India vs England: ಇಂಗ್ಲೆಂಡ್ ಬಿ ತಂಡವನ್ನು ಸೋಲಿಸಿದ ಟೀಂ ಇಂಡಿಯಾಗೆ ಶುಭಾಶಯಗಳು: ಭಾರತದ ಗೆಲುವು ಲೇವಡಿ ಮಾಡಿದ ಕೆವಿನ್ ಪೀಟರ್ಸನ್
India vs England: ಚೆನ್ನೈನಲ್ಲಿ ನಡೆದ 2 ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬಿ ತಂಡವನ್ನು ಆರಾಮವಾಗಿ ಸೋಲಿಸಿದ ಟೀಂ ಇಂಡಿಯಾಗೆ ಶುಭಾಶಯಗಳು ಎಂದು ಪೀಟರ್ಸನ್ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
ಚೆನ್ನೈ: ಟೀಮ್ ಇಂಡಿಯಾದ ಸ್ಮರಣೀಯ ಗೆಲುವನ್ನು ಸಾಮಾಜಿಕ ಜಾಲತಾಣದಲ್ಲಿ ಶ್ಲಾಘಿಸಿರುವ ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಹಿಂದಿಯಲ್ಲಿ ಟ್ವೀಟ್ ಮಾಡುವ ಮೂಲಕ ಭಾರತವನ್ನು ಅಭಿನಂದಿಸಿದ್ದಾರೆ. ಚೆನ್ನೈನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬಿ ತಂಡವನ್ನು ಆರಾಮವಾಗಿ ಸೋಲಿಸಿದ ಟೀಂ ಇಂಡಿಯಾಗೆ ಶುಭಾಶಯಗಳು ಎಂದು ಪೀಟರ್ಸನ್ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ. ಟೀಂ ಇಂಡಿಯಾದ ಗೆಲುವನ್ನು ಲೇವಡಿ ಮಾಡುವ ಮೂಲಕ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾರೆ.
ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಟೀಂ ಇಂಡಿಯಾ 317 ರನ್‌ಗಳ ಭಾರಿ ಅಂತರದಿಂದ ಇಂಗ್ಲೆಂಡ್ ತಂಡವನ್ನು ಮಣಿಸಿತು. ಈ ಗೆಲುವು ಆತಿಥೇಯರಿಗೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 1-1ರಿಂದ ಸಮಗೊಳಿಸುವ ಅವಕಾಶವನ್ನು ನೀಡಿತು.
ಮಾಜಿ ಕ್ರಿಕೆಟಿಗರು ಪೀಟರ್ಸನ್ ಟ್ವೀಟ್ಗೆ ವ್ಯಂಗ್ಯವಾಗಿ ಉತ್ತರಿಸಿದ್ದಾರೆ.. ಹೀಗಾಗಿ ಟೀಂ ಇಂಡಿಯಾದ ಗೆಲುವನ್ನ ಅರಗಿಸಿಕೊಳ್ಳಲಾಗದ ಕೆವಿನ್ ಪೀಟರ್ಸನ್ ಈ ರೀತಿಯಾಗಿ ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೆವಿನ್ ಪೀಟರ್ಸನ್ ಟ್ವೀಟ್ಗೆ ಭಾರಿ ವಿರೋಧ ವ್ಯಕ್ತಪಡಿಸಲಾಗಿದೆ. ಅಲ್ಲದೆ ಮಾಜಿ ಕ್ರಿಕೆಟಿಗರು ಸಹ ಪೀಟರ್ಸನ್ ಟ್ವೀಟ್ಗೆ ವ್ಯಂಗ್ಯವಾಗಿ ಉತ್ತರಿಸಿದ್ದಾರೆ.
ಇಂಗ್ಲೆಂಡ್ನ 2ನೇ ಇನ್ನಿಂಗ್ಸ್ ಆರಂಭದಿಂದಲೂ ಆರ್ಭಟ ತೋರಿದ ಟೀಂ ಇಂಡಿಯಾ ವೇಗಿಗಳು ಇಂಗ್ಲೆಂಡ್ ತಂಡವನ್ನು ಕಡಿಮೆ ರನ್ಗಳಿಗೆ ಆಲೌಟ್ ಮಾಡುವದರಲ್ಲಿ ಯಶಸ್ವಿಯಾದರು. ಟೀಂ ಇಂಡಿಯಾ ಪರ ಬ್ಯಾಟಿಂಗ್ನಲ್ಲಿ ಶತಕ ಸಿಡಿಸಿ ಮಿಂಚಿದ ಅಶ್ವಿನ್, ಬೌಲಿಂಗ್ನಲ್ಲೂ ಕಮಾಲ್ ಮಾಡಿದರು. 2ನೇ ಇನ್ನಿಂಗ್ಸ್ನಲ್ಲಿ 106 ರನ್ ಸಿಡಿಸಿದ ಅಶ್ವಿನ್ 3 ವಿಕೆಟ್ ಪಡೆದು ಮಿಂಚಿದರು. ಹಾಗೆಯೇ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಅಕ್ಷರ್ ಪಟೇಲ್ 5 ವಿಕೆಟ್ ಪಡೆದು ಮಿಂಚಿದರು.
ಫೆಬ್ರವರಿ 24 ರಿಂದ ಪ್ರಾರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ಮತ್ತೊಮ್ಮೆ ಪರಸ್ಪರ ಮುಖಾಮುಖಿಯಾಗಲಿವೆ. ಇಂಗ್ಲೆಂಡ್ ತಂಡ ಗೆಲುವಿನ ಹಾದಿಗೆ ಮರಳುವ ಗುರಿಯನ್ನು ಹೊಂದಿದ್ದರೆ, ಆತಿಥೇಯರು ಸರಣಿಯಲ್ಲಿ ಮುನ್ನಡೆ ಸಾಧಿಸುವ ಆಶಯ ಹೊಂದಿದ್ದಾರೆ.
Badhai ho india ??,England B Ko harane ke liye ?
— Kevin Pietersen? (@KP24) February 16, 2021
Don't troll KP guys. He's just trying to be funny. And I get it. I mean is it even a full strength England team if there are no players from SA?? #INDvsENG https://t.co/BhsYF1CUGm
— Wasim Jaffer (@WasimJaffer14) February 16, 2021
Published On - 1:39 pm, Wed, 17 February 21