AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2020: ಮುಂಬೈ ಹಾಗೂ ಪಂಜಾಬ್​ ನಡುವಿನ ಹಣಾಹಣಿಯ ಫೋಟೊಗಳಿವು..

ಐಪಿಎಲ್​ನ ಇಂದಿನ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ದ 48 ರನ್​ಗಳ ಹೀನಾಯ ಸೋಲು ಅನುಭವಿಸಿದೆ. ಪಂಜಾಬ್ ವಿರುದ್ಧ 70 ರನ್ ಗಳಿಸಿದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ, ಐಪಿಎಲ್​ನಲ್ಲಿ 5,000 ರನ್ ಬಾರಿಸಿ ದಾಖಲೆ ಬರೆದ್ರು. ಇದಕ್ಕೂ ಮುನ್ನ ಚೆನ್ನೈ ತಂಡದ ಸುರೇಶ್ ರೈನಾ ಹಾಗೂ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ರು. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 48 ರನ್​ಗಳ ಗೆಲುವು ದಾಖಲಿಸಿದ ಮುಂಬೈ, ಪಾಯಿಂಟ್ಸ್ […]

IPL 2020: ಮುಂಬೈ ಹಾಗೂ ಪಂಜಾಬ್​ ನಡುವಿನ ಹಣಾಹಣಿಯ ಫೋಟೊಗಳಿವು..
ಸಾಧು ಶ್ರೀನಾಥ್​
|

Updated on: Oct 02, 2020 | 3:46 PM

Share

ಐಪಿಎಲ್​ನ ಇಂದಿನ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ದ 48 ರನ್​ಗಳ ಹೀನಾಯ ಸೋಲು ಅನುಭವಿಸಿದೆ.

ಪಂಜಾಬ್ ವಿರುದ್ಧ 70 ರನ್ ಗಳಿಸಿದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ, ಐಪಿಎಲ್​ನಲ್ಲಿ 5,000 ರನ್ ಬಾರಿಸಿ ದಾಖಲೆ ಬರೆದ್ರು. ಇದಕ್ಕೂ ಮುನ್ನ ಚೆನ್ನೈ ತಂಡದ ಸುರೇಶ್ ರೈನಾ ಹಾಗೂ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ರು.

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 48 ರನ್​ಗಳ ಗೆಲುವು ದಾಖಲಿಸಿದ ಮುಂಬೈ, ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಒಟ್ಟು 4 ಪಂದ್ಯಗಳನ್ನಾಡಿರೋ ಮುಂಬೈ, 2 ಗೆಲುವು 2 ಸೋಲಿನೊಂದಿಗೆ 4 ಅಂಕಗಳನ್ನ ಕಲೆಹಾಕಿದೆ.

ಮುಂಬೈ ವಿರುದ್ಧ 18 ಎಸೆತಗಳಲ್ಲಿ 25 ರನ್ ಗಳಿಸಿದ ಮಯಾಂಕ್ ಅರರ್ವಾಲ್, ಆರೇಂಜ್ ಕ್ಯಾಪ್ ತನ್ನದಾಗಿಸಿಕೊಂಡಿದ್ದಾರೆ. ಈ ಸೀಸನ್​ನಲ್ಲಿ 4 ಪಂದ್ಯಗಳನ್ನಾಡಿರೋ ಮಯಾಂಕ್, ಒಂದು ಶತಕ ಸೇರಿದಂತೆ 246 ರನ್ ಗಳಿಸಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ರೋಹಿತ್ ಶರ್ಮಾ ವಿಕೆಟ್ ಕಬಳಿಸಿದ ಮೊಹಮ್ಮದ್ ಶಮಿ, ಪರ್ಪಲ್ ಕ್ಯಾಪ್ ಪಡೆದುಕೊಂಡ್ರು. 4 ಪಂದ್ಯಗಳಲ್ಲಿ ಶಮಿ 8 ವಿಕೆಟ್ ಪಡೆದಿದ್ದಾರೆ. ಇನ್ನೂ ಎರಡನೇ ಸ್ಥಾನದಲ್ಲಿ ಕಗಿಸೋ ರಬಾಡ ಇದ್ದಾರೆ.

ಪಂಜಾಬ್ ಸೋಲಿಗೆ ಕೊನೇ ಓವರ್​ನಲ್ಲಿ 25 ರನ್ ಬಿಟ್ಟುಕೊಟ್ಟಿದ್ದೇ ಬಹುದೊಡ್ಡ ಕಾರಣವಾಯ್ತು. ಕೆ.ಗೌತಮ್ 20ನೇ ಓವರ್​ನಲ್ಲಿ 4 ಸಿಕ್ಸ್ ಸಹಿತ 25 ರನ್ ಬಿಟ್ಟುಕೊಟ್ಟಿದ್ದು ತಂಡದ ಮೇಲೆ ಭಾರಿ ಒತ್ತಡವನ್ನುಂಟು ಮಾಡ್ತು. ಇದು ಪಂಜಾಬ್ ಸೋಲಿಗೆ ಕಾರಣವಾಯ್ತು.

ಮುಂಬೈ ಇಂಡಿಯನ್ಸ್ ಗೆಲ್ಲೋದಕ್ಕೆ ಕೆರಾನ್ ಪೊಲ್ಲಾರ್ಡ್ ತೆಗೆದುಕೊಂಡು ಡಿಆರ್​ಎಸ್ ಕೂಡ ಕಾರಣವಾಯ್ತು. ಮೊಹಮ್ಮದ್ ಶಮಿಯ 17ನೇ ಓವರ್​ನ ಕೊನೇ ಎಸೆತದಲ್ಲಿ ಪೊಲ್ಲಾರ್ಡ್ ಎಲ್​ಬಿ ಆಗಿರ್ತಾರೆ. ಆದ್ರೆ, ಡಿಆರ್​ಎಸ್ ಮೊರೆ ಹೋದಾಗ ನಾಟೌಟ್ ಆಗಿತ್ತು.

ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಮುಂಬೈಗೆ ಉತ್ತಮ ಆರಂಭ ಸಿಗಲಿಲ್ಲ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಪವರ್​​ ಪ್ಲೇನಲ್ಲಿ ರನ್ ಗಳಿಸೋಕೆ ಪರದಾಡಬೇಕಾಯ್ತು. ಆದ್ರೆ, ಪೊಲ್ಲಾರ್ಡ್, ಹಾರ್ದಿಕ್ ಸಂಕಷ್ಟ ದೂರ ಮಾಡಿದ್ರು ಎಂದು ರೋಹಿತ್ ತಿಳಿಸಿದ್ದಾರೆ.

ಮುಂಬೈ ವಿರುದ್ಧ ಸೋಲು ನಿಜಕ್ಕೂ ಬೇಸರ ತರಿಸಿದೆ ಎಂದು ಕ್ಯಾಪ್ಟನ್ ಕೆ.ಎಲ್.ರಾಹುಲ್ ಹೇಳಿದ್ದಾರೆ. ಹಲವು ತಪ್ಪುಗಳಿಂದಾಗಿ ನಾವು ಸೋಲುಕಂಡಿದ್ದೇವೆ. ಮುಂದಿನ ಪಂದ್ಯದಲ್ಲಿ ತಪ್ಪುಗಳನ್ನ ತಿದ್ದಿಕೊಳ್ಳುತ್ತೇವೆ ಎಂದು ರಾಹುಲ್ ತಿಳಿಸಿದ್ದಾರೆ.