AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರು ವರ್ಷದ ನಂತರ ಸರ್ಕಾರದಿಂದ ಏಕಲವ್ಯ ಪ್ರಶಸ್ತಿ ಪ್ರದಾನ.. ಪುರಸ್ಕೃತರ ವಿವರ ಇಲ್ಲಿದೆ

ಚಿಕ್ಕಮಗಳೂರು: ಕ್ರೀಡಾ ಕ್ಷೇತ್ರದಲ್ಲಿ ಸರ್ವಶ್ರೇಷ್ಠ ಸಾಧನೆಗೈದಿರುವ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರ ಏಕಲವ್ಯ ಪ್ರಶಸ್ತಿ ಮತ್ತು ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗಳನ್ನು ನೀಡಲು ಮುಂದಾಗಿದೆ. ಕಳೆದ ಮೂರು ವರ್ಷಗಳಿಂದ ಈ ಪ್ರಶಸ್ತಿ ಘೋಷಣೆ ಆಗಿರಲಿಲ್ಲ. ಹಾಗಾಗಿ, ಈ ಬಾರಿ ಅಂತಾರಾಷ್ಟ್ರೀಯ, ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದಲ್ಲಿ ಸಾಧನೆ ಮೆರೆದಿರುವ ಕ್ರೀಡಾಪಟುಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಜೊತೆಗೆ, ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಗೆ ಸಂಸ್ಥೆಗಳ ಆಯ್ಕೆ ಸಹ ಆಗಿದೆ. ಪ್ರಶಸ್ತಿ ಪಡೆದವರ ವಿವರವನ್ನು ಸರ್ಕಾರ ಬಿಡುಗಡೆ ಮಾಡಿದೆ. ಪ್ರಶಸ್ತಿ ಪಡೆದವರ […]

ಮೂರು ವರ್ಷದ ನಂತರ ಸರ್ಕಾರದಿಂದ ಏಕಲವ್ಯ ಪ್ರಶಸ್ತಿ ಪ್ರದಾನ.. ಪುರಸ್ಕೃತರ ವಿವರ ಇಲ್ಲಿದೆ
KUSHAL V
|

Updated on: Nov 01, 2020 | 1:44 PM

Share

ಚಿಕ್ಕಮಗಳೂರು: ಕ್ರೀಡಾ ಕ್ಷೇತ್ರದಲ್ಲಿ ಸರ್ವಶ್ರೇಷ್ಠ ಸಾಧನೆಗೈದಿರುವ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರ ಏಕಲವ್ಯ ಪ್ರಶಸ್ತಿ ಮತ್ತು ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗಳನ್ನು ನೀಡಲು ಮುಂದಾಗಿದೆ. ಕಳೆದ ಮೂರು ವರ್ಷಗಳಿಂದ ಈ ಪ್ರಶಸ್ತಿ ಘೋಷಣೆ ಆಗಿರಲಿಲ್ಲ. ಹಾಗಾಗಿ, ಈ ಬಾರಿ ಅಂತಾರಾಷ್ಟ್ರೀಯ, ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದಲ್ಲಿ ಸಾಧನೆ ಮೆರೆದಿರುವ ಕ್ರೀಡಾಪಟುಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಜೊತೆಗೆ, ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಗೆ ಸಂಸ್ಥೆಗಳ ಆಯ್ಕೆ ಸಹ ಆಗಿದೆ. ಪ್ರಶಸ್ತಿ ಪಡೆದವರ ವಿವರವನ್ನು ಸರ್ಕಾರ ಬಿಡುಗಡೆ ಮಾಡಿದೆ. ಪ್ರಶಸ್ತಿ ಪಡೆದವರ ವಿವರ ಹೀಗಿದೆ.

ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಗೆ ಆಯ್ಕೆಯಾದ ಸಂಸ್ಥೆಗಳು 1. 2018-19ಕ್ಕೆ: ಸ್ವರ್ಣ ಫುಟ್‌ಬಾಲ್ ಅಭಿವೃದ್ಧಿ ಸಂಸ್ಥೆ, ಮಂಡ್ಯ 2. 2018-19ಕ್ಕೆ: ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್, ಹಳಿಯಾಳ 3. 2019-20ಕ್ಕೆ: ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು 4. 2020-21ಕ್ಕೆ: ಸಿದ್ಧಗಂಗಾ ಮಠ ಸಂಸ್ಥೆ, ತುಮಕೂರು 5. 2020-21ಕ್ಕೆ: ಮಾಣಿಕ ಪ್ರಭು ಸ್ಪೋರ್ಟ್ಸ್ ಅಕಾಡೆಮಿ, ಬೀದರ್

2019 ನೇ ಸಾಲಿನ ಏಕಲವ್ಯ ಪ್ರಶಸ್ತಿ‌: 1. ಅಭಿನಯಶೆಟ್ಟಿ: ಅಥ್ಲೆಟಿಕ್ಸ್ 2. ವೇದಾ ಕೃಷ್ಣಮೂರ್ತಿ: ಕ್ರೀಡೆ 3. ವೆಂಕಪ್ಪ ಕೆಂಗಲಗುತ್ತಿ: ಸೈಕ್ಲಿಂಗ್ 4. ಪುಲಿಂದ ಲೋಕೇಶ್ ತಿಮ್ಮಣ್ಣ: ಹಾಕಿ 5. ಖುಷಿ ದಿನೇಶ್: ಈಜು 6. ಮಯಾಂಕ್ ಅಗರ್ ವಾಲ್: ಕ್ರಿಕೆಟ್ 7. ಪುನೀತ್ ನಂದಕುಮಾರ್: ಪ್ಯಾರಾ ಈಜು 8. ಅಭಿಷೇಕ್ ಎನ್.ಶೆಟ್ಟಿ: ಅಥ್ಲೆಟಿಕ್ಸ್

2019 ನೇ ಸಾಲಿನ ಜೀವಮಾನ ಸಾಧನೆ ಪ್ರಶಸ್ತಿ: 1. ಶಾಂತಾ ರಂಗಸ್ವಾಮಿ: ಕ್ರಿಕೆಟ್ 2. ಸಂಜೀವ್ ಆರ್.ಕನಕ: ಖೋ-ಖೋ

2019 ನೇ ಸಾಲಿನ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ: 1. ಅನಿತಾ ಬಿಚಗಟ್ಟಿ: ಅಟ್ಯಾ ಪಟ್ಯಾ 2. ಪಲ್ಲವಿ ಎಸ್.ಕೆ: ಬಾಲ್ ಬ್ಯಾಡ್ಮಿಂಟನ್ 3. ರಕ್ಷಿತಾ ಎಸ್: ಕಬ್ಬಡ್ಡಿ 4. ಸುದರ್ಶನ್ : ಖೋ-ಖೋ 5. ಅನುಪಮ ಹೆಚ್. ಕೆರಕಲಮಟ್ಟಿ: ಮಲ್ಲಕಂಬ 6. ಪ್ರವೀಣ್. ಕೆ: ಕಂಬಳ 7. ಮಂಜುನಾಥ್ ಹೆಚ್: ಥ್ರೋಬಾಲ್ 8. ಸತೀಶ್ ಪಡತಾರೆ: ಕುಸ್ತಿ 9. ಅನಿಶಾ ಮಣೆಗಾರ್: ಟೆನ್ನಿಕ್ವಾಯಿಟ್

2018 ನೇ ಸಾಲಿನ ಏಕಲವ್ಯ ಪ್ರಶಸ್ತಿ : 1. ವಿಜಯಕುಮಾರಿ ಜಿ.ಕೆ.: ಆಥ್ಲೆಟಿಕ್ 2. ಬಾಂಧವ್ಯ ಹೆಚ್.ಎಂ.: ಬಾಸ್ಕೆಟ್‌ಬಾಲ್ 3. ಕೆ.ಎಲ್.ರಾಹುಲ್: ಕ್ರಿಕೆಟ್ 4. ಮೇಘಾ ಗೂಗಾಡ್: ಸೈಕ್ಲಿಂಗ್ 5. ಫೌವಾದ್ ಮಿರ್ಜಾ: ಈಕ್ವೆಸ್ಟ್ರಿಯನ್ 6. ನಿಕ್ಕಿನ್ ತಿಮ್ಮಯ್ಯ: ಹಾಕಿ 7. ಗೀತಾ ದಾನಪ್ಪಗೊಳ್: ಜುಡೋ 8. ಶ್ರೀಹರಿ ನಟರಾಜ್: ಈಜು 9. ಶಕೀನ ಖಾತೂನ್: ಪ್ಯಾರಾ ಪವರ್ ಲಿಫ್ಟಿಂಗ್

2018 ನೇ ಸಾಲಿನ ಜೀವಮಾನ ಸಾಧನೆ ಪ್ರಶಸ್ತಿ : 1. ಸಿ.ಎ.ಕರುಂಬಯ್ಯ: ಹಾಕಿ 2. ಮಂಜುನಾಥ್.ಆರ್: ಕಬ್ಬಡ್ಡಿ

2017 ಏಕಲವ್ಯ ಪ್ರಶಸ್ತಿ ಪ್ರಕಟ : 1. ರೀನಾ ಜಾರ್ಜ್: ಅಥ್ಲೆಟಿಕ್ 2. ಮಿಥುಲಾ: ಬ್ಯಾಡ್ಮಿಂಟನ್ 3. ಅವಿನಾಶ್ ಮಣಿ: ಈಜು 4. ಅರ್ಜುನ್ ಹಲ್ಕುರ್ಕಿ: ಕುಸ್ತಿ 5. ಅನಿಲ್ ಕುಮಾರ್ ಬಿ.ಕೆ.: ಬಾಸ್ಕೆಟ್ ಬಾಲ್ 6. ಉಷಾರಾಣಿ: ಕಬ್ಬಡ್ಡಿ 7. ಖುಷಿ: ಟೇಬಲ್ ಟೆನಿಸ್ 8. ಎಂ.ಎನ್ ಪೊನ್ನಮ್ಮ: ಹಾಕಿ 9. ವಿನಾಯಕ ರೋಖಡೆ: ವಾಲಿಬಾಲ್ 10. ಎಂ.‌ದೀಪಾ: ರೋಯಿಂಗ್ 11. ರಾಜು ಅಡಿವೆಪ್ಪಾ ಭಾಟಿ: ಸೈಕ್ಲಿಂಗ್ 12. ವರ್ಷಾ.ಎಸ್: ಬಿಲಿಯರ್ಡ್ಸ್/ಸ್ನೂಕರ್ 13. ತೇಜಸ್. ಕೆ: ಶೂಟಿಂಗ್ 14. ಶೇಖರ್ ವೀರಾಸ್ವಾಮಿ: ಟೆನ್ನಿಸ್ (ಪ್ಯಾರಾ)

2017ನೇ ಸಾಲಿನ ಜೀವ ಮಾನ ಸಾಧನೆ ಪ್ರಶಸ್ತಿ: 1. ಎಂ. ಫ್ರೆಡ್ರಿಕ್ಸ್: ಹಾಕಿ 2. ಡಾ. ಪಟೇಲ್ ಮೊಹಮದ್ ಇಲಿಯಾಸ್: ವಾಲಿಬಾಲ್

2017 ನೇ ಸಾಲಿನ ಕರ್ನಾಟಕ ರತ್ನ ಪ್ರಶಸ್ತಿ : 1. ವೀಣಾ. ಎಂ: ಖೋ-ಖೋ 2. ಕೌಸಲ್ಯ ಕೆ.ಎಸ್. : ಕಬ್ಬಡ್ಡಿ 3. ಜಯಲಕ್ಷ್ಮಿ. ಜಿ: ಬಾಲ್ ಬಾಡ್ಮಿಂಟನ್ 4. ಅನುಶ್ರಿ. ಎಚ್. ಎಸ್.: ಕುಸ್ತಿ 5. ರಂಜಿತಾ ಎಂ.: ಥ್ರೋ ಬಾಲ್ 6. ಭೀಮಪ್ಪ ಹಡಪದ: ಮಲ್ಲಕಂಬ 7. ಮಹೇಶ್ ಆರ್ ಎರೆಮನಿ: ಆಟ್ಯಾ ಪಾಟ್ಯಾ 8. ಚಂದ್ರ ಶೇಖರ ಎಚ್. ಕಲ್ಲಹೊಲದ: ಗುಂಡು ಎತ್ತುವುದು 9. ಗೋಪಾಲಕೃಷ್ಣ ಪ್ರಭು: ಕಂಬಳ 10. ಶ್ರೀನಿವಾಸ ಗೌಡ: ಕಂಬಳ 11. ಮಣಿಕಂದನ್: ಪ್ಯಾರಾ ಕ್ಲೈಂಬಿಂಗ್

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ