India vs England: 4ನೇ T20 ಪಂದ್ಯ ನಡೆಯುವ ಸ್ಥಳ, ಸಮಯ, ನೇರ ಪ್ರಸಾರ ವೀಕ್ಷಣೆ ಯಾವ ಚಾನೆಲ್ನಲ್ಲಿ? ಇಲ್ಲಿದೆ ಮಾಹಿತಿ
India vs England: ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಹಿನ್ನೆಲೆಯಲ್ಲಿ, ಕ್ರೀಡಾಂಗಣದಲ್ಲಿ ಅಭಿಮಾನಿಗಳ ಪ್ರವೇಶವನ್ನು ಸಹ ನಿಷೇಧಿಸಲಾಗಿದೆ.
ಅಹಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ 20 ಸರಣಿಯ ನಾಲ್ಕನೇ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಪ್ರಸ್ತುತ ಭಾರತ ತಂಡವು ಸರಣಿಯಲ್ಲಿ 2-1ರ ಹಿನ್ನಡೆಯಲ್ಲಿದೆ. ಈ ಪಂದ್ಯವು ಟೀಮ್ ಇಂಡಿಯಾಕ್ಕೆ ಮಾಡು ಇಲ್ಲವೇ ಮಡಿ ಪಂದ್ಯಾದಂತ್ತಾಗಿದೆ. ಟೆಸ್ಟ್ ಸರಣಿಯಲ್ಲಿ ಜಯಗಳಿಸಿದ ನಂತರ, ಈಗ ಭಾರತ ಟಿ 20 ಸರಣಿಯಲ್ಲಿ ಸೋಲುವ ಅಪಾಯದಲ್ಲಿದೆ. ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಹಿನ್ನೆಲೆಯಲ್ಲಿ, ಕ್ರೀಡಾಂಗಣದಲ್ಲಿ ಅಭಿಮಾನಿಗಳ ಪ್ರವೇಶವನ್ನು ಸಹ ನಿಷೇಧಿಸಲಾಗಿದೆ. ಈ ಪಂದ್ಯದಲ್ಲಿ ಭಾರತಕ್ಕೆ ದೊಡ್ಡ ಸವಾಲು ಎಂದರೆ ಇಂಗ್ಲೆಂಡ್‌ನ ವೇಗದ ಬೌಲಿಂಗ್ ದಾಳಿಯನ್ನು ಎದುರಿಸುವುದು. ಇದಲ್ಲದೆ, ಕೆ.ಎಲ್. ರಾಹುಲ್ (ಆರಂಭಿಕ ಬ್ಯಾಟ್ಸ್‌ಮನ್) ಅವರ ಕಳಪೆ ಫಾರ್ಮ್ ತಂಡಕ್ಕೆ ಕಳವಳಕಾರಿ ಸಂಗತಿಯಾಗಿದೆ.
ಅಲ್ಲದೆ ಟೀಂ ಇಂಡಿಯಾದ ಸ್ಪಿನ್ ವಿಭಾಗವೂ ಕಳವಳಕಾರಿಯಾಗಿದೆ. ತಂಡದ ಮುಖ್ಯ ಸ್ಪಿನ್ ಬೌಲರ್ ಯಜ್ವೇಂದ್ರ ಚಾಹಲ್ ತಮ್ಮ ಬೌಲಿಂಗ್ ಕೈಚಳಕ ತೋರುತ್ತಿಲ್ಲ. ಅಲ್ಲದೆ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್, ಚಾಹಲ್ ಬೌಲಿಂಗ್ನಲ್ಲಿ ಸಾಕಷ್ಟು ರನ್ ಗಳಿಸಿದರು. ಜೊತೆಗೆ ಮೂರನೇ ಪಂದ್ಯದಲ್ಲಿ ಭಾರತ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಗಿತ್ತು. ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಇಶಾನ್ ಕಿಶನ್ ಎರಡನೇ ಪಂದ್ಯದಲ್ಲಿ ಅಷ್ಟಾಗಿ ಅಬ್ಬರಿಸಲಿಲ್ಲ.
ಭಾರತ-ಇಂಗ್ಲೆಂಡ್ 4 ನೇ ಟಿ20 ಪಂದ್ಯ ಎಲ್ಲಿ ನಡೆಲಿದೆ? ಇಂಡಿಯಾ ವರ್ಸಸ್ ಇಂಗ್ಲೆಂಡ್ 4 ನೇ ಟಿ 20 ಐ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪಂದ್ಯ ಆರಂಭವಾಗುವ ಸಮಯ? 4 ನೇ ಟಿ20 ಐ ಪಂದ್ಯವು ಮಾರ್ಚ್ 18 ರ ಗುರುವಾರ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಪ್ರಾರಂಭವಾಗಲಿದೆ. ಸಂಜೆ 6: 30 ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.
ಎಲ್ಲಿ ಮತ್ತು ಹೇಗೆ ವೀಕ್ಷಣೆ ಮಾಡಬಹುದು? 4 ನೇ ಟಿ20 ಐ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರ ಮಾಡಲಾಗುವುದು. ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 3 ನಲ್ಲಿ ಸಹ ನೋಡಬಹುದು.
ಆನ್‌ಲೈನ್ ಅಥವಾ ಮೊಬೈಲ್ ವೀಕ್ಷಿಸುವುದು ಹೇಗೆ? ಇಂಡಿಯಾ ವರ್ಸಸ್ ಇಂಗ್ಲೆಂಡ್ 4 ನೇ ಟಿ20 ಐ ಪಂದ್ಯವನ್ನು ಆನ್‌ಲೈನ್ ಮತ್ತು ಮೊಬೈಲ್‌ನಲ್ಲಿ ಹಾಟ್‌ಸ್ಟಾರ್ ಮೂಲಕ ನೋಡಬಹುದು.
ಇದಲ್ಲದೆ ನೀವು, ಪಂದ್ಯದ ಕ್ಷಣಕ್ಷಣದ ಮಾಹಿತಿ, ಸ್ಕೋರ್‌ಕಾರ್ಡ್ ಮತ್ತು ಪಂದ್ಯಕ್ಕೆ ಸಂಬಂಧಿಸಿದ ಕೆಲವು ಕುತೂಹಲಕಾರಿ ವಿಚಾರಗಳನ್ನು ಟಿವಿ9 ಡಿಜಿಟಲ್ ಕ್ರಿಕೆಟ್ ಲೈವ್ಬ್ಲಾಗ್ನಲ್ಲಿ ಕಾಣಬಹುದಾಗಿದೆ.
ಭಾರತದ ಸಂಭವನೀಯ ಹನ್ನೊಂದು ಹೀಗಿರಬಹುದು ರೋಹಿತ್ ಶರ್ಮಾ, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ರಾಹುಲ್ ಚಹರ್, ಭುವನೇಶ್ವರ ಕುಮಾರ್, ಶಾರ್ದುಲ್ ಠಾಕೂರ್.