ಐಪಿಎಲ್ 2021 ಬಾಕಿ ಉಳಿದ ಸಂಭ್ರಮ ಇನ್ನು ಕ್ರಿಕೆಟ್​ ಕಾಶಿ ಇಂಗ್ಲೆಂಡ್​​ನಲ್ಲಿ!?

|

Updated on: May 07, 2021 | 1:26 PM

September 14ರವರೆಗೂ ಭಾರತ ಕ್ರಿಕೆಟ್​ ತಂಡ ಇಂಗ್ಲೆಂಡ್​ ಟೆಸ್ಟ್​ ಪ್ರವಾಸದಲ್ಲಿರುತ್ತದೆ. ಅದಾದ ಬಳಿಕವಷ್ಟೇ ​ಐಪಿಎಲ್ 2021 ಟೂರ್ನಿ ಮುಂದುವರಿಕೆ. ಅದಾದ ಮೇಲೆ ಒಂದು ವೇಳೆ ನಡೆದರೆ, ಐಪಿಎಲ್ 2021 ಮುಗಿಯುತ್ತಿದ್ದಂತೆ T20 World Cup ಶುರುವಾಗಲಿದೆ. ಇದರಿಂದ ಆಟಗಾರರ ದೈಹಿಕ ಸಾಮರ್ಥ್ಯದ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಕ್ರಿಕೆಟ್​ ಪಂಡಿತರು ಎಚ್ಚರಿಸಿದ್ದಾರೆ.

ಐಪಿಎಲ್ 2021 ಬಾಕಿ ಉಳಿದ ಸಂಭ್ರಮ ಇನ್ನು ಕ್ರಿಕೆಟ್​ ಕಾಶಿ ಇಂಗ್ಲೆಂಡ್​​ನಲ್ಲಿ!?
ಫೈನಲ್​ ಪಂದ್ಯ ಸೇರಿದಂತೆ ಇನ್ನೂ 31 ಮ್ಯಾಚ್​ಗಳು ಈ ಬಾರಿಯ ​ಐಪಿಎಲ್ 2021 ಟೂರ್ನಿಯಲ್ಲಿ ಬಾಕಿ ಉಳಿದಿವೆ.
Follow us on

ಬೆಂಗಳೂರು: ಭಾರತದ ಕ್ರಿಕೆಟ್ ಪ್ರೇಮಿಗಳು ಭ್ರಮನಿರಸನಕ್ಕೊಳಗಾಗುವಂತೆ ಈ ಬಾರಿಯ ಐಪಿಎಲ್ ಟೂರ್ನಿಯನ್ನು ಕೊರೊನಾ ಸ್ವಾಹಾ ಮಾಡಿದೆ. ಆದರೆ ನಮ್ಮ ಕ್ರಿಕೆಟ್ ಪ್ರೇಮಿಗಳು ಹೆಚ್ಚು ಭ್ರಮನಿರಸನಕ್ಕೆ ಈಡಾಗುವ ಸಾಧ್ಯತೆಯಿಲ್ಲ. ಏಕೆಂದ್ರೆ ಬಾಕಿ ಉಳಿದ ಐಪಿಎಲ್ 2021 ಪಂದ್ಯಗಳು ಕ್ರಿಕೆಟ್​ ತವರೂರಾದ ಇಂಗ್ಲೆಂಡ್​​ನಲ್ಲಿ ಜರುಗುವ ಸಾಧ್ಯತೆಯಿದೆ. ಇದಕ್ಕೆ ಆದರೆಯಾಗಿ ಅಲ್ಲಿನ ಇಂಗ್ಲೀಷ್​ ಕೌಂಟಿಗಳಾದ ವರ್ವಿಕ್​ಷೈರ್​, ಸರ್ರೆ ಮತ್ತು ಎಂಸಿಸಿ ಕ್ರಿಕೆಟ್​ ಸಂಸ್ಥೆಗಳು ಐಪಿಎಲ್ 2021 ಬಾಕಿ ಪಂದ್ಯಗಳಿಗೆ ಆತಿಥ್ಯ ನೀಡಲು ತವಕಿಸುತ್ತಿವೆ.

ಎಲ್ಲವೂ ಅಂದುಕೊಂಡಂತೆ ಸುಸೂತ್ರವಾಗಿ ನಡೆದರೆ ಇಂಗ್ಲೆಂಡ್​ನ Warwickshire, Surrey ಮತ್ತು MCC ಕ್ರಿಕೆಟ್​ ಸಂಸ್ಥೆಗಳು ಮುಂದಿನ ಸೆಪ್ಟೆಂಬರ್ ತಿಂಗಳ ದ್ವಿತೀಯಾರ್ಧದಲ್ಲಿ (September 14ರ ನಂತರ) ಐಪಿಎಲ್ 2021 ಬಾಕಿ ಪಂದ್ಯಗಳನ್ನು ತನ್ನ ನೆಲದಲ್ಲಿ ಆಡಿಸುವುದಕ್ಕೆ ಅವಕಾಶ ನೀಡಲಿವೆ. ಈ ಬಾರಿ ಐಪಿಎಲ್ 2021 ಪೂರ್ಣಗೊಳ್ಳದೆ ಹೋದರೆ ತನಗೆ ಸಿಕ್ಕಾಪಟ್ಟೆ ನಷ್ಟವಾಗುವುದು ಕಟ್ಟಿಟ್ಟಬುತ್ತಿ ಎಂದು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ ನಾಲ್ಕಾರು ದಿನಗಳಿಂದ ತಲೆಯೆ ಮೇಲೆ ಕೈಹೊತ್ತು ಕುಳಿತಿದೆ.

ಇದನ್ನು ಓದಿ:
ಇಂಡಿಯನ್​ ಪ್ರೀಮಿಯರ್​ ಲೀಗ್​ ಎಂಬ ಕ್ರಿಕೆಟ್​ ಮಾಯೆ ಅಪ್ಪಟ ಭಾರತೀಯದ್ದು. ಆದರೆ ಕ್ರಿಕೆಟ್ ತವರೂರಾದ ಇಂಗ್ಲೆಂಡ್​ನಲ್ಲಿಯೂ ಈ IPL matches ನಡೆಯಲಿ ಎಂದು ನಮ್ಮನ್ನು ಶತಮಾನ ಕಾಲ ಆಳಿದ ಬ್ರಿಟಿಷರು ಇದೀಗ ಬಯಸುತ್ತಿರುವುದು ಸೋಜಿಗವೇ ಸರಿ. ಕಳೆದ IPL ಟೂರ್ನಮೆಂಟ್ ದುಬೈನಲ್ಲಿ ನಡೆದ ಬಳಿಕ ಭಾರತದಿಂದ ಆಚೆಗೆ IPL ನಡೆದರೆ ತೊಂದರೆ ಏನೂ ಇಲ್ಲ ಎಂಬ ಭಾವನೆ ಮೂಡುತ್ತಿರುವಾಗ ಇಂಗ್ಲೆಂಡ್​ನಲ್ಲಿ IPL ಟೂರ್ನಮೆಂಟ್ ನಡೆಯಬಹುದಲ್ವಾ ಎಂಬ ಜಿಜ್ಞಾಸೆಯೂ ಮೂಡಿದೆ. 2009ರಲ್ಲಿ ದಕ್ಷಿಣ ಆಫ್ರಿಕಾದಲ್ಲಿಯೂ ಒಮ್ಮೆ ಐಪಿಎಲ್ ನಡೆದಿತ್ತು ಎಂಬುದು ಗಮನಾರ್ಹ. ಇದೆಲ್ಲದರ ಮಧ್ಯೆ ಅಲ್ಲಿ ಲಂಡನ್​ನಲ್ಲಿ ಮೇಯರ್​ ಸ್ಥಾನಕ್ಕೆ ಚುನಾವಣೆಗಳು ನಡೆಯುತ್ತಿವೆ. ಹಾಗಾಗಿ ಅಲ್ಲಿನ ಹಾಲಿ ಮೇಯರ್ ಸಾದಿಖ್ ಖಾನ್​ ಮತ್ತೊಮ್ಮೆ ಮೇಯರ್ ಸ್ಥಾನ ಬಯಸಿದ್ದಾರೆ.
ಕೆಳಗಿನ ಲಿಂಕ್​ ಒತ್ತಿ:

IPL: ಮುಂದಿನ ಐಪಿಎಲ್ ಲಂಡನ್​ನಲ್ಲಿಯೇ ನಡೆಯಲಿ ಅನ್ನುತ್ತಿದ್ದಾರೆ ಲಂಡನ್ ಮೇಯರ್! ಯಾಕೆ ಗೊತ್ತಾ?

ಕಳೆದ ಬಾರಿಯೂ ಹೀಗೆಯೇ ಕೊರೊನಾ ಕಾಟ ಹೆಚ್ಚಾದಾಗ ದುಬೈ ಆತಿಥ್ಯ ವಹಿಸಿ, ಬಿಸಿಸಿಐ ಅನ್ನು ಪಾರು ಮಾಡಿತ್ತು. ಆದರೆ ಈ ಬಾರಿಯೂ ಅಂತಹುದೇ ಪರಿಸ್ಥಿತಿ ಉದ್ಭವವಾಗಿದ್ದು ಈ ಬಾರಿ ಇನ್ನೂ ಹೆಚ್ಚು ವೃತ್ತಿಪರ ತಂಡಗಳಾದ ವರ್ವಿಕ್​ಷೈರ್​, ಸರ್ರೆ ಮತ್ತು ಎಂಸಿಸಿ ಕ್ರಿಕೆಟ್​ ಕೌಂಟಿ ಸಂಸ್ಥೆಗಳು ಆತಿಥ್ಯಕ್ಕೆ ಸಿದ್ಧ ಎಂದು ಘೋಷಿಸಿರುವುದು ಬಿಸಿಸಿಐಗೆ ಮರುಜೀವ ಬಂದಂತಾಗಿದೆ.

ಇಂಗ್ಲೆಂಡಿನ ಈ ಮೂರೂ ಕ್ರಿಕೆಟ್​ ಕೌಂಟಿ ಸಂಸ್ಥೆಗಳು ಮೂರು ದಿನಗಳ ಹಿಂದೆ ಇಂಗ್ಲೆಂಡ್​ ಮತ್ತು ವೇಲ್ಸ್​ ಕ್ರಿಕೆಟ್ ಮಂಡಳಿಗಳಿಗೆ ಪತ್ರ ಬರೆದು ಬಿಸಿಸಿಐ ಜೊತೆ ಮಾತನಾಡುವಂತೆ ಕೋರಿವೆ. ಫೈನಲ್​ ಪಂದ್ಯ ಸೇರಿದಂತೆ ಇನ್ನೂ 31 ಮ್ಯಾಚ್​ಗಳು ಈ ಬಾರಿಯ ​ಐಪಿಎಲ್ 2021 ಟೂರ್ನಿಯಲ್ಲಿ ಬಾಕಿ ಉಳಿದಿವೆ.

ಲಂಡನ್​ನಲ್ಲಿ ಲಾರ್ಡ್ಸ್​​ ಮೈದಾನ ಮತ್ತು ಓವಲ್​ ಮೈದಾನ ಹಾಗೂ ಬರ್ಮಿಂಗ್​ಹ್ಯಾಮ್​ನಲ್ಲಿ ಎಜ್​ಬಾಸ್ಟನ್​ ​ಕ್ರಿಕೆಟ್ ಮೈದಾನ​ದಲ್ಲಿ ಬಾಕಿ 31 ಮ್ಯಾಚ್​ಗಳು ನಡೆಯಲಿವೆ. ಮ್ಯಾಂಚೆಸ್ಟರ್​​ನಲ್ಲೂ ಪಂದ್ಯಗಳು ನಡೆಯುವ ಸಾಧ್ಯತೆಯಿದೆ.

ಇನ್ನು ಅಕ್ಟೋಬರ್​ ತಿಂಗಳಲ್ಲಿ ಭಾರತದಲ್ಲಿ ನಡೆಯಬೇಕಿರುವ T20 World Cup ಟೂರ್ನಿಯ ಮೇಲೂ ಕೊರೊನಾ ಕಾರ್ಮೋಡ ದಟ್ಟವಾಗಿ ಹರಡಿದೆ. ಅದು ಬಹುಶಃ ಕೊಲ್ಲಿ ರಾಷ್ಟ್ರಗಳಲ್ಲಿ (UAE) ನಡೆಯುವ ಸಾಧ್ಯತೆಯಿದೆ. ಏಕೆಂದ್ರೆ ​ಐಪಿಎಲ್ 2020 ಟೂರ್ನಿಯನ್ನು UAE ಯಶಸ್ವಿಯಾಗಿ ನಡೆಸಿಕೊಟ್ಟಿತ್ತು.

September 14ರವರೆಗೂ ಭಾರತ ಕ್ರಿಕೆಟ್​ ತಂಡ ಇಂಗ್ಲೆಂಡ್​ ಟೆಸ್ಟ್​ ಪ್ರವಾಸದಲ್ಲಿರುತ್ತದೆ. ಅದಾದ ಬಳಿಕವಷ್ಟೇ ​ಐಪಿಎಲ್ 2021 ಟೂರ್ನಿ ಮುಂದುವರಿಕೆ. ಅದಾದ ಮೇಲೆ ಒಂದು ವೇಳೆ ನಡೆದರೆ, ಐಪಿಎಲ್ 2021 ಮುಗಿಯುತ್ತಿದ್ದಂತೆ T20 World Cup ಶುರುವಾಗಲಿದೆ. ಇದರಿಂದ ಆಟಗಾರರ ದೈಹಿಕ ಸಾಮರ್ಥ್ಯದ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಕ್ರಿಕೆಟ್​ ಪಂಡಿತರು ಎಚ್ಚರಿಸಿದ್ದಾರೆ.

(English counties Warwickshire, Surrey and the MCC have offered to host IPL in September)

Published On - 1:16 pm, Fri, 7 May 21