ವಿಶ್ವಕಪ್ ಬಹುಮಾನದ ಮೊತ್ತ 3600 ಕೋಟಿ! ಮೆಸ್ಸಿ ತಂಡಕ್ಕೆ ಸಿಕ್ಕಿದೆಷ್ಟು? ಫ್ರಾನ್ಸ್ ಗೆದ್ದಿದ್ದೆಷ್ಟು? ಇಲ್ಲಿದೆ ವಿವರ

| Updated By: ಪೃಥ್ವಿಶಂಕರ

Updated on: Dec 19, 2022 | 3:12 PM

FIFA World Cup 2022 Prize Money: ಬೃಹತ್ ಪ್ರಮಾಣದ ಬಹುಮಾನ ಗೆದ್ದಿರುವ ಅರ್ಜೇಂಟಿನಾ ತಂಡಕ್ಕೆ ಬರೋಬ್ಬರಿ 344 ಕೋಟಿ ರೂ. ಸಿಕ್ಕರೆ, ರನ್ನರ್ ಅಪ್ ಫ್ರಾನ್ಸ್ ತಂಡಕ್ಕೆ 245 ಕೋಟಿ ರೂ. ಬಹುಮಾನ ಸಿಕ್ಕಿದೆ.

ವಿಶ್ವಕಪ್ ಬಹುಮಾನದ ಮೊತ್ತ 3600 ಕೋಟಿ! ಮೆಸ್ಸಿ ತಂಡಕ್ಕೆ ಸಿಕ್ಕಿದೆಷ್ಟು? ಫ್ರಾನ್ಸ್ ಗೆದ್ದಿದ್ದೆಷ್ಟು? ಇಲ್ಲಿದೆ ವಿವರ
ಚಾಂಪಿಯನ್ ಅರ್ಜೇಂಟಿನಾ
Follow us on

ಫಿಫಾ ವಿಶ್ವಕಪ್ (FIFA World Cup 2022) ಫೈನಲ್‌ನಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್ ತಂಡವನ್ನು ಸೋಲಿಸಿದ ಅರ್ಜೆಂಟೀನಾ (Argentina vs France) ತಂಡ ವಿಶ್ವಕಪ್ ಜೊತೆಗೆ ತನ್ನ ದೇಶಕ್ಕೆ ಮರಳಲು ಸಜ್ಜಾಗಿದೆ. ಇತ್ತ ಈ ಆವೃತ್ತಿಯ ಚಾಂಪಿಯನ್​ಗಳಾದ ಮೆಸ್ಸಿ ಹುಡುಗರಿಗೆ ಫಿಫಾ ಭಾರೀ ಮೊತ್ತದ ಬಹುಮಾನವನ್ನೇ (FIFA World Cup 2022 Prize Money) ವಿತರಿಸಿದೆ. ಆರಂಭದಿಂದಲೂ ಬಹಳ ರೋಚಕತೆ ಕಟ್ಟಿಕೊಟ್ಟ ಈ ಪಂದ್ಯದಲ್ಲಿ ಎರಡೂ ತಂಡಗಳು ಸಮಬಲದ ಹೋರಾಟ ನಡೆಸಿದವು. ಆದರೆ ಅಂತಿಮವಾಗಿ ಪೆನಾಲ್ಟಿ ಶೂಟೌಟ್​ನಲ್ಲಿ ಫ್ರಾನ್ಸ್ ತಂಡವನ್ನು ಮಣಿಸುವಲ್ಲಿ ಅರ್ಜೇಂಟಿನಾ ಯಶಸ್ವಿಯಾಯಿತು. ಇದರೊಂದಿಗೆ 36 ವರ್ಷಗಳ ತನ್ನ ವಿಶ್ವಕಪ್ ಬರವನ್ನು ಸಹ ನೀಗಿಸಿಕೊಂಡಿತು. ಇದರೊಂದಿಗೆ ಬೃಹತ್ ಪ್ರಮಾಣದ ಬಹುಮಾನ ಗೆದ್ದಿರುವ ಅರ್ಜೇಂಟಿನಾ ತಂಡಕ್ಕೆ ಬರೋಬ್ಬರಿ 344 ಕೋಟಿ ರೂ. ಸಿಕ್ಕರೆ, ರನ್ನರ್ ಅಪ್ ಫ್ರಾನ್ಸ್ ತಂಡಕ್ಕೆ 245 ಕೋಟಿ ರೂ. ಬಹುಮಾನ ಸಿಕ್ಕಿದೆ.

2. ವಿಜೇತರಿಗೆ 42 ಮಿಲಿಯನ್ ಡಾಲರ್

22ನೇ ಆವೃತ್ತಿಯ ಫಿಫಾ ವಿಶ್ವಕಪ್‌ನಲ್ಲಿ ಒಟ್ಟು 440 ಮಿಲಿಯನ್ ಡಾಲರ್ (ಅಂದಾಜು. 3600 ಕೋಟಿ) ಬಹುಮಾನವನ್ನು ವಿತರಿಸಲಾಗುವುದು. ಈ ಬಹುಮಾನ ಮೊತ್ತದ ಗಾತ್ರ ಹಿಂದಿನ ಸೀಸನ್‌ಗಿಂತ 40 ಮಿಲಿಯನ್ ಡಾಲರ್ (ಅಂದಾಜು. 331 ಕೋಟಿ) ಹೆಚ್ಚಾಗಿದೆ. ವಿಶ್ವಕಪ್ ಗೆದ್ದ ಅರ್ಜೆಂಟೀನಾ 42 ಮಿಲಿಯನ್ ಡಾಲರ್ (ಸುಮಾರು 344 ಕೋಟಿ 48 ಲಕ್ಷ ರೂ.) ಪಡೆದಿದೆ. ಈ ಟೂರ್ನಿಯಲ್ಲಿ ರನ್ನರ್ ಅಪ್ ಆದ ಫ್ರಾನ್ಸ್ 30 ಮಿಲಿಯನ್ ಡಾಲರ್ (ಸುಮಾರು 245 ಕೋಟಿ 20 ಲಕ್ಷ ರೂ.) ಪಡೆದುಕೊಂಡಿದೆ.

FIFA World Cup 2022: Googleನ 25 ವರ್ಷಗಳಲ್ಲಿ ಅತಿ ಹೆಚ್ಚು ಜನರು ಹುಡುಕಿದ ವಿಷಯ ಫಿಫಾ ವಿಶ್ವಕಪ್

3. ಉಳಿದ ತಂಡಗಳಿಗೆ ಸಿಕ್ಕಿದೆಷ್ಟು?

ಫೈನಲಿಸ್ಟ್, ರನ್ನರ್-ಅಪ್‌ ತಂಡಗಳನ್ನು ಹೊರತುಪಡಿಸಿ, ಮೂರನೇ ಸ್ಥಾನ ಪಡೆದುಕೊಂಡ ತಂಡಕ್ಕೆ $27 ಮಿಲಿಯನ್ (ಸುಮಾರು ರೂ. 220 ಕೋಟಿ) ನೀಡಲಾಗುವುದು. ಮೂರನೇ ಸ್ಥಾನಕ್ಕಾಗಿ ಡಿಸೆಂಬರ್ 17 ರಂದು ಮುಖಾಮುಖಿಯಾಗಿದ್ದ ಮೊರಾಕೊ ಮತ್ತು ಕ್ರೊಯೇಷಿಯಾ ನಡುವಿನ ಪಂದ್ಯದಲ್ಲಿ ಕ್ರೊಯೇಷಿಯಾ ಭರ್ಜರಿ ಗೆಲುವು ಸಾಧಿಸಿ, 3ನೇ ಸ್ಥಾನವನ್ನು ಖಚಿತಪಡಿಸಿಕೊಂಡಿತು. ಏತನ್ಮಧ್ಯೆ, ನಾಲ್ಕನೇ ಸ್ಥಾನ ಪಡೆದುಕೊಂಡ ಮೊರಾಕೊ ತಂಡ $ 25 ಮಿಲಿಯನ್ (ಸುಮಾರು 204 ಕೋಟಿ ರೂ.) ಸಂಭಾವನೆ ಪಡೆದುಕೊಂಡಿದೆ.

ಇದಲ್ಲದೇ 5ರಿಂದ 8ನೇ ಶ್ರೇಯಾಂಕದ ತಂಡಗಳಿಗೆ 17 ಮಿಲಿಯನ್ ಡಾಲರ್ (ಸುಮಾರು 138 ಕೋಟಿ ರೂ.) ನೀಡಲಾಗುವುದು. ಅದರ ನಂತರ, 9 ರಿಂದ 16 ರ ಶ್ರೇಯಾಂಕದ ತಂಡಗಳಿಗೆ $ 13 ಮಿಲಿಯನ್ (ಸರಿಸುಮಾರು 106 ಕೋಟಿ ರೂ.) ಬಹುಮಾನ ನೀಡಲಾಗುವುದು. ಅದೇ ಸಮಯದಲ್ಲಿ, 17 ರಿಂದ 32 ನೇ ಶ್ರೇಯಾಂಕದ ತಂಡಗಳಿಗೆ $ 9 ಮಿಲಿಯನ್ (ಸುಮಾರು 74 ಕೋಟಿ ರೂ.) ನೀಡಲಾಗುತ್ತದೆ.

ಗಮನಾರ್ಹವೆಂದರೆ 2018ರಲ್ಲಿ ಆಡಿದ ವಿಶ್ವಕಪ್ ವಿಜೇತ ಫ್ರಾನ್ಸ್ ತಂಡಕ್ಕೆ 38 ಮಿಲಿಯನ್ ಡಾಲರ್ (ಸುಮಾರು 314 ಕೋಟಿ ರೂ.) ಬಹುಮಾನ ನೀಡಲಾಗಿತ್ತು. ಮತ್ತೊಂದೆಡೆ, ರನ್ನರ್ ಅಪ್ ಆದ ಕ್ರೊಯೇಷಿಯಾಕ್ಕೆ 28 (ಸುಮಾರು 231 ಕೋಟಿ ರೂ.) ಮಿಲಿಯನ್ ಡಾಲರ್ ಬಹುಮಾನ ನೀಡಲಾಗಿತ್ತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:21 pm, Mon, 19 December 22