ತಮ್ಮ ಹೊಲದಲ್ಲಿ ಕೆಲಸ ಮಾಡುವ ಮಹಿಳೆಯರನ್ನು ವಿಮಾನ ಪ್ರಯಾಣ ಮಾಡಿಸಿದ ಹರಪನಹಳ್ಳಿ ರೈತ ವಿಶ್ವನಾಥ್
ರೈತ ವಿಶ್ವನಾಥ್ ಹೃದಯ ವೈಶಾಲ್ಯತೆಯನ್ನು ಮೆಚ್ಚಲೇಬೇಕು. ಒಬ್ಬರನ್ನೊಬ್ಬರು ನಂಬದ ಕಾಲವಿದು. ಹತ್ತತ್ತು ವರ್ಷ ದುಡಿದರೂ ಕೆಲವರಿಗೆ ಭಡ್ತಿ ಸಿಗದು ಸಂಬಳ ಹೆಚ್ಚಾಗದು. ಹೊಲಗಳಲ್ಲಿ ಕೂಲಿ ಮಾಡುವವರ ಬದುಕು ಹೊಲ ಮತ್ತು ಮನೆಗೆ ಮಾತ್ರ ಸೀಮಿತವಾಗಿರುತ್ತದೆ. ಜಾತ್ರೆ, ಊರಹಬ್ಬ ಬಂದರೆ ಅದೇ ದೊಡ್ಡ ಸಂಭ್ರಮ. ಪರಿಸ್ಥಿತಿ ಹೀಗಿರುವಾಗ ವಿಶ್ವನಾಥ್ ತಮ್ಮಲ್ಲಿ ದುಡಿಯುವವರನ್ನು ವಿಮಾನದಲ್ಲಿ ಕರೆದೊಯ್ದು ಹೀಗೂ ಬದುಕಬಹುದು ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ.
ಶಿವಮೊಗ್ಗ: ತಮ್ಮ ಹೊಲದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರನ್ನು ತಮ್ಮ ಕುಟುಂಬದ ಸದಸ್ಯರಂತೆ ಟ್ರೀಟ್ ಮಾಡುವ ರೈತರು ನಮ್ಮಲ್ಲಿದ್ದಾರೆಯೇ? ಬಹಳ ಕಮ್ಮಿ. ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ಶಿರಗನಹಳ್ಳಿಯ ವಿಶ್ವನಾಥ್ ಹೆಸರಿನ ರೈತ ಅಂಥ ವಿರಳ ಜನರಲ್ಲಿ ಒಬ್ಬರು. ಇವರ ಹೊಲದಲ್ಲಿ ಕೆಲಸ ಮಾಡುವ ಹತ್ತು ಮಹಿಳೆಯರಿಗೆ ವಿಮಾನದಲ್ಲಿ ಪ್ರಯಾಣ ಮಾಡುವ ಆಸೆ ಇತ್ತು. ಸರಿ, ವಿಶ್ವನಾಥ್ ಅವರನ್ನು ಶಿವಮೊಗ್ಗ ಕರೆತಂದು ವಿಮಾನವೊಂದರಲ್ಲಿ ಗೋವಾಗೆ ಕರೆದೊಯ್ದಿದ್ದಾರೆ. ಮಹಿಳೆಯರು ವಿಮಾನ ಹತ್ತುವುದನ್ನು ಮತ್ತು ವಿಮಾನದೊಳಗಡೆ ಕೂತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಕೆಲವರ ಮುಖದಲ್ಲಿ ಗಾಬರಿ ಉಳಿದವರ ಮುಖದಲ್ಲಿ ಸಂತಸ. ಕೂಲಿ ಕಾರ್ಮಿಕರ ಬಗ್ಗೆ ಇಷ್ಟೆಲ್ಲ ಪ್ರೀತಿ ಕಾಳಜಿಯಿರುವ ವಿಶ್ವನಾಥ್ ಅವರಿಗೊಂದು ಸಲಾಂ ಮಾರಾಯ್ರೇ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಚಿಕ್ಕಮಗಳೂರು: ಟ್ರ್ಯಾಕ್ಟರ್ ಪಲ್ಟಿ, 10ಕ್ಕೂ ಹೆಚ್ಚು ಕೂಲಿ ಕಾರ್ಮಿಕರಿಗೆ ಗಂಭೀರ ಗಾಯ