ಇಂದು 14ನೇ ಐಪಿಎಲ್ ಪಂದ್ಯ: ಎಲ್ಲರ ಕಣ್ಣು ರಾಯುಡು ಮತ್ತು ವಿಲಿಯಮ್ಸ್ನ್ ಮೇಲೆ
ಪಾಯಿಂಟ್ಸ್ ಟೇಬಲ್ನ ಪಾತಾಳದಲ್ಲಿರುವ ಅಂದರೆ ಕ್ರಮವಾಗಿ 7 ಮತ್ತು 8ನೇ ಸ್ಥಾನದಲ್ಲಿರುವ ಸನ್ರೈಸರ್ಸ್ ಹೈದರಾಬಾದ್ ಮತ್ತು ಚೆನೈ ಸೂಪರ್ ಕಿಂಗ್ಸ್ ನಡುವೆ ಇಂದು ದುಬೈ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ಇಂಡಿಯನ್ ಪ್ರಿಮೀಯರ್ ಲೀಗ್ 13ನೇ ಅವೃತಿಯ 14ನೇ ಪಂದ್ಯ ನಡೆಯಲಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಮುಂಬೈಯನ್ನು ಸೋಲಿಸಿ ಶುಭಾರಂಭ ಮಾಡಿದ್ದ ಚೆನೈ ನಂತರ ಆಡಿದ ಎರಡರಲ್ಲಿ ಸೋತು ವಿಚಲಿತಗೊಂಡಿದೆ. ಮತ್ತೊಂದೆಡೆ ಮೊದಲೆರಡರಲ್ಲಿ ಸೋತ ನಂತರ ಆಡುವ ಎಲೆವೆನ್ಲ್ಲಿ ಕೇನ್ ವಿಲಿಯಮ್ಸ್ನ್ ಅವರ ಸೇರ್ಪಡೆಯಿಂದ ಗೆಲುವಿನ ರುಚಿ ಕಂಡಿರುವ ಹೈದರಾಬಾದ್ […]
ಪಾಯಿಂಟ್ಸ್ ಟೇಬಲ್ನ ಪಾತಾಳದಲ್ಲಿರುವ ಅಂದರೆ ಕ್ರಮವಾಗಿ 7 ಮತ್ತು 8ನೇ ಸ್ಥಾನದಲ್ಲಿರುವ ಸನ್ರೈಸರ್ಸ್ ಹೈದರಾಬಾದ್ ಮತ್ತು ಚೆನೈ ಸೂಪರ್ ಕಿಂಗ್ಸ್ ನಡುವೆ ಇಂದು ದುಬೈ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ಇಂಡಿಯನ್ ಪ್ರಿಮೀಯರ್ ಲೀಗ್ 13ನೇ ಅವೃತಿಯ 14ನೇ ಪಂದ್ಯ ನಡೆಯಲಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಮುಂಬೈಯನ್ನು ಸೋಲಿಸಿ ಶುಭಾರಂಭ ಮಾಡಿದ್ದ ಚೆನೈ ನಂತರ ಆಡಿದ ಎರಡರಲ್ಲಿ ಸೋತು ವಿಚಲಿತಗೊಂಡಿದೆ. ಮತ್ತೊಂದೆಡೆ ಮೊದಲೆರಡರಲ್ಲಿ ಸೋತ ನಂತರ ಆಡುವ ಎಲೆವೆನ್ಲ್ಲಿ ಕೇನ್ ವಿಲಿಯಮ್ಸ್ನ್ ಅವರ ಸೇರ್ಪಡೆಯಿಂದ ಗೆಲುವಿನ ರುಚಿ ಕಂಡಿರುವ ಹೈದರಾಬಾದ್ ವಿಶ್ವಾಸದಿಂದ ಬೀಗುತ್ತಿದೆ.
[yop_poll id=”4″]
ಕಳಾಹೀನ ಬ್ಯಾಟಿಂಗ್ ಪ್ರದರ್ಶನಗಳು ಚೆನೈಗೆ ಈ ಬಾರಿಯ ಟೂರ್ನಿಯಲ್ಲಿ ಮುಳುವಾಗುತ್ತಿವೆ. ಮುಂಬೈ ವಿರುದ್ಧ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ ಅಂಬಟಿ ರಾಯುಡು ನಂತರದ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದು ಟೀಮಿನ ಬ್ಯಾಟಿಂಗ್ ಬಲವನ್ನೇ ಕುಂದಿಸಿತು. ಇವತ್ತಿನ ಪಂದ್ಯದಲ್ಲಿ ರಾಯುಡು ಆಡುವುದು ನಿಶ್ಚಿತವಾಗಿದ್ದು ಅವರು ಮತ್ತೊಮ್ಮೆ ಬ್ಯಾಟಿಂಗ್ ಆಧಾರಸ್ತಂಭವಾಗಲಿದ್ದಾರೆ. ರಾಯುಡು ಮರಳುವಿಕೆಯಿಂದ ಏಕಾಂಗಿಯಾಗಿ ರನ್ ಗಳಿಸುತ್ತಿರುವ ಫಫ್ ಡು ಪ್ಲೆಸ್ಸಿ ಮೇಲಿನ ಒತ್ತಡ ಕಡಿಮೆಯಾಗಲಿದೆ.
ಇದನ್ನೂ ಓದಿ: IPL 2020: SRH vs CSK Live Score
ರಾಯುಡು ವಾಪಸ್ಸು ಬರುವುದೆಂದರೆ, ಬ್ಯಾಟಿಂಗ್ ಕಲೆಯನ್ನೇ ಮರೆತಂತಿರುವ ಓಪನರ್ ಮುರಳಿ ವಿಜಯ್ ಸ್ಥಾನ ಕಳೆದುಕೊಂಡಂತೆಯೇ. ವಿಜಯ್ಗೆ ವಯಸ್ಸು ಜಾಸ್ತಿಯಾಗುತ್ತಿದೆಯೊ ಅಥವಾ ಲಾಕ್ಡೌನ್ ಜಡತ್ವದಿಂದ ಅವರಿನ್ನೂ ಹೊರಬಂದಿಲ್ಲವೋ ಅನ್ನುವುದನ್ನು ಟೀಮಿನ ಮೆಂಟರ್ ಸ್ಟೀಫೆನ್ ಫ್ಲೆಮಿಂಗ್ ಹೇಳಬೇಕು. ವಿಜಯ್ ಓಪನಿಂಗ್ ಪಾರ್ಟ್ನರ್ ಶೇನ್ ವಾಟ್ಸನ್ ಸಹ ಔಟ್ ಆಫ್ ಫಾರ್ಮ್ನಲ್ಲಿದ್ದಾರೆ. ಓಪನರ್ಗಳ ವೈಫಲ್ಯ ಟೀಮಿನ ಒಟ್ಟಾರೆ ಬ್ಯಾಟಿಂಗ್ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ.
ಖುದ್ದು ತಮ್ಮ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಅನಿಶ್ಚಿತತೆಯಲ್ಲಿರುವ ನಾಯಕ ಮಹೇಂದ್ರ ಸಿಂಗ್ ಧೋನಿ ಗೊಂದಲಕ್ಕೆ ಸಿಲುಕಿದ್ದ್ದಾರೆ. ಅವರಿಗೂ ವಯಸ್ಸಾಗುತ್ತಿದೆ. ಭಾರಿ ಭರವಸೆ ಮೂಡಿಸಿದ್ದ ಋತುರಾಜ್ ಗಾಯಕ್ವಾಡ್ ಸಿಕ್ಕಿರುವ ಅವಕಾಶಗಳನ್ನು ಹಾಳು ಮಾಡಿಕೊಳ್ಳತ್ತಿದ್ದಾರೆ. ಮಿಡ್ಲ್ ಆರ್ಡರ್ನ ಮತ್ತೊಬ್ಬ ಬ್ಯಾಟ್ಸ್ಮನ್ ಕೇದಾರ್ ಜಾಧವ್ ಆವರ ಬ್ಯಾಟಿನಿಂದಲೂ ರನ್ ಸಿಡಿಯುತ್ತಿಲ್ಲ.
ಈ ಹಿನ್ನೆಲೆಯಲ್ಲಿ ಚೈನೈ ಟೀಮಿಗೆ ಅಪಾರ ಸೇವೆ ಸಲ್ಲಿಸಿರುವ ಮತ್ತು ಈಗ ಆಯ್ಕೆಗೆ ಲಭ್ಯರಿರುವ ಡ್ವೇನ್ ಬ್ರಾವೊ ಅವರನ್ನು ಇಂದು ಆಡಿಸಬಹುದು. ಹಾಗಾದಲ್ಲಿ, ಚೆನೈ ಹೆಚ್ಚು ಸಮತೋಲಿತ ತಂಡವಾಗಲಿದೆ ಯಾಕೆಂದರೆ, ಬ್ರಾವೊ ಉಪಯುಕ್ತ ಅಲ್ರೌಂಡರ್. ಟೀಮಿನ ಬೌಲಿಂಗ್ ವಿಭಾಗಕ್ಕೂ ಕಾಯಕಲ್ಪ ಬೇಕಾಗಿದೆ. ರವೀಂದ್ರ ಜಡೇಜಾ ರನ್ ಸೋರುತ್ತಿದ್ದಾರೆ. ದೀಪಕ್ ಚಹರ್ ಪರಿಣಾಮಕಾರಿಯೆನಿಸುತ್ತಿಲ್ಲ, ಕರ್ಣ್ ಶರ್ಮ ಅವರದ್ದು ಆಟಕ್ಕುಂಟು ಲೆಕ್ಕಕ್ಕಿಲ್ಲ ಸ್ಥಿತಿ. ಸ್ಯಾಮ್ ಕರನ್ ಮಾತ್ರ ಟೀಮಿಗೆ ಉಪಯುಕ್ತ ಕಾಣಿಕೆ ನೀಡುತ್ತಿದ್ದಾರೆ. ಮೈದಾನದಲ್ಲಿ ಧಡೂತಿ ಅನಿಸುತ್ತಿರುವ ಪಿಯುಶ್ ಚಾವ್ಲಾ ಜಾಗದಲ್ಲಿ ಇವತ್ತು 41ರ ಹರೆಯದ ಆದರೆ ಫಿಟ್ ಇಮ್ರಾನ್ ತಾಹಿರ್ ಆಡಬಹುದು.
ಅತ್ತ, ಹೈದರಾಬಾದಿನ ಓಪನರ್ಗಳಾದ ನಾಯಕ ಡೇವಿಡ್ ವಾರ್ನರ್ ಮತ್ತು ಜಾನಿ ಬೇರ್ಸ್ಟೊ ರನ್ ಗಳಿಸುತ್ತಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಆಡುತ್ತಿರುವ ಮನೀಶ್ ಪಾಂಡೆ ಸಹ ಉತ್ತಮ ಸ್ಪರ್ಶದಲ್ಲಿದ್ದಾರೆ. ಪ್ರಿಯಮ್ ಗಾರ್ಗ್ ಮತ್ತು ಅಬ್ದುಲ್ ಸಮದ್ಗೆ ಬ್ಯಾಟಿಂಗ್ ಮಾಡುವ ಅವಕಾಶಗಳು ಸಿಗುತ್ತಿಲ್ಲ.
ಪ್ರಸಕ್ತ ವಿಶ್ವದ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲೊಬ್ಬರಾಗಿರುವ ನ್ಯೂಜಿಲೆಂಡಿನ ನಾಯಕ ವಿಲಿಯಮ್ಸ್ನ್ ಆಡುವ ಎಲೆವೆನ್ನಲ್ಲಿ ಬಂದಿರುವುದರಿಂದ ಟೀಮಿನ ಬ್ಯಾಟಿಂಗ್ ಸಶಕ್ತಗೊಂಡಿದೆ. ತನ್ನ ಬತ್ತಳಿಕೆಯಲ್ಲಿ ಎಲ್ಲ ಹೊಡೆತಗಳನ್ನು ಹೊದಿರುವ ವಿಲಿಯಮ್ಸ್ನ್ ಆಡುವ ಶೈಲಿ ಇತರರಿಗಿಂತ ಕೊಂಚ ಭಿನ್ನವಾಗಿದೆ. ಹೈದರಾಬಾದ್ಗೆ ಸದ್ಯಕ್ಕೆ ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಚಿಂತೆಯಿಲ್ಲ.
ಹಾಗೆ ನೋಡಿದರೆ ಟೀಮಿನ ಬೌಲಿಂಗ್ ಯುನಿಟ್ ಸಹ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಚಿಕ್ಕ ಪ್ರಮಾಣದ ಮೊತ್ತಗಳನ್ನೂ ಅವರು ಡಿಫೆಂಡ್ ಮಾಡಿಕೊಳ್ಳುತ್ತಿದ್ದಾರೆ. ರಶೀದ್ ಖಾನ್, ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ತಾನು ಯಾಕೆ ಉತ್ಕೃಷ್ಟ ಬೌಲರ್ ಅನ್ನುವುದನ್ನು ಡೆಲ್ಲಿ ವಿರುದ್ಧ ಆಡಿದ ಪಂದ್ಯದಲ್ಲಿ ಸಾಬೀತು ಮಾಡಿದರು. ವೇಗಿ ಭುವನೇಶ್ವರ್ ಕುಮಾರ್ ಸಹ ಉತ್ತಮವಾಗಿ ಆಕ್ರಮಣ ನಡೆಸುತ್ತಿರುವುದು, ವಾರ್ನರ್ ಚಿಂತೆಯನ್ನು ಕಡಿಮೆ ಮಾಡಿದೆ. ಕಳೆದೆರಡು ಸೀಸನ್ನಲ್ಲಿ ಚೆನ್ನಾಗಿ ಬೌಲ್ ಮಾಡಿದ್ದ ಸಿದ್ದಾರ್ಥ್ ಕೌಲ್ ಇಂದು ಆಡುವ ನಿರೀಕ್ಷೆಯಿದೆ.
ಯಾರ್ಕರ್ಗಳನ್ನು ಎಸೆಯುವುದರಲ್ಲಿ ಅಗಾಧ ಪ್ರಾವೀಣ್ಯತೆ ಸಾಧಿಸಿರುವ ಟಿ ನಟರಾಜನ್ ತಮ್ಮ ಖ್ಯಾತಿಗೆ ತಕ್ಕ ದಾಳಿ ನಡೆಸುತ್ತಿದ್ದಾರೆ.
Published On - 4:45 pm, Fri, 2 October 20