ನರೈನ್​​ರನ್ನು ಓಪನರ್ ಆಗಿ ಆಡಿಸುವುದು ವ್ಯರ್ಥ: ಮದನ್ ಲಾಲ್

ಸುನಿಲ್ ನರೈನ್ ಅವರನ್ನು ಆರಂಭ ಆಟಗಾರನನ್ನಾಗಿ ಆಡಿಸುತ್ತಿರುವುದು ಕೊಲ್ಕತಾ ನೈಟ್​ರೈಡರ್ಸ್ ಬ್ಯಾಟಿಂಗ್ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಭಾರತದ ಮಾಜಿ ಮಧ್ಯಮ ವೇಗದ ಬೌಲರ್ ಮದನ್ ಲಾಲ್ ಹೇಳಿದ್ದಾರೆ. ಒಂದು ಕ್ರೀಡಾ ಚ್ಯಾನೆಲ್​ನೊಂದಿಗೆ ಸಂವಾದದಲ್ಲಿ ಮಾತಾಡಿರುವ ಮದನ್, ನರೈನ್ ಅವರನ್ನು ಸದರಿ ಇಂಡಿಯನ್ ಪ್ರಿಮೀಯರ್ ಲೀಗ್​ನಲ್ಲಿ ಆರಂಭಿಕನಾಗಿ ಆಡಿಸುತ್ತಿರುವುದು ಬ್ಯಾಕ್​ಫೈರ್ ಆಗುತ್ತಿದೆ ಎಂದು ಹೇಳಿದ್ದಾರೆ. ‘‘ನರೈನ್ ಅವರಿಗೆ ದೊಡ್ಡ ಹೊಡೆತಗಳನ್ನು ಬಾರಿಸುವುದು ಈ ಸೀಸನಲ್ಲಿ ಸಾಧ್ಯವಾಗುತ್ತಿಲ್ಲ. ಹಾಗಾಗಿ ಶುಭ್​ಮನ್ ಗಿಲ್ ಜೊತೆ ನಾಯಕ ದಿನೇಶ್ ಕಾರ್ತೀಕ್ […]

ನರೈನ್​​ರನ್ನು ಓಪನರ್ ಆಗಿ ಆಡಿಸುವುದು ವ್ಯರ್ಥ: ಮದನ್ ಲಾಲ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Oct 02, 2020 | 6:27 PM

ಸುನಿಲ್ ನರೈನ್ ಅವರನ್ನು ಆರಂಭ ಆಟಗಾರನನ್ನಾಗಿ ಆಡಿಸುತ್ತಿರುವುದು ಕೊಲ್ಕತಾ ನೈಟ್​ರೈಡರ್ಸ್ ಬ್ಯಾಟಿಂಗ್ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಭಾರತದ ಮಾಜಿ ಮಧ್ಯಮ ವೇಗದ ಬೌಲರ್ ಮದನ್ ಲಾಲ್ ಹೇಳಿದ್ದಾರೆ. ಒಂದು ಕ್ರೀಡಾ ಚ್ಯಾನೆಲ್​ನೊಂದಿಗೆ ಸಂವಾದದಲ್ಲಿ ಮಾತಾಡಿರುವ ಮದನ್, ನರೈನ್ ಅವರನ್ನು ಸದರಿ ಇಂಡಿಯನ್ ಪ್ರಿಮೀಯರ್ ಲೀಗ್​ನಲ್ಲಿ ಆರಂಭಿಕನಾಗಿ ಆಡಿಸುತ್ತಿರುವುದು ಬ್ಯಾಕ್​ಫೈರ್ ಆಗುತ್ತಿದೆ ಎಂದು ಹೇಳಿದ್ದಾರೆ.

‘‘ನರೈನ್ ಅವರಿಗೆ ದೊಡ್ಡ ಹೊಡೆತಗಳನ್ನು ಬಾರಿಸುವುದು ಈ ಸೀಸನಲ್ಲಿ ಸಾಧ್ಯವಾಗುತ್ತಿಲ್ಲ. ಹಾಗಾಗಿ ಶುಭ್​ಮನ್ ಗಿಲ್ ಜೊತೆ ನಾಯಕ ದಿನೇಶ್ ಕಾರ್ತೀಕ್ ಇನ್ನಿಂಗ್ಸ್ ಆರಂಭಿಸುವುದು ಸಮರ್ಪಕ ಅಂತ ನನಗನ್ನಿಸುತ್ತಿದೆ. ಹಾಗೆ ಮಾಡಿದರೆ, ಕಾರ್ತೀಕ್ ಪೂರ್ತಿ ಕೆಳ ಕ್ರಮಾಂಕದಲ್ಲಿ ಆಡುವುದು ತಪ್ಪುತ್ತದೆ,’’ ಎಂದು ಮದನ್ ಹೇಳಿದ್ದಾರೆ.

ಕೆಕೆಆರ್ ಟೀಮಿಗೆ ತಾನು ನಾಯಕನಾಗಿದ್ದರೆ ನರೈನ್​ರನ್ನು ಇನ್ನಿಂಗ್ಸ್ ಆರಂಭಿಸಲು ಸರ್ವಥಾ ಕಳಿಸುತ್ತಿರಲಿಲ್ಲವೆಂದು 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಮದನ್ ಲಾಲ್ ಹೇಳಿದ್ದಾರೆ.

‘‘ನಾನಾಗಿದ್ದರೆ, ನರೈನ್​ರನ್ನು ಓಪನರ್ ಆಗಿ ಆಡಿಸುತ್ತಲೇ ಇರಲಿಲ್ಲ. ಶುಭ್​ಮನ್ ಜೊತೆ ಓಪನ್ ಮಾಡಲು ಒಬ್ಬ ಪ್ರಾಪರ್ ಬ್ಯಾಟ್ಸ್​ಮನ್​ನನ್ನು ಕಳಿಸುತ್ತಿದ್ದೆ. ಮೊದಲ ಆರು ಓವರ್​ಗಳಲ್ಲಿ 50-60 ರನ್ ಬರಬೇಕಾದರೆ ಓಪನರ್​ಗಳಿಬ್ಬರು ಪರಿಣಿತ ಬ್ಯಾಟ್ಸ್​ಮನ್​ಗಳಾಗಿರಬೇಕು. ದಿನೇಶ್ ಓಪನ್ ಮಾಡದೆ ಹೋದರೆ ಮೋರ್ಗನ್ ಮತ್ತು ರಸ್ಸೆಲ್ ಅವರ ನಂತರ ಕ್ರೀಸಿಗೆ ಬರಬೇಕಾಗುತ್ತದೆ. ಇದು ಟೀಮಿನ ಬ್ಯಾಟಿಂಗ್ ಮೇಲೆ ಪರಿಣಾಮ ಬೀರುತ್ತಿದೆ. ಒಂದು ಪಕ್ಷ ದಿನೇಶ್, ಮಿಡ್ಲ್ ಆರ್ಡರ್​ನಲ್ಲಿ ಮೊರ್ಗನ್ ಮತ್ತು ರಸ್ಸೆಲ್ ಅವರಿಗಿಂತ ಮೊದಲು ಆಡಲು ಬಂದರೂ ಟೀಮಿಗೆ ತೊಂದರೆಯಾಗುತ್ತದೆ,’’ ಎಂದು ಮದನ್ ಹೇಳಿದ್ದಾರೆ.

ಶುಭ್​ಮನ್ ಗಿಲ್ ಅವರ ಬ್ಯಾಟಿಂಗ್​ನಿಂದ ತಾನು ಬಹಳ ಇಂಪ್ರೆಸ್ ಆಗಿರುವುದಾಗಿಯೂ ಮದನ್ ಹೇಳಿದ್ದಾರೆ.

‘‘ಜೊಫ್ರಾ ಆರ್ಚರ್ ಎಸೆತಗಳನ್ನು ಗಿಲ್ ಫ್ರಂಟ್​ಫುಟ್​ನಲ್ಲಿ ಡ್ರೈವ್ ಮಾಡುತ್ತಿದ್ದ್ದಿದ್ದನ್ನು ಮೊನ್ನೆ ಗಮನಿಸುತ್ತಿದ್ದೆ. ಆರ್ಚರ್ ಗಂಟೆಗೆ 150 ಕಿ.ಮೀ ವೇಗದಲ್ಲಿ ಬೌಲ್ ಮಾಡುತ್ತಾರೆ. ಅಷ್ಟು ವೇಗದಲ್ಲಿ ಎಸೆತ ತನ್ನೆಡೆ ಬರುವಾಗ ಬ್ಯಾಟ್ಸ್​ಮನ್ ಸಾಮಾನ್ಯವಾಗಿ ಬ್ಯಾಕ್​ಫುಟ್​ನಲ್ಲಿ ಆಡಲು ಪ್ರಯತ್ನಿಸುತ್ತಾನೆ. ಇದರರ್ಥ ಈ ಹುಡುಗ ಖಂಡಿತವಾಗಿಯೂ ಮುಂಬರುವ ದಿನಗಳಲ್ಲಿ ದೊಡ್ಡ ಸಾಧನೆಗಳನ್ನು ಮಾಡಲಿದ್ದಾನೆ, ಭಾರತೀಯ ತಂಡಕ್ಕೆ ಒಬ್ಬ ಅತ್ಯುತ್ತಮ ಬ್ಯಾಟ್ಸ್​ಮನ್ ಸಿಗಲಿದ್ದಾನೆ,’’ ಎಂದು ಮದನ್ ಲಾಲ್ ಹೇಳಿದ್ದಾರೆ.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್