WTC Final: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಗೇಮ್‌ಚೇಂಜರ್ ಹೆಸರಿಸಿದ ಮೈಕಲ್ ವಾನ್; ಯಾರವನು?

WTC Final: ಮೈಕೆಲ್ ವಾನ್ ಭವಿಷ್ಯ ನುಡಿದಂತೆ, ರಿಷಭ್ ಪಂತ್ ಭಾರತ ಪರ ಮಿಂಚಲಿದ್ದಾರೆ. ಆದರೆ, ನ್ಯೂಜಿಲೆಂಡ್‌ನ ಇಬ್ಬರು ಆಟಗಾರರು ಉತ್ತಮ ಪ್ರದರ್ಶನ ನೀಡಲಿದ್ದಾರೆ.

WTC Final: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಗೇಮ್‌ಚೇಂಜರ್ ಹೆಸರಿಸಿದ ಮೈಕಲ್ ವಾನ್; ಯಾರವನು?
ಟೀಂ ಇಂಡಿಯಾ​
Follow us
ಪೃಥ್ವಿಶಂಕರ
|

Updated on: May 29, 2021 | 7:14 PM

ಟೆಸ್ಟ್ ಕ್ರಿಕೆಟ್‌ನ ‘ವಿಶ್ವಕಪ್’ ಎಂದು ಪರಿಗಣಿಸಲಾದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯ ಜೂನ್ 18 ರಿಂದ 22 ರವರೆಗೆ ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ನಡೆಯಲಿದೆ. ಫೈನಲ್ ಪಂದ್ಯವು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದೆ. ಏತನ್ಮಧ್ಯೆ, ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್ ವಾನ್, ಭಾರತದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರ ಸಾಧನೆ ಗಮನಿಸಬೇಕಾದ ಸಂಗತಿಯಾಗಿದೆ ಮತ್ತು ಅವರು ಭಾರತೀಯ ತಂಡಕ್ಕಾಗಿ ತಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಾರೆ ಎಂದು ಹೇಳಿದ್ದಾರೆ. ಜೊತೆಗೆ ಡಬ್ಲ್ಯುಟಿಸಿ ಫೈನಲ್‌ನಲ್ಲಿ ರಿಷಭ್ ಪಂತ್ ಗೇಮ್‌ಚೇಂಜರ್ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ವಾನ್ ಅವರನ್ನು ಇಂಗ್ಲೆಂಡ್‌ನ ಪ್ರಮುಖ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಮತ್ತು ಯಶಸ್ವಿ ನಾಯಕ ಎಂದು ಕರೆಯಲಾಗುತ್ತದೆ. ತಮ್ಮ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ವಾನ್, ಎಲ್ಲಾ ಕ್ರಿಕೆಟ್ ಪ್ರಿಯರಂತೆ ಡಬ್ಲ್ಯುಟಿಸಿ ಫೈನಲ್‌ಗಾಗಿ ಉತ್ಸುಕರಾಗಿದ್ದಾರೆ ಮತ್ತು ಪಂದ್ಯದ ಮೊದಲು ವಿವಿಧ ಮುನ್ಸೂಚನೆಗಳನ್ನು ನೀಡಲು ಪ್ರಾರಂಭಿಸಿದ್ದಾರೆ. ಅವರ ಪ್ರಕಾರ, ಈ ಪಂದ್ಯಗಳಲ್ಲಿ ಎರಡೂ ತಂಡಗಳ ಮೂವರು ಆಟಗಾರರು ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇದೆ ಎಂದಿದ್ದಾರೆ.

ನ್ಯೂಜಿಲೆಂಡ್‌ನಿಂದ ಇಬ್ಬರು ಮತ್ತು ಭಾರತದಿಂದ ಒಬ್ಬರು ಮೈಕೆಲ್ ವಾನ್ ಭವಿಷ್ಯ ನುಡಿದಂತೆ, ರಿಷಭ್ ಪಂತ್ ಭಾರತ ಪರ ಮಿಂಚಲಿದ್ದಾರೆ. ಆದರೆ, ನ್ಯೂಜಿಲೆಂಡ್‌ನ ಇಬ್ಬರು ಆಟಗಾರರು ಉತ್ತಮ ಪ್ರದರ್ಶನ ನೀಡಲಿದ್ದಾರೆ. ಅವರುಗಳೆಂದರೆ ಕೈಲ್ ಜಾಮಿಸನ್ ಮತ್ತು ಬಿಜೆ ವಾಲ್ಟಿಂಗ್. ಜಾಮಿಸನ್ ವೇಗದ ಬೌಲರ್ ಮತ್ತು ವಾಲ್ಟಿಂಗ್ ಒಬ್ಬ ಶ್ರೇಷ್ಠ ಬ್ಯಾಟ್ಸ್‌ಮನ್.

ಡಬ್ಲ್ಯೂಟಿಸಿ ಫೈನಲ್ ಡ್ರಾ ಆದರೆ? ಫೈನಲ್ ಪಂದ್ಯದ ಪರಿಸ್ಥಿತಿಗಳನ್ನು ಐಸಿಸಿ ಪ್ರಕಟಿಸಿದೆ. ಡ್ರಾ ಅಥವಾ ಟೈ ಸಂದರ್ಭದಲ್ಲಿ ಉಭಯ ತಂಡಗಳಿಗೆ ಜಂಟಿ ವಿಜೇತರಾಗಿ ಟ್ರೋಫಿ ನೀಡಲಾಗುವುದು ಎಂದು ಐಸಿಸಿ ತಿಳಿಸಿದೆ. ಅಲ್ಲದೆ, ಜೂನ್ 23 ಅನ್ನು ಕಾಯ್ದಿರಿಸಿದ ದಿನವಾಗಿ ಇರಿಸಲಾಗಿದೆ. ಮೊದಲ ಐದು ದಿನಗಳಲ್ಲಿ 30 ಗಂಟೆಗಳ ಆಟ ಸಾಧ್ಯವಾಗದಿದ್ದರೆ, ಮೀಸಲು ದಿನವನ್ನು ಬಳಸಲಾಗುತ್ತದೆ.

ಕಿವಿ ವಿರುದ್ಧ ಭಾರತದ ಮಿಷನ್ 72 ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯಕ್ಕೆ ಮುಚ್ಚಿದ ಕೋಣೆಯಲ್ಲಿ ತಯಾರಿ ನಡೆಸಲಿದೆ. ಇದಕ್ಕಾಗಿ ತಂಡವು ‘ರಹಸ್ಯ ಯೋಜನೆ’ ಸಿದ್ಧಪಡಿಸಿದೆ. ಯೋಜನೆಯ ಪ್ರಕಾರ, ನ್ಯೂಜಿಲೆಂಡ್ ಆಟಗಾರರ ಎಲ್ಲಾ ತಂತ್ರಗಳನ್ನು ಕಲಿಯಲು ಇಡೀ ತಂಡವು 72 ಗಂಟೆಗಳ ಕಾಲ ಮುಚ್ಚಿದ ಕೋಣೆಯಲ್ಲಿ ಉಳಿಯುತ್ತದೆ. ಈ ಸಮಯದಲ್ಲಿ ಪ್ರತಿ ಆಟಗಾರನ ಆಡುವ ವಿಧಾನವನ್ನು ಅಧ್ಯಯನ ಮಾಡಲಾಗುತ್ತದೆ.

ಮೈಕೆಲ್ ವಾನ್ ಯಾರು? ಸುಮಾರು 6 ಅಡಿ 2 ಇಂಚು ಎತ್ತರವಿರುವ ಮೈಕೆಲ್ ವಾನ್, ಇಂಗ್ಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು. ಆಶೆಸ್ ಸರಣಿಯಲ್ಲಿ ವಾನ್ ಆಸ್ಟ್ರೇಲಿಯಾದ ಒಂಬತ್ತು ವರ್ಷಗಳ ಗೆಲುವಿನ ಹಾದಿಯನ್ನು ಮುರಿದಿದ್ದರು. ಒಂಬತ್ತು ವರ್ಷಗಳ ನಂತರ, ವಾನ್ 2005 ರಲ್ಲಿ ಇಂಗ್ಲೆಂಡ್ ಅನ್ನು ವಿಜಯದತ್ತ ಕೊಂಡೊಯ್ದರು. 1986 ರಿಂದ ಇಂಗ್ಲೆಂಡ್ ಆಶಸ್ ಸರಣಿಯನ್ನು ಗೆದ್ದಿರಲಿಲ್ಲ.

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ