FIFA World Cup: ಫಿಫಾ ವಿಶ್ವಕಪ್​ನಲ್ಲಿ ಗೋಲ್ಡನ್ ಬೂಟ್ ಪ್ರಶಸ್ತಿ ಗೆದ್ದ ಕಾಲ್ಚೆಂಡಿನ ಚತುರರು ಇವರೇ..

FIFA World Cup: ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಇದುವರೆಗೆ 27 ಆಟಗಾರರು ಈ ಪ್ರಶಸ್ತಿಯನ್ನು ಪಡೆದಿದ್ದು, ಅವರ ಸಂಪೂರ್ಣ ಪಟ್ಟಿ ಇಲ್ಲಿದೆ.

FIFA World Cup: ಫಿಫಾ ವಿಶ್ವಕಪ್​ನಲ್ಲಿ ಗೋಲ್ಡನ್ ಬೂಟ್ ಪ್ರಶಸ್ತಿ ಗೆದ್ದ ಕಾಲ್ಚೆಂಡಿನ ಚತುರರು ಇವರೇ..
ಗೋಲ್ಡನ್ ಬೂಟ್ ಪ್ರಶಸ್ತಿ ಗೆದ್ದವರ ಪಟ್ಟಿ
Follow us
TV9 Web
| Updated By: ಪೃಥ್ವಿಶಂಕರ

Updated on:Nov 18, 2022 | 3:30 PM

2022 ರ ಫಿಫಾ ವಿಶ್ವಕಪ್ (FIFA World Cup 2022) ನವೆಂಬರ್ 20 ರಿಂದ ಪ್ರಾರಂಭವಾಗುತ್ತಿದೆ. ವಿಶ್ವದ 32 ಅತ್ಯುತ್ತಮ ತಂಡಗಳು ವಿಶ್ವ ಚಾಂಪಿಯನ್ ಆಗಲು ಕತಾರ್‌ನಲ್ಲಿ ಸ್ಪರ್ಧಿಸಲಿವೆ. ಈ ದೊಡ್ಡ ಟೂರ್ನಿಯಲ್ಲಿ ಪ್ರಮುಖ ಪ್ರಶಸ್ತಿಯನ್ನೂ ನೀಡಲಾಗುತ್ತದೆ. ಅದರ ಹೆಸರು ಗೋಲ್ಡನ್ ಬೂಟ್ (Golden Boot). ಫಿಫಾ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಗೋಲು ಬಾರಿಸಿದ ಆಟಗಾರನಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಅಧಿಕೃತವಾಗಿ 1982 ರ ವಿಶ್ವಕಪ್‌ನಲ್ಲಿ ಪ್ರಾರಂಭಿಸಲಾಯಿತು. 2006 ರ ವಿಶ್ವಕಪ್​ವರೆಗೆ ಈ ಪ್ರಶಸ್ತಿಯನ್ನು ಗೋಲ್ಡನ್ ಶೂ ಎಂದು ಕರೆಯಲಾಗುತ್ತಿತ್ತು.

ಆದರೆ 2010 ರ ಫಿಫಾ ವಿಶ್ವಕಪ್​ನಲ್ಲಿ ಈ ಪ್ರಶಸ್ತಿಯನ್ನು ಗೋಲ್ಡನ್ ಬೂಟ್ ಎಂದು ಮರುನಾಮಕರಣ ಮಾಡಲಾಯಿತು. ಈ ಪ್ರಶಸ್ತಿಯನ್ನು ಸ್ವೀಕರಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ 32 ತಂಡಗಳಲ್ಲಿ ಹೆಚ್ಚು ಗೋಲು ಗಳಿಸಿದ ಆಟಗಾರನಿಗೆ ಪ್ರಶಸ್ತಿ ನೀಡಲಾಗುತ್ತದೆ. ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಇದುವರೆಗೆ 27 ಆಟಗಾರರು ಈ ಪ್ರಶಸ್ತಿಯನ್ನು ಪಡೆದಿದ್ದು, ಅವರ ಸಂಪೂರ್ಣ ಪಟ್ಟಿ ಇಲ್ಲಿದೆ.

ಗೋಲ್ಡನ್ ಬೂಟ್ ಪ್ರಶಸ್ತಿ ವಿಜೇತರ ಪಟ್ಟಿ..

1930ರ ಫಿಫಾ ವಿಶ್ವಕಪ್ – ಗಿಲ್ಲೆರ್ಮೊ ಸ್ಟೆಬೈಲ್ (ಅರ್ಜೆಂಟೀನಾ) – 8 ಗೋಲುಗಳು

1934ರ ಫಿಫಾ ವಿಶ್ವಕಪ್ – ಓಲ್ಡೆರಿಚ್ ನೆಜೆಡ್ಲಿ (ಜೆಕೊಸ್ಲೊವಾಕಿಯಾ)- 5 ಗೋಲುಗಳು

1938ರ ಫಿಫಾ ವಿಶ್ವಕಪ್ – ಲಿಯೊನಿಡಾಸ್ (ಬ್ರೆಜಿಲ್) – 7 ಗೋಲುಗಳು

1950ರ ಫಿಫಾ ವಿಶ್ವಕಪ್ – ಅಡೆಮಿರ್ (ಬ್ರೆಜಿಲ್) – 8 ಗೋಲುಗಳು

1954ರ ಫಿಫಾ ವಿಶ್ವಕಪ್ – ಸ್ಯಾಂಡರ್ ಕೊಕಾಕ್ಸ್ (ಹಂಗೇರಿ) – 11 ಗೋಲುಗಳು

1958ರ ಫಿಫಾ ವಿಶ್ವಕಪ್ – ಜಸ್ಟ್ ಫಾಂಟೈನ್ (ಫ್ರಾನ್ಸ್) – 13 ಗೋಲುಗಳು

1962ರ ಫಿಫಾ ವಿಶ್ವಕಪ್ – ಫ್ಲೋರಿಯನ್ ಆಲ್ಬರ್ಟ್ (ಹಂಗೇರಿ), ವ್ಯಾಲೆಂಟಿನ್ ಇವನೊವ್ (ರಷ್ಯಾ), ಗರಿಂಚಾ, ವಾವಾ (ಬ್ರೆಜಿಲ್), ಡ್ರಾಸನ್ ಡಿಜೆರ್ಕೊವಿಕ್ (ಕ್ರೊಯೇಷಿಯಾ), ಲಿಯೋನೆಲ್ ಸ್ಯಾಂಚೆಜ್ (ಚಿಲಿ) – 4 ಗೋಲುಗಳು

1966ರ ಫಿಫಾ ವಿಶ್ವಕಪ್ – ಇಸೆಬಿಯೊ (ಪೋರ್ಚುಗಲ್) – 9 ಗೋಲುಗಳು

1970ರ ಫಿಫಾ ವಿಶ್ವಕಪ್ – ಗೆರಾಡ್ ಮುಲ್ಲರ್ (ಜರ್ಮನಿ) – 10 ಗೋಲುಗಳು

1974ರ ಫಿಫಾ ವಿಶ್ವಕಪ್ – ಗ್ರ್ಜೆಗೋರ್ಜ್ ಲಾಟೊ (ಪೋಲೆಂಡ್) – 7 ಗೋಲುಗಳು

1978ರ ಫಿಫಾ ವಿಶ್ವಕಪ್ – ಮಾರಿಯೋ ಕ್ಯಾಂಪ್ಸ್ (ಅರ್ಜೆಂಟೀನಾ) – 6 ಗೋಲುಗಳು

1982ರ ಫಿಫಾ ವಿಶ್ವಕಪ್ – ಪಾವೊಲೊ ರೊಸ್ಸಿ (ಇಟಲಿ) – 6 ಗೋಲುಗಳು

1986ರ ಫಿಫಾ ವಿಶ್ವಕಪ್ – ಗ್ಯಾರಿ ಲಿನೆಕರ್ (ಇಂಗ್ಲೆಂಡ್) – 6 ಗೋಲುಗಳು

1990ರ ಫಿಫಾ ವಿಶ್ವಕಪ್ – ಸಾಲ್ವಟೋರ್ ಸಿಲಾಚಿ (ಇಟಲಿ) – 6 ಗೋಲುಗಳು

1994ರ ಫಿಫಾ ವಿಶ್ವಕಪ್ – ಒಲೆಗ್ ಸಲೆಂಕೊ (ರಷ್ಯಾ), ಹ್ರಿಸ್ಟೊ ಸ್ಟೊಯಿಚ್ಕೊವ್ (ಬಲ್ಗೇರಿಯಾ) – 6 ಗೋಲುಗಳು

1998ರ ಫಿಫಾ ವಿಶ್ವಕಪ್ – ದಾವರ್ ಸುಕರ್ (ಕ್ರೊಯೇಷಿಯಾ) – 6 ಗೋಲುಗಳು

2002ರ ಫಿಫಾ ವಿಶ್ವಕಪ್ – ರೊನಾಲ್ಡೊ ನರಾಜಿಯೊ (ಬ್ರೆಜಿಲ್) – 8 ಗೋಲುಗಳು

2006ರ ಫಿಫಾ ವಿಶ್ವಕಪ್ – ಮಿರೋಸ್ಲಾವ್ ಕ್ಲೋಸ್ (ಜರ್ಮನಿ) – 5 ಗೋಲುಗಳು

2010ರ ಫಿಫಾ ವಿಶ್ವಕಪ್ – ಥಾಮಸ್ ಮುಲ್ಲರ್ (ಜರ್ಮನಿ) – 6 ಗೋಲುಗಳು

2014ರ ಫಿಫಾ ವಿಶ್ವಕಪ್ – ಜೇಮ್ಸ್ ರೊಡ್ರಿಗಸ್ (ಕೊಲಂಬಿಯಾ) – 6 ಗೋಲುಗಳು

2018ರ ಫಿಫಾ ವಿಶ್ವಕಪ್ – ಹ್ಯಾರಿ ಕೇನ್ (ಇಂಗ್ಲೆಂಡ್) – 6 ಗೋಲುಗಳು.

ನವೆಂಬರ್ 20 ರಿಂದ ಕತಾರ್​ನಲ್ಲಿ ಫುಟ್ಬಾಲ್ ವಿಶ್ವಕಪ್ ಆರಂಭವಾಗಲಿದೆ. ಈ ಫುಟ್ಬಾಲ್ ಸಂಭ್ರಮದಲ್ಲಿ 32 ತಂಡಗಳು ತಮ್ಮ ಅದೃಷ್ಟವನ್ನು ಪರೀಕ್ಷಿಸಲಿವೆ. ಈ ಬಾರಿಯ ಫುಟ್ಬಾಲ್ ವಿಶ್ವಕಪ್​ನ ಒಟ್ಟು ಬಹುಮಾನದ ಮೊತ್ತ ರೂ.3568 ಕೋಟಿ ತಲುಪಿದೆ. ಇದರಲ್ಲಿ ವಿಜೇತ ತಂಡ 344 ಕೋಟಿ ರೂ. ಪಡೆದರೆ, ರನ್ನರ್ ಅಪ್ ತಂಡ 245 ಕೋಟಿ ರೂ. ಬಹುಮಾನ ಪಡೆಯಲಿದೆ.

Published On - 3:30 pm, Fri, 18 November 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ