ಅದ್ಭುತ… ಅತ್ಯದ್ಭುತ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ ಬೇಬಿ AB
MI Cape Town vs Sunrisers Eastern Cape: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಈಸ್ಟರ್ನ್ ಕೇಪ್ ತಂಡವು 19.2 ಓವರ್ಗಳಲ್ಲಿ 107 ರನ್ ಬಾರಿಸಿ ಆಲೌಟ್ ಆಯಿತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಎಂಐ ಕೇಪ್ ಟೌನ್ ತಂಡವು 11 ಓವರ್ಗಳಲ್ಲಿ 110 ರನ್ ಬಾರಿಸಿ 10 ವಿಕೆಟ್ಗಳ ಅಮೋಘ ಜಯ ಸಾಧಿಸಿದೆ.
ಬೇಬಿ ಎಬಿ ಎಂದೇ ಖ್ಯಾತಿ ಪಡೆದಿರುವ ಡೆವಾಲ್ಡ್ ಬ್ರೆವಿಸ್ ಅತ್ಯುತ್ತಮ ಫೀಲ್ಡರ್ ಎಂಬುದು ಗೊತ್ತೇ ಇದೆ. ಇದಕ್ಕೆ ಸಾಕ್ಷಿಯಾಗಿ ಅವರು ಹಿಡಿದಿರುವ ಕ್ಯಾಚ್ಗಳು ಕಣ್ಮುಂದೆ ಬರುತ್ತವೆ. ಇದೀಗ ಈ ಸಾಲಿಗೆ ಮತ್ತೊಂದು ಕ್ಯಾಚ್ ಕೂಡ ಸೇರ್ಪಡೆಯಾಗಿದೆ. ಆದರೆ ಈ ಬಾರಿ ಹಿಡಿದಿರುವುದು ಹಿಂದಕ್ಕೆ ಡೈವ್ ಹೊಡೆಯುವ ಮೂಲಕ ಎಂಬುದೇ ವಿಶೇಷ.
ಕೇಪ್ಟೌನ್ನಲ್ಲಿ ಸೌತ್ ಆಫ್ರಿಕಾ ಟಿ20 ಲೀಗ್ನ 25ನೇ ಪಂದ್ಯದಲ್ಲಿ ಎಂಐ ಕೇಪ್ಟೌನ್ ಹಾಗೂ ಸನ್ರೈಸರ್ಸ್ ಈಸ್ಟರ್ನ್ ಕೇಪ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಎಂಐ ಕೇಪ್ಟೌನ್ ತಂಡದ ನಾಯಕ ರಶೀದ್ ಖಾನ್ ಬೌಲಿಂಗ್ ಆಯ್ದುಕೊಂಡರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಈಸ್ಟರ್ನ್ ಕೇಪ್ ತಂಡವು ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶಿಸಿರಲಿಲ್ಲ. ಅದರಲ್ಲೂ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಟಾಮ್ ಅಬೆಲ್ ಔಟಾಗಲು ಮುಖ್ಯ ಕಾರಣ ಡೆವಾಲ್ಡ್ ಬ್ರೆವಿಸ್.
ಕಾರ್ಬಿನ್ ಬಾಷ್ ಎಸೆದ 4ನೇ ಓವರ್ನ ಕೊನೆಯ ಎಸೆತವನ್ನು ಟಾಮ್ ಅಬೆಲ್ ಡೀಪ್ ಸ್ಕ್ವೇರ್ ಲೆಗ್ನತ್ತ ಬಾರಿಸಿದ್ದರು. ಆದರೆ ಬ್ರೆವಿಸ್ ಬೌಂಡರಿ ಲೈನ್ನಿಂದ ಸ್ವಲ್ಪ ಮುಂದೆಯೇ ಫೀಲ್ಡಿಂಗ್ ಮಾಡುತ್ತಿದ್ದರು. ಇನ್ನೇನು ಚೆಂಡು ತಲೆಯ ಮೇಲಿಂದ ಬೌಂಡರಿ ಲೈನ್ ದಾಟಲಿದೆ ಎಂದರಿತ ಡೆವಾಲ್ಡ್ ಬ್ರೆವಿಸ್ ಹಿಂದಕ್ಕೆ ಜಿಗಿಯುವ ಮೂಲಕ ಅದ್ಭುತವಾಗಿ ಡೈವಿಂಗ್ ಕ್ಯಾಚ್ ಹಿಡಿದರು.
ಬ್ರೆವಿಸ್ ಹಿಡಿದ ಈ ಫೆಂಟಾಸ್ಟಿಕ್ ಕ್ಯಾಚ್ ನೋಡಿ ಕಾಮೆಂಟೇಟರ್ ಸೇರಿದಂತೆ ಇಡೀ ಪ್ರೇಕ್ಷಕರು ಚಕಿತರಾದರು. ಇದೀಗ ಈ ಅತ್ಯದ್ಭುತ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಡೆವಾಲ್ಡ್ ಬ್ರೆವಿಸ್ ಅವರ ಫೀಲ್ಡಿಂಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಈಸ್ಟರ್ನ್ ಕೇಪ್ ತಂಡವು 19.2 ಓವರ್ಗಳಲ್ಲಿ 107 ರನ್ ಬಾರಿಸಿ ಆಲೌಟ್ ಆಯಿತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಎಂಐ ಕೇಪ್ ಟೌನ್ ತಂಡವು 11 ಓವರ್ಗಳಲ್ಲಿ 110 ರನ್ ಬಾರಿಸಿ 10 ವಿಕೆಟ್ಗಳ ಅಮೋಘ ಜಯ ಸಾಧಿಸಿದೆ.

ನೇಪಾಳಕ್ಕೆ ವಾಪಸ್ ಹೊರಟ ವಿದ್ಯಾರ್ಥಿಗಳಿಗೆ ಆಹಾರ ಕೊಟ್ಟು ನೆರವಾದ ಎಬಿವಿಪಿ

ಕಲಬುರಗಿ: ಕಾರ್ಮಿಕನ ಮೃತದೇಹವನ್ನು ಪ್ರಾಣಿ ತರಹ ಎಳೆದೊಯ್ದ ಸಿಮೆಂಟ್ ಕಂಪನಿ

Daily Devotional: ಸ್ವಾತಿ ನಕ್ಷತ್ರ ಮಹತ್ವ ಹಾಗೂ ಫಲ ತಿಳಿಯಿರಿ

Daily horoscope: ಬುಧವಾರ ಯಾವ ರಾಶಿಯವರಿಗೆ ಶುಭ, ಅಶುಭ ತಿಳಿಯಿರಿ
