India vs England: ರಾಹುಲ್​ರನ್ನು ತಂಡದಿಂದ ಕೈಬಿಟ್ಟರೆ ಅವರ ಆತ್ಮವಿಶ್ವಾಸ ಉಡುಗಿ ಹೋಗುತ್ತದೆ: ವಿವಿಎಸ್ ಲಕ್ಷ್ಮಣ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 18, 2021 | 6:13 PM

ಸ್ಟಾರ್​ ಸ್ಪೋರ್ಟ್ಸ್ ನೆಟ್​ವರ್ಕ್​ನೊಂದಿಗೆ ಗುರುವಾರದಂದು ಮಾತಾಡಿದ ಲಕ್ಷ್ಮಣ್, ರಾಹುಲ್ ಅವರನ್ನು ಟಾಪ್ ಆರ್ಡರ್​ನಲ್ಲಿ ಆಡಿಸುವುದು ಮುಂದುವರಿಸಬೇಕು ಎಂದು ಹೇಳಿದ್ದು, ತಾವು ಔಟಾಗಿರುವ ರೀತಿಯ ಬಗ್ಗೆ ರಾಹುಲ್ ತೀವ್ರ ಅಸಂತುಷ್ಟರಾಗಿರುತ್ತಾರೆ ಎಂದರು.

India vs England: ರಾಹುಲ್​ರನ್ನು ತಂಡದಿಂದ ಕೈಬಿಟ್ಟರೆ ಅವರ ಆತ್ಮವಿಶ್ವಾಸ ಉಡುಗಿ ಹೋಗುತ್ತದೆ: ವಿವಿಎಸ್ ಲಕ್ಷ್ಮಣ್
ಕೆ ಎಲ್ ರಾಹುಲ್
Follow us on

ಟಿ20 ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾದ ಆರಂಭ ಆಟಗಾರ ಕೆ.ಎಲ್.ರಾಹುಲ್ ಕುರಿತು ಚರ್ಚೆ ನಡೆಯುತ್ತಲೇ ಇದೆ. ಇಂದು (ಗುರುವಾರ) ಅಹಮದಾಬಾದಿನ ಅದೇ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿರುವ 4ನೇ ಪಂದ್ಯದಲ್ಲಿ ಅವರು ಆಡುವ ಇಲೆವೆನ್​ನಲ್ಲಿ ಸ್ಥಾನ ಗಿಟ್ಟಿಸುವರೇ ಅಥವಾ ಸೂರ್ಯಕುಮಾರ್ ಯಾದವ್ ಅವರನ್ನು ಆಡಿಸಲಾಗುತ್ತದೆಯೇ? ಮೊದಲ ಮೂರು ಪಂದ್ಯಗಳಲ್ಲಿ ರಾಹುಲ್ ಅವರ ಸ್ಕೋರ್ ಲೈನ್ 1-0-0 ಆಗಿದ್ದರೂ ಟೀಮ್ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಠೋಡ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ರಾಹುಲ್​ಗೆ ಮಾಜಿ ಆಟಗಾರ ವಿವಿಎಸ್ ಲಕ್ಷ್ಮನ್ ಅವರ ಬೆಂಬಲವೂ ಸಿಕ್ಕಿದೆ.

ಸ್ಟಾರ್​ ಸ್ಪೋರ್ಟ್ಸ್ ನೆಟ್​ವರ್ಕ್​ನೊಂದಿಗೆ ಗುರುವಾರದಂದು ಮಾತಾಡಿದ ಲಕ್ಷ್ಮಣ್, ರಾಹುಲ್ ಅವರನ್ನು ಟಾಪ್ ಆರ್ಡರ್​ನಲ್ಲಿ ಆಡಿಸುವುದು ಮುಂದುವರಿಸಬೇಕು ಎಂದು ಹೇಳಿದ್ದು, ತಾವು ಔಟಾಗಿರುವ ರೀತಿಯ ಬಗ್ಗೆ ರಾಹುಲ್ ತೀವ್ರ ಅಸಂತುಷ್ಟರಾಗಿರುತ್ತಾರೆ ಎಂದರು.

‘ಈ ವರ್ಷ ಅವರು (ರಾಹುಲ್) ಅಂತರರಾಷ್ಟ್ರೀಯ ಕ್ರಿಕೆಟ್ ಆಡಿಲ್ಲದಿರುವುದರಿಂದ ಅವರನ್ನು 4ನೇ ಪಂದ್ಯದಲ್ಲಿ ಆಡಬೇಕು. ಟೆಸ್ಟ್​ ಪಂದ್ಯಗಳಲ್ಲಿ ಅವರು ಟೀಮಿನ ರೆಗ್ಯುಲರ್ ಸದಸ್ಯನಾಗಿಲ್ಲ. ಆದರೆ, ಕಳೆದ ಮೂರು ಇನ್ನಿಂಗ್ಸ್​ಗಳಲ್ಲಿ ತಾನು ಔಟಾಗಿರುವ ರೀತಿ ನೋಡಿ ಅವರು ನಿಶ್ಚಿತವಾಗಿಯೂ ನಿರಾಶರಾಗಿರುತ್ತಾರೆ’ ಎಂದು ಲಕ್ಷ್ಮಣ ಹೇಳಿದರು.

ವಿವಿಎಸ್ ಲಕ್ಷ್ಮಣ್

‘ರಾಹುಲ್ ಅವರ ಬ್ಯಾಟಿಂಗ್ ಗಮನಿಸಿದರೆ ಅವರ ತಾಂತ್ರಿಕವಾಗಿ ನಿಪುಣ ಬ್ಯಾಟ್ಸ್​ಮನ್ ಅನ್ನೋದು ಗೊತ್ತಾಗುತ್ತದೆ. ಟೆಸ್ಟ್​ ಕ್ರಿಕೆಟ್​ನಲ್ಲೂ ಅವರು ಶತಕಗಳನ್ನು ಬಾರಿಸಿದ್ದಾರೆ. ಅದರೆ ಇಂಗ್ಲೆಂಡ್​ ವಿರುದ್ಧ ಆಡುವಾಗ ಅವರ ಪಾದಗಳು ಕ್ರೀಸ್​ನಿಂದ ಸರಿಯುತ್ತಿಲ್ಲ ಮತ್ತು ಅವರ ಬ್ಯಾಟ್​ ಮತ್ತು ಪ್ಯಾಡ್​ಗಳ ನಡುವೆ ಗ್ಯಾಪ್ ಸೃಷ್ಟಿಯಾಗುತ್ತಿದೆ’ ಎಂದು ಲಕ್ಷ್ಮಣ್ ಹೇಳಿದರು.

ಇಂಥ ಸಂದರ್ಭದಲ್ಲಿ ರಾಹುಲ್​ ಅವರನ್ನು ಆಡುವ ಇಲೆವೆನ್​ನಿಂದ ಕೈಬಿಟ್ಟರೆ ಅವರ ಆತ್ಮವಿಶ್ವಾಸಕ್ಕೆ ದೊಡ್ಡ ಪೆಟ್ಟಾಗುತ್ತದೆ. ಯಾಕೆಂದರೆ ಸತತ ವೈಫಲ್ಯಗಳಿಂದ ಅವರು ಈಗಾಗಲೇ ಕಂಗೆಟ್ಟಿದ್ದಾರೆ ಎಂದು ಲಕ್ಷ್ಮಣ್ ಹೇಳಿದರು.

‘ರಾಹುಲ್ ಅವರ ಬ್ಯಾಟಿಂಗ್​ನಲ್ಲಿ ಸಾಮಾನ್ಯವಾಗಿ ಕಾಣುವ ಆತ್ಮವಿಶ್ವಾಸ ಮತ್ತು ಲಯ ಮಿಸ್ ಆಗಿದೆ. ನಿಸ್ಸಂದೇಹವಾಗಿ ಅವರ ಆತ್ಮವಿಶ್ವಾಸ ಉಡುಗಿಹೋಗಿದೆ. ಈ ಹಂತದಲ್ಲಿ ಅವರನ್ನು ಟೀಮಿನಿಂದ ಕೈಬಿಟ್ಟರೆ ಅವರಿಗೆ ಚೇತರಿಸಿಕೊಳ್ಳಲು ಕಷ್ಟವಾಗಬಹುದಾದ ಪೆಟ್ಟು ನೀಡುತ್ತದೆ’ ಎಂದು ಲಕ್ಷ್ಮಣ್ ಹೇಳಿದರು.

ಇದನ್ನೂ ಓದಿ: India vs England: ಸೂರ್ಯಕುಮಾರ್​ಗೆ ಅವಕಾಶ ನೀಡದೆ ಕೈಬಿಟ್ಟಿದ್ದು ಅಕ್ಷಮ್ಯ ಎಂದ ಗೌತಮ್ ಗಂಭೀರ್