‘‘ನರೈನ್ ಅವರಿಗೆ ದೊಡ್ಡ ಹೊಡೆತಗಳನ್ನು ಬಾರಿಸುವುದು ಈ ಸೀಸನಲ್ಲಿ ಸಾಧ್ಯವಾಗುತ್ತಿಲ್ಲ. ಹಾಗಾಗಿ ಶುಭ್ಮನ್ ಗಿಲ್ ಜೊತೆ ನಾಯಕ ದಿನೇಶ್ ಕಾರ್ತೀಕ್ ಇನ್ನಿಂಗ್ಸ್ ಆರಂಭಿಸುವುದು ಸಮರ್ಪಕ ಅಂತ ನನಗನ್ನಿಸುತ್ತಿದೆ. ಹಾಗೆ ಮಾಡಿದರೆ, ಕಾರ್ತೀಕ್ ಪೂರ್ತಿ ಕೆಳ ಕ್ರಮಾಂಕದಲ್ಲಿ ಆಡುವುದು ತಪ್ಪುತ್ತದೆ,’’ ಎಂದು ಮದನ್ ಹೇಳಿದ್ದಾರೆ.
ಕೆಕೆಆರ್ ಟೀಮಿಗೆ ತಾನು ನಾಯ
‘‘ನಾನಾಗಿದ್ದರೆ, ನರೈನ್ರನ್ನು ಓಪನರ್ ಆಗಿ ಆಡಿಸುತ್ತಲೇ ಇರಲಿಲ್ಲ. ಶುಭ್ಮನ್ ಜೊತೆ ಓಪನ್ ಮಾಡಲು ಒಬ್ಬ ಪ್ರಾಪರ್ ಬ್ಯಾಟ್ಸ್ಮನ್ನನ್ನು ಕಳಿಸು
ಶುಭ್ಮನ್ ಗಿಲ್ ಅವರ ಬ್ಯಾಟಿಂಗ್ನಿಂದ ತಾನು ಬಹಳ ಇಂಪ್ರೆಸ್ ಆಗಿರುವುದಾಗಿಯೂ ಮದನ್ ಹೇಳಿದ್ದಾರೆ.
‘‘ಜೊಫ್ರಾ ಆರ್ಚರ್ ಎಸೆತಗಳನ್ನು ಗಿಲ್ ಫ್ರಂಟ್ಫುಟ್ನಲ್ಲಿ ಡ್ರೈವ್ ಮಾಡುತ್ತಿದ್ದ್ದಿದ್ದನ್ನು ಮೊನ್ನೆ ಗಮನಿಸುತ್ತಿದ್ದೆ. ಆರ್ಚರ್ ಗಂಟೆಗೆ 150 ಕಿ.ಮೀ ವೇಗದಲ್ಲಿ ಬೌಲ್ ಮಾಡುತ್ತಾರೆ. ಅಷ್ಟು ವೇಗದಲ್ಲಿ ಎಸೆತ ತನ್ನೆಡೆ ಬರುವಾಗ ಬ್ಯಾಟ್ಸ್ಮನ್ ಸಾಮಾನ್ಯವಾಗಿ ಬ್ಯಾಕ್ಫುಟ್ನಲ್ಲಿ ಆಡಲು ಪ್ರಯತ್ನಿಸುತ್ತಾನೆ. ಇದರರ್ಥ ಈ ಹುಡುಗ ಖಂಡಿತವಾಗಿಯೂ ಮುಂಬರುವ ದಿನಗಳಲ್ಲಿ ದೊಡ್ಡ ಸಾಧನೆಗಳನ್ನು ಮಾಡಲಿದ್ದಾನೆ, ಭಾರತೀಯ ತಂಡಕ್ಕೆ ಒಬ್ಬ ಅತ್ಯುತ್ತಮ ಬ್ಯಾಟ್ಸ್ಮನ್ ಸಿಗಲಿದ್ದಾನೆ,’’ ಎಂದು ಮದನ್ ಲಾಲ್ ಹೇಳಿದ್ದಾರೆ.