IPL 2021 Auction Date: ಫೆ. 18 ರಂದು ಐಪಿಎಲ್ 2021 ಹರಾಜು.. ಲೈವ್ ಯಾವ ಚಾನೆಲ್‌ನಲ್ಲಿ ಗೊತ್ತಾ? ಇಲ್ಲಿದೆ ಮಾಹಿತಿ
IPL 2021 Auction Date: ಫೆಬ್ರವರಿ 18 ರಂದು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಯಾವುದೇ ಚಾನೆಲ್‌ನಲ್ಲಿ ಇದನ್ನು ನೇರ ಪ್ರಸಾರ ನೋಡಬಹುದು. ಜೊತೆಗೆ ಐಪಿಎಲ್ 2021 ಹರಾಜನ್ನು ಡಿಸ್ನಿ + ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಭಾರತದ ಕಾಲಮಾನ ಮಧ್ಯಾಹ್ನ 2:00 ರಿಂದ ಐಪಿಎಲ್ 2021 ಹರಾಜು ಪ್ರಾರಂಭವಾಗುತ್ತದೆ.
ಚೆನ್ನೈ: ಐಪಿಎಲ್ 2021 ಚಾಂಪಿಯನ್ ಆಗಲು ಮುಂಬೈ ಇಂಡಿಯನ್ಸ್ (MI), ಚೆನ್ನೈ ಸೂಪರ್ ಕಿಂಗ್ಸ್ (CSK), ಪಂಜಾಬ್ ಕಿಂಗ್ಸ್ (PK), ರಾಜಸ್ಥಾನ್ ರಾಯಲ್ಸ್ (RR), ಸನ್‌ರೈಸರ್ಸ್ ಹೈದರಾಬಾದ್ (SRH), ದೆಹಲಿ ಕ್ಯಾಪಿಟಲ್ಸ್ (DC), ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಕೋಲ್ಕತಾ ನೈಟ್ ರೈಡರ್ಸ್ (KKR) ಈ ಎಲ್ಲಾ ತಂಡಗಳು ಫೆಬ್ರವರಿ 18 ರಂದು ಚೆನ್ನೈನಲ್ಲಿ ಯುದ್ಧಕ್ಕೆ ಹೊರಟಿದ್ದಾವೆ. ಆದರೆ ಮೈದಾನದಲ್ಲಲ್ಲ.
ಚೆನ್ನೈನಲ್ಲಿ ಫೆಬ್ರವರಿ 18 ರಂದು 2021 ರ ಐಪಿಎಲ್ ಆವೃತ್ತಿಯ ಹರಾಜಿನಲ್ಲಿ 292 ಆಟಗಾರರ ಭವಿಷ್ಯ ನಿರ್ಧಾರವಾಗಲಿದೆ. ಆರಂಭದಲ್ಲಿ 1,114 ಆಟಗಾರರು ಹರಾಜಿಗಾಗಿ ನೋಂದಾಯಿಸಿಕೊಂಡಿದ್ದಾರೆ ಮತ್ತು ಎಂಟು ಫ್ರಾಂಚೈಸಿಗಳು ತಮ್ಮ ಶಾರ್ಟ್‌ಲಿಸ್ಟ್ ಮಾಡಿದ ಆಟಗಾರರನ್ನು ಸಲ್ಲಿಸಿದ್ದಾರೆ ಎಂದು ಐಪಿಎಲ್ ಆಡಳಿತ ಮಂಡಳಿ ಘೋಷಿಸಿತ್ತು. ಅಂತಿಮ ಪಟ್ಟಿಯಲ್ಲಿ 292 ಆಟಗಾರರಿದ್ದು, ಅದರಲ್ಲಿ 164 ಭಾರತೀಯರು, 125 ವಿದೇಶಗಳು ಮತ್ತು ಅಸೋಸಿಯೇಟೆಡ್ ರಾಷ್ಟ್ರಗಳ 3 ಆಟಗಾರರು ಇದ್ದಾರೆ.
ಐಪಿಎಲ್ 2020 ರಲ್ಲಿ ಏಳನೇ ಸ್ಥಾನದಲ್ಲಿದ್ದ ಮೂರು ಬಾರಿಯ ಚಾಂಪಿಯನ್ CSK, ತಮ್ಮ ಸೈನ್ಯವನ್ನು ಬಲಪಡಿಸುವ ದೃಷ್ಟಿಯಿಂದ ಸಾಕಷ್ಟು ಆಟಗಾರರನ್ನು ಹೊರಹಾಕಿದ್ದಾರೆ ಎಂದು ವರದಿಯಾಗಿದೆ. ತಮ್ಮ ಕೋರ್ ತಂಡವನ್ನು ಹೆಚ್ಚಾಗಿ ಉಳಿಸಿಕೊಂಡಿರುವ SRH ಮತ್ತು MIನಂತಹ ತಂಡಗಳು ಕೆಲವೇ ಆಟಗಾರರನ್ನು ಕೊಂಡುಕೊಳ್ಳುವ ಮೂಲಕ ತಮ್ಮ ತಂಡವನ್ನು ಮತ್ತಷ್ಟು ಗಟ್ಟಿಗೊಳಿಸಲು ನೋಡುತ್ತಿವೆ. ಐಪಿಎಲ್ 2021 ಆಟಗಾರರ ಹರಾಜು ಪ್ರಕ್ರಿಯೆಯನ್ನು, ಟೆಲಿವಿಷನ್ ಮತ್ತು ಮೊಬೈಲ್‌ನಲ್ಲಿ ಹೇಗೆ ಲೈವ್ ಆಗಿ ವೀಕ್ಷಿಸಬಹುದು ಎಂಬ ಮಾಹಿತಿರ ಇಲ್ಲಿದೆ.
ಭಾರತದಲ್ಲಿ (ಟಿವಿ ಚಾನೆಲ್‌ಗಳು) ಐಪಿಎಲ್ 2021 ಹರಾಜನ್ನು ಎಲ್ಲಿ ನೋಡಬಹುದು? ಐಪಿಎಲ್ 2021 ಹರಾಜನ್ನು ಐಪಿಎಲ್ ಪಂದ್ಯಗಳ ಅಧಿಕೃತ ಪ್ರಸಾರ ಹಕ್ಕುಗಳ ಮಾಲೀಕರಾದ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಪ್ರಸಾರ ಮಾಡುತ್ತದೆ. ಫೆಬ್ರವರಿ 18 ರಂದು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಯಾವುದೇ ಚಾನೆಲ್‌ನಲ್ಲಿ ಇದನ್ನು ನೇರ ಪ್ರಸಾರ ನೋಡಬಹುದು. ಜೊತೆಗೆ ಐಪಿಎಲ್ 2021 ಹರಾಜನ್ನು ಡಿಸ್ನಿ + ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಭಾರತದ ಕಾಲಮಾನ ಮಧ್ಯಾಹ್ನ 2:00 ರಿಂದ ಐಪಿಎಲ್ 2021 ಹರಾಜು ಪ್ರಾರಂಭವಾಗುತ್ತದೆ.