FIFA World Cup 2022: ಫಿಫಾ ವಿಶ್ವಕಪ್ ಬಗ್ಗೆ ಗೂಗಲ್ನಲ್ಲಿ ಹುಡುಕಿದ್ದು 100 ಕೋಟಿಗೂ ಅಧಿಕ ಜನ
ಗೂಗಲ್‌ನ 25 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಹೆಚ್ಚು ಜನ ಫಿಫಾ ವಿಶ್ವಕಪ್ ಕತಾರ್ 2022ರ ಫೈನಲ್ ಪಂದ್ಯದ ಬಗ್ಗೆ ಹುಡುಕಾಟ ನಡೆಸಿದ್ದಾರೆ. ಜತೆಗೆ ಇದು ಗೂಗಲ್ಗೆ ಹೆಚ್ಚು ಟ್ರಾಫಿಕ್ನ್ನು ತಂದುಕೊಟ್ಟಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಅವರು ಸೋಮವಾರ ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಒಂದು ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಗೂಗಲ್ ಸಿಇಒ ಸುಂದರ್ ಪಿಚೈ ಅವರು ಸೋಮವಾರ ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಒಂದು ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಗೂಗಲ್‌ನ ಇತಿಹಾಸದಲ್ಲಿ ಇದೇ ಮೊದಲ ಬಾರಿ 100 ಕೋಟಿಗೂ ಹೆಚ್ಚು ಜನ ಫಿಫಾ ವಿಶ್ವಕಪ್ ಕತಾರ್ 2022ರ ಫೈನಲ್ ಪಂದ್ಯದ ಬಗ್ಗೆ ಹುಡುಕಾಟ ನಡೆಸಿದ್ದಾರೆ. ಜತೆಗೆ ಇದು ಗೂಗಲ್ಗೆ ಹೆಚ್ಚು ಟ್ರಾಫಿಕ್ನ್ನು ತಂದುಕೊಟ್ಟಿದೆ.
ಫ್ರಾನ್ಸ್ ವಿರುದ್ಧ ಅರ್ಜೆಂಟೀನಾ ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಈ ಬಗ್ಗೆ ಇದೇ ಮೊದಲ ಬಾರಿಗೆ 100 ಕೋಟಿಗೂ ಅಧಿಕ ಜನರು ಗೂಗಲ್ನಲ್ಲಿ ಹುಡುಕಾಟ ನಡೆಸಿದ್ದಾರೆ. ಜೊತೆಗೆ ಇದು ಗೂಗಲ್ ಟ್ರಾಫಿಕ್ನ್ನು ಕೂಡ ಹೆಚ್ಚು ಮಾಡಿದೆ. ಈ ಬಗ್ಗೆ ಗೂಗಲ್ ಸಿಇಒ ಸುಂದರ್ ಪಿಚೈ ತಮ್ಮ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ. ಭಾನುವಾರ ರಾತ್ರಿ ನಡೆದ ಫಿಫಾ ವಿಶ್ವಕಪ್ ಫೈನಲ್‌ನ್ನು ಗೂಗಲ್ ಹುಡುಕಾಟವು ಅತಿ ಹೆಚ್ಚು ಟ್ರಾಫಿಕ್ನ್ನು ಪಡೆದುಕೊಂಡಿದೆ ಎಂದು ಪಿಚೈ ಬಹಿರಂಗಪಡಿಸಿದ್ದಾರೆ. ಇಡೀ ಜಗತ್ತು ಕೇವಲ ಒಂದು ವಿಷಯದ ಬಗ್ಗೆ ಹೆಚ್ಚು ಹುಡುಕಾಟ ನಡೆಸಿದಂತೆ ತೋರುತ್ತಿದೆ ಎಂದು US ನ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಯ ಸಂಶೋಧನಾ ವಿಜ್ಞಾನಿ ಲೆಕ್ಸ್ ಫ್ರಿಡ್ಮಾ ಹೇಳಿದ್ದಾರೆ.
Search recorded its highest ever traffic in 25 years during the final of #FIFAWorldCup , it was like the entire world was searching about one thing!
— Sundar Pichai (@sundarpichai) December 19, 2022
ಇದನ್ನು ಓದಿ: FIFA World Cup 2022: ಮೆಸ್ಸಿ ಹಿಂದಿಕ್ಕೆ ಗೋಲ್ಡನ್ ಬೂಟ್ ಗೆದ್ದ ಕೈಲಿಯನ್ ಎಂಬಪ್ಪೆ..!
ಸುಂದರ್ ಪಿಚೈ ಅವರ ಟ್ವೀಟ್ ಮಾಡಿದ ಕೆಲವೇ ಸಮಯದಲ್ಲಿ ಫುಟ್ಬಾಲ್ ಅಭಿಮಾನಿಗಳು ಅವರ ಟ್ವೀಟ್ಗೆ ಪ್ರತಿಕ್ರಿಯಿಸಿದ್ದಾರೆ. ಇದೊಂದು ಅದ್ಭುತ ವಿಷಯ, ಈ ಬಗ್ಗೆ ನಮಗೆ ಹೆಮ್ಮೆ ಇದೆ. ಫುಟ್ಬಾಲ್ ಎಲ್ಲರನ್ನೂ ಈ ಮೂಲಕ ಒಗ್ಗೂಡಿಸಿದೆ. ಒಂದು ಬಿಲಿಯನ್‌ಗಿಂತಲೂ ಹೆಚ್ಚು ಜನರು ಈ ಬಗ್ಗೆ ಪ್ರತಿಕ್ರಿಯೆ ಮಾಡಿದ್ದಾರೆ ಎಂದು ಹೇಳಲಾಗಿದೆ. ವಾಸ್ತವವಾಗಿ, ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ಗೂಗಲ್‌ನ “ಇಯರ್ ಇನ್ ಸರ್ಚ್ 2022” ವರದಿಯ ಪ್ರಕಾರ, ಫಿಫಾ ವಿಶ್ವಕಪ್ ಭಾರತದಲ್ಲಿ ಹೆಚ್ಚು ಹುಡುಕಲ್ಪಟ್ಟ ಮೂರನೇ ವಿಷಯವಾಗಿದೆ.
ಮೆಸ್ಸಿ, Mbapppe ಮತ್ತು FIFA ವಿಶ್ವಕಪ್ ಫೈನಲ್ ನಿನ್ನೆ ಸಂಜೆ ಸಾಮಾಜಿಕ ಮಾಧ್ಯಮದಲ್ಲಿ ಟಾಪ್ ಟ್ರೆಂಡ್‌ಗಳಾಗಿದ್ದು, ಜನರು ಪಂದ್ಯವನ್ನು ಟ್ರ್ಯಾಕ್ ಮಾಡಿದ್ದು ಆಟಗಾರರು ಮತ್ತು ತಂಡಗಳ ಬಗ್ಗೆ ಮಾಹಿತಿಗಾಗಿ ಹುಡುಕಿದರು ಎಂದು ಹೇಳಲಾಗಿದೆ.
FIFA ವಿಶ್ವಕಪ್ 2022, ಅರ್ಜೆಂಟೀನಾ vs ಫ್ರಾನ್ಸ್
ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವಿನ ಫೈನಲ್‌ನಲ್ಲಿ ಆರು ಗೋಲುಗಳನ್ನು ಸಾಧಿಸಿದೆ. ಕತಾರ್ ವಿಶ್ವಕಪ್ ಇದುವರೆಗೆ ಅತಿ ಹೆಚ್ಚು ಗೋಲು ಗಳಿಸಿದ ಪಂದ್ಯಾವಳಿಯಾಗಿದೆ. ಭಾನುವಾರದಂದು ಆರು ಗೋಲುಗಳು ನೆಟ್‌ನ ಹಿಂಭಾಗಕ್ಕೆ ಹೋದವು ಎಂದರೆ 2022 ರ ವಿಶ್ವಕಪ್‌ನಲ್ಲಿ 172 ಗೋಲುಗಳನ್ನು ಗಳಿಸಲಾಗಿದೆ, 1998 ಮತ್ತು 2014 ಆವೃತ್ತಿಗಳಲ್ಲಿ ಗಳಿಸಿದ 171 ಗೋಲುಗಳಿಗಿಂತ ಒಂದು ಹೆಚ್ಚು. ಅರ್ಜೆಂಟೀನಾ ಶೂಟೌಟ್‌ನಲ್ಲಿ 4-2 ಗೋಲುಗಳಿಂದ ಗೆದ್ದು ಇತಿಹಾಸದಲ್ಲಿ ಮೂರನೇ ಬಾರಿಗೆ ವಿಶ್ವಕಪ್ ಚಾಂಪಿಯನ್ ಆಯಿತು.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:12 pm, Mon, 19 December 22