ಕತಾರ್ನಲ್ಲಿ ಒಂದು ತಿಂಗಳ ಕಾಲ ನಡೆದ ಫುಟ್ಬಾಲ್ ಹಬ್ಬಕ್ಕೆ (FIFA World Cup) ಅದ್ಧೂರಿ ತೆರೆ ಬಿದ್ದಿದೆ. ಫೈನಲ್ ಕದನದಲ್ಲಿ ಪೆನಾಲ್ಟಿ ಶೂಟೌಟ್ ಮೂಲಕ ಫ್ರಾನ್ಸ್ ತಂಡವನ್ನು 4-2 ಗೋಲುಗಳಿಂದ ಮಣಿಸಿದ ಅರ್ಜೇಂಟಿನಾ ತಂಡ (Argentina vs France) ಬರೋಬ್ಬರಿ 36 ವರ್ಷಗಳ ಬಳಿಕ ವಿಶ್ವ ಚಾಂಪಿಯನ್ ಆಗಿದೆ. ಬಹಳ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಎರಡೂ ತಂಡಗಳು ಸಮಬಲದ ಹೋರಾಟ ನೀಡಿದವು. ಅದರಲ್ಲೂ ಏಕಾಂಗಿಯಾಗಿ ತಂಡವನ್ನು ಫೈನಲ್ವರೆಗೂ ಕರೆತಂದಿದ್ದ ಮೆಸ್ಸಿಗೆ (Lionel Messi) ಈ ಗೆಲುವು ಬಹಳ ಮುಖ್ಯವಾಗಿತ್ತು. ಅಲ್ಲದೆ ಈ ಫೈನಲ್ ಪಂದ್ಯವನ್ನು ಮೆಸ್ಸಿ ಅಂತಾರಾಷ್ಟ್ರೀಯ ವೃತ್ತಿ ಜೀವನದ ಕೊನೆಯ ಪಂದ್ಯವೆಂದೆ ಹೇಳಲಾಗಿತ್ತು. ಹೀಗಾಗಿ ಮೆಸ್ಸಿಯ ಕೊನೆಯ ಪಂದ್ಯವನ್ನು ಕಣ್ತುಂಬಿಕೊಳ್ಳಲು ಇಡೀ ಕ್ರೀಡಾಂಗಣವೇ ಅರ್ಜೇಂಟಿನಾ ತಂಡದ ಜೆರ್ಸಿಯಿಂದ ಕಂಗೊಳ್ಳಿಸುತ್ತಿತ್ತು. ಅಂತಿಮವಾಗಿ ಮೆಸ್ಸಿ ತಂಡ ಫ್ರಾನ್ಸ್ ತಂಡವನ್ನು ಮಣಿಸಿದಾಗ ಇಡೀ ಕ್ರೀಡಾಂಗಣವೇ ಹುಚ್ಚೆದ್ದು ಕುಣಿಯಿತು. ಈ ನಡುವೆ ಸಂತಸದ ಅಲೆಯಲ್ಲಿ ತೇಲುತ್ತಿದ್ದ ಅರ್ಜೇಂಟಿನಾ ತಂಡದ ಮಹಿಳಾ ಅಭಿಮಾನಿಯೊಬ್ಬರು ಕ್ರೀಡಾಂಗಣದಲ್ಲಿಯೇ ಟಾಪ್ ಲೇಸ್ ಆಗಿ ಕಾಣಿಸಿಕೊಂಡರು. ಅಲ್ಲದೆ ತಮ್ಮ ಶರ್ಟ್ ಬಿಚ್ಚಿ ಸಂಭ್ರಮಾಚರಣೆ ಮಾಡಿದರು.
2. ಭಾರೀ ದಂಡ ಅಥವಾ ಜೈಲು ಶಿಕ್ಷೆ
ವಾಸ್ತವವಾಗಿ, ಅರ್ಜೇಂಟಿನಾ ಪರ ಮೊಂಟಿಯೆಲ್ ಗೋಲು ಗಳಿಸಿದ ನಂತರ ಅರ್ಜೆಂಟೀನಾದ ಮಹಿಳಾ ಅಭಿಮಾನಿಯೊಬ್ಬರು ಟಾಪ್ ಲೆಸ್ ಆಗಿ ಕಾಣಿಸಿಕೊಂಡರು. ಇದನ್ನು ಟಿವಿ ಪರದೆಯ ಮೇಲೂ ತೋರಿಸಲಾಯಿತು. ಸಂತಸದ ಅಲೆಯಲ್ಲಿ ಮೈಮರೆತ ಈ ಮಹಿಳಾ ಅಭಿಮಾನಿಗೆ ಇದೀಗ ಸಂಕಷ್ಟ ಎದುರಾಗಿದೆ. ವಾಸ್ತವವಾಗಿ ವಿಶ್ವಕಪ್ ಆರಂಭಕ್ಕೂ ಮುನ್ನವೇ ಕತಾರ್ ಸರ್ಕಾರ ಕೆಲವೊಂದು ನಿಯಮಗಳನ್ನು ಫಿಫಾ ವಿಶ್ವಕಪ್ನಲ್ಲಿ ಕಡ್ಡಾಯಗೊಳಿಸಲಾಗಿತ್ತು. ಇದರಲ್ಲಿ ಪಂದ್ಯಾವಳಿಯ ಸಮಯದಲ್ಲಿ ಮಹಿಳೆಯರ ಉಡುಪುಗಳಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಾದ ನಿಯಮಗಳನ್ನು ಮಾಡಲಾಗಿತ್ತು. ಅಲ್ಲದೆ ಮಹಿಳೆಯರು ಸಾರ್ವಜನಿಕವಾಗಿ ಸ್ಕರ್ಟ್ (ಮೊಣಕಾಲು ಕಾಣಿಸುವಂತಹ ಬಟ್ಟೆಗಳನ್ನು ಧರಿಸುವಂತಿರಲಿಲ್ಲ) ಹಾಗೂ ಆಫ್-ಶೋಲ್ಡರ್ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಲಾಗಿತ್ತು. ಒಂದು ವೇಳೆ ಈ ನಿಯಮಗಳನ್ನು ಉಲಂಘಿಸಿದರೆ ಭಾರಿ ದಂಡ ಅಥವಾ ಜೈಲು ಶಿಕ್ಷೆಯನ್ನು ವಿಧಿಸುವುದಾಗಿ ಕತಾರ್ ಸರ್ಕಾರ ಹೇಳಿತ್ತು.
ಮೆಸ್ಸಿ ಫಿಫಾ ವಿಶ್ವಕಪ್ ಗೆದ್ದಿದ್ದನ್ನು ಸಂಭ್ರಮಿಸಿದ ರಣಬೀರ್ ಕಪೂರ್-ಆಲಿಯಾ ಭಟ್; ನಡೆಯಿತು ಭರ್ಜರಿ ಪಾರ್ಟಿ
Did I just see topless Argentina girl in the crowd ? #ArgentinaVsFrance #ARGFRA #world #WorldCupFinal #qatar #QatarWorldCup pic.twitter.com/A0KiYDUstA
— PsychoMath (@psych0_Math) December 18, 2022
3. ಈ ರೀತಿಯ ಬಟ್ಟೆಗಳನ್ನು ಧರಿಸುವಂತಿಲ್ಲ
ವಿಶ್ವಕಪ್ ನೋಡಲು ಕತಾರ್‌ಗೆ ಬರುವ ಮಹಿಳೆಯರು ಟೈಟ್ ಬಟ್ಟೆಗಳನ್ನು ಧರಿಸುವುದನ್ನು ಮತ್ತು ಅಂಗಾಂಗಗಳನ್ನು ತೋರಿಸುವ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಲಾಗಿತ್ತು. ಆದರೆ ಈ ಕಟ್ಟುನಿಟ್ಟಿನ ನಿಯಮಗಳ ನಡುವೆಯೂ ಅರ್ಜೆಂಟೀನಾದ ಮಹಿಳಾ ಅಭಿಮಾನಿಯ ವೈರಲ್ ಟಾಪ್‌ಲೆಸ್ ವಿಡಿಯೋ ಇದೀಗ ಸಂಚಲನವನ್ನು ಸೃಷ್ಟಿಸಿದೆ. ಹೀಗಾಗಿ ಕತಾರ್‌ನ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ಮಹಿಳೆ ಜೈಲಿಗೆ ಹೋಗುವ ಸಾಧ್ಯತೆಗಳಿವೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:42 am, Mon, 19 December 22