ಬೆಂಗಳೂರು: ಸಂಜನಾಗೂ ಫಾಝಿಲ್‌ಗೂ ಇರೋ ಕ್ಯಾಸಿನೋ ಬ್ಯುಸಿನೆಸ್ ಒಂದು ಕಡೆಯಾದ್ರೆ, ಫಾಝಿಲ್‌ಗೂ ಜಮೀರ್‌ಗೂ ಇರೋ ನಂಟು ಇನ್ನೊಂದು ಕಡೆ. ಇದರ ಮಧ್ಯೆ ಶೇಖ್ ಫಾಝಿಲ್ ಲಿಂಕ್, ಆತನ ನೆಟ್‌ವರ್ಕ್ ಸ್ಯಾಂಡಲ್‌ವುಡ್ ಮಾತ್ರವಲ್ಲ. ಅದರಾಚೆಗೂ ಬೆಳೆದು ನಿಂತಿದೆ.
ಫಾಝಿಲ್‌ಗೆ ಸ್ಯಾಂಡಲ್‌ವುಡ್‌ಆಚೆಗೂ ನಶೆ ನಂಜಿನ ನಂಟು!
ಶೇಖ್ ಫಾಝಿಲ್.. ಈ ಅಸಾಮಿ ಅಂತಿಂಥ ವ್ಯಕ್ತಿಯಲ್ಲ. ಡ್ರಗ್ಸ್ ಮಾಫಿಯಾದಲ್ಲಿ ಇವನಿಗಿರುವ ನೆಟ್‌ವರ್ಕ್ ನಿಜಕೂ ಭಯಂಕರ. ಇವನ ಬ್ಯಾಕ್‌ಗ್ರೌಂಡ್ ಎಷ್ಟು ಸ್ಫೋಟಕವಾಗಿದ್ಯೋ, ಈತನ ಲಿಂಕ್‌ಗಳು ಕೂಡ ಅಷ್ಟೇ ರೋಚಕವಾಗಿವೆ.
ಅಬುದಾಬಿ ಟಿ-10ನಲ್ಲೂ ಶೇಖ್ ಫಾಝಿಲ್ ನೆರಳು!
ಡ್ರಗ್ಸ್ ನಂಟಿನ ವಿಚಾರದಲ್ಲಿ ಶೇಖ್ ಫಾಝಿಲ್ ಮೇಲೆ ಕಣ್ಣಿಟ್ಟಿರುವ ಸಿಸಿಬಿಗೆ ಸ್ಫೋಟಕ ಸಂಗತಿಗಳು ಬಯಲಾಗಿವೆ. ಈತನ ವ್ಯವಹಾರ ಸ್ಯಾಂಡಲ್‌ವುಡ್, ಬಾಲಿವುಡ್ ಸ್ಟಾರ್‌ಗಳೊಂದಿಗೆ ಮಾತ್ರವಲ್ಲ. ಕ್ರಿಕೆಟ್ ಸ್ಟಾರ್‌ಗಳ ಜೊತೆಗೂ ಇದೆ. ಅದ್ರಲ್ಲೂ ಪ್ರತಿಷ್ಠಿತ ಅಬುದಾಬಿ ಟಿ10 ಕ್ರಿಕೆಟ್ ಲೀಗ್‌ನ ತಂಡವೊಂದಕ್ಕೆ ಈತ ಏಜೆಂಟ್ ಆಗಿರೋ ಕ್ಯಾಸಿನೋ ಪ್ರಾಯೋಜಕತ್ವ ನೀಡಿರುವುದು ಬಯಲಾಗಿದೆ.
ಕರ್ನಾಟಕ ಟಸ್ಕರ್ಸ್ ತಂಡಕ್ಕೆ ಬೆಲೀಸ್ ಕ್ಯಾಸಿನೋ ಸ್ಪಾನ್ಸರ್!
ಶ್ರೀಲಂಕಾದಲ್ಲಿರುವ ಬೆಲೀಸ್ ಕ್ಯಾಸಿನೋದ ಮಾರ್ಕೆಟಿಂಗ್ ಮ್ಯಾನೇಜರ್ ಆಗಿರೋ ಶೇಖ್ ಫಾಝಿಲ್, ಕರ್ನಾಟಕ ಟಸ್ಕರ್ಸ್ ತಂಡಕ್ಕೆ ಪ್ರಾಯೋಜಕತ್ವ ತಂದುಕೊಟ್ಟಿದ್ದ. ಅಬುದಾಬಿ ಟಿ-10 ಲೀಗ್‌ನ ಕರ್ನಾಟಕ ಟಸ್ಕರ್ಸ್ ತಂಡಕ್ಕೆ 2019ರಿಂದಲೂ ಸ್ಪಾನ್ಸರ್ ಮಾಡಿಸ್ತಿದ್ದಾನೆ. ಅಂತಾರಾಷ್ಟ್ರೀಯ ಮಟ್ಟದ ಹಾಲಿ, ಮಾಜಿ ಆಟಗಾರರನ್ನ ಹೊಂದಿರುವ ಕರ್ನಾಟಕ ಟಸ್ಕರ್ಸ್ ಟೂರ್ನಿಯ ಪ್ರಮುಖ ತಂಡಗಳಲ್ಲಿ ಒಂದಾಗಿದೆ. ಈ ತಂಡದ ಪ್ರಮುಖ ಕ್ರಿಕೆಟ್ ಆಟಗಾರರೊಂದಿಗೂ ಶೇಖ್ ಫಾಝಿಲ್ ನಂಟು ಹೊಂದಿದ್ದಾನೆ. ಟೂರ್ನಿಯುದ್ದಕ್ಕೂ ಟಸ್ಕರ್ಸ್ ತಂಡದೊಂದಿಗೆ ಗುರುತಿಸಿಕೊಂಡಿದ್ದ ಶೇಖ್ ಫಾಝಿಲ್ ಆಫ್ಟರ್ ಮ್ಯಾಚ್ ಪಾರ್ಟಿಗಳಲ್ಲಿ ಆಟಗಾರರ ಜೊತೆ ಪಾರ್ಟಿ ಮಾಡ್ತಿದ್ದ.. ಇಲ್ಲಿ ಡ್ರಗ್ಸ್ ಸಪ್ಲೈ ಮಾಡಿರುವ ಬಗ್ಗೆ ಅನುಮಾನ ಮೂಡಿದೆ.
ಒಟ್ನಲ್ಲಿ ಪೊಲೀಸರ ಕೈಗೆ ಸಿಗದೇ ಕಣ್ಣಾಮುಚ್ಚಾಲೆ ಆಡ್ತಿರೋ ಫಾಝಿಲ್ ಬೃಹತ್ ಜಾಲ ಒಂದೊಂದಾಗಿಯೇ ಬೆಳಕಿಗೆ ಬರ್ತಿದೆ. ಸಿಸಿಬಿಗೆ ಸಿಕ್ಕಿರೋ ರೋಚಕ ಸುಳಿವುಗಳು ಇಡೀ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್‌ಗಳನ್ನ ನೀಡಿವೆ. ಸ್ಯಾಂಡಲ್‌ವುಡ್‌ನಿಂದ ಆರಂಭವಾದ ಸಿಸಿಬಿ ಬೇಟಿ ಈಗ ಕ್ರಿಕೆಟ್‌ವರೆಗೂ ಬಂದು ನಿಂತಿದೆ. ಸದ್ಯ ಸಿಸಿಬಿ ಪೊಲೀಸರು ಶೇಖ್ ಫಾಝಿಲ್‌ಗೂ ಬಲೆ ಬೀಸಿದ್ದಾರೆ.