಯಾಪಿಟಲ್ಸ್ಗೆ ಗೆಲ್ಲಲು 196 ರನ್ ಗುರಿ ನೀಡಿತ್ತು. ಪಂಜಾಬ್ ನಾಯಕ ಹಾಗೂ ಇಂದಿನ ಬರ್ತ್ಡೇ ಬಾಯ್ ಕೆ.ಎಲ್. ರಾಹುಲ್ 61(51) ಜವಾಬ್ದಾರಿಯುತ ಆಟ ಆಡಿದ್ದರು. ಸ್ಫೋಟಕ ಆಟವಾಡಿದ ಮಯಾಂಕ್ ಅಗರ್ವಾಲ್ 69(36) ರನ್ ನೀಡಿದ್ದರು. ಮಯಾಂಕ್- ಅಗರ್ವಾಲ್ ಆರಂಭಿಕ ಜೊತೆಯಾಟ 122 ರನ್ಗಳನ್ನು ಕಲೆಹಾಕಿತ್ತು.
ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ಗಳು ಸರಿಯಾಗಿ ದಂಡಿಸಿಕೊಂಡಿದ್ದರು. ಅಶ್ವಿನ್ ಹಾಗೂ ಅವೇಶ್ ಖಾನ್ ಹೊರತು ಪಡಿಸಿ ಉಳಿದ ಬೌಲರ್ಗಳು 10ಕ್ಕೂ ಹೆಚ್ಚು ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದರು. ಆದರೆ, ಈ ಮೊತ್ತವನ್ನು ಭರ್ಜರಿಯಾಗಿ ಬೆನ್ನತ್ತಿದ ಡೆಲ್ಲಿ ತಂಡ ವಿಜಯಮಾಲೆ ಹಾಕಿಸಿಕೊಂಡಿದೆ.
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 6 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿಕೊಂಡಿದೆ. ಬೃಹತ್ ಮೊತ್ತವನ್ನು ಬೆನ್ನತ್ತಿದ ಡೆಲ್ಲಿ ತಂಡ ಇನ್ನೂ 10 ಬಾಲ್ ಉಳಿದಿರುವಂತೆ, 6 ವಿಕೆಟ್ ಉಳಿಸಿಕೊಂಡು ಗೆಲುವು ಪಡೆದುಕೊಂಡಿದೆ.
Match 11. It's all over! Delhi Capitals won by 6 wickets https://t.co/LYbGVgrfCn #DCvPBKS #VIVOIPL #IPL2021
— IndianPremierLeague (@IPL) April 18, 2021
ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲ್ಲಲು 12 ಬಾಲ್ಗೆ 8 ರನ್ ಬೇಕಿದೆ. ತಂಡದ ಪರವಾಗಿ ಸ್ಟಾಯ್ನಸ್ ಹಾಗೂ ಲಲಿತ್ ಬ್ಯಾಟ್ ಬೀಸುತ್ತಿದ್ದಾರೆ. ಬೃಹತ್ ಮೊತ್ತವನ್ನೂ ಸಲೀಸಾಗಿ ಬೆನ್ನತ್ತಿದ ಡೆಲ್ಲಿ ಗೆಲುವಿನ ಸನಿಹದಲ್ಲಿದೆ. ಪಂಜಾಬ್ಗೆ ಸೋಲು ಬಹುತೇಕ ಖಚಿತವಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ 16 ಬಾಲ್ಗೆ 17 ರನ್ ಬೇಕಾಗಿದೆ. ತಂಡದ ಪರ ಲಲಿತ್ ಯಾದವ್ ಕ್ರೀಸ್ಗೆ ಇಳಿದಿದ್ದಾರೆ. ಸ್ಟಾಯ್ನಸ್ 12 ಬಾಲ್ಗೆ 23 ರನ್ ಬಾರಿಸಿ ಸ್ಫೋಟಕ ಆಟ ಆಡುತ್ತಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ 16 ಬಾಲ್ಗೆ 15 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಜೈ ರಿಚರ್ಡ್ಸನ್ ಬಾಲ್ನ್ನು ದೀಪಕ್ ಹೂಡಾಗೆ ಕ್ಯಾಚ್ ನೀಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ 24 ಬಾಲ್ಗೆ 36 ರನ್ ಬೇಕು. 16 ಓವರ್ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 160 ರನ್ ಗಳಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಆಟ ಇದೇ ರೀತಿ ಮುಂದುವರಿದರೆ ಗೆಲುವು ಖಚಿತವಾಗಿದೆ. ಪಂತ್ ಮತ್ತು ಸ್ಟಾಯ್ನಸ್ ಕ್ರೀಸ್ನಲ್ಲಿದ್ದಾರೆ.
ಭರ್ಜರಿ 92 (49) ಗಳಿಸಿದ್ದ ಶಿಖರ್ ಧವನ್ ಶತಕದ ಅಂಚಿನಲ್ಲಿ ಔಟ್ ಆಗಿದ್ದಾರೆ. ಮೆರೆಡಿತ್ ಬಾಲ್ಗೆ ರಿವರ್ಸ್ ಸ್ವೀಪ್ ಶಾಟ್ ಹೊಡೆಯಲು ಮುಂದಾದ ಧವನ್ ಕ್ಲೀನ್ ಬೌಲ್ಡ್ ಆಗಿದ್ದಾರೆ. 15 ಓವರ್ ಅಂತ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಸ್ಕೋರ್ 152/3 ಆಗಿದೆ. ನಾಯಕ ಪಂತ್ ಹಾಗೂ ಸ್ಟಾಯ್ನಿಸ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
Bowled 'em!
Jhye Richardson cleans Dhawan up who departs for a well-made 92 ?#DC – 152/3 (14.5)#SaddaPunjab #IPL2021 #PunjabKings #DCvPBKS
— Punjab Kings (@PunjabKingsIPL) April 18, 2021
ಪಂಜಾಬ್ ಬೌಲರ್ಗಳ ಎಸೆತವನ್ನು ಅಟ್ಟಾಡಿಸಿ ಹೊಡೆಯುತ್ತಿರುವ ಶಿಖರ್ ಧವನ್ ಮೆರೆಡಿತ್ ಬಾಲ್ಗೆ ಬೆನ್ನುಬೆನ್ನಿಗೆ ಫೋರ್ ಬಾರಿಸುತ್ತಿದ್ದಾರೆ. 47 ಬಾಲ್ಗೆ 91 ರನ್ ಗಳಿಸಿ ಶತಕದ ಅಂಚಿನಲ್ಲಿದ್ದಾರೆ. 14 ಓವರ್ ಅಂತ್ಯಕ್ಕೆ ಡೆಲ್ಲಿ 2 ವಿಕೆಟ್ ಕಳೆದುಕೊಂಡು 143 ರನ್ ಕೂಡಿಸಿದೆ. ಗೆಲ್ಲಲು 36 ಬಾಲ್ಗೆ 53 ರನ್ ಬೇಕಿದೆ.
ಡೆಲ್ಲಿ ಕ್ಯಾಪಿಟಲ್ಸ್ 13 ಓವರ್ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 125 ರನ್ ದಾಖಲಿಸಿದೆ. ತಂಡ ಗೆಲ್ಲಲು 42 ಬಾಲ್ಗೆ 71 ರನ್ ಬೇಕಿದೆ. ರಿಷಭ್ ಪಂತ್ ಹಾಗೂ ಶಿಖರ್ ಧವನ್ ಬ್ಯಾಟಿಂಗ್ನಲ್ಲಿದ್ದಾರೆ. ಶಿಖರ್ ಧವನ್ 43 ಬಾಲ್ಗೆ 78 ರನ್ ಗಳಿಸಿ ಆಡುತ್ತಿದ್ದಾರೆ.
When it comes to the boundary-hitting business, Gabbar knows how to….?#YehHaiNayiDilli #IPL2021 #DCvPBKS pic.twitter.com/x3LYOdToEK
— Delhi Capitals (@DelhiCapitals) April 18, 2021
ಡೆಲ್ಲಿ ಕ್ಯಾಪಿಟಲ್ಸ್ ದಾಂಡಿಗ ಸ್ಟೀವ್ ಸ್ಮಿತ್ 12 ಬಾಲ್ 9 ರನ್ ಗಳಿಸಿ ಔಟ್ ಆಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಸ್ಕೋರ್ 11 ಓವರ್ ಅಂತ್ಯಕ್ಕೆ 107/2 ಆಗಿದೆ. ಶಿಖರ್ ಧವನ್ 64 (37) ಬ್ಯಾಟಿಂಗ್ ಮಾಡುತ್ತಿದ್ದಾರೆ. ತಂಡ ಗೆಲ್ಲಲು 54 ಬಾಲ್ಗೆ 89 ರನ್ ಬೇಕಿದೆ.
ಡೆಲ್ಲಿ ಪರ ಶಿಖರ್ ಧವನ್ ಅರ್ಧಶತಕ ಪೂರೈಸಿದ್ದಾರೆ. 31 ಬಾಲ್ಗೆ 8 ಬೌಂಡರಿ ಸಹಿತ 50 ರನ್ ದಾಖಲಿಸಿದ್ದಾರೆ. ತಂಡದ ಮೊತ್ತ 10 ಓವರ್ಗೆ 99/1 ಆಗಿದೆ. ಡೆಲ್ಲಿ ಗೆಲುವಿಗೆ 60 ಬಾಲ್ಗೆ 97 ರನ್ ಬೇಕಿದೆ.
Shikhar Dhawan gets to his FIFTY in 31 deliveries.
Live – https://t.co/wbefi7u3wk #DCvPBKS #VIVOIPL pic.twitter.com/PQVxGUTI9F
— IndianPremierLeague (@IPL) April 18, 2021
ಡೆಲ್ಲಿ ಕ್ಯಾಪಿಟಲ್ಸ್ 8 ಓವರ್ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 75 ರನ್ ದಾಖಲಿಸಿದೆ. ಶಿಖರ್ ಧವನ್ 38 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ 7 ಓವರ್ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 68 ರನ್ ಕಲೆಹಾಕಿದೆ. ಅದರಂತೆ ಗೆಲ್ಲಲು 78 ಬಾಲ್ಗೆ 128 ರನ್ ಬೇಕಿದೆ. ಸ್ಮಿತ್ 4 (5) ಹಾಗೂ ಧವನ್ 32 (21) ಬ್ಯಾಟಿಂಗ್ ಮಾಡುತ್ತಿದ್ದಾರೆ.
ಪವರ್ಪ್ಲೇ ಅಂತ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡ 1 ವಿಕೆಟ್ ಕಳೆದುಕೊಂಡು 62 ರನ್ ಗಳಿಸಿದೆ. ಪೃಥ್ವಿ ಶಾ ಬಳಿಕ ಸ್ಟೀವ್ ಸ್ಮಿತ್ ಬ್ಯಾಟಿಂಗ್ಗೆ ಇಳಿದಿದ್ದಾರೆ. ಶಿಖರ್ ಧವನ್ ಕ್ರೀಸ್ನಲ್ಲಿದ್ದಾರೆ.
Just 5 and a wicket off the final over of PP! ?
Arshdeep Paaji, boht vadhiya ?#SaddaPunjab #IPL2021 #PunjabKings #DCvPBKS
— Punjab Kings (@PunjabKingsIPL) April 18, 2021
ಅರ್ಶ್ದೀಪ್ ಬಾಲ್ನ್ನು ಸಿಕ್ಸರ್ಗೆ ಎತ್ತಿದ ಪೃಥ್ವಿ ಶಾ ಹೊಡೆತ ಪರಿಪೂರ್ಣಗೊಳಿಸುವಲ್ಲಿ ಎಡವಿದ್ದಾರೆ. ಗೈಲ್ ಕೈಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. 17 ಬಾಲ್ಗೆ 2 ಸಿಕ್ಸರ್, 3 ಬೌಂಡರಿ ಸಹಿತ 32 ರನ್ ಪಡೆದು ನಿರ್ಗಮಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಪರ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಅರ್ಧಶತಕದ ಜೊತೆಯಾಟ ಆಡಿದ್ದಾರೆ. ಪಂಜಾಬ್ ಕಿಂಗ್ಸ್ 5 ಓವರ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 57 ರನ್ ಕಲೆಹಾಕಿದೆ. ಡೆಲ್ಲಿ ಗೆಲ್ಲಲು 90 ಬಾಲ್ಗೆ 139 ರನ್ ಬೇಕಿದೆ.
4 ಓವರ್ಗಳ ಅಂತ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ವಿಕೆಟ್ ನಷ್ಟವಿಲ್ಲದೆ 43 ರನ್ ದಾಖಲಿಸಿದೆ. ತಂಡ ಗೆಲ್ಲಲು 153 ರನ್ ಬೇಕಾಗಿದೆ. ಪೃಥ್ವಿ ಶಾ ಹಾಗೂ ಶಿಖರ್ ಧವನ್ ರನ್ ಓಟ ನಿಲ್ಲಿಸಲು ಬೌಲರ್ಗಳು ಯಶಸ್ವಿಯಾಗುತ್ತಿಲ್ಲ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಪೃಥ್ವಿ ಶಾ ಇನ್ನಿಂಗ್ಸ್ಗೆ ವೇಗದ ಆರಂಭ ನೀಡಿದ್ದಾರೆ. 2 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 9 ಬಾಲ್ಗೆ 19 ರನ್ ಗಳಿಸಿದ್ದಾರೆ. 3 ಓವರ್ ಅಂತ್ಯಕ್ಕೆ ಡೆಲ್ಲಿ ತಂಡ ವಿಕೆಟ್ ನಷ್ಟವಿಲ್ಲದೆ 31 ರನ್ ದಾಖಲಿಸಿದೆ.
2 ಓವರ್ಗಳ ಅಂತ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ಕಳೆದುಕೊಳ್ಳದೆ 21 ರನ್ ಗಳಿಸಿದೆ. ವೇಗದ ಆರಂಭ ಪಡೆದುಕೊಂಡಿರುವ ಡೆಲ್ಲಿ ಟಾರ್ಗೆಟ್ ಬೆನ್ನತ್ತಿ ಆಟವಾಡುತ್ತಿದೆ. ಪಂಜಾಬ್ ಬೌಲರ್ಗಳು ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ವಿಕೆಟ್ ಪಡೆಯಬೇಕಿದೆ.
1 ಓವರ್ ಅಂತ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ನಷ್ಟವಿಲ್ಲದೆ 10 ರನ್ ಗಳಿಸಿದ್ದಾರೆ. ತಂಡದ ಪರ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ನಿಗದಿತ 20 ಓವರ್ಗಳ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ ತಂಡ 4 ವಿಕೆಟ್ ಕಳೆದುಕೊಂಡು 195 ರನ್ ಕಲೆಹಾಕಿದೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ಗೆ ಗೆಲ್ಲಲು 196 ರನ್ ಗುರಿ ನೀಡಿದೆ.
A more controlled bowling effort in the 2nd half of the innings to restrict PBKS to under 200 ??
Over to our batters now ?#YehHaiNayiDilli #IPL2021 #DCvPBKS pic.twitter.com/V8W8PWJKtc
— Delhi Capitals (@DelhiCapitals) April 18, 2021
19 ಓವರ್ಗಳ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ 3 ವಿಕೆಟ್ ಕಳೆದುಕೊಂಡು 179 ರನ್ ಕಲೆಹಾಕಿದ್ದಾರೆ. ಅವೇಶ್ ಖಾನ್ 3ನೇ ಎಸೆತದಲ್ಲಿ ಹೂಡಾ ಫ್ಲಾಟ್ ಸಿಕ್ಸರ್ ಸಿಡಿಸಿದ್ದಾರೆ. 5ನೇ ಎಸೆತಕ್ಕೆ ಮತ್ತೊಂದು ಸಿಕ್ಸ್ ಬಾರಿಸಲು ಹೊರಟ ಪೂರನ್ ರಬಾಡಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. ಪೂರನ್ ಬಳಿಕ ಶಾರುಖ್ ಖಾನ್ ಹಾಗೂ ಹೂಡಾ ಕ್ರೀಸ್ ಕಾಯ್ದುಕೊಂಡಿದ್ದಾರೆ.
17 ಓವರ್ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡಿರುವ ಪಂಜಾಬ್ ಕಿಂಗ್ಸ್ 162 ರನ್ ಗಳಿಸಿದ್ದಾರೆ. ಎರಡು ವಿಕೆಟ್ ಕಳೆದುಕೊಂಡ ಬಳಿಕವೂ ರನ್ ಗತಿ ಉತ್ತಮವಾಗಿದೆ.
ವೋಕ್ಸ್ ಬಾಲ್ಗೆ ಸಿಕ್ಸ್ ಸಿಡಿಸಿದ ಕ್ರಿಸ್ ಗೈಲ್ ನಂತರದ ಬಾಲ್ಗೆ ಔಟ್ ಆಗಿದ್ದಾರೆ. 9 ಬಾಲ್ಗೆ 11 ರನ್ ಗಳಿಸಿ ರಿಪಲ್ ಪಟೇಲ್ಗೆ ಕ್ಯಾಚ್ ಒಪ್ಪಿಸಿದ್ದಾರೆ. ದೀಪಕ್ ಹೂಡಾ 4 ಬಾಲ್ಗೆ 10 ರನ್ ಗಳಿಸಿ ಆಡುತ್ತಿದ್ದಾರೆ. ಪೂರನ್ ಕ್ರೀಸ್ಗೆ ಇಳಿದಿದ್ದಾರೆ.
Shabaash, Woakesy ??
He gets the big man ?#DCvPBKS #YehHaiNayiDilli #IPL2021
— Delhi Capitals (@DelhiCapitals) April 18, 2021
ಪಂಜಾಬ್ ಕಿಂಗ್ಸ್ ನಾಯಕ ಕೆ.ಎಲ್. ರಾಹುಲ್ ರಬಾಡ ಬಾಲ್ಗೆ ಸ್ಟಾಯಿನಿಸ್ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದ್ದಾರೆ. ಇಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿರುವ ರಾಹುಲ್ 51 ಬಾಲ್ಗೆ 2 ಸಿಕ್ಸರ್, 7 ಬೌಂಡರಿ ಸಹಿತ 61 ರನ್ ಗಳಿಸಿದ್ದಾರೆ. ರಾಹುಲ್ ಬಳಿಕ ಈಗ ದೀಪಕ್ ಹೂಡಾ ಹಾಗೂ ಗೈಲ್ ಕ್ರೀಸ್ನಲ್ಲಿದ್ದಾರೆ. ತಂಡದ ಮೊತ್ತ 16 ಓವರ್ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 150 ರನ್ ಆಗಿದೆ.
Rabada gets the birthday boy ?
Pulling things back in the last few overs here ?
PBKS – 141/2 (15.2)#DCvPBKS #YehHaiNayiDilli #IPL2021
— Delhi Capitals (@DelhiCapitals) April 18, 2021
ಪಂಜಾಬ್ ಕಿಂಗ್ಸ್ 15 ಓವರ್ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 140 ರನ್ ದಾಖಲಿಸಿದೆ. ತಂಡದ ಪರ ನಾಯಕ ಕೆ.ಎಲ್. ರಾಹುಲ್ 50 ಬಾಲ್ 61 ಹಾಗೂ ಗೈಲ್ 6 ಬಾಲ್ 5 ಆಟವಾಡುತ್ತಿದ್ದಾರೆ.
ಬರ್ತ್ಡೇ ಬಾಯ್ ಕ.ಎಲ್. ರಾಹುಲ್ ಅರ್ಧಶತಕ ದಾಖಲಿಸಿದ್ದಾರೆ. 45 ಬಾಲ್ಗೆ 50 ರನ್ ದಾಖಲಿಸಿ ಆಡುತ್ತಿದ್ದಾರೆ. ಪಂಜಾಬ್ ಕಿಂಗ್ಸ್ 14 ಓವರ್ ಅಂತ್ಯಕ್ಕೆ 128 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದ್ದಾರೆ. ಮಯಾಂಕ್ ವಿಕೆಟ್ ಪತನದ ಬಳಿಕ ರನ್ ವೇಗ ಕೊಂಚ ತಗ್ಗಿದೆ.
A FIFTY for the birthday boy here at The Wankhede.
Live – https://t.co/wbefi7u3wk #DCvPBKS #VIVOIPL pic.twitter.com/cjjN05rKFD
— IndianPremierLeague (@IPL) April 18, 2021
ಪಂಜಾಬ್ ಕಿಂಗ್ಸ್ ತಂಡದ ಮಯಾಂಕ್ ಅಗರ್ವಾಲ್ 36 ಬಾಲ್ಗೆ 69 ರನ್ಗಳಿಸಿ ಔಟ್ ಆಗಿದ್ದಾರೆ. ಮೆರಿವಾಲಾ ಬಾಲ್ನ್ನು ಶಿಖರ್ ಧವನ್ ಕ್ಯಾಚ್ ಹಿಡಿದಿದ್ದಾರೆ. ಈ ಮೂಲಕ ಪಂಜಾಬ್ ಮೊದಲ ವಿಕೆಟ್ ಪತನವಾಗಿದೆ. ಪಂಜಾಬ್ ಕಿಂಗ್ಸ್ 13 ಓವರ್ಗಳ ಅಂತ್ಯಕ್ಕೆ 124 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದ್ದಾರೆ. ಕ್ರಿಸ್ ಗೈಲ್ ಮತ್ತು ಕೆ.ಎಲ್. ರಾಹುಲ್ ಬ್ಯಾಟಿಂಗ್ನಲ್ಲಿದ್ದಾರೆ.
Meriwala has his first IPL wicket ???
PBKS – 122/1 (12.4)#DCvPBKS #YehHaiNayiDilli #IPL2021
— Delhi Capitals (@DelhiCapitals) April 18, 2021
ಪಂಜಾಬ್ ಕಿಂಗ್ಸ್ ತಂಡ 12 ಓವರ್ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 120 ರನ್ ಕಲೆಹಾಕಿದೆ. ತಂಡದ ಪರ ಮಯಾಂಕ್ ಅಗರ್ವಾಲ್ 33 ಬಾಲ್ಗೆ 68 ಹಾಗೂ ರಾಹುಲ್ 40 ಬಾಲ್ಗೆ 46 ರನ್ ಗಳಿಸಿದ್ದಾರೆ. ಪ್ರತೀ ಓವರ್ಗೆ 10 ರನ್ ಸರಾಸರಿಯಲ್ಲಿ ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಮಯಾಂಕ್ ಹಾಗೂ ಕೆ.ಎಲ್. ರಾಹುಲ್ 100 ರನ್ ಜೊತೆಯಾಟ ನೀಡಿದ್ದಾರೆ. ರಬಾಡ ಓವರ್ಗೆ ಮೊದಲೆರಡು ಬಾಲ್ನಲ್ಲಿ ಸಿಕ್ಸರ್ ಬಾರಿಸಿ ತಂಡವನ್ನು 100 ರನ್ ಮುಟ್ಟಿಸಿದ್ದಾರೆ. 11 ಓವರ್ಗಳ ಅಂತ್ಯಕ್ಕೆ ಪಂಜಾಬ್ ಮೊತ್ತ 114/0 ಆಗಿದೆ.
ಪಂಜಾಬ್ ಕಿಂಗ್ಸ್ 10 ಓವರ್ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 94 ರನ್ ಕಲೆಹಾಕಿದೆ. ತಂಡದ ಪರ ಮಯಾಂಕ್ ಅಗರ್ವಾಲ್ ಅರ್ಧಶತಕ ಪೂರೈಸಿದ್ದಾರೆ. ಅವರು 27 ಬಾಲ್ಗೆ 53 ರನ್ ದಾಖಲಿಸಿದ್ದಾರೆ. ರಾಹುಲ್ 35 ರನ್ ಬಾರಿಸಿ ಆಟವಾಡುತ್ತಿದ್ದಾರೆ.
Mayank di fifty??
He's taken just 25 balls to reach there ?#SaddaPunjab #IPL2021 #PunjabKings #DCvPBKS
— Punjab Kings (@PunjabKingsIPL) April 18, 2021
9 ಓವರ್ಗಳ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ ತಂಡ ವಿಕೆಟ್ ನಷ್ಟವಿಲ್ಲದೆ 87 ರನ್ ಬಾರಿಸಿದೆ. ತಂಡದ ಪರ ಮಯಾಂಕ್ 46 ರನ್ ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿದ್ದಾರೆ. ಡೆಲ್ಲಿ ಬೌಲರ್ಗಳು ಯಾವುದೇ ವಿಕೆಟ್ ಪಡೆಯಲು ಸಫಲವಾಗಿಲ್ಲ. ಹೇರಳವಾಗಿ ರನ್ ಬಿಟ್ಟುಕೊಟ್ಟು ದುಬಾರಿ ಎನಿಸಿದ್ದಾರೆ.
ರವಿಚಂದ್ರನ್ ಅಶ್ವಿನ್ ಬಾಲ್ಗೆ ಮಯಾಂಕ್ ಅಗರ್ವಾಲ್ ಸಿಕ್ಸರ್ ಬಾರಿಸಿದ್ದಾರೆ. ವೇಗದ ಆಟಕ್ಕೆ ಮುಂದಾಗಿರುವ ಮಯಾಂಕ್ 40 (19) ಹಾಗೂ ರಾಹುಲ್ 34 (32) ತಂಡದ ಮೊತ್ತ 8.3 ಓವರ್ಗೆ 84/0 ಆಗುವಂತೆ ಆಡಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡ 7 ಓವರ್ ಅಂತ್ಯಕ್ಕೆ 63 ರನ್ ಗಳಿಸಿದ್ದಾರೆ. ಯಾವುದೇ ವಿಕೆಟ್ ಕಳೆದುಕೊಳ್ಳದೆ ಉತ್ತಮ ಬ್ಯಾಟಿಂಗ್ ತೋರುತ್ತಿದ್ದಾರೆ. ರಾಹುಲ್ ಹಾಗೂ ಮಯಾಂಕ್ ಅಬ್ಬರ ತಡೆಯಲು ಡೆಲ್ಲಿ ಬೌಲರ್ಗಳು ಶೀಘ್ರ ಒಂದೆರಡು ವಿಕೆಟ್ ಕಬಳಿಸಬೇಕಾಗಿದೆ.
ಆರಂಭಿಕರಾಗಿ ಕಣಕ್ಕಿಳಿದಿರುವ ಮಾಯಾಂಕ್ ಹಾಗೂ ರಾಹುಲ್ ಅಬ್ಬರದ ಬ್ಯಾಟಿಂಗ್ ಆರಂಭಿಸಿದ್ದಾರೆ. ಈ ಜೋಡಿ ಮುರಿಯದ ವಿಕೆಟ್ಗೆ 4 ಓವರ್ ಎದುರಿಸಿ 44 ರನ್ ಗಳಿಸಿದ್ದಾರೆ. ಮಾಯಾಂಕ್ 29 ರನ್ ಗಳಿಸಿದ್ದರೆ, ರಾಹುಲ್ 13 ರನ್ ಗಳಿಸಿ ಆಡುತ್ತಿದ್ದಾರೆ.
2ನೇ ಓವರ್ನ 3ನೇ ಎಸೆತವನ್ನು ನೋ ಬಾಲ್ ಎಸೆದ ಡೆಲ್ಲಿ ತಂಡದ ಮೆರಿವೆಲ್ಲ ಅದಕ್ಕೆ ಸರಿಯಾದ ದಂಡನೆ ಪಡೆದಿದ್ದಾರೆ. ನಂತರದ ಎಸೆತವನ್ನು ಎದುರಿಸಿದ ಮಾಯಾಂಕ್ ಮೆರಿವೆಲ್ಲಾ ಅವರ ಫ್ರೀ ಹಿಟ್ ಎಸೆತವನ್ನು ಸರಳ ರೇಖೆ ಎಳೆದಂತೆ ಸೀದಾ ಸಿಕ್ಸರ್ಗೆ ಅಟ್ಟಿದರು. ಮಾಯಾಂಕ್ ಮೂಲಕ ತಂಡಕ್ಕೆ ಮೊದಲ ಸಿಕ್ಸರ್ ದಾಖಲಾಯಿತು. 2 ಓವರ್ ಮುಕ್ತಾಯಕ್ಕೆ ಪಂಜಾಬ್ 25 ರನ್ ಗಳಿಸಿದೆ.
ಪಂಜಾಬ್ ಪರ ಬ್ಯಾಟಿಂಗ್ ಆರಂಭಿಸಿರುವ ಕನ್ನಡಿಗರಾದ ರಾಹುಲ್ ಹಾಗೂ ಮಾಯಾಂಕ್ ಉತ್ತಮ ಆರಂಭ ಪಡೆದಿದ್ದಾರೆ. ಮೊದಲ ಓವರ್ನಲ್ಲಿ ಒಂದು ಬೌಂಡರಿ ಇಲ್ಲದೆ ಕೇವಲ 5 ರನ್ ಗಳಿಸಿದ ಈ ಜೋಡಿ 2ನೇ ಓವರ್ನ ಮೊದಲ ಎಸೆತವನ್ನು ಎದುರಿಸಿದ ರಾಹುಲ್ ಸೀದಾ ಬೌಂಡರಿಗೆ ಅಟ್ಟಿದ್ದಾರೆ.
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಬೌಲಿಂಗ್ ಆಯ್ದುಕೊಂಡಿದೆ. ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಮಾಡಲಿದೆ. ಮುಂಬೈ ವಾಂಖೆಡೆಯಲ್ಲಿ 7.30ಕ್ಕೆ ಪಂದ್ಯ ಆರಂಭವಾಗಲಿದೆ.
From the Wankhede – @DelhiCapitals have won the toss and they will bowl first against @PunjabKingsIPL.#VIVOIPL pic.twitter.com/eap2GHlVdV
— IndianPremierLeague (@IPL) April 18, 2021
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ಮಾತುಕತೆಯಲ್ಲಿ..
In other news, Jalaj Saxena is all set to make his debut in #PBKS colours.#VIVOIPL #DCvPBKS pic.twitter.com/ePTZWy71rA
— IndianPremierLeague (@IPL) April 18, 2021
Published On - 11:14 pm, Sun, 18 April 21