ಹ್ಯಾಟ್ರಿಕ್ ಗೋಲು; ವಿಶ್ವಕಪ್ ಗೆದ್ದ ಅರ್ಜೇಂಟಿನಾ; ವಿಶ್ವದ ಹೃದಯ ಗೆದ್ದ ಎಂಬಪ್ಪೆ..!

FIFA World Cup 2022: ಫೀಫಾ ವಿಶ್ವಕಪ್‌ನಲ್ಲಿ 10 ಗೋಲು ಗಳಿಸಿದ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಎಂಬಪ್ಪೆ ಪಾತ್ರರಾಗಿದ್ದಾರೆ. 23 ವರ್ಷ 363 ದಿನಗಳ ವಯಸ್ಸಿನಲ್ಲಿ, ಅವರು ತಮ್ಮ ವೃತ್ತಿಜೀವನದಲ್ಲಿ 10 ವಿಶ್ವಕಪ್ ಗೋಲುಗಳನ್ನು ಪೂರ್ಣಗೊಳಿಸಿದ್ದಾರೆ.

TV9 Web
| Updated By: ಪೃಥ್ವಿಶಂಕರ

Updated on:Dec 19, 2022 | 12:19 AM

2022 ರ ಫಿಫಾ ವಿಶ್ವಕಪ್​ಗೆ ಅದ್ಧೂರಿ ತೆರೆ ಬಿದ್ದಿದೆ. ಫೈನಲ್ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್​ನಲ್ಲಿ ಫ್ರಾನ್ಸ್ ತಂಡವನ್ನು ಮಣಿಸುವುದರೊಂದಿಗೆ ಅರ್ಜೇಂಟಿನಾ ಮೂರನೇ ಬಾರಿಗೆ ವಿಶ್ವಕಪ್ ಎತ್ತಿಹಿಡಿಯಿತು. ಇಲ್ಲಿ ಅರ್ಜೇಂಟಿನಾ ವಿಶ್ವಕಪ್ ಗೆದ್ದಿತ್ತಾದರೂ, ಫ್ರಾನ್ಸ್ ತಂಡದ ಕೈಲಿಯನ್ ಎಂಬಪ್ಪೆ ವಿಶ್ವದ ಹೃದಯ ಗೆಲ್ಲುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಫೈನಲ್​ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲುಗಳಿಸಿ ಅನೇಕ ದಾಖಲೆಗಳನ್ನು ಬರೆದರು.

1 / 4
ಫೀಫಾ ವಿಶ್ವಕಪ್‌ನಲ್ಲಿ 10 ಗೋಲು ಗಳಿಸಿದ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಎಂಬಪ್ಪೆ ಪಾತ್ರರಾಗಿದ್ದಾರೆ. 23 ವರ್ಷ 363 ದಿನಗಳ ವಯಸ್ಸಿನಲ್ಲಿ, ಅವರು ತಮ್ಮ ವೃತ್ತಿಜೀವನದಲ್ಲಿ 10 ವಿಶ್ವಕಪ್ ಗೋಲುಗಳನ್ನು ಪೂರ್ಣಗೊಳಿಸಿದ್ದಾರೆ. ಈ ಮೊದಲು ಈ ದಾಖಲೆ ಜರ್ಮನಿಯ ಗೆರ್ಡ್ ಮುಲ್ಲರ್ ಹೆಸರಿನಲ್ಲಿತ್ತು. ಅವರು 24 ವರ್ಷ 282 ದಿನಗಳಲ್ಲಿ ತಮ್ಮ 10 ಗೋಲುಗಳನ್ನು ಪೂರ್ಣಗೊಳಿಸಿದ್ದರು.

2 / 4
ಕೈಲಿಯನ್ ಎಂಬಪ್ಪೆ ವಿಶ್ವಕಪ್‌ನ ಫೈನಲ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ದಾಖಲೆಯಲ್ಲಿ ಅಗ್ರಸ್ಥಾನಕ್ಕೆ ತಲುಪಿದ್ದಾರೆ. ಎಂಬಪ್ಪೆ ಆಡಿರುವ ಎರಡು ಫೈನಲ್‌ನಲ್ಲಿ ಒಟ್ಟು ನಾಲ್ಕು ಗೋಲುಗಳನ್ನು ಬಾರಿಸಿದ್ದಾರೆ. ಇದಕ್ಕೂ ಮುನ್ನ ವಿಶ್ವಕಪ್ ಫೈನಲ್‌ನಲ್ಲಿ ಫ್ರಾನ್ಸ್‌ನ ಜಿನೆಡಿನ್ ಜಿಡಾನೆ, ಬ್ರೆಜಿಲ್‌ನ ಪೀಲೆ ಮತ್ತು ವಾವಾ ಮತ್ತು ಇಂಗ್ಲೆಂಡ್‌ನ ಜೆಫ್ ಹರ್ಸ್ಟ್ ತಲಾ ಮೂರು ಗೋಲುಗಳನ್ನು ಗಳಿಸಿದ್ದರು.

3 / 4
ಕೈಲಿಯನ್ ಎಂಬಪ್ಪೆ 97 ಸೆಕೆಂಡುಗಳ ಅಂತರದಲ್ಲಿ ತಮ್ಮ ಎರಡು ಗೋಲುಗಳನ್ನು ಗಳಿಸಿದರು. ಅಲ್ಲದೆ ಫಿಫಾ ವಿಶ್ವಕಪ್‌ನ ಫೈನಲ್‌ನಲ್ಲಿ ಹ್ಯಾಟ್ರಿಕ್ ಗೋಲು ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ಅವರಿಗಿಂತ ಮೊದಲು, ಇಂಗ್ಲೆಂಡ್‌ನ ಜೆಫ್ ಹರ್ಸ್ಟ್ 1966 ರಲ್ಲಿ ಪಶ್ಚಿಮ ಜರ್ಮನಿ ವಿರುದ್ಧ ಹ್ಯಾಟ್ರಿಕ್ ಗೋಲುಗಳ ಸಾಧನೆ ಮಾಡಿದ್ದರು.

4 / 4

Published On - 12:19 am, Mon, 19 December 22

Follow us
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ

ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು

ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?

ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!

ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!

ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ

ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್

ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ

ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ

ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು