Faf Du Plessis Retirement: ಪಾಕ್​ ವಿರುದ್ಧ ಹೀನಾಯ ಸರಣಿ ಸೋಲು,​ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಫಾಫ್ ಡು ಪ್ಲೆಸಿಸ್

|

Updated on: Feb 17, 2021 | 11:43 AM

Faf Du Plessis Retirement: ದಕ್ಷಿಣ ಆಫ್ರಿಕಾದ ಸ್ಟಾರ್ ಕ್ರಿಕೆಟಿಗ ಮತ್ತು ಮಾಜಿ ನಾಯಕ ಫಾಫ್ ಡು ಪ್ಲೆಸಿಸ್​ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಫೆಬ್ರವರಿ 17 ರಂದು ಡುಪ್ಲೆಸೆ ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು. ಕ್ರಿಕೆಟ್‌ನ ಸುದೀರ್ಘ ಸ್ವರೂಪದಲ್ಲಿ, ಡು ಪ್ಲೆಸಿ ಅವರಿಂದ ಇತ್ತೀಚಿನ ದಿನಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ಕಂಡುಬಂದಿರಲಿಲ್ಲ.

Faf Du Plessis Retirement: ಪಾಕ್​ ವಿರುದ್ಧ ಹೀನಾಯ ಸರಣಿ ಸೋಲು,​ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ  ಫಾಫ್ ಡು ಪ್ಲೆಸಿಸ್
ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಫಾಫ್ ಡು ಪ್ಲೆಸಿಸ್
Follow us on

ದಕ್ಷಿಣ ಆಫ್ರಿಕಾದ ಸ್ಟಾರ್ ಕ್ರಿಕೆಟಿಗ ಮತ್ತು ಮಾಜಿ ನಾಯಕ ಫಾಫ್ ಡು ಪ್ಲೆಸಿಸ್​ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಫೆಬ್ರವರಿ 17 ರಂದು ಡುಪ್ಲೆಸೆ ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು. ಕ್ರಿಕೆಟ್‌ನ ಸುದೀರ್ಘ ಸ್ವರೂಪದಲ್ಲಿ, ಡು ಪ್ಲೆಸಿಸ್​ ಅವರಿಂದ ಇತ್ತೀಚಿನ ದಿನಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ಕಂಡುಬಂದಿರಲಿಲ್ಲ. ಇತ್ತೀಚೆಗೆ ಕೊನೆಗೊಂಡ ಪಾಕಿಸ್ತಾನ ಪ್ರವಾಸದಲ್ಲೂ ತಂಡಕ್ಕೆ ಅವರ ಕೊಡುಗೆ ಅಷ್ಟೇನೂ ಇರಲಿಲ್ಲ. ಹೀಗಾಗಿ ಕಳಪೆ ಪ್ರದರ್ಶನದಿಂದ ಬಳಲುತ್ತಿದ್ದ ಫಾಫ್ ಡು ಪ್ಲೆಸಿಸ್​ ಈ ಸ್ವರೂಪಕ್ಕೆ ವಿದಾಯ ಹೇಳಲು ಮನಸ್ಸು ಮಾಡಿದ್ದಾರೆ.

69 ಪಂದ್ಯಗಳ ಟೆಸ್ಟ್ ವೃತ್ತಿಜೀವನದಲ್ಲಿ 4000 ರನ್..
36 ವರ್ಷದ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ತನ್ನ 69 ಪಂದ್ಯಗಳ ಟೆಸ್ಟ್ ವೃತ್ತಿ ಜೀವನದಲ್ಲಿ 40.03 ಸರಾಸರಿಯಲ್ಲಿ 4000 ರನ್ ಗಳಿಸಿದ್ದಾರೆ. ಇದರಲ್ಲಿ 199 ರನ್​ ಟೆಸ್ಟ್​ನಲ್ಲಿ ಅವರ ವೈಯಕ್ತಿಕ ಅತ್ಯಧಿಕ ರನ್​ ಆಗಿದೆ. ಡು ಪ್ಲೆಸಿಸ್ ಬ್ಯಾಟ್​ನಿಂದ 10 ಶತಕಗಳು ಹಾಗೂ 21 ಅರ್ಧಶತಕಗಳು ಸಿಡಿದಿವೆ. ಅವರು 2012 ರ ನವೆಂಬರ್‌ನಲ್ಲಿ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಡುಪ್ಲೆಸಿಸ್ ತಮ್ಮ ಕೊನೆಯ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ರಾವಲ್ಪಿಂಡಿಯಲ್ಲಿ ಆಡಿದರು.


ಟೆಸ್ಟ್ ಕ್ರಿಕೆಟ್‌ನಲ್ಲಿ ಫಾಫ್ ಡುಪ್ಲೆಸಿಸ್​ ಅವರು ತಮ್ಮ ಕಳಪೆ ಫಾರ್ಮ್‌ನೊಂದಿಗೆ ಹೇಗೆ ಹೆಣಗಾಡಿದರು ಎಂಬುದನ್ನು ಪಾಕಿಸ್ತಾನದಲ್ಲಿ ಆಡಿದ ಕೊನೆಯ ಸರಣಿಯ ಅಂಕಿಅಂಶಗಳಿಂದ ಅಳೆಯಬಹುದಾಗಿದೆ. ಫಾಫ್, ಪಾಕಿಸ್ತಾನ ಪ್ರವಾಸದಲ್ಲಿ ಆಡಿದ ಕೊನೆಯ 2 ಟೆಸ್ಟ್ ಪಂದ್ಯಗಳ 4 ಇನ್ನಿಂಗ್ಸ್‌ಗಳಲ್ಲಿ ಕೇವಲ 55 ರನ್ ಗಳಿಸಿದ್ದಾರೆ. 4 ಇನ್ನಿಂಗ್ಸ್‌ಗಳಲ್ಲಿ ಅವರ ಅಂಕಿಅಂಶಗಳು 10, 23, 17 ಮತ್ತು 5 ರನ್ ಆಗಿತ್ತು. ಅಲ್ಲದೆ ಪಾಕಿಸ್ತಾನ ಪ್ರವಾಸದಲ್ಲಿ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯನ್ನು 0-2ರಿಂದ ಕಳೆದುಕೊಂಡಿತು. ಈ ಆಘಾತದಿಂದಾಗಿ ಫಾಫ್ ಡುಪ್ಲೆಸಿಸ್​ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ.

Published On - 11:38 am, Wed, 17 February 21