ರೊನಾಲ್ಡೊ, ನೇಮರ್ ಅಖಾಡಕ್ಕೆ, 10 ಗಂಟೆಗಳಲ್ಲಿ ಬರೋಬ್ಬರಿ 4 ಪಂದ್ಯಗಳು! ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

| Updated By: ಪೃಥ್ವಿಶಂಕರ

Updated on: Nov 24, 2022 | 11:13 AM

FIFA World Cup 2022:

ರೊನಾಲ್ಡೊ, ನೇಮರ್ ಅಖಾಡಕ್ಕೆ, 10 ಗಂಟೆಗಳಲ್ಲಿ ಬರೋಬ್ಬರಿ 4 ಪಂದ್ಯಗಳು! ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?
Ronaldo, Neymar
Image Credit source: vanguard news
Follow us on

ಇಂದು ಕೂಡ 8 ತಂಡಗಳು ಫಿಫಾ ವಿಶ್ವಕಪ್​ನಲ್ಲಿ (FIFA World Cup 2022) ತಮ್ಮ ಅಭಿಯಾನವನ್ನು ಪ್ರಾರಂಭಿಸುತ್ತಿವೆ. ಭಾರತೀಯ ಕಾಲಮಾನದ ಪ್ರಕಾರ, 10 ಗಂಟೆಗಳ ಒಳಗೆ 4 ಪಂದ್ಯಗಳು ನಡೆಯಲ್ಲಿವೆ. ಇದರಲ್ಲಿ ಫುಟ್ಬಾಲ್ ಅಭಿಮಾನಿಗಳಿಗೆ ಖುಷಿಯ ವಿಚಾರ ಏನೆಂದರೆ ಇಂದು ನಡೆಯುವ ಪಂದ್ಯಗಳಲ್ಲಿ ಫುಟ್ಬಾಲ್ ಚತುರರಾದ ರೊನಾಲ್ಡೊ ಮತ್ತು ನೇಮಾರ್ (Ronaldo and Neymar) ಕಣಕ್ಕಿಳಿಯಲಿದ್ದಾರೆ. ಇಂದಿನಿಂದ ಪೋರ್ಚುಗಲ್ ಮತ್ತು ಬ್ರೆಜಿಲ್ ತಂಡಗಳು ಕೂಡ ಫುಟ್ಬಾಲ್ ಮಹಾಕುಂಭದಲ್ಲಿ ಪಾಲ್ಗೊಳ್ಳಲಿವೆ .

ಪೋರ್ಚುಗಲ್ ಮತ್ತು ಬ್ರೆಜಿಲ್ ದೇಶಗಳನ್ನು ಹೊರತುಪಡಿಸಿ, ಸ್ವಿಟ್ಜರ್ಲೆಂಡ್, ಕ್ಯಾಮರೂನ್, ದಕ್ಷಿಣ ಕೊರಿಯಾ, ಉರುಗ್ವೆ, ಘಾನಾ ಮತ್ತು ಸರ್ಬಿಯಾ ಉಳಿದ 6 ದೇಶಗಳು ಇಂದು ಕಣದಲ್ಲಿವೆ. ಇವುಗಳಲ್ಲಿ ಘಾನಾ ವಿರುದ್ಧ ಪೋರ್ಚುಗಲ್ ತನ್ನ ಅಭಿಯಾನ ಆರಂಭಿಸಿದರೆ, ಬ್ರೆಜಿಲ್ ಸರ್ಬಿಯಾದ ಸವಾಲನ್ನು ಜಯಿಸಬೇಕಾಗಿದೆ.

ಪಂದ್ಯದ ಬಗ್ಗೆ ಪೂರ್ಣ ಮಾಹಿತಿ

ಫಿಫಾ ವಿಶ್ವಕಪ್​ನಲ್ಲಿ ಇಂದು ಯಾವ ತಂಡಗಳ ನಡುವೆ ಪಂದ್ಯಗಳು ನಡೆಯಲಿವೆ?

ಫಿಫಾ ವಿಶ್ವಕಪ್‌ನಲ್ಲಿ ಗುರುವಾರ 4 ಪಂದ್ಯಗಳು ನಡೆಯಲಿವೆ. ದಿನದ ಮೊದಲ ಪಂದ್ಯ ಸ್ವಿಟ್ಜರ್ಲೆಂಡ್ ಮತ್ತು ಕ್ಯಾಮರೂನ್ ನಡುವೆ, ಎರಡನೇ ಪಂದ್ಯ ಉರುಗ್ವೆ ಮತ್ತು ದಕ್ಷಿಣ ಕೊರಿಯಾ ನಡುವೆ, ಮೂರನೇ ಪಂದ್ಯ ಪೋರ್ಚುಗಲ್ ಮತ್ತು ಘಾನಾ ನಡುವೆ, ಕೊನೆಯ ಪಂದ್ಯ ತಡರಾತ್ರಿ ಬ್ರೆಜಿಲ್ ಮತ್ತು ಸರ್ಬಿಯಾ ನಡುವೆ ನಡೆಯಲಿದೆ.

ಎಲ್ಲಾ ನಾಲ್ಕು ಪಂದ್ಯಗಳನ್ನು ಯಾವಾಗ ಆಡಲಾಗುತ್ತದೆ?

ಸ್ವಿಟ್ಜರ್ಲೆಂಡ್ ಮತ್ತು ಕ್ಯಾಮರೂನ್ ನಡುವಿನ ಫಿಫಾ ವಿಶ್ವಕಪ್ ಪಂದ್ಯವು ನವೆಂಬರ್ 24 ರಂದು ನಡೆಯಲಿದೆ. ಅದೇ ದಿನ ಉರುಗ್ವೆ ವಿರುದ್ಧ ದಕ್ಷಿಣ ಕೊರಿಯಾ ಮತ್ತು ಪೋರ್ಚುಗಲ್ ವಿರುದ್ಧ ಘಾನಾ ನಡುವಿನ ಪಂದ್ಯಗಳೂ ನಡೆಯಲಿವೆ. ಇದಲ್ಲದೆ, ಭಾರತದ ಕಾಲಮಾನದ ಪ್ರಕಾರ ನವೆಂಬರ್ 25 ರಂದು ಬ್ರೆಜಿಲ್ ಮತ್ತು ಸರ್ಬಿಯಾ ನಡುವೆ ನಾಲ್ಕನೇ ಪಂದ್ಯ ನಡೆಯಲಿದೆ.

ಎಲ್ಲಾ ನಾಲ್ಕು ಪಂದ್ಯಗಳು ಯಾವಾಗ ಪ್ರಾರಂಭವಾಗುತ್ತವೆ?

ಭಾರತೀಯ ಕಾಲಮಾನದ ಪ್ರಕಾರ ಸ್ವಿಟ್ಜರ್ಲೆಂಡ್ ಮತ್ತು ಕ್ಯಾಮರೂನ್ ನಡುವಿನ ಪಂದ್ಯ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ. ಇದಲ್ಲದೇ ಉರುಗ್ವೆ ವಿರುದ್ಧ ದಕ್ಷಿಣ ಕೊರಿಯಾ ಪಂದ್ಯ ಸಂಜೆ 6:30ರಿಂದ ಆರಂಭವಾದರೆ, ಪೋರ್ಚುಗಲ್ ಹಾಗೂ ಘಾನಾ ನಡುವಿನ ಪಂದ್ಯ ರಾತ್ರಿ 9:30ರಿಂದ ನಡೆಯಲಿದೆ. ಹಾಗೆಯೇ ಬ್ರೆಜಿಲ್ ಮತ್ತು ಸೆರ್ಬಿಯಾ ತಂಡಗಳ ನಡುವಿನ ಕದನ ತಡರಾತ್ರಿ 12.30ಕ್ಕೆ ಪೈಪೋಟಿ ನಡೆಸಲಿವೆ.

ಎಲ್ಲಾ ನಾಲ್ಕು ಪಂದ್ಯಗಳು ಯಾವ ಚಾನೆಲ್​ನಲ್ಲಿ ಲೈವ್ ಟೆಲಿಕಾಸ್ಟ್ ಆಗಲಿವೆ?

ಫಿಫಾ ವಿಶ್ವಕಪ್‌ನಲ್ಲಿ ಗುರುವಾರ ನಡೆಯಲಿರುವ ನಾಲ್ಕು ಪಂದ್ಯಗಳ ನೇರ ಪ್ರಸಾರವು ಸ್ಪೋರ್ಟ್ಸ್ 18 ಮತ್ತು ಸ್ಪೋರ್ಟ್ಸ್ 18 ಎಚ್‌ಡಿಯಲ್ಲಿ ನೇರ ಪ್ರಸಾರವಾಗಲಿವೆ.

ಈ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ವೀಕ್ಷಿಸುವುದು ಹೇಗೆ?

ಫಿಫಾ ವಿಶ್ವಕಪ್ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದಾಗಿದೆ.