AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶತಕ ಬಾರಿಸದಿದ್ದರೂ ಒಂದು ದಿನದ ಪಂದ್ಯಗಳಲ್ಲಿ ಕೊಹ್ಲಿಯ ಸರಾಸರಿ ಈ ವರ್ಷ 48ರಷ್ಟಿದೆ!

ವಿರಾಟ್​ ಕೊಹ್ಲಿ ಒಂದು ದಿನದ ಪಂದ್ಯಗಳಲ್ಲಿ ಈ ವರ್ಷ ಶತಕ ಬಾರಿಸದಿರುವುದೇ ಅವರ ಟೀಕಾಕಾರರಿಗೆ ದೊಡ್ಡ ಸಂಗತಿಯಾಗಿ ಗೋಚರಿಸುತ್ತಿದೆ. ಆದರೆ, ಶತಕ ಬಾರಿಸದೆ ಹೋದರೂ ಈ ವರ್ಷ ಆಡಿದ 9 ಪಂದ್ಯಗಳಲ್ಲಿ ಕೊಹ್ಲಿ 48 ರಷ್ಟು ಸರಾಸರಿಯಲ್ಲಿ ರನ್ ಗಳಿಸಿರುವುದನ್ನು ಅವರು ಉದ್ದೇಶಪೂರ್ವಕವಾಗಿ ಮರೆತುಬಿಡುತ್ತಾರೆ.

ಶತಕ ಬಾರಿಸದಿದ್ದರೂ ಒಂದು ದಿನದ ಪಂದ್ಯಗಳಲ್ಲಿ ಕೊಹ್ಲಿಯ ಸರಾಸರಿ ಈ ವರ್ಷ 48ರಷ್ಟಿದೆ!
ಅರುಣ್​ ಕುಮಾರ್​ ಬೆಳ್ಳಿ
|

Updated on: Dec 03, 2020 | 4:37 PM

Share

ಟೀಮ್ ಇಂಡಿಯ ನಾಯಕ ವಿರಾಟ್ ಕೊಹ್ಲಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದರೂ ಅವರನ್ನು ಟೀಕಿಸುವವರ ಸಂಖ್ಯೆ ಕಡಿಮೆಯೇನೂ ಇಲ್ಲ. ಈ ವರ್ಷ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಶತಕ ಬಾರಿಸಲು ವಿಫಲರಾಗಿರುವುದೇ ಕೆಲವರಿಗೆ ಕೊಹ್ಲಿಯನ್ನು ಟೀಕಿಸಲು ಅಸ್ತ್ರವಾಗಿಬಿಡುತ್ತದೆ. ಈ ಮಹನೀಯರು ಕೆಲವು ವಿಷಯವನ್ನು ತಮ್ಮ ಅನುಕೂಲಕ್ಕಾಗಿ ಮತ್ತು ಉದ್ದೇಶಪೂರ್ವಕವಾಗಿ ಮರೆತುಬಿಡುತ್ತಾರೆ. ಅದೇನು ಗೊತ್ತಾ?

ಕೊಹ್ಲಿ 2020 ರಲ್ಲಿ ಒಂದೇ ಒಂದು ಶತಕ ದಾಖಲಿಸಲಿಲ್ಲಮ ಸರಿ, ಆದರೆ ಕೊವಿಡ್-19 ಸಾಂಕ್ರಾಮಿಕ ವ್ಯಾಧಿಯಿಂದಾಗಿ ಈ ವರ್ಷ ಭಾರತ ಮತ್ತು ಕೊಹ್ಲಿ ಕೇವಲ 9 ಒಂದು ದಿನದ ಪಂದ್ಯಗಳನ್ನು ಮಾತ್ರ ಅಡಿದರು. ಅದರಲ್ಲಿ 6 ಅಸ್ಟ್ರೇಲಿಯ ವಿರುದ್ಧ ಮತ್ತು 3 ನ್ಯೂಜಿಲೆಂಡ್ ವಿರುದ್ಧ ಅದರದ್ದೇ ಹಿತ್ತಲಲ್ಲಿ. ಸರಿ, ಈ 9 ಪಂದ್ಯಗಳಲ್ಲಿ ಅವರು 5 ಅರ್ಧ ಶತಕಗಳನ್ನು ಬಾರಿಸಿದ್ದಾರೆ ಮತ್ತು 48ರನ್ ಸರಾಸರಿಯನ್ನು ಕಾಯ್ದುಕೊಂಡಿದ್ದಾರೆ! ಒಡಿಐಗಳಲ್ಲಿ 48ರ ಸರಾಸರಿ ಅಸಾಮಾನ್ಯವಾದದ್ದು. ಮಹಾನ್ ಅಟಗಾರರೆಲ್ಲ, 45ರ ಆಸುಪಾಸಿನ ಸರಾಸರಿಯೊಂದಿಗೆ ರಿಟೈರಾಗಿದ್ದಾರೆ.

ಕೊಹ್ಲಿಯನ್ನು ಟೀಕಿಸುತ್ತಿರರುವವರಿಗೆ ಬ್ಯಾಟ್ಸ್​ಮನ್​ಗಳ ಕರೀಯರ್ ಗ್ರಾಫ್ ಹೇಗಿರುತ್ತದೆ ಎನ್ನುವುದು ಗೊತ್ತಿದ್ದಂತಿಲ್ಲ. ಒಬ್ಬ ಬ್ಯಾಟ್ಸ್​ಮನ್ ಎಷ್ಟೇ ಶ್ರೇಷ್ಠನಾಗಿದ್ದರೂ, ತಾನಾಡುವ ಎಲ್ಲ ಸರಣಿಗಳಲ್ಲಿ ಟನ್​ಗಟ್ಟಲೆ ರನ್ ಗಳಿಸಿಲಾರ. ಟೆಸ್ಟ್ ಕ್ರಿಕೆಟ್​ನಲ್ಲಿ 99.96 ಸರಾಸರಿಯೊಂದಿಗೆ ತನ್ನ ಕರೀಯರ್​ಗೆ ವಿದಾಯ ಹೇಳಿದ ಡಾನ್ ಬ್ರಾಡ್ಮನ್ ಸಹ ಕೆಲವು ಸರಣಿಗಳಲ್ಲಿ ವಿಫಲರಾಗಿದ್ದರು. ಓದುಗರಿಗೆ ಗೊತ್ತರಬಹುದು, ಈ ರನ್ ಮಶೀನ್ ಆಡಿದ್ದು ಕೇವಲ 52 ಟೆಸ್ಟ್​ಗಳನ್ನು ಮಾತ್ರ. ಈ ವರ್ಷ ಕೊವಿಡ್-19 ವಿಶ್ವದಾದ್ಯಂತ ಕ್ರೀಡಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದಂತೆಯೇ, ಬ್ರಾಡ್ಮನ್ ಅವರು ತಮ್ಮ ಕರೀಯರ್​ನ ಉತ್ತುಂಗದಲ್ಲಿದ್ದಾಗ, ಎರಡನೇ ಮಹಾಯುದ್ಧದಿಂದಾಗಿ ಕ್ರಿಕೆಟ್ ಸೇರಿದಂತೆ ಉಳಿದೆಲ್ಲ ಕ್ರೀಡಾಕೂಟಗಳು ರದ್ದಾಗಿದ್ದವು.

ಸಚಿನ್ ತೆಂಡೂಲ್ಕರ್

ಗೇಮ್ ಆಫ್ ಕ್ರಿಕೆಟ್ ಈಸ್  ಗ್ರೇಟ್ ಲೆವೆಲ್ಲರ್ ಅಂತ ಇಂಗ್ಲೀಷರು ಹೇಳುತ್ತಾರೆ. ಒಂದು ಪಂದ್ಯದಲ್ಲಿ ಶತಕ ಬಾರಿಸುವ ಬ್ಯಾಟ್ಸ್​ಮನ್ ಅದರ ಮುಂದಿನ ಪಂದ್ಯದಲ್ಲಿ ಸೊನ್ನೆಗೋ ಅಥವಾ 5-6 ರನ್ ಗಳಿಸಿಯೋ ಔಟಾಗುತ್ತಾನೆ. ಒಂದು ಸರಣಿಯಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದವನು ಇನ್ನೊಂದು ಸರಣಿಯಲ್ಲಿ 100ಕ್ಕಿಂತ ಕಡಿಮೆ ರನ್ ಗಳಿಸಿರುತ್ತಾನೆ. ಇದು ಬೌಲರ್​ಗಳಿಗೂ ಅನ್ವಯಿಸುತ್ತದೆ. ಹಾಗಾಗೇ, ಆಟಗಾರರ ಶ್ರೇಷ್ಠತೆಯನ್ನು ಅಂಕಿ-ಅಂಶಗಳು ಮತ್ತು ಸರಾಸರಿಗಳ ಮೇಲೆ ನಿರ್ಧರಿಸುತ್ತಾರೆ. ಬ್ರಾಡ್ಮನ್ ಅವರು ಆಡುವುದನ್ನು ನಾವ್ಯಾರೂ ನೋಡಿಲ್ಲ. ಆದರೆ ಅವರು ಬಿಟ್ಟು ಹೋಗಿರುವ ಅಂಕಿ-ಅಂಶಗಳು ನಮ್ಮ ಮುಂದಿವೆ.

ಹಾಗೆ ನೋಡಿದರೆ, ಭಾರತ ಮತ್ತು ಆಸ್ಟ್ರೇಲಿಯ ನಡುವೆ ನಡೆದ ಸಿಡ್ನಿಯಲ್ಲಿ ನಡೆದ ಎರಡನೇ ಪಂದ್ಯ ಮತ್ತು ಬುಧವಾರದಂದು ನಡೆದ ಮೂರನೆ ಪಂದ್ಯದಲ್ಲಿ ಕೊಹ್ಲಿ ಔಟಾಗಿದ್ದು ದೌರ್ಭಾಗ್ಯಕರ ರೀತಿಯಲ್ಲಿ. ಸಿಡ್ನಿಯಲ್ಲಿ, ಮೊಸೆಸ್ ಹೆನ್ರಿಕೆ ಹಿಡಿದ ಅಸಾಧಾರಣವಾದ ಕ್ಯಾಚ್​ನಿಂದಾಗಿ ಕೊಹ್ಲಿ ಔಟಾದರು. ಹಾಗೆಯೇ, ಮೂರನೆ ಪಂದ್ಯದಲ್ಲಿ ಬಾಲ್ ಅವರ ಬ್ಯಾಟಿಗೆ ತಾಕಿದ್ದು ಲಭ್ಯವಿದ್ದ ತಂತ್ರಜ್ಞಾನಕ್ಕೂ ಗೊತ್ತು ಹಿಡಿಯಲಾಗಲಿಲ್ಲ. ಎರಡು ಸಂದರ್ಭಗಳಲ್ಲೂ ಶತಕ ಬಾರಿಸುವ ಮತ್ತು ಭಾರತವನ್ನು ಗೆಲ್ಲಿಸುವ ಛಲಗಾರಿಕೆ ಅವರ ಮುಖದಲ್ಲಿ ನಿಚ್ಚಳವಾಗಿ ಕಾಣುತ್ತಿತ್ತು.

ಡಾನ್ ಬ್ರಾಡ್ಮನ್

ಮತ್ತೊಂದು ಸಂಗತಿಯನ್ನು ಕೊಹ್ಲಿಯ ಟೀಕಾಕಾರರು ಗಮನಿಸಬೇಕಿದೆ, ಅವರು ಯಾವತ್ತೂ ಶತಕ ಬಾರಿಸುವ ಅಂಶವನ್ನು ಗಮನದಲ್ಲಿಟ್ಟುಕೊಂಡು ಬ್ಯಾಟ್ ಮಾಡುವುದಿಲ್ಲ. ತಂಡದ ಗೆಲುವು ಮತ್ತು ಶ್ರೇಯಸ್ಸು ಮಾತ್ರ ಅವರ ಗುರಿಯಾಗಿರುತ್ತದೆ.

2009ರಿಂದ 2019 ರವರೆಗೆ ಅವರು ಪ್ರತಿವರ್ಷ ಶತಕಗಳನ್ನು ಬಾರಿಸುತ್ತಲೇ ಇದ್ದಾರೆ. ಈ ವರ್ಷ ಬಾರಿಸದಿದ್ದರೇನಂತೆ? 11 ವರ್ಷಗಳ ಅವಧಿಯಲ್ಲಿ 43 ಶತಕಗಳನ್ನು ಬಾರಿಸುವುದು ಕೇವಲ ಅಸಾಮಾನ್ಯ ಬ್ಯಾಟ್ಸ್​ಮನ್​ಗೆ ಮಾತ್ರ ಸಾಧ್ಯವಾಗುತ್ತದೆ. ಸಚಿನ್ ತೆಂಡೂಲ್ಕರ್ ಒಡಿಐಗಳಲ್ಲಿ 49 ಶತಕಗಳನ್ನು ಬಾರಿಸಲು 19 ವರ್ಷಗಳನ್ನು ತೆಗೆದುಕೊಂಡರು. ನಿನ್ನೆಯ ದಾಖಲೆಯನ್ನೇ ತೆಗೆದುಕೊಳ್ಳಿ. ಈ ಆವೃತ್ತಿಯಲ್ಲಿ 12,000 ರನ್ ಪೂರೈಸಲು ಸಚಿನ್​ಗೆ 300 ಇನ್ನಿಂಗ್ಸ್​ಗಳು ಬೇಕಾಯಿತು, ಕೊಹ್ಲಿಗೆ ಕೇವಲ 242 ಇನ್ನಿಂಗ್ಸ್​ಗಳು ಸಾಕಾಯಿತು.

ಕೆಲವರು ಟೀಕೆ ಮಾಡುವಾಗ ಹಲವು ಅಂಶಗಳನ್ನು ಉದ್ದೇಶಪೂರ್ವವಾಗಿ ಕಡೆಗಣಿಸುತ್ತಾರೆ.

‘ನನ್ನ ಅಮೂಲ್ಯ 8 ವರ್ಷ ವ್ಯರ್ಥವಾಗಿದೆ’; ಧ್ರುವ ಬಗ್ಗೆ ರಾಘವೇಂದ್ರ ಹೊಸ ಆರೋಪ
‘ನನ್ನ ಅಮೂಲ್ಯ 8 ವರ್ಷ ವ್ಯರ್ಥವಾಗಿದೆ’; ಧ್ರುವ ಬಗ್ಗೆ ರಾಘವೇಂದ್ರ ಹೊಸ ಆರೋಪ
ಮೈಮೇಲೆಲ್ಲಾ ಕಚ್ಚಿದ ಗಾಯ, ಡೇ ಕೇರ್ನಲ್ಲಿರುವ ಮಗುವಿನ ಸ್ಥಿತಿ ಏನಾಗಿದೆ ನೋಡಿ
ಮೈಮೇಲೆಲ್ಲಾ ಕಚ್ಚಿದ ಗಾಯ, ಡೇ ಕೇರ್ನಲ್ಲಿರುವ ಮಗುವಿನ ಸ್ಥಿತಿ ಏನಾಗಿದೆ ನೋಡಿ
ಅಪಘಾತದಲ್ಲಿ ಮೃತಪಟ್ಟ ಪತ್ನಿಯನ್ನು ಬೈಕ್​ನಲ್ಲಿ ಕಟ್ಟಿ ಹೊತ್ತೊಯ್ದ ಪತಿ
ಅಪಘಾತದಲ್ಲಿ ಮೃತಪಟ್ಟ ಪತ್ನಿಯನ್ನು ಬೈಕ್​ನಲ್ಲಿ ಕಟ್ಟಿ ಹೊತ್ತೊಯ್ದ ಪತಿ
ಸೆಲ್ಫೀಗೆ ಮುಂದಾದವನ ಅಟ್ಟಾಡಿಸಿ ಮೆಟ್ಟಿದ ಕಾಡಾನೆ, ಆಮೇಲೇನಾಯ್ತು ನೋಡಿ
ಸೆಲ್ಫೀಗೆ ಮುಂದಾದವನ ಅಟ್ಟಾಡಿಸಿ ಮೆಟ್ಟಿದ ಕಾಡಾನೆ, ಆಮೇಲೇನಾಯ್ತು ನೋಡಿ
ಮೆಟ್ರೋ ಹಳದಿ ಮಾರ್ಗ ಶುರು: ಪ್ರಯಾಣಿಕರು ಏನಂದ್ರು ನೋಡಿ
ಮೆಟ್ರೋ ಹಳದಿ ಮಾರ್ಗ ಶುರು: ಪ್ರಯಾಣಿಕರು ಏನಂದ್ರು ನೋಡಿ
ಮೈಸೂರು ದಸರಾ 2025 ರ ಉದ್ಘಾಟಕರು ಯಾರು? ಸಚಿವ ಮಹದೇವಪ್ಪ ಕೊಟ್ಟರು ಸುಳಿವು
ಮೈಸೂರು ದಸರಾ 2025 ರ ಉದ್ಘಾಟಕರು ಯಾರು? ಸಚಿವ ಮಹದೇವಪ್ಪ ಕೊಟ್ಟರು ಸುಳಿವು
171 ರನ್​ ಗಳಿಸಿದ ಪಾಕಿಸ್ತಾನ್: 184 ರನ್​ ಚೇಸ್ ಮಾಡಿ ಗೆದ್ದ ವಿಂಡೀಸ್
171 ರನ್​ ಗಳಿಸಿದ ಪಾಕಿಸ್ತಾನ್: 184 ರನ್​ ಚೇಸ್ ಮಾಡಿ ಗೆದ್ದ ವಿಂಡೀಸ್
Daily Devotional: ಮಕ್ಕಳಿಗೆ ಬಾಲಾರಿಷ್ಟ ದೋಷಕ್ಕೆ ಪರಿಹಾರ ತಿಳಿಯಿರಿ
Daily Devotional: ಮಕ್ಕಳಿಗೆ ಬಾಲಾರಿಷ್ಟ ದೋಷಕ್ಕೆ ಪರಿಹಾರ ತಿಳಿಯಿರಿ
Daily horoscope: ಹಿಂಜರಿಕೆಯಿಂದ ನಿಮಗೆ ಒಳ್ಳೆಯದೇ ಆಗಲಿದೆ
Daily horoscope: ಹಿಂಜರಿಕೆಯಿಂದ ನಿಮಗೆ ಒಳ್ಳೆಯದೇ ಆಗಲಿದೆ
ವಿದ್ಯುತ್​ ದೀಪಾಲಂಕಾರ ನೋಡುತ್ತ ಮೈಸೂರು ಅರಮನೆಗೆ ಬಂದ ದಸರಾ ಆನೆಗಳು
ವಿದ್ಯುತ್​ ದೀಪಾಲಂಕಾರ ನೋಡುತ್ತ ಮೈಸೂರು ಅರಮನೆಗೆ ಬಂದ ದಸರಾ ಆನೆಗಳು