India vs England | 2011ರಿಂದಲೇ ಕೊಹ್ಲಿ ಫಿಟ್​ನೆಸ್​ ಬಗ್ಗೆ ವಿಪರೀತ ಅನಿಸುವಷ್ಟು ವ್ಯಾಮೋಹ ಬೆಳಸಿಕೊಂಡಿದ್ದರು: ವೀರೇಂದ್ರ ಸೆಹ್ವಾಗ್

ಫಿಟ್ನೆಸ್​ನ ಕೊರತೆಯಿದ್ದರೆ ಅದು ಆಟಗಾರನ ಫೀಲ್ಡಿಂಗ್ ಸಾಮರ್ಥ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಇಂಗ್ಲೆಂಡ್ ವಿರುದ್ಧ ಆಡಿದ ಮೂರನೇ ಟಿ20 ಪಂದ್ಯದಲ್ಲಿ ಭಾರತದ ಫೀಲ್ಡಿಂಗ್ ಮಟ್ಟದ ಬಗ್ಗೆ ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈದಾನದಲ್ಲಿ ಯಾವುದೇ ತೆರನಾದ ರಾಜಿಗೆ ಅವಕಾಶವಿಲ್ಲ ಎಂದು ತೆವಾಟಿಯಾ ಮತ್ತು ವರುಣ್ ಫಿಟ್ನೆಸ್ ಟೆಸ್ಟ್ ಫೇಲಾದಾಗ ಕೊಹ್ಲಿ ಹೇಳಿದ್ದರು

India vs England | 2011ರಿಂದಲೇ ಕೊಹ್ಲಿ ಫಿಟ್​ನೆಸ್​ ಬಗ್ಗೆ ವಿಪರೀತ ಅನಿಸುವಷ್ಟು ವ್ಯಾಮೋಹ ಬೆಳಸಿಕೊಂಡಿದ್ದರು: ವೀರೇಂದ್ರ ಸೆಹ್ವಾಗ್
ಜಿಮ್​ನಲ್ಲಿ ವಿರಾಟ್ ಕೊಹ್ಲಿ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Mar 18, 2021 | 6:02 PM

ರಾಹುಲ್ ತೆವಾಟಿಯ ಮತ್ತು ವರುಣ್ ಚಕ್ರವರ್ತಿಗೆ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವುದು ಅಂದರೇನು ಅಂತ ಈಗ ಅರ್ಥವಾಗಿರಬೇಕು. ಈಗಿನ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಲು ಕೇವಲ ಪ್ರತಿಭೆಯೊಂದಿದ್ದರೆ ಸಾಲದು. ಪ್ರತಿಯೊಬ್ಬ ಪ್ರತಿಭಾವಂತ ಆಟಗಾರರು ದೈಹಿಕವಾಗಿ ಫಿಟ್​ ಆಗಿರವುದು ಅಷ್ಟೇ ಮುಖ್ಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತದ ಆಟಗಾರರು ಫಿಟ್ನೆಸ್ ಕಡೆ ಹೆಚ್ಚು ಗಮನ ನಿಡುತ್ತಿರುವುದು ಎಲ್ಲರಿಗೂ ಗೊತ್ತಿತುವ ವಿಚಾರವೇ. ಪ್ರಾಯಶಃ ತೆವಾಟಿಯಾ ಮತ್ತು ವರುಣ್ ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಫಿಟ್ನೆಸ್ ಟೆಸ್ಟ್​ಗಳಲ್ಲಿ ಅವರಿಬ್ಬರು ವಿಫಲರಾದಾಗ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಮ್ಯಾನೇಜ್ಮೆಂಟ್ ಆ ಟೆಸ್ಟ್​ಗಳಲ್ಲಿ ಪಾಸಾಗದ ಹೊರತು ಅಡುವ ಎಲೆವೆನ್​ನಲ್ಲಿ ಸ್ಥಾನ ಸಿಗಲಾರದು ಅಂತ ಅವರ ಮುಖಕ್ಕೆ ಹೇಳಿದರು.

ಫಿಟ್​ನೆಸ್​​ನ ಕೊರತೆಯಿದ್ದರೆ ಅದು ಆಟಗಾರನ ಫೀಲ್ಡಿಂಗ್ ಸಾಮರ್ಥ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಇಂಗ್ಲೆಂಡ್ ವಿರುದ್ಧ ಆಡಿದ ಮೂರನೇ ಟಿ20 ಪಂದ್ಯದಲ್ಲಿ ಭಾರತದ ಫೀಲ್ಡಿಂಗ್ ಮಟ್ಟದ ಬಗ್ಗೆ ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈದಾನದಲ್ಲಿ ಯಾವುದೇ ತೆರನಾದ ರಾಜಿಗೆ ಅವಕಾಶವಿಲ್ಲ ಎಂದು ತೆವಾಟಿಯಾ ಮತ್ತು ವರುಣ್ ಫಿಟ್​ನೆಸ್​ ಟೆಸ್ಟ್ ಫೇಲಾದಾಗ ಕೊಹ್ಲಿ ಹೇಳಿದ್ದರು. ಆಟಗಾರರ ದೈಹಿಕ ಸಾಮರ್ಥ್ಯದ ಬಗ್ಗೆ ಖುದ್ದು ನಾಯಕನೇ ಅಂಥ ಮನೋಭಾವ ತಳೆದಿರುವುದು ನಿಸ್ಸಂದೇಹವಾಗಿ ಉತ್ತಮ ಬೆಳವಣಿಗೆ.

ಮೊದಲೆಲ್ಲ ಭಾರತೀಯ ತಂಡದ ಆಟಗಾರರು ಫಿಟ್ನೆಸ್ ಮತ್ತು ಪೀಲ್ಡಿಂಗ್ ಗುಣಮಟ್ಟದ ಬಗ್ಗೆ ಜಾಸ್ತಿ ಯೋಚಿಸುತ್ತಿರಲಿಲ್ಲ. 90ರ ದಶಕಕ್ಕಿಂತ ಮೊದಲು ಕೆಲವರು ಮಾತ್ರ ಉತ್ತಮ ಕ್ಷೇತ್ರರಕ್ಷಕರಾಗಿರುತ್ತಿದ್ದರು. ಒಂದು ಸುಲಭದ ಕ್ಯಾಚ್​ ಹಿಡಿದರೂ ವೀಕ್ಷಕ ವಿವರಣೆಕಾರರು ‘ಅದ್ಭುತವಾಗಿ ಕ್ಯಾಚ್ ಹಿಡಿದರು,’ ಅಂತ ಬಣ್ಣಿಸುತ್ತಿದ್ದರು! ಆದರೆ ಯಾವಾಗ ವಿದೇಶಿ ಮೂಲದ ಕೋಚ್​ಗಳನ್ನು ಸೇವೆಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಗುತ್ತಿಗೆ ಪಡೆಯಲು ನಿರ್ಧರಿಸಿತೋ ಅಗಿನಿಂದ ಭಾರತದ ಫೀಲ್ಡಿಂಗ್ ಮಟ್ಟ ಸುಧಾರಣೆಯಾಗಲಾರಂಭಿಸಿತು. ಫೀಲ್ಡಿಂಗ್ ಮಟ್ಟ ಸುಧಾರಣೆಗೆ ರೆ ಫಿಟ್ನೆಸ್ ಮುಖ್ಯವಾಗುತ್ತದೆ ಅಂತ ಈ ಕೋಚ್​ಗಳು ಆಟಗಾರರಿಗೆ ಮನದಟ್ಟು ಮಾಡಿಕೊಟ್ಟರು.

Virat Kohli weightlifting

ತೂಕ ಎತ್ತುವ ಕಸರತ್ತು ಮಾಡುತ್ತಿರುವ ಕೊಹ್ಲಿ

ವಿರಾಟ್ ಕೊಹ್ಲಿ ಫಿಟ್​ನೆಸ್ ವಿಷಯದಲ್ಲಿ ಯಾವತ್ತೂ ರಾಜಿ ಮಾಡಿಕೊಳ್ಳಲಾರರು. 2011 ಇಂಗ್ಲೆಂಡ್ ಪ್ರವಾಸದಿಂದ ಅವರು ಫಿಟ್​ನೆಸ್​ ಬಗ್ಗೆ ವಿಪರೀತ ಅನ್ನುವಷ್ಟು ವ್ಯಾಮೋಹ ಬೆಳೆಸಿಕೊಂಡಿದ್ದಾರೆಂದು ಭಾರತದ ಮಾಜಿ ಆರಂಭ ಅಟಗಾರ ವಿರೇಂದ್ರ ಸೆಹ್ವಾಗ್ ಹೇಳುತ್ತಾರೆ.

‘2011-12 ರಲ್ಲಿ ಭಾರತ, ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದಾಗ ನಾನು ಸಹ ಟೀಮಿನ ಭಾಗವಾಗಿದ್ದೆ ಮತ್ತು ಅ ಸರಣಿಯ ಓವಲ್ ಮತ್ತು ಬರ್ಮಿಂಗ್​ಹ್ಯಾಂನಲ್ಲಿ ನಡೆದ ಟೆಸ್ಟ್​ಗಳಲ್ಲಿ ಆಡಿದ್ದೆ. ಇಂಗ್ಲಿಷ್ ಕೌಂಟಿಯಲ್ಲಿ ಆಡುವ ಟೀಮುಗಳೆಲ್ಲ ತಮ್ಮ ತಮ್ಮ ಡ್ರೆಸಿಂಗ್ ರೂಮುಗಳಲ್ಲಿ ಪಿಟ್ನೆಸ್ ಚಾರ್ಟ್​ಗಳನ್ನು ಹಾಕಿಕೊಂಡಿದ್ದು ಅವು ಆಟಗಾರನ ವಯಸ್ಸು ಮತ್ತು ಎತ್ತರಕ್ಕೆ ಹೊಂದಿಕೆಯಾಗುವ ದೈಹಿಕ ಸಾಮರ್ಥ್ಯಗಳನ್ನು ವಿವರಿಸುತ್ತವೆ. ಟೀಮ್ ಇಂಡಿಯಾ ಈಗ ಅನುಸರಿಸುತ್ತಿರುವ ಫಿಟ್​ನೆಸ್​ ಪರಿಮಾಣಗಳು ಪ್ರಾಯಶ: ಆ ಚಾರ್ಟ್​ಳಿಂದ ಪ್ರೇರಿತವಾಗಿವೆ,’ ಎಂದು ಕ್ರೀಡಾ ವೆಬ್​ಸೈಟ್​ ಒಂದರ ಜೊತೆ ಮಾತಾಡುವಾಗ ಸೆಹ್ವಾಗ್ ಹೇಳಿದ್ದಾರೆ.

ಆ ಚಾರ್ಟುಗಳನ್ನು ನೋಡಿ ಪ್ರೇರಿತರಾದ ಭಾರತದ ಆಟಗಾರರು ಅವುಗಳಲ್ಲಿ ವಿವರಿಸಿರುವ ಹಾಗೆಯೇ ಕಸರತ್ತುಗಳನ್ನು ಮಾಡಲು ಮುಂದಾದರಾದರೂ ಅರ್ಧಕ್ಕಿಂತ ಹೆಚ್ಚು ಆಟಗಾರರು ವಿಫಲರಾದರು, ಆದರೆ ಕೊಹ್ಲಿ ಆ ಚಾರ್ಟ್​ಗಳಲ್ಲಿ ವಿವರಿಸಿದ ವಿಷಯಗಳನ್ನು ಗಂಭೀರವಾಗಿ ತೆಗೆದುಕೊಂಡು ಆಗಿನಿಂದಲೇ ಫಿಟ್ನೆಸ್ ಬಗ್ಗೆ ಹುಚ್ಚು ಅನಿಸುವಷ್ಟು ವ್ಯಾಮೋಹ ಬೆಳಸಿಕೊಂಡರು ಎಂದು ಸೆಹ್ವಾಗ್ ಹೇಳಿದ್ದಾರೆ.

Virendra Sehwag

ವಿರೇಂದ್ರ ಸೆಹ್ವಾಗ್

‘ಇದನ್ನೆಲ್ಲ ನಾನು ಯಾಕೆ ಹೇಳುತ್ತಿರುವೆನೆಂದರೆ, ಆ ಚಾರ್ಟುಗಳು ನಮ್ಮ ಮೇಲೆ ಬಹಳ ಪ್ರಭಾವ ಬೀರಿದ್ದವು. ನಮ್ಮ ತೂಕ ಇಷ್ಟಿರಬೇಕು, ಪ್ಲೆಕ್ಸಿಬಿಲಿಟಿ ಹೀಗಿರಬೇಕು, ಮೊಬೊಲಿಟಿ ಈ ಪ್ರಮಾಣದಲ್ಲಿರಬೇಕು ಎಂಬ ಹಲವಾರು ವಿವರಗಳು ಆ ಚಾರ್ಟ​ಗಳಲ್ಲಿದ್ದವು. ನಾವು ಅವುಗಳನ್ನು ಮಾಡಲು ಹೋದಾಗ ಅರ್ಧಕ್ಕಿಂತ ಹೆಚ್ಚಿನ ನನ್ನ ಜೊತೆ ಆಟಗಾರರು ಫೇಲಾದರು. ಆದರೆ ಕೊಹ್ಲಿ ಮಾತ್ರ ಅದರಲ್ಲಿದ್ದ ಎಲ್ಲ ವಿವರಗಳನ್ನು ಎತ್ತಿಕೊಂಡರು. ಇಂಗ್ಲೆಂಡ್​ ಆಟಗಾರರು ತಮ್ಮ ಫಿಟ್ನೆಸ್​ಗಾಗಿ ಇದನ್ನೆಲ್ಲ ಮಾಡುತ್ತಾರೆಂದರೆ ನಮ್ಮಿಂದ ಯಾಕಾಗಬಾರದು ಎಂಮ ಮನೋಭಾವ ಅವರದ್ದು. ಹಾಗಾಗಿಯೇ, ಅವರ ಟೀಮಿನ ನಾಯಕನಾದಾಗಿನಿಂದ ಜೊತೆ ಆಟಗಾರರ ಫಿಟ್ನೆಸ್ ಸಹ ತನ್ನಂತೆ ಇರಬೇಕು ಅಂತ ಬಯಸುತ್ತಿದ್ದಾರೆ’ ಎಂದು ಸೆಹ್ವಾಗ್ ಹೇಳಿದ್ದಾರೆ.

ಇದನ್ನೂ ಓದಿ: India vs England: ರಾಹುಲ್ ನಮ್ಮ ಚಾಂಪಿಯನ್ ಬ್ಯಾಟ್ಸ್​ಮನ್ ಅಂತ ಹೇಳಿ ಕನ್ನಡಿಗನ ಬೆಂಬಲಕ್ಕೆ ನಿಂತ ಕ್ಯಾಪ್ಟನ್ ವಿರಾಟ್ ಕೊಹ್ಲಿ

Published On - 5:55 pm, Thu, 18 March 21

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ